ಕನ್ನಡದಲ್ಲಿ ಪ್ಯಾನ್ ಪ್ಯಾನ್ ಇಂಡಿಯ ಸಿನಿಮಾ ಮಾಡಿದ್ದಾರೆ ಅಂತ ಹೇಳಿದ್ರೆ, ಇದಕ್ಕೆ ಸ್ವಲ್ಪ ಕರೆಕ್ಷನ್ ಇರಲಿ, ಹಿಂದಿ ರಾಷ್ಟ್ರಭಾಷೆಯಲ್ಲ. ಹಿಂದಿಯವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅಲ್ಲಿಂದ(ಬಾಲಿವುಡ್) ತೆಲುಗು, ತಮಿಳಿಗೆಲ್ಲ ಡಬ್ ಮಾಡಲು ಒದ್ದಾಡುತ್ತಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸುದೀಪ್ ಪ್ರಮೋಷನ್ ಕಾರ್ಯಕ್ಕೆ ತಯಾರಾಗುತ್ತಿದ್ದಾರೆ. ಈ ನಡುವೆ ಕಿಚ್ಚ ಇತ್ತೀಚಿಗಷ್ಟೆ ಹೊಸ ಸಿನಿಮಾದ ಟೈಟಲ್ ಲಾಂಚ್ ಈವೆಂಟ್ ನಲ್ಲಿ ಹಾಜರಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್ ನಲ್ಲಿ ಬರ್ತಿರುವ Iam R ಸಿನಿಮಾದ ಟೈಟಲ್ ಲಾಂಚ್ ಅನ್ನು ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಲಾಂಚ್ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಸುದೀಪ್ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೇದಿಕೆಯಲ್ಲಿ ಕಿಚ್ಚ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಾರೆ.
ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಮಾಡಬೇಕು ಎನ್ನುವ ಚರ್ಚೆ ಅನೇಕ ಸಮಯದಿಂದ ನಡೆಯುತ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಅದರಲ್ಲೂ ದಕ್ಷಿಣ ಭಾರತದವರು ಇದನ್ನು ವಿರೋಧಿಸುತ್ತಿದ್ದಾರೆ. ಈ ಚರ್ಚೆಯ ಸಮಯದಲ್ಲಿ ಸುದೀಪ್ ಹೇಳಿಕೆ ಮತ್ತಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಕಿಚ್ಚನ ಹೇಳಿಕೆಯನ್ನು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಸುದೀಪ್ ಆರ್ ವೇದಿಕೆಯಲ್ಲಿ ಹೇಳಿದ್ದೇನು ಎಂದರೆ, ಕನ್ನಡದಲ್ಲಿ ಪ್ಯಾನ್ ಪ್ಯಾನ್ ಇಂಡಿಯ ಸಿನಿಮಾ ಮಾಡಿದ್ದಾರೆ ಅಂತ ಹೇಳಿದ್ರೆ, ಇದಕ್ಕೆ ಸ್ವಲ್ಪ ಕರೆಕ್ಷನ್ ಇರಲಿ, ಹಿಂದಿ ರಾಷ್ಟ್ರಭಾಷೆಯಲ್ಲ. ಹಿಂದಿಯವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅಲ್ಲಿಂದ(ಬಾಲಿವುಡ್) ತೆಲುಗು, ತಮಿಳಿಗೆಲ್ಲ ಡಬ್ ಮಾಡಲು ಒದ್ದಾಡುತ್ತಿದ್ದಾರೆ. ಅವರಿಗೆ ಆಗುತ್ತಿಲ್ಲ. ಇಂದು ನಾವು ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಮಾಡುತ್ತಿದ್ದೇವೆ' ಎಂದು ಹೇಳಿದರು.
ಉಪ್ಪಿ ವರ್ಮಾ ಜೋಡಿಯ I AM R..! ವಿಭಿನ್ನ ಅವತಾರದಲ್ಲಿ ರಿಯಲ್ ಸ್ಟಾರ್
undefined
ಕನ್ನಡದ ಕೆಜಿಎಫ್-2 ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಈ ಸಿನಿಮಾ ವಿಶ್ವಮಟ್ಟದಲ್ಲಿ ಅಬ್ಬರಿಸುತ್ತಿದೆ. ಭಾರತದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಕೆಜಿಎಫ್-2 ದೂಳಿಪಟ ಮಾಡಿದೆ. ಈಗಾಗಲೇ ಹಿಂದಿಯಲ್ಲಿ ಕೆಜಿಎಫ್-2 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಕೆಜಿಎಫ್-2 880 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 11 ದಿನಗಳಲ್ಲಿ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವುದು ಮೊದಲ ಸಿನಿಮಾವಾಗಿದೆ. ಕೆಲವೇ ದಿನಗಳಲ್ಲಿ ಕೆಜಿಎಫ್-2 1000 ಕೋಟಿ ಕಲೆಕ್ಷನ್ ಕ್ಲಬ್ ಸೇರಲಿದೆ.
ಹೊಟ್ಟೆತುಂಬಿದವರಿಗಿಂತ ಹಸಿದವರ ಪರ ನಿಲ್ಲೋದು ದೊಡ್ಡದು: ಸುದೀಪ್
ರಾಮ್ ಗೋಪಾಲ್ ವರ್ಮಾ ಮಾತು
ಇದೇ ವೇದಿಕೆಯಲ್ಲಿ ಮಾತನಾಡಿದ್ದ ರಾಮ ಗೋಪಾಲ ವರ್ಮಾ ಕನ್ನಡದ ಹಿಂದಿಯಲ್ಲಿ ಕನ್ನಡ ಸಿನಿಮಾರಂಗವನ್ನು ತುಂಬ ಚಿಕ್ಕದು ಎಂದು ಭಾವಿಸಿದ್ದರು. ಕನ್ನಡದ ಬಗ್ಗೆಯೇ ಗೊತ್ತಿರಲಿಲ್ಲ. ಆದರೀಗ ಬದಲಾಗಿದೆ. ಕನ್ನಡ ಸಿನಿಮಾರಂಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಪ್ರಶಾಂತ್ ನೀಲ್ ಮತ್ತು ಯಶ್ ಕಾರಣ. ಇಂತ ಅದ್ಭುತ ಸಿನಿಮಾ ನೀಡಿದ ಕೆಜಿಎಫ್-2 ತಂಡಕ್ಕೆ ಧನ್ಯವಾದ ತಿಳಿಸಬೇಕು ಎಂದು ಹೇಳಿದರು.