ಮದ್ವೆ ಕುರಿತು ಕೊನೆಗೂ ಮೌನ ಮುರಿದ ನಟಿ ಕಂಗನಾ ರಣಾವತ್, ಬ್ರೇಕಪ್ ಸ್ಟೋರಿಯ ಕುರಿತು ಹೇಳಿದ್ದೇನು?
ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಸದ್ಯ ಸುದ್ದಿಯಲ್ಲಿರುವ ನಟಿ, ಮೊನ್ನೆಯಷ್ಟೇ ರಾವಣ ದಹನ ಮಾಡಿ, 50 ವರ್ಷಗಳ ಇತಿಹಾಸವನ್ನು ಮುರಿದಿದ್ದಾರೆ ನಟಿ. ಸದ್ಯ ತೇಜಸ್ ಚಿತ್ರದ ಬಿಡುಗಡೆಯ ಖುಷಿಯಲ್ಲಿರುವ ನಟಿ, ಮದುವೆಯ ಬಗ್ಗೆ ಮಾತನಾಡಿದ್ದಾರೆ. ಕೊನೆಗೂ ತಮ್ಮ ಮದುವೆಯ ಕುರಿತು ಮೌನ ಮುರಿದಿದ್ದಾರೆ. ಅಷ್ಟಕ್ಕೂ ಕಂಗನಾ ರಣಾವತ್ (Kangana Ranaut) ಮತ್ತು ನಟ ಹೃತಿಕ್ ರೋಷನ್ ಅವರ ನಡುವಿನ ಲವ್ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್ ರೋಷನ್ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್ ರೋಷನ್ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್ ರೋಷನ್ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರಣಾವತ್ (Kangana Ranaut) ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.
ಬಳಿಕ ಪ್ರೀತಿ ಪ್ರೇಮದ ಹೆಸರಿನಲ್ಲಿ ಹೃತಿಕ್ ತಮಗೆ ಮೋಸ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು. ಕಂಗನಾ ಅವರೇ ತಮ್ಮನ್ನು ಪ್ರೀತಿಸುತ್ತಿದ್ದರು, ಆಕೆ ವಿಚ್ಛೇದನ ಕೊಡಿಸಲೂ ರೆಡಿಯಾಗಿದ್ದರು ಎಂದು ನಂತರ ಹೃತಿಕ್ ರೋಷನ್ ಆರೋಪಿಸಿದ್ದರು. ಈ ಬಾಲಿವುಡ್ ಸ್ಟಾರ್‌ಗಳ ಜಗಳ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಸುಮಾರು 2015-16ರ ನಡುವೆ ನಡೆದಿರುವ ಘಟನೆ. ಇದಾದ ಬಳಿಕವೂ ಇಬ್ಬರ ನಡುವಿನ ಮುಸುಕಿನ ಗುದ್ದಾಟವು ಮುಂದುವರೆದೇ ಇತ್ತು. ಕಂಗನಾ ಅವರಿಂದ ತಮಗೆ ನೂರಾರು ಈ-ಮೇಲ್‌ಗಳು ಬಂದಿವೆ ಎಂದು ಹೃತಿಕ್ 2016ರಲ್ಲಿ ಆರೋಪಿಸಿ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈಗ ಮದುವೆಯ ವಿಷಯ ಮಾತನಾಡಿರುವ ನಟಿ, ತಮ್ಮ ಲವ್ ಸ್ಟೋರಿಯ ಕುರಿತೂ ಹೆಸರು ಹೇಳದೇ ಪರೋಕ್ಷವಾಗಿ ಮಾತನಾಡಿದ್ದಾರೆ.
ಬಾಲಿವುಡ್ ಖಾನ್ಗಳ ವಿರುದ್ಧ ಕಿಡಿ ಕಾರುತ್ತಲೇ ಬಿಗ್ಬಾಸ್ಗೆ ಕಂಗನಾ ಎಂಟ್ರಿ! ಹುಬ್ಬೇರಿಸಿದ ಫ್ಯಾನ್ಸ್
ಪ್ರತಿ ಹೆಣ್ಣಿಗೂ ಮದುವೆ ಹಾಗು ಕುಟುಂಬ ಒಂದು ಕನಸಾಗಿರುತ್ತದೆ. ನನಗೂ ಕುಟುಂಬ ಹೊಂದುವ ಆಸೆ ಇದೆ. ಅದಕ್ಕೆ ಮದುವೆ ತುಂಬಾ ಮುಖ್ಯ. ಇನ್ನು ಐದು ವರ್ಷಗಳಲ್ಲಿ ನಾನು ಮದುವೆಯಾಗಿ ಒಂದು ಫ್ಯಾಮಿಲಿಯ ಭಾಗವಾಗಿರುತ್ತೇನೆ. ನನಗೆ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರೆ ಒಳ್ಳೆಯದು ಅಂತ ಈಗ ಅನಿಸುತ್ತಿದೆ ಎಂದಿದ್ದಾರೆ. ಇದೇ ವೇಳೆ ಲವ್ ಸ್ಟೋರಿ ಕುರಿತು ಹೇಳೀದ ನಟಿ, ಪ್ರತಿ ಬಾರಿಯು ರಿಲೇಷನ್ ಶಿಪ್‌ನಲ್ಲಿ ಸಕ್ಸಸ್ ಕಾಣುವುದಿಲ್ಲ. ನೀವು ಚಿಕ್ಕ ವಯಸ್ಸಿನಲ್ಲಿ ನಿಮ್ಮ ರಿಲೇಷನ್ ಶಿಪ್‌ನಲ್ಲಿ ಗೆಲುವು ಕಾಣಲಿಲ್ಲ ಅಂದರೆ ಅದು ಒಳ್ಳೆಯದು. ನನಗೂ ಆ ರೀತಿಯೇ ಆಗಿರುವುದು. ಅವತ್ತು ಆ ನನ್ನ ಹಳೆಯ ರಿಲೇಷನ್ ಶಿಪ್ ಗೆದ್ದಿದ್ದರೆ ನನ್ನ ಇಷ್ಟು ವರ್ಷಗಳು ವ್ಯರ್ಥವಾಗುತ್ತಿತ್ತು. ನನ್ನ ಅದೃಷ್ಟದಿಂದ ಆ ಸಂಬಂಧ ಮುಂದುವರೆಯಲಿಲ್ಲ. ನನ್ನನ್ನ ಆ ದೇವರು ಕಾಪಾಡಿದ ಅಂತ ಅನಿಸುತ್ತದೆ ಎಂದು ಹೇಳಿದ್ದಾರೆ.
ಹೃತಿಕ್ ರೋಷನ್ ಅವರ ಹೆಸರು ಹೇಳದೇ ಬ್ರೇಕಪ್ ವಿಷಯ ಮಾತನಾಡಿದ ಕಂಗನಾ, ಆ ಸಮಯದಲ್ಲಿ ಕೂಡಲೇ ಅವನು ನನಗೆ ಮದುವೆಯಾಗಲು ಬಲವಂತ ಮಾಡಿದ್ದ, ಆದರೆ ನನಗೆ ಇಷ್ಟವಿರಲಿಲ್ಲ. ಅವನು ನನ್ನನ್ನು ಸಾಮಾನ್ಯ ಹುಡುಗಿಯಂತೆ ನೋಡಲಿಲ್ಲ, ಅದರ ಬದಲು ನನ್ನನ್ನು ತುಂಬಾ ಗೌರವಿಸುತ್ತಿದ್ದ. ನನ್ನ ಯಶಸ್ಸಿನ ಬಗ್ಗೆಯು ಸಹ ಹೊಗಳುತ್ತಿದ್ದ. ಅದನ್ನು ನೋಡುತ್ತಿದ್ದ ನನಗೆ ಅನಿಸಿದ್ದು, ಇವನು ನನ್ನ ಅಭಿಮಾನಿಯಾಗಲು ಮಾತ್ರ ಅರ್ಹ. ಅದರ ಹೊರತು ಮದುವೆಯಾಗಲು ಅಲ್ಲವೇ ಅಲ್ಲ. ಆದ್ದರಿಂದ ನನಗೆ ಒಬ್ಬ ಅಭಿಮಾನಿಯನ್ನ ಮದುವೆಯಾಗಲು ಇಷ್ಟವಿರಲಿಲ್ಲ. ಅಲ್ಲದೆ ಅವರು ಬಹಳ ದುರಂಹಕಾರಿ ಸೋ, ಅಂತಹ ದುರಹಂಕಾರಿ ವ್ಯಕ್ತಿ ಜೊತೆ ಬಾಳಲು ಇಷ್ಟವಿರಲಿಲ್ಲ ಎಂದಿದ್ದಾರೆ.
ಇಸ್ರೇಲಿ ರಾಯಭಾರಿಯನ್ನು ಭೇಟಿಯಾದ ಕಂಗನಾ ರಣಾವತ್: ಅಯೋಧ್ಯೆಯಲ್ಲಿ ರಾಮ್ಲಲ್ಲಾ ದರ್ಶನ