ಅಂದು ಬಾಲಿವುಡ್ ಕ್ಯೂಟ್ ನಟಿ, ಇಂದು ಭಿಕ್ಷುಕಿ: ತುತ್ತು ಅನ್ನಕ್ಕೂ ಪರದಾಡಿದ ಸುಂದರಿಯ ಕರಾಳ ಸ್ಟೋರಿ ಇದು!
ಬದುಕು ಹೀಗೆಯೇ ಎನ್ನಲಾಗದು. ವಿಧಿಯಾಟದ ಮುಂದೆ ಎಲ್ಲರೂ ಮಣಿಯಲೇ ಬೇಕು. ಬೀದಿ ಬಿಕಾರಿ ರಾತ್ರೋರಾತ್ರಿ ಮಿಲೇನಿಯರ್ ಆಗಬಹುದು, ಆಗರ್ಭ ಶ್ರೀಮಂತ ದಿನ ಬೆಳಗಾಗುವುದರೊಳಗೆ ಭಿಕ್ಷುಕನಾಗಬಹುದು. ಒಂದಾನೊಂದು ಕಾಲದಲ್ಲಿ ತುತ್ತು ಅನ್ನಕ್ಕೆ ಪರದಾಡುತ್ತಿರುವ ವ್ಯಕ್ತಿ ಇಂದು ಸಹಸ್ರಾರು ಕೋಟಿ ರೂಪಾಯಿಗಳ ಒಡೆಯನಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದೆಯೇ ಇದ್ದರೆ, ಐದಾರು ಪೀಳಿಗೆಯವರು ಕುಳಿತು ತಿನ್ನುವಷ್ಟು ದುಡ್ಡು ಮಾಡಿಟ್ಟ ಶ್ರೀಮಂತನೊಬ್ಬ ದಾರಿ ಹೆಣವಾಗಿರೋ ಉದಾಹರಣೆಗಳೂ ಸಾಕಷ್ಟಿವೆ. ಇದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾನ್ಯವೇ. ಇನ್ನು ಬಣ್ಣದ ಪ್ರಪಂಚದಲ್ಲಂತೂ ಹೇಳುವುದೇ ಬೇಡ. ಇಲ್ಲಿ ಅದೃಷ್ಟ ಯಾರಿಗೆ ಒಲಿಯುತ್ತದೆ ಎಂದು ಹೇಳುವುದೇ ಕಷ್ಟ. ಸಿನಿ ಕ್ಷೇತ್ರದಲ್ಲಿ ತಳವೂರಬೇಕಾದರೆ ಏನೆಲ್ಲಾ ಸರ್ಕಸ್ ಮಾಡಬೇಕು, ಯಾವುದಕ್ಕೆಲ್ಲಾ ಅಡ್ಜಸ್ಟ್ ಆಗಬೇಕು ಎಂಬುದನ್ನು ಇದಾಗಲೇ ಹಲವು ನಟ-ನಟಿಯರೇ ಹೇಳಿದ್ದಾರೆ. ಇಷ್ಟೆಲ್ಲಾ ಮಾಡಿದ ಮೇಲೂ ಈ ಕ್ಷೇತ್ರ ಕೈ ಹಿಡಿಯುತ್ತದೆ ಎನ್ನಲಾಗದು.
ಹೌದು. ಅಂಥದ್ದೇ ಒಂದು ನೋವಿನ ಕಥೆ ಈ ನಟಿಯದ್ದು. ಸುರಸುಂದರ ನಟಿಯಾಗಿದ್ದ ಈಕೆಯನ್ನು ನೋಡಲು ಫ್ಯಾನ್ಸ್ ಒಂದು ಕಾಲದಲ್ಲಿ ಮುಗಿಬೀಳುತ್ತಿದ್ದರು. ಆದರೆ ಇಂದು ಬೀದಿ ಬಿಕಾರಿಯಾಗಿದ್ದಾರೆ ಈಕೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿ ಕಳ್ಳತನಕ್ಕೂ ಇಳಿದು ಬಂಧನಕ್ಕೆ ಒಳಗಾಗಿದ್ದಾರೆ. ಈಕೆಯ ಹೆಸರು ಮಿಥಾಲಿ ಶರ್ಮಾ. ಭೋಜ್ಪುರಿ ನಟಿಯೀಕೆ. ನಟಿಯಾಗಬೇಕೆಂಬ ಕನಸು ಹೊತ್ತು ದೆಹಲಿಯಿಂದ ಮುಂಬೈಗೆ ಬಂದರು. ಮಿಥಾಲಿ ಶರ್ಮಾ ದೆಹಲಿಯ ಹುಡುಗಿ. ಮೊದಲು ಮಾಡೆಲಿಂಗ್‌ಗೆ ಕಾಲಿಟ್ಟರು. ಆ ನಂತರ ನಟಿಯಾಗಬೇಕೆಂಬ ಆಸೆಯಿಂದ ಅದೃಷ್ಟ ಪರೀಕ್ಷೆಗೆಂದು ಮನೆ ಬಿಟ್ಟು ಮುಂಬೈಗೆ ಬಂದರು.
ANIMAL: ಸುದೀರ್ಘ ಲಿಪ್ಲಾಕ್ ನಂತ್ರ ರಣವೀರ್-ರಶ್ಮಿಕಾ ಮಂದಣ್ಣ ಬ್ರೇಕಪ್! ವಿಡಿಯೋ ವೈರಲ್
ಬಾಲಿವುಡ್ನಲ್ಲಿ ಕೆಲ ಸಿನಿಮಾದಲ್ಲಿ ಕೆಲಸ ಮಾಡಿದರೂ ಅದು ಅಷ್ಟಾಗಿ ಕೈ ಹಿಡಿಯಲಿಲ್ಲ. ನಂತರ ಭೋಜಪುರಿ ಚಿತ್ರದಲ್ಲಿ ನಟಿಸಿದರು. ಕೆಲ ಸಮಯ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಸಿನಿ ಕ್ಷೇತ್ರದಲ್ಲಿ ಈಕೆಗೆ ನೆಲೆಯೂರಲು ಆಗಲೇ ಇಲ್ಲ. ಹಾಗೂ ಹೀಗೂ ಮಾಡಿ ಕೆಲವೊಂದಿಷ್ಟು ಚಿತ್ರಗಳಲ್ಲಿ ಮಿಥಾಲಿ ನಟಿಸಿದರು, ಮಾಡೆಲಿಂಗ್ನಲ್ಲೂ ಮಿಂಚಿದರು. ಆದರೆ ಈ ಕೀರ್ತಿ ಬಹಳ ದಿನಗಳ ಕಾಲು ಉಳಿಯಲಿಲ್ಲ, ಬರು ಬರುತ್ತಾ ಅವಕಾಶಗಳು ಕಡಿಮೆಯಾದವು. ಈಕೆಯ ಚಿತ್ರಗಳು ಫ್ಲಾಪ್ ಆದ ಕಾರಣ ಅವಕಾಶ ಸಿಗಲೇ ಇಲ್ಲ. ಚಿತ್ರನಟಿಯಾಗುವ ಕನಸು ಹೊತ್ತ ಮಿಥಾಲಿ, ಮನೆಯವರನ್ನು ಎದುರು ಹಾಕಿಕೊಂಡು ಮನೆ ಬಿಟ್ಟು ಬಂದವರು. ಆದರೆ ಸಿನಿಮಾ ಕ್ಷೇತ್ರ ಅವರಿಗೆ ಆಗಿ ಬರಲೇ ಇಲ್ಲ. ವೃತ್ತಿಜೀವನ ಹಾಳಾಗಿ ಹೋಯಿತು. ಮನೆಯವರನ್ನು ಧಿಕ್ಕರಿಸಿ ಬಂದಿದ್ದರಿಂದ ಮನೆ ಬಾಗಿಲೂ ಈಕೆಯ ಪಾಲಿಗೆ ಮುಚ್ಚಿಹೋಯ್ತು.
ಇದರಿಂದ ಖಿನ್ನತೆಗೆ ಜಾರಿದರು ನಟಿ. ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತಿದ್ದಂತೆ ಭಿಕ್ಷೆ ಬೇಡಲು ಆರಂಭಿಸಿದರು. ಭಿಕ್ಷಾಟನೆಯೂ ಹೊಟ್ಟೆ ತುಂಬಿಸದೇ ಇದ್ದಾಗ ಚಿಕ್ಕ ಪುಟ್ಟ ಕಳ್ಳತನಗಳನ್ನೂ ಮಾಡಿದರು. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ ವಾಹನಗಳ ಗಾಜು ಪುಡಿ ಮಾಡಿ ಕಳ್ಳತನ ಮಾಡುತ್ತಿದ್ದರು. ನಂತರ ಇವರನ್ನು ಮುಂಬೈ ಪೊಲೀಸರು ಬಂಧಿಸಿದರು. ಳ್ಳತನದ ಆರೋಪದ ಮೇಲೆ ಮಿಥಾಲಿ ಶರ್ಮಾಳನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಾಗ ಆಕೆ ಊಟ ನೀಡುವಂತೆ ಕೇಳಿದ್ದು ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಈಕೆಯ ಸ್ಥಿತಿ ನೋಡಿ ಪೊಲೀಸರು, ಆಕೆಯನ್ನು ಥಾಣೆಯ ಮಾನಸಿಕ ಆಶ್ರಯಕ್ಕೆ ಸೇರಿಸಿದ್ದಾರೆ. ಸದ್ಯ ನಟಿಯ ವಸ್ತುಸ್ಥಿತಿ ತಿಳಿದಿಲ್ಲ. ಅವರು ಹೇಗಿದ್ದಾರೆ ಯಾರಿಗೂ ಗೊತ್ತಿಲ್ಲ!
ರಣವೀರ್ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್ ಬಗ್ಗೆ ಹೀಗ್ ಹೇಳೋದಾ? ಕಿಡಿಕಿಡಿಯಾದ ಪತಿರಾಯ!