ತನ್ನ ಸಿನಿಮಾದಿಂದ ಹೊರನಡೆಯುವಂತೆ ತಂಗಿ ಗಂಡನಿಗೆ ಹೇಳಿದ್ದೇ ಸಲ್ಮಾನ್ ಖಾನ್; ಕಾರಣವೇನು?

By Shruiti G Krishna  |  First Published May 24, 2022, 12:12 PM IST

ಕಭಿ ಈದ್ ಕಭಿ ದಿವಾಳಿ ಸಿನಿಮಾದಿಂದ ಹೊರನಡೆಯುವಂತೆ ತಂಗಿಯ ಗಂಡ ಆಯುಷ್ ಅವರಿಗೆ ಸಲ್ಮಾನ್ ಖಾನ್‌ನೇ ಹೇಳಿದ್ದು ಎನ್ನಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಸಿನಿಮಾದಿಂದ ಹೊರಹೋಗುವಂತೆ ಆಯುಷ್ ಶರ್ಮಾಗೆ ಸೂಚಿಸಿದ್ದೇ ಸಲ್ಮಾನ್ ಖಾನ್ ಎನ್ನಲಾಗಿದೆ. ಸಲ್ಮಾನ್ ಖಾನ್ ಹೇಳಿದ ಬಳಿಕ ಆಯುಷ್ ಚಿತ್ರದಿಂದ ಹೊರ ಗುಳಿಯಲು ನಿರ್ಧರಿಸಿದರು ಎನ್ನುವ ಮಾತು ಕೇಳಿಬರುತ್ತಿದೆ.


ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ಅವರ ಹೊಸ ಸಿನಿಮಾ ಕಭಿ ಈದ್ ಕಭಿ ದಿವಾಳಿ(Kabhi Eid Kabhi Diwali)ಒಂದಲ್ಲೊಂದ ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಸಲ್ಮಾನ್ ಖಾನ್ ಸಿನಿಮಾ ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ. ಇತ್ತೀಚಿಗಷ್ಟೆ ಈ ಸಿನಿಮಾದಿಂದ ನಿರ್ಮಾಪಕ ಸಾಜಿದ್ ನಾದಿಯಾವಾಲಾ ಈ ಸಿನಿಮಾದ ಭಾಗವಾಗಿರುವುದಿಲ್ಲ ಎಂದು ಹೇಳಿ ಚಿತ್ರದಿಂದ ಹೊರ ನಡೆದಿದ್ದರು. ಬಳಿಕ ಸಲ್ಮಾನ್ ಖಾನ್ ಸಿನಿಮಾಗೆ ಸಲ್ಮಾನ್ ಖಾನ್‌ನೇ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡರು. ಇದರ ಬೆನ್ನಲ್ಲೇ ನಿರ್ದೇಶಕ ಫರ್ಹಾದ್ ಸಾಮ್ಜಿ ಕೂಡ ಸಿನಿಮಾದಿಂದ ಹೊರನಡಿದರು.

ನಿರ್ದೇಶಕ ಫರ್ಹಾದ್ ಚಿತ್ರೀಕರಣ ಪ್ರಾರಂಭವಾದರೂ ಸೆಟ್‌ಗೆ ಬಂದಿಲ್ಲ ಎಂಟ್ರಿ ಕೊಟ್ಟಿಲ್ಲ. ಹಾಗಾಗಿ ಸಹಾಯಕ ನಿರ್ದೇಶಕರೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನಿರ್ಮಾಪಕ, ನಿರ್ದೇಶಕ ಸಿನಿಮಾದಿಂದ ಹೊರ ನಡೆದ ಬೆನ್ನಲ್ಲೇ ಚಿತ್ರದಿಂದ ಮತ್ತೋರ್ವ ನಟ ಸಲ್ಮಾನ್ ಖಾನ್ ತಂಗಿಯ ಗಂಡ ಆಯುಷ್ ಶರ್ಮಾ(Aayush Sharma) ಸಿನಿಮಾದಿಂದ ಔಟ್ ಆಗಿದ್ದಾರೆ. ಆಯುಷ್ ಹೊರನಡೆದಿರುವ ವಿಚಾರ ಇದೀಗ ಬಾಲಿವುಡ್ ನಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ. ಪ್ರೊಡಕ್ಷನ್ ಹೌಸ್ ಜೊತಿಗಿನ ಸೃಜನಾತ್ಮಕ ಭಿನ್ನಾಭಿಪ್ರಾಯದಿಂದ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

Tap to resize

Latest Videos

ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹರಿಡುತ್ತಿದೆ. ಸಿನಿಮಾದಿಂದ ಹೊರನಡೆಯುವಂತೆ ಸಲ್ಮಾನ್ ಖಾನ್ ಅವರೇ ಹೇಳಿದ್ದು ಎನ್ನಲಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸಲ್ಮಾನ್ ಖಾನ್ ಎಂಟ್ರಿ ಅನಿವಾರ್ಯವಾಗಿತ್ತು. ಈ ಸಮಸ್ಯೆ ಬಗೆಹರಿಯದಿದ್ದರೆ ಸಿನಿಮಾದಿಂದ ಹೊರಹೋಗುವಂತೆ ಆಯುಷ್ ಶರ್ಮಾಗೆ ಸೂಚಿಸಿದ್ದೇ ಸಲ್ಮಾನ್ ಖಾನ್ ಎನ್ನಲಾಗಿದೆ. ಸಲ್ಮಾನ್ ಖಾನ್ ಹೇಳಿದ ಬಳಿಕ ಆಯುಷ್ ಚಿತ್ರದಿಂದ ಹೊರಗುಳಿಯಲು ನಿರ್ಧರಿಸಿದರು ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ನಟ ಜಹೀರ್ ಇಕ್ಬಾಲ್ ಕೂಡ ಈ ಯೋಜನೆಯಿಂದ ಹೊರಗುಳಿದಿದ್ದಾರೆ.

ಕಿಚ್ಚನ ಪ್ಯಾನ್ ಇಂಡಿಯಾ ಪಯಣಕ್ಕೆ ಜೊತೆಯಾದ ಸಲ್ಮಾನ್; ವಿಕ್ರಾಂತ್ ರೋಣನ ಜವಾಬ್ದಾರಿ ಹೊತ್ತ ಖಾನ್

ಸಲ್ಮಾನ್ ಖಾನ್ ತಂಗಿ ಅರ್ಪಿತಾ ಪತಿ ಆಯುಷ್ ಕಳೆದ ವರ್ಷ ಬಿಗುಡೆಯಾಗಿದ್ದ ಅಂತಿಮ್; ದಿ ಫೈನಲ್ ಟ್ರುತ್ ಸಿನಿಮಾದಲ್ಲಿ ಬಾವನ ಜೊತೆ ನಟಿಸಿದ್ದರು. ಈ ಸಿನಿಮಾ ಬಳಿಕ ಕಭಿ ಈದ್ ಕಭಿ ದಿವಾಳಿ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದರು. ಆದರೀಗ ಈ ಸಿನಿಮಾದಿಂದ ಆಯಷ್ ಹೊರ ನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪೂಜಾ ಹೆಗ್ಡೆ ಕೈಯಲ್ಲಿ ಸಲ್ಮಾನ್ ಖಾನ್ ಸಿಗ್ನೇಚರ್ ಬ್ರೇಸ್ಲೆಟ್; ಫೋಟೋ ವೈರಲ್

ಆಯುಷ್ ಶರ್ಮಾ ತನ್ನ ಭಾಗದ ಚಿತ್ರೀಕರಣ ಈಗಾಗಲೇ ಪ್ರಾರಂಭ ಮಾಡಿದ್ದರು. ತನ್ನ ಭಾಗದ ಶೂಟಿಂಗ್ ಅನ್ನು ಬಹುತೇಕ ಪೂರ್ತಿ ಮಾಡಿದ್ದರು. ಆದರೀಗ ಸಿನಿಮಾದಂದನೇ ಹೊರ ನಡೆದಿದ್ದಾರೆ. ಸಿನಿಮಾದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಡಿಸೆಂಬರ್ 30ಕ್ಕೆ ಸಿನಿಮಾ ರಿಲೀಸ್ ಆಗಲು ಸಜ್ಜಾಗಿತ್ತು. ಆದರೀಗ ಅಂದೇ ಬಿಡುಗಡೆಯಾಗುವುದು ಅನುಮಾನ ಮೂಡಿಸಿದೆ. ಅಂದಹಾಗೆ ಈ ಸಿನಿಮಾದಲ್ಲಿ ಇನ್ನು ಯಾವೆಲ್ಲ ಬದಲಾವಣೆಗಳು ಆಗಲಿದೆ ಎಂದು ಕಾದು ನೋಡಬೇಕು.

click me!