
ಗೌತಮ್ ತಿನ್ನನೂರಿ ನಿರ್ದೇಶನದ ವಿಜಯ್ ದೇವರಕೊಂಡ ನಾಯಕತ್ವದ ಮುಂಬರುವ ಸಿನಿಮಾದ ನಾಯಕಿಯಾಗಿ ಕನ್ನಡ ಮೂಲದ ನಟಿ ಶ್ರೀಲೀಲಾ ಆಯ್ಕೆಯಾಗಿದ್ದರು. ಆದರೆ, ಡೇಟ್ಸ್ ಸಮಸ್ಯೆ ಎದುರಾಗಿದ್ದು, ಶ್ರೀಲೀಲಾ ಈ ಚಿತ್ರದಿಂದ ಹೊರನಡೆದಿದ್ದಾರೆ. ಶ್ರೀಲೀಲಾ ಜಾಗಕ್ಕೆ ಇನ್ನೊಬ್ಬ ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದೀಗ ಸಿಕ್ಕ ಸುದ್ದಿ ಪ್ರಕಾರ, ವಿಜಯ್ ದೇವರಕೊಂಡ ಚಿತ್ರಕ್ಕೆ ಸಾಕ್ಷಿ ವೈದ್ಯ ಆಯ್ಕೆಯಾಗುವ ಚಾನ್ಸ್ ಹೆಚ್ಚಿದೆ.
ಹಾಗಿದ್ದರೆ, ಈ ಸಾಕ್ಷಿ ವೈದ್ಯ ಯಾರು? ಏಜೆಂಟ್ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದ ನಟಿ ಸಾಕ್ಷಿ ವೈದ್ಯರನ್ನು ಈ ಚಿತ್ರಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಸಾಕ್ಷಿ ಜತೆ ಮಾತುಕತೆ ನಡೆದು ಅವರು ಸಹಿ ಹಾಕಲು ಒಪ್ಪಿದ್ದೂ ಆಗಿದೆ ಎಂಬ ಮಾಹಿತಿ ಇದೆ. ಹಾಗಿದ್ದರೆ, ರಶ್ಮಿಕಾ ಮಂದಣ್ಣ ಗತಿ? ಗೊತ್ತಿಲ್ಲ. ನಟಿ ರಶ್ಮಿಕಾ ಕೂಡ ಬಹಳಷ್ಟು ಬ್ಯುಸಿ ಆಗಿರುವ ನಟಿಯಾಗಿದ್ದು, ಅವರು ಒಂದಾದ ಬಳಿಕ ಮತ್ತೊಂದರಂತೆ ಬಾಲಿವುಡ್ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೂ ಡೇಡ್ಸ್ ಸಮಸ್ಯೆ ಎದುರಾಗಿಬಹುದು.
ಬಿಗ್ ಬಾಸ್ ಮನೆಯಲ್ಲೊಬ್ಬರು ಕರ್ನಾಟಕ ಕ್ರಶ್, ಕಿಚ್ಚ ಸುದೀಪ್ ಸಂಗೀತಾಗೆ ಮಾಡಿದ್ರು ಅಡ್ವೈಸ್!
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ವಿಜಯ್ ದೇವರಕೊಂಡ-ಶ್ರೀಲೀಲಾ ಜೋಡಿಗೆ ಹೋಲಿಸಿದರೆ ವಿಜಯ್-ರಶ್ಮಿಕಾ ಜೋಡಿಗೇ ಹೆಚ್ಚು ಫ್ಯಾನ್ಸ್ ಇದ್ದಾರೆ. ಈ ಮೊದಲು ಸುದ್ದಿಯಾಗಿರುವಂತೆ ವಿಜಯ್ ಜತೆ ರಶ್ಮಿಕಾ ತೆರೆ ಹಂಚಿಕೊಳ್ಳಲಿ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಆಸೆ ವ್ಯಕ್ತಪಡಿಸಿದ್ದರು. ಆದರೆ, ಈಗ ರಶ್ಮಿಕಾ ಬದಲು ಸಾಕ್ಷಿ ಬರಬಹುದು ಎನ್ನುತ್ತಿದ್ದಂತರೆ ರಶ್ಮಿಕಾ-ವಿಜಯ್ ಜೋಡಿ ಫ್ಯಾನ್ಸ್ ಮುಖ ಬಾಡಿದ ಬಸಳೆಸೊಪ್ಪಿನಂತಾಗಿದೆ. ಒಟ್ಟಿನಲ್ಲಿ, ಮುಂದೆ ಯಾರು ಈ ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಬಹುದು ಎಂಬ ತೀವ್ರ ಕುತೂಹಲ ಹಲವರಲ್ಲಿ ಮನೆಮಾಡಿದೆ.
ತುಕಾಲಿ ಸಂತು ಮೀಟರ್ ಆಫ್ ಓಕೆ, ಡ್ರೋನ್ ಪ್ರತಾಪ್ ವಿಷಯಕ್ಕೆ ಮೈಕ್ ಆಫ್ ಆಗಿದ್ದೇಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.