ಅಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಐಶ್ವರ್ಯಾ ರೈ

Published : May 24, 2022, 12:24 PM ISTUpdated : May 24, 2022, 12:26 PM IST
ಅಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಐಶ್ವರ್ಯಾ ರೈ

ಸಾರಾಂಶ

71ನೇ ವಸಂತಕ್ಕೆ ಕಾಲಿರಿಸಿದ ಐಶ್‌ ತಾಯಿ ಬೃಂದಾ ರೈ ಅಮ್ಮನಿಗೆ ಹುಟ್ಟುಹಬ್ಬದ ಶುಭ ಕೋರಿದ ಐಶ್ವರ್ಯಾ ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್

ಮಾಜಿ ಭುವನ ಸುಂದರಿ, ಮಂಗಳೂರು ಬೆಡಗಿ ಐಶ್ವರ್ಯಾ ರೈ (Aishwarya Rai) ಅವರ ತಾಯಿ ಬೃಂದಾ ರೈ (Brindya Rai) ತಮ್ಮ 71ನೇ ವಸಂತಕ್ಕೆ ಕಾಲಿರಿಸಿದ್ದು, ತಾಯಿಯ ಹುಟ್ಟುಹಬ್ಬದಂದು ಮಗಳು ಐಶ್ವರ್ಯ ಇನ್ಸ್ಟಾಗ್ರಾಮ್‌ನಲ್ಲಿ ಭಾವುಕವಾದ ಪೋಸ್ಟೊಂದನ್ನು ಮಾಡಿದ್ದಾರೆ. ಬೃಂದಾ ಅವರು ಇರುವಲ್ಲಿಗೆ ತೆರಳಿದ ಐಶ್ವರ್ಯ, ಪತಿ ಅಭಿಷೇಕ್‌ ಬಚ್ಚನ್ ಮೊಮ್ಮಗಳು ಆರಾಧ್ಯ  ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. 

ಇತ್ತೀಚೆಗಷ್ಟೇ ಕಾನ್ಸ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಿಂದ ಮರಳಿದ ಐಶ್ವರ್ಯಾ (Aishwarya Rai)ಹಾಗೂ ಅಭಿಷೇಕ್‌ ಬಚ್ಚನ್ (Abhishek Bachchan) , ಇನ್ಸ್ಟಾಗ್ರಾಮ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯ ಕೆಲ ಪೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. 

ಫೋಟೋದಲ್ಲಿ ಕಾಣಿಸುವಂತೆ ವೃಂದಾ ರೈ ಅವರು ಮೇಜಿನ ಮೇಲೆ ಹಲವಾರು ಹೂವುಗಳೊಂದಿಗೆ ಕುಳಿತಿದ್ದಾರೆ. ಮೊಮ್ಮಗಳು ಆರಾಧ್ಯ, ಕೆಂಪು ಡ್ರೆಸ್‌ನಲ್ಲಿ, ಅಜ್ಜಿಯ ಭುಜದ ಮೇಲೆ ಕೈಯಿಟ್ಟು ಅವರ ಪಕ್ಕದಲ್ಲಿ ನಿಂತಿದ್ದಾರೆ. ಅವರ ಹಿಂದೆ ಐಶ್ವರ್ಯಾ ನಿಂತಿದ್ದಾರೆ. ಹಿನ್ನೆಲೆಯಲ್ಲಿ ಆರಾಧ್ಯ ಮತ್ತು  ಐಶ್ವರ್ಯ ತಂದೆ ಕೃಷ್ಣರಾಜ್ ರೈ ಸೇರಿದಂತೆ ರಾಯ್ ಕುಟುಂಬದ ಹಲವರು ಇರುವ ಫೋಟೋ ಇದೆ. ಮತ್ತೊಂದು ಫೋಟೋದಲ್ಲಿ ಪತಿ ಅಭಿಷೇಕ್ ಇದ್ದಾರೆ.

Abhishek- Aishwarya ಈ ಜೋಡಿ ಫಸ್ಟ್ ಮೀಟ್‌ ಆಗಿದ್ದು ಹೇಗೆ ಗೊತ್ತಾ?

ಐಶ್ವರ್ಯ ಪೋಸ್ಟ್‌ಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು, ತುಂಬಾ ಸುಂದರವಾಗಿದೆ, ಸಂತೋಷದ ಕುಟುಂಬ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಹ್ಯಾಪಿ ಬರ್ತ್ಡೇ ಮಮ್ಮಿ- ದೊಡ್ಡ ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇನೆ. ಯಾವಾಗಲೂ ಯಾವಾಗಲೂ ದೇವರು  ನಿನ್ನನ್ನು ಚೆನ್ನಾಗಿಟ್ಟಿರಲಿ ಎಂದು ಐಶ್ವರ್ಯ ಫೋಟೋ ಪೋಸ್ಟ್ ಮಾಡಿ ಬರೆದಿದ್ದಾರೆ. (ತುಳು ಭಾಷೆಯಲ್ಲಿ ಅಜ್ಜಿಗೆ ದೊಡ್ಡ ಎಂದು ಕರೆಯುವ ಸಂಪ್ರದಾಯವಿದೆ. ಐಶ್ವರ್ಯ ತುಳು ಮೂಲದವರಾಗಿರುವುದರಿಂದ ಮಗಳು ಆರಾಧ್ಯಗೆ ಬೃಂದಾ ರೈ ದೊಡ್ಡ(ಅಜ್ಜಿ) ಆಗಬೇಕು ಈ ಕಾರಣಕ್ಕೆ ದೊಡ್ಡ ಎಂದು ಬರೆದಿರುವ ಸಾಧ್ಯತೆ ಇದೆ)

ಏಜ್‌ಲುಕ್ ಬಂದಿದೆ, ಕಾಸ್ಟ್ಯೂಮ್ ಸರಿ ಹೋಗ್ತಾ ಇಲ್ಲ, ಐಶ್ವರ್ಯಾ ರೈ ಕಾಲೆಳೆದ ನೆಟಿಜನ್ಸ್..!

ಐಶ್ವರ್ಯಾ ಮತ್ತು ಕುಟುಂಬ ಈ ವಾರಾಂತ್ಯದಲ್ಲಿ ಕಾನ್ಸ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಿಂದ (Cannes Film Festival) ಮರಳಿತ್ತು. ಕಾನ್ಸ್‌ನಲ್ಲಿದ್ದಾಗ, ಐಶ್ವರ್ಯಾ ರೆಡ್ ಕಾರ್ಪೆಟ್ ಮೇಲೆ ನಡೆದಾಡಿದ್ದರು. ಹಬ್ಬದ ಮೂರನೇ ದಿನದಂದು ಗೌರವ್ ಗುಪ್ತಾ ಅವರು ಡಿಸೈನ್ ಮಾಡಿದ್ದ ಗುಲಾಬಿ ಬಣ್ಣದ ಗೌನ್‌ನಲ್ಲಿ ಅವರು ಕೊನೆಯ ಬಾರಿಗೆ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದರು.  ಎರಡನೇ ದಿನದಂದು ಕಪ್ಪು ಬಣ್ಣದ ಡೋಲ್ಸ್ ಮತ್ತು ಗಬ್ಬಾನಾ ಗೌನ್ ಅನ್ನು ಧರಿಸಿದ್ದರು. 

ಇತ್ತೀಚೆಗೆ, 2022 ರಲ್ಲಿ ಬಾಲಿವುಡ್‌ನ ಟಾಪ್ 5 ಶ್ರೀಮಂತ ನಟಿಯರ ಕುರಿತಾದ ವರದಿಯು ಎಲ್ಲರ ಗಮನವನ್ನು ಸೆಳೆದಿದೆ. ಸೆಲೆಬ್ರಿಟಿ ನೆಟ್ ವರ್ತ್ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ 100 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಬಾಲಿವುಡ್ ಶ್ರೀಮಂತ ನಟಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವವರು ಜಾಗತಿಕ ಸೆನ್ಸೇಷನ್ ಪ್ರಿಯಾಂಕಾ ಚೋಪ್ರಾ. ನಟಿಯ ನಿವ್ವಳ ಮೌಲ್ಯ 70 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಆಕೆಯ ವಾರ್ಷಿಕ ವೇತನವು 10 ಮಿಲಿಯನ್ ಡಾಲರ್ ಇದೆ ಎಂದು ಹೇಳಲಾಗುತ್ತದೆ. ಕೇವಲ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಹಾಲಿವುಡ್‌ನಲ್ಲಿಯೂ ಅವರು ಹಣ ಸಂಪಾದಿಸುತ್ತಿದ್ದಾರೆ.

ವರದಿಯ ಪ್ರಕಾರ ಕರೀನಾ ಕಪೂರ್ ಖಾನ್ ಅವರ ನಿವ್ವಳ ಮೌಲ್ಯವು ಸುಮಾರು 60 ಮಿಲಿಯನ್ ಡಾಲರ್ ಆಗಿದೆ. ಕರೀನಾ ಕಪೂರ್ ಖಾನ್ ಅವರು ಅಮೀರ್ ಖಾನ್ ಜೊತೆಗೆ ಲಾಲ್ ಸಿಂಗ್ ಚಡ್ಡಾ ಅವರೊಂದಿಗೆ ಅನೇಕ ದೊಡ್ಡ-ಬಜೆಟ್ ಚಲನಚಿತ್ರಗಳ ಭಾಗವಾಗಿದ್ದಾರೆ. ಅನುಷ್ಕಾ ಶರ್ಮಾ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವಿರಬಹುದು. ಆದರೂ ಅವರು ಬಾಲಿವುಡ್ ಶ್ರೀಮಂತ ನಟಿಯರಲ್ಲಿ ಒಬ್ಬರು. ವರದಿಗಳ ಪ್ರಕಾರ ಆಕೆಯ ನಿವ್ವಳ ಮೌಲ್ಯ 46 ಮಿಲಿಯನ್ ಡಾಲರ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?