
ತಮಿಳು ಸ್ಟಾರ್ ನಟ ಸೂರ್ಯ ಅಭಿನಯದ ಸೂರರೈ ಪೋಟ್ರು(Soorarai Pottru) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಒಟಿಟಿಯಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಕ್ಷಿಣದಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಇದೀಗ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಅಂದಹಾಗೆ ಹಿಂದಿಗೆ ರಿಮೇಕ್ ಆಗುವ ಬಗ್ಗೆ ಈಗಾಗಲೇ ಗೊತ್ತಿರುತ್ತದೆ. ಆದರೆ ನಾಯಕನಾಗಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಆದರೀಗ ಬ್ಲಾಕ್ ಬಸ್ಟರ್ ಸಿನಿಮಾದ ಹಿಂದಿ ರಿಮೇಕ್ ನಲ್ಲಿ ಸ್ಟಾರ್ ನಟ ಅಕ್ಷಯ್ ಕುಮಾರ್(Akshay Kumar) ಕಾಣಿಸಿಕೊಳ್ಳುತ್ತಿರುವುದು ಖಚಿತವಾಗಿದೆ.
ನಟ ಸೂರ್ಯ ನಟಿಸಿದ್ದ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಗೆ ನಾಯಕಿಯಾಗಿ ರಾಧಿಕಾ ಮದನ್ ನಟಿಸುತ್ತಿದ್ದಾರೆ. ಅಂದಹಾಗೆ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಹೆಸರಿಡದ ಚಿತ್ರದ ಚಿತ್ರೀಕರಣ ದೃಶ್ಯವನ್ನು ನಟ ಅಕ್ಷಯ್ ಕುಮಾರ್ ಶೇರ್ ಮಾಡಿದ್ದಾರೆ. ವಿಡಿಯೋ ಜೊತೆಗೆ ಅಭಿಮಾನಿಗಳಿಗೆ ನೀವೆ ಹೆಸರನ್ನು ಸೂಚಿಸಿ ಎಂದು ಹೇಳಿದ್ದಾರೆ. 'ತೆಂಗಿನ ಕಾಯಿ ಒಡೆಯುವ ಮೂಲಕ ನಮ್ಮ ಹೃದಯದಲ್ಲಿ ಸಣ್ಣ ಪ್ರಾರ್ಥನೆಯೊಂದಿಗೆ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದೇವೆ. ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ. ನೀವು ಚಿತ್ರದ ಟೈಟಲ್ ಸೂಚಿಸಬಹುದು. ನಮ್ಮ ಜೊತೆ ಹಂಚಿಕೊಳ್ಳಿ. ನಿಮ್ಮ ಆಶೀರ್ವಾದ ಇರಲಿ' ಎಂದು ಹೇಳಿದ್ದಾರೆ.
ಅಂದಹಾಗೆ ಹಿಂದಿಯಲ್ಲೂ ಸಹ ಮೂಲ ನಿರ್ದೇಶಕಿ ಸುಧ ಕೊಂಗಾರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಸುಧಾ ಮೊದಲ ಬಾರಿಗೆ ಹಿಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಸೂರರೈ ಪೋಟ್ರು ಕನ್ನಡಿಗ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಕಥೆ. ತಮಿಳಿನಲ್ಲಿ ಗೋಪಿನಾಥ್ ಪಾತ್ರದಲ್ಲಿ ಸೂರ್ಯ ನಟಿಸಿದ್ದರು. ಗೋಪಿನಾಥ್ ಪತ್ನಿ ಪಾತ್ರದಲ್ಲಿ ಭಾರ್ಗವಿ ಪಾತ್ರದಲ್ಲಿ ಅಪರ್ಣ ಬಾಲಮುರಳಿ ನಟಿಸಿದ್ದರು. ಹಿಂದಿಯಲ್ಲಿ ಅಪರ್ಣ ಪಾತ್ರದಲ್ಲಿ ರಾಧಿಕಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ.
ತಂಬಾಕು ಆ್ಯಡ್‌ನಲ್ಲಿ ಅಕ್ಷಯ್ ಕುಮಾರ್: ಕ್ಷಮೆ ಕೋರಿದ Bollywood ನಟ
ಅಂದಹಾಗೆ ಈ ಸಿನಿಮಾ 2021ರಲ್ಲಿ ಆಸ್ಕರ್ ಅಂಗಳಕ್ಕೂ ಕಾಲಿಟ್ಟಿತ್ತು. ಜನರಲ್ ಕೆಟಗರಿ ವಿಭಾಗದಲ್ಲಿ ಉತ್ತಮ ಸಿನಿಮಾ, ಉತ್ತಮ ನಟಿ, ನಿರ್ದೇಶನ, ಬ್ಯಾಗ್ರೌಂಡ್ ಸ್ಕೋರ್ ವಿಭಾಗದಲ್ಲಿ ಆಯ್ಕೆಯಾಗಿತ್ತು. ಸೂರರೈ ಪೋಟ್ರು ಆಗಿ ಅಭಿಮಾನಿಗಳ ಮನಗೆದ್ದಿದ್ದ ಈ ಸಿನಿಮಾ ಹಿಂದಿಯಲ್ಲೂ ಅಭಿಮಾನಿಗಳ ಮನ ಗೆಲ್ಲುತ್ತಾ ಎಂದು ಕಾದುನೋಡಬೇಕು.
ಶಾರುಖ್ ಮನೆಯಲ್ಲಿ ಸೌದಿ ಮಿನಿಸ್ಟರ್, ಬಾಲಿವುಡ್ ಸ್ಟಾರ್ಸ್ ಭೇಟಿ; ಫೋಟೋ ವೈರಲ್
ಅಂದಹಾಗೆ ಅಕ್ಷಯ್ ದಕ್ಷಿಣದ ಅನೇಕ ಸಿನಿಮಾಗಳನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಬಚ್ಚನ್ ಪಾಂಡೆ ಸಿನಿಮಾ ಕೂಡ ರಿಮೇಕ್. ಇದೀಗ ಸೂರರೈ ಪೋಟ್ರು ಮೂಲಕ ಮತ್ತೆ ರಿಮೇಕ್ ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಪೃಥ್ವಿರಾಜ್, ರಕ್ಷಾ ಬಂಧನ್, ರಾಮ್ ಸೇತು, OMG 2, ಓ ಮೈ ಗಾಡ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.