ಬಾಲಿವುಡ್​ ಖಾನ್​ಗಳ ವಿರುದ್ಧ ಕಿಡಿ ಕಾರುತ್ತಲೇ ಬಿಗ್​ಬಾಸ್​ಗೆ ಕಂಗನಾ ಎಂಟ್ರಿ! ಹುಬ್ಬೇರಿಸಿದ ಫ್ಯಾನ್ಸ್​

By Suvarna News  |  First Published Oct 27, 2023, 9:43 PM IST

ಬಾಲಿವುಡ್​ ಖಾನ್​ಗಳ ವಿರುದ್ಧ ಕಿಡಿ ಕಾರುತ್ತಲೇ ಬಿಗ್​ಬಾಸ್​ಗೆ ಕಂಗನಾ ರಣಾವತ್​ ಎಂಟ್ರಿ ಕೊಟ್ಟಿದ್ದರು. ಆಗಿದ್ದೇನು? 
 


ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರುವಾಸಿಯಾಗಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಬಾಲಿವುಡ್​ನ ಖಾನ್​ ನಟರ ಬಗ್ಗೆ ಯಾವಾಗಲೂ ಕಿಡಿ ಕಾರುತ್ತಲೇ ಇರುತ್ತಾರೆ. ಅವರ ಬಗ್ಗೆ ಸದಾ ಪ್ರಾಮಾಣಿಕ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಇಂತಿಪ್ಪ ಕಂಗನಾ ಇದೀಗ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ ಹಿಂದಿಯ ಸೀಸನ್​ 17ರಲ್ಲಿ ಕಾಣಿಸಿಕೊಂಡು ಸಲ್ಲುಭಾಯಿ ಜೊತೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಇದು ಎಲ್ಲರ ಹುಬ್ಬೇರಿಸಿದೆ. ನಂತರ ಇದೇ ವಿಷಯವಾಗಿ ಕೇಳಿದ ಪ್ರಶ್ನೆಗಳಿಗೆ ಕಂಗನಾ ದಿಟ್ಟ ಉತ್ತರವನ್ನೇ ಕೊಟ್ಟಿದ್ದಾರೆ. ಖಾನ್​ ನಟರ ಕುರಿತು ತಮ್ಮ ನಿಲುವು ಏನೆಂದು ಅವರು ಸ್ಪಷ್ಟವಾಗಿ ಹೇಳಿದ್ದು, ಅವರ ವಿರುದ್ಧ ತಾವು ಕಿಡಿ ಕಾರುತ್ತಿರುವ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ತಮ್ಮ ನೇರಾನೇರ, ನಿಷ್ಠುರ ಮಾತುಗಳಿಂದ ಹಲವಾರು ಬಾರಿ ಟೀಕೆಗೆ ಗುರಿಯಾಗುತ್ತಿದ್ದರೂ ಕಂಗನಾ ತಮಗೆ ಅನ್ನಿಸಿದ್ದನ್ನು ನೇರವಾಗಿಯೇ ಹೇಳುವ ಜಾಯಮಾನದವರು. ಈಗಲೂ ಖಾನ್​ ನಟರ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ಮುಕ್ತವಾಗಿ ಮಾತನಾಡಿದ್ದಾರೆ. 

ಖಾನ್​ ನಟರ ಕುರಿತು ನಾನು ಮಾತನಾಡುವುದು  ವೈಯಕ್ತಿಕ ದ್ವೇಷಕ್ಕಲ್ಲ. ಬದಲಿಗೆ ಈ ಖಾನ್​ಗಳಿಗೆ ನಾಯಕಿಯಾಗುವ ನಟಿಯರು ನಂತರ ಅದೇ ನಟಿಯರನ್ನು ತಮ್ಮ ಅಮ್ಮನ ಪಾತ್ರಕ್ಕೆ ಬಳಸಿಕೊಳ್ಳುವ ವಿರುದ್ಧ ಎಂದು ಹೇಳಿದ್ದಾರೆ.   8-10 ವರ್ಷಗಳ ನಂತರ ಖಾನ್‌ಗಳ ತಾಯಿಯಾಗಿ ನಟಿಸಲು ಪ್ರಾರಂಭಿಸುವ ನಟಿಯರ ಪರವಾಗಿ ಈ ಯುದ್ಧ ಎಂದು ವಿವರಿಸಿದ್ದಾರೆ. ಅಷ್ಟಕ್ಕೂ ನಟಿ ಬಿಗ್​ಬಾಸ್​ ಮನೆಗೆ ಹೋಗಿದ್ದು, ಇಂದು ಬಿಡುಗಡೆಯಾದ ತಮ್ಮ ಚಿತ್ರ ತೇಜಸ್ ಅನ್ನು ಪ್ರಚಾರ ಮಾಡಲು. ಅವರು  ಬಿಗ್ ಬಾಸ್ 17 ನಲ್ಲಿ ಕಾಣಿಸಿಕೊಂಡು ಸಲ್ಮಾನ್ ಖಾನ್ ಅವರೊಂದಿಗೆ ಸಂವಹನ ನಡೆಸಿದಾಗ ಅನೇಕರು ಅಚ್ಚರಿಗೊಂಡರು. ನಟಿಯ  ವರ್ತನೆಯಲ್ಲಿನ ಬದಲಾವಣೆಯ ಬಗ್ಗೆ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದರು. ಸಲ್ಮಾನ್​ ಖಾನ್​ ಜೊತೆ ಡ್ಯಾನ್ಸ್ ಮಾಡಿದ್ದೂ ಅಲ್ಲದೇ, ವೇದಿಕೆಯಲ್ಲಿಯೇ  ಶಾರುಖ್ ಖಾನ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಜವಾನ್ ಚಿತ್ರವನ್ನೂ ನಟಿ ಶ್ಲಾಘಿಸಿದರು.

Tap to resize

Latest Videos

ಇಸ್ರೇಲಿ ರಾಯಭಾರಿಯನ್ನು ಭೇಟಿಯಾದ ಕಂಗನಾ ರಣಾವತ್​: ಅಯೋಧ್ಯೆಯಲ್ಲಿ ರಾಮ್​ಲಲ್ಲಾ ದರ್ಶನ


ಟೈಮ್ಸ್ ನೌ ನವಭಾರತ್‌ಗೆ ನೀಡಿದ ಸಂದರ್ಶನದಲ್ಲಿ, ಕಂಗನಾ, ಖಾನ್‌ಗಳ ವಿರುದ್ಧ ತಮಗೆ ಯಾವುದೇ ದ್ವೇಷವಿಲ್ಲ ಮತ್ತು ಅವರೊಂದಿಗಿನ ತನ್ನ ಯುದ್ಧವು ವೈಯಕ್ತಿಕವಲ್ಲ ಎಂದು ಹೇಳಿದರು.  "ನಾನು ಖಾನ್‌ಗಳ ಬಗ್ಗೆ ಅಸಮಂಜಸವಾಗಿ ಏನನ್ನೂ ಹೇಳಿಲ್ಲ. ನನ್ನ ಮುಖ್ಯ ವಿಷಯವೆಂದರೆ ಅವರ ಚಲನಚಿತ್ರಗಳಲ್ಲಿ ಕಡಿಮೆ ಸ್ತ್ರೀ ಪಾತ್ರಗಳು ಇರುವುದು ಮತ್ತು ಅವರ ಎದುರು ನಟಿಸಿದ ನಟಿಯರ ವಯಸ್ಸಿನ ಬಗ್ಗೆ ನೋವಿದೆ ಎಂದಿದ್ದಾರೆ.  35 ವರ್ಷಕ್ಕಿಂತ ಮೇಲ್ಪಟ್ಟ ನಟಿಯರು -40ಕ್ಕೆ ಮೇಲ್ಪಟ್ಟ  ಖಾನ್‌ಗಳ ಅಮ್ಮಂದಿರಾಗುತ್ತಿದ್ದಾರೆ. ಇದರ ಬದಲಾವಣೆಗಾಗಿ ನಾನು ಹೋರಾಡಿದ್ದೆ. ಅದರ ಫಲವಾಗಿ ಇಂದು ಆ ಸಂಸ್ಕೃತಿ ಕಡಿಮೆ ಆಗಿದೆ ಎಂದಿದ್ದಾರೆ.
 
 
ಕಂಗನಾ ರಣಾವತ್ ಅವರ ಮುಂದಿನ ಚಿತ್ರ, ತೇಜಸ್, ಇಂದು  ಬಿಡುಗಡೆಯಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಹೊರತುಪಡಿಸಿದರೆ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ.  ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ.  1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವು ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಿದೆ.

ANIMAL: ಸುದೀರ್ಘ ಲಿಪ್​ಲಾಕ್​ ನಂತ್ರ ರಣವೀರ್-ರಶ್ಮಿಕಾ ಮಂದಣ್ಣ ಬ್ರೇಕಪ್​! ವಿಡಿಯೋ ವೈರಲ್​

in Bigg Boss. pic.twitter.com/Vp5H3YAFAd

— Nishit Shaw (@NishitShawHere)
click me!