ಇಂದು ನಟಿ ಕೃತಿ ಕರಬಂಧ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಸಲ್ಮಾನ್ ಖಾನ್ ತಂಗಿ ಗಂಡನಿಗೆ ಹೃದಯದ ಜತೆ ಪಾಕೆಟ್ ಮನಿನೂ ಕೊಟ್ಟ ಇಂಟರೆಸ್ಟಿಂಗ್ ವಿಷಯ ಹೊರಬಂದಿದೆ.
ರಾಕಿ ಭಾಯ್ ಯಶ್ ಹೀರೋಯಿನ್ ಆಗಿ ‘ಗೂಗ್ಲಿ’ ಚಿತ್ರದಲ್ಲಿ, ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದಲ್ಲಿ ಮಿಂಚಿರೋ ನಟಿ ಕೃತಿ ಕರಬಂಧ (Kriti Kharbanda). ಸದ್ಯ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ಕೃತಿ ಕರಬಂಧ, ಕನ್ನಡ, ಹಿಂದಿ ಮಾತ್ರವಲ್ಲದೇ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಅವರು ತಮಿಳು, ತೆಲುಗು ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದ ‘ಪ್ರೇಮ್ ಅಡ್ಡ’, ‘ಗಲಾಟೆ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2018ರ ‘ದಳಪತಿ’ ಅವರು ಕೊನೆಯದಾಗಿ ನಟಿಸಿದ ಕನ್ನಡ ಸಿನಿಮಾ. ಕೆಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನೂ ನೀಡಿದ್ದಾರೆ. ಇಂದು (ಅಕ್ಟೋಬರ್ 29) ನಟಿಗೆ 33ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಪ್ರೇಮ ಜೀವನದ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ಅದೇನೆಂದರೆ, ನಟಿ ಕೃತಿ, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಗಿಯ ಗಂಡ ಪುಲಕಿತ್ ಸಾಮ್ರಾಟ್ ಅವರಿಗೆ ಹೃದಯ ಕೊಟ್ಟು ಸೋತ ನಟಿ. ಪುಲ್ಕಿತ್ ಅವರ ಬಳಿ ಹಣವಿಲ್ಲದ ಕಾರಣ, ಅವರಿಗೆ ಪಾಕೆಟ್ ಮನಿಯನ್ನೂ ಕೊಡುತ್ತಿದ್ದರಂತೆ. ಹೌದು. ಈ ಕುರಿತು ಇಂಟರೆಸ್ಟಿಂಗ್ ವಿಷ್ಯವೊಂದು ಈಗ ಬೆಳಕಿಗೆ ಬಂದಿದೆ. ಕೃತಿ ಅವರು ಪುಲಕಿತ್ ಸಾಮ್ರಾಟ್ ಜೊತೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಇದನ್ನು ಅವರೇ ಒಮ್ಮೆ ಬಹಿರಂಗಪಡಿಸಿದ್ದರು. ಸಂದರ್ಶನವೊಂದರಲ್ಲಿ ಪುಲಕಿತ್ ಅವರ ಗಳಿಕೆಯನ್ನು ನಾನೇ ನೋಡಿಕೊಳ್ಳುತ್ತೇನೆ ಮತ್ತು ಎಲ್ಲವನ್ನೂ ನಿರ್ವಹಿಸುತ್ತೇನೆ ಎಂದು ಹೇಳಿದ್ದರು. ಪುಲಕಿತ್ ಕೂಡ ಕೃತಿಯಿಂದ ಪ್ರತಿದಿನ ಪಾಕೆಟ್ ಮನಿ ತೆಗೆದುಕೊಳ್ಳುವುದನ್ನು ಹೇಳಿದ್ದರು. ಸಲ್ಮಾನ್ ಅವರ ರಾಖಿ ಸಹೋದರಿ ಶ್ವೇತಾ ರೋಹಿರಾ ಪುಲಕಿತ್ ಅವರನ್ನು ಮದುವೆಯಾಗಿದ್ದರು. ಆದರೆ ಅವರಿಬ್ಬರೂ ಹಲವು ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದರು. ಆದರೆ ಕೃತಿ ಅವರ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ.
ಕಂಗನಾ ದೀದಿ ಕೈಮುಗಿತೇನೆ, ನಿಮ್ಮ ಚಿತ್ರಗಳನ್ನು ಥಿಯೇಟರ್ನಲ್ಲಿ ಬಿಡುಗಡೆ ಮಾಡ್ಬೇಡಿ ಎಂದ ಕೆಆರ್ಕೆ!
ಇನ್ನು ಕೃತಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಅವರು, ಇಮ್ರಾನ್ ಹಶ್ಮಿ ಅವರೊಂದಿಗೆ ಬಾಲಿವುಡ್ ಪ್ರವೇಶಿಸಿದರು. ಈ ಚಿತ್ರದ ಹೆಸರು 'ರಾಝ್ ರೀಬೂಟ್'. 2016 ರಲ್ಲಿ ಬಿಡುಗಡೆಯಾದ ಈ ಚಿತ್ರದ ಮೂಲಕ ಕೃತಿ ಜನರ ಹೃದಯದಲ್ಲಿ ಸ್ಥಾನ ಪಡೆದರು. ಈ ಚಿತ್ರದ ನಂತರ ಕೃತಿ, ರಾಜ್ ಕುಮಾರ್ ರಾವ್ ಅವರೊಂದಿಗೆ 'ಮೇರಿ ಶಾದಿ ಮೇ ಜರೂರ್ ಆನಾ' ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಣವನ್ನು ಗಳಿಸಿತು ಮತ್ತು ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕೃತಿ ಮತ್ತು ರಾಜಕುಮಾರ್ ಅವರ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟರು.
ಕೃತಿ ಬಾಲಿವುಡ್‌ಗೆ ಬಂದು 7 ವರ್ಷಗಳಾಗಿವೆ. ಈ ಏಳು ವರ್ಷಗಳಲ್ಲಿ, ನಟಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು, ಅವುಗಳಲ್ಲಿ ಕೆಲವು ಉತ್ತಮ ಪ್ರತಿಕ್ರಿಯೆಯನ್ನು ಪಡೆದವು ಮತ್ತು ಕೆಲವು ವಿಫಲವಾದವು. ಈ ಚಿತ್ರಗಳ ಹೆಸರುಗಳು 'ರಾಜ್ ರೀಬೂಟ್', 'ಶಾದಿ ಮೇ ಜರೂರ್ ಆನಾ', 'ಯಮ್ಲಾ ಪಗ್ಲಾ ದೀವಾನಾ', 'ವೀರೆ ದಿ ವೆಡ್ಡಿಂಗ್', 'ಪಾಗಲ್ಪಂತಿ' ಮತ್ತು '14 ಫೇರೆ'. ಈ ಚಿತ್ರಗಳಲ್ಲಿ ಕೃತಿ ಹಲವು ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಅನೇಕ ಸಂದರ್ಶನಗಳಲ್ಲಿ ನಟಿ ಶಾರುಖ್ ಖಾನ್ ಅವರೊಂದಿಗೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡುವ ಬಯಕೆಯ ಬಗ್ಗೆ ಹೇಳಿದ್ದಾರೆ. ಬಾಲಿವುಡ್ ಅಲ್ಲದೆ, ಕೃತಿ ಹಲವು ಸೌತ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
Tiger-3 ಯಾವ ನಟಿಯ ಟವಲ್ ಮೊದಲು ಬಿಚ್ಚಿ ಹೋಗತ್ತೆ? ಜಾಲತಾಣದಲ್ಲಿ ಓಪನ್ ಚಾಲೆಂಜ್!