ಕಂಗನಾ ರಣಾವತ್ ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸ್ಪರ್ಧಿ ಮನ್ವರ್ ಈ ತನ್ನ ಜೀವನದಲ್ಲಿ ನಡೆದ ಕೆಟ್ಟ ಘಟನೆ ಬಿಚ್ಚಿಟ್ಟ ಬಳಿಕ ಕಂಗನಾ ತನ್ನ ಬಾಲ್ಯದಲ್ಲಿ ಭಯಾನಕ ಘಟನೆಯನ್ನು ಬಹಿರಂಗ ಪಡಿಸಿದರು.
ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಈಗ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿದ್ದಾರೆ. ಕಂಗನಾ ಸದ್ಯ ಸಿನಿಮಾ ಜೊತೆಗೆ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದಾರೆ. ಹೌದು, ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಲಾಕ್ ಅಪ್ ರಿಯಾಲಿಟಿ ಶೋ(Lock Upp Reality Show) ನಡೆಸಿಕೊಡುತ್ತಿದ್ದಾರೆ. ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಜೊತೆ ಸೇರಿ ಕಂಗನಾ ಈ ಶೋ ಹೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಈ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಅತೀ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.
ಈ ಶೋನಲ್ಲಿ ಅನೇಕ ವಿವಾದಾತ್ಮಕ ಸ್ಪರ್ಧಿಗಳಿದ್ದು ಅನೇಕ ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. ಇದೀಗ ಕಂಗನಾ ರಣಾವತ್ ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸ್ಪರ್ಧಿ ಮನ್ವರ್ ಈ ತನ್ನ ಜೀವನದಲ್ಲಿ ನಡೆದ ಕೆಟ್ಟ ಘಟನೆ ಬಿಚ್ಚಿಟ್ಟ ಬಳಿಕ ಕಂಗನಾ ತನ್ನ ಬಾಲ್ಯದಲ್ಲಿ ಭಯಾನಕ ಘಟನೆಯನ್ನು ಬಹಿರಂಗ ಪಡಿಸಿದರು.
ಕಂಗನಾ ಬಳಿ ತನ್ನ ಕೆಟ್ಟ ಅನುಭವ ಬಿಚ್ಚಿಟ್ಟ ಮನ್ವರ್, ನಾನು 6 ಮತ್ತು 7 ವರ್ಷಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ಅವರು ನನ್ನ ಸಂಬಂಧಿಕರೇ. ಇದು 4 ರಿಂದ 5 ವರ್ಷಗಳ ವರೆಗೂ ಮುಂದುವರೆಯಿತು. ಬಳಿಕ ಇದು ತುಂಬಾ ಜಾಸ್ತಿ ಆಯ್ತು. ಬಳಿಕ ಇದರ ಬಗ್ಗೆ ಅರಿವಾಯ್ತು ನಿಲ್ಲಿಸಬೇಕೆಂದುಕೊಂಡೆ' ಎಂದರು. 'ಇದನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಮೊದಲ ಬಾರಿಗೆ ಹೇಳಿದ್ದೇನೆ' ಎಂದು ಹೇಳಿದರು. ಮನ್ವರ್ ಜೀವನದ ಘಟನೆ ಕೇಳಿ ಕಂಗನಾ 'ಇಂತ ಅನುಭವ ಅನೇಕರಿಗೆ ಆಗಿರುತ್ತದೆ. ಆದರೆ ಬಹಿರಂಗವಾಗಿ ಎಲ್ಲಿಯೂ ಹೇಳಲ್ಲ' ಎಂದರು.
ಖ್ಯಾತ ನಿರ್ದೇಶಕನ ಜೊತೆ ಅಫೇರ್ ಇತ್ತು, ಗರ್ಭಿಣಿಯಾದೆ ಎಂದು ದೂರ ಸರಿದ; ಕಣ್ಣೀರಿಟ್ಟ ಮಂದನಾ ಕರೀಮಿ
ಪ್ರತಿಕ್ರಿಯೆ ನೀಡಿದ ಕಂಗನಾ ಇಂತ ಅನುಭವ ತನಗೂ ಆಗಿದೆ ಎಂದು ಹೇಳಿದರು. 'ಮನ್ವರ್ ಪ್ರತಿವರ್ಷ ಎಷ್ಟೊ ಮಕ್ಕಳು ಈ ರೀತಿಯ ದೌರ್ಜನ್ಯ ಎದುರಿಸುತ್ತಿರುತ್ತಾರೆ. ಆದರೆ ಬಹಿರಂಗವಾಗಿ ಯಾರು ಹೇಳುವುದಿಲ್ಲ. ಬಾಲ್ಯದಲ್ಲಿ ಅನೇಕರಿಗೆ ಇಂಥ ಕೆಟ್ಟ ಘಟನೆಯ ಅನುಭವವಾಗಿದೆ. ನನಗೂ ಸೇರಿದಂತೆ. ನಾನು ಆಗ ಇನ್ನು ಚಿಕ್ಕವಳಿದ್ದೆ. ನಾನು ವಾಸವಿದ್ದ ನಗರದಲ್ಲಿ ಒಬ್ಬ ಹುಡುಗ ನನಗಿಂತ ಸ್ವಲ್ಪ ವರ್ಷ ದೊಡ್ಡವನು, ನನ್ನನ್ನು ಕೆಟ್ಟದಾಗಿ ಮುಟ್ಟಿದ್ದ. ಅದರ ಬಗ್ಗೆ ನನಗೆ ಆಗ ಗೊತ್ತಿರಲಿಲ್ಲ' ಎಂದು ಹೇಳಿದರು.
'ಮಕ್ಕಳಿಗೆ ಈ ಬಗ್ಗೆ ಏನು ಗೊತ್ತಿರಲ್ಲ. ಈ ಬಗ್ಗೆ ಶಿಕ್ಷಣವನ್ನು ಕೊಡಲು ಸಾಧ್ಯವಿಲ್ಲ. ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಮೂಡಿಸಬೇಕು. ಇದು ನಮ್ಮ ಸಮಾಜದ ದೊಡ್ಡ ಸಮಸ್ಯೆಯಾಗಿದೆ. ಅನೇಕ ಮಕ್ಕಳು ಇದರಿಂದ ಬಳಲುತ್ತಿರುತ್ತಾರೆ. ಮಕ್ಕಳ ಮೇಲೆ ದೌರ್ಜನ್ಯ ತಡೆಯಲು ಜಾಗೃತಿ ಮೂಡಿಸಲು ಈ ವೇದಿಕೆ ಬಳಸಿಕೊಳ್ಳುತ್ತೇವೆ. ನಾನು ಮತ್ತು ಮನ್ವರ್ ಇಬ್ಬರಿಗೂ ಕೆಟ್ಟ ಘಟನೆಯ ಅನುಭವವಾಗಿದೆ' ಎಂದು ಕಂಗನಾ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
Kangana Ranaut: ಸೌತ್ ಸೂಪರ್ ಸ್ಟಾರ್ಸ್‌ಗೆ ಬಾಲಿವುಡ್‌ನಿಂದ ದೂರವಿರಿ ಎಂದಿದ್ದೇಕೆ ಬಾಲಿವುಡ್ ಕ್ವೀನ್?
ನಟಿ ಕಂಗನಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ವಿವಾದದ ಮೂಲಕ ಸದ್ದು ಮಾಡುತ್ತಿದ್ದ ಕಂಗನಾ ಸದ್ಯ ಲಾಕ್ ಅಪ್ ರಿಯಾಲಿಟಿ ಶೋ ಮೂಲಕ ಸುದ್ದಿಯಾಗಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕಂಗನಾ ಸದ್ಯ ದಾಖಡ್, ತೇಜಸ್ ಮತ್ತು ಟಿಕು ವೆಡ್ಸ್ ಶೇರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಕಂಗನಾ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.