ಇಂದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಳ 12ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಇಂಟರೆಸ್ಟಿಂಗ್ ವಿಷ್ಯ ಬೆಳಕಿಗೆ ಬಂದಿದೆ.
ಅಮಿತಾಭ್ ಬಚ್ಚನ್ ಕುಟುಂಬದ ಕುಡಿ, ಬಾಲಿವುಡ್ ಕ್ವೀನ್ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ಗೆ ಇಂದು 12ನೇ ಹುಟ್ಟುಹಬ್ಬದ ಸಂಭ್ರಮ. 2011ರ ನವೆಂಬರ್ 17ರಂದು ಹುಟ್ಟಿರುವ ಆರಾಧ್ಯ ಈಗ ಸೆಲೆಬ್ರಿಟಿ ಪುತ್ರಿಯಾಗಿ ಸಕತ್ ಸುದ್ದಿಯಲ್ಲಿದ್ದಾಳೆ. ಅದರಲ್ಲಿಯೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರ ಪುತ್ರಿ ಎಂದ ಮೇಲೆ ಸಹಜವಾಗಿ ಆರಾಧ್ಯ ಮೇಲೆ ಸಿನಿ ಪ್ರಿಯರ ಅದರಲ್ಲಿಯೂ ಹೆಚ್ಚಾಗಿ ಪಾಪರಾಜಿಗಳ ಕಣ್ಣು ನೆಟ್ಟಿರುತ್ತದೆ. ತುಂಬಾ ನಾಚಿಕೆ ಸ್ವಭಾವದ ಆರಾಧ್ಯ ಹೊರಗಡೆ ಎಲ್ಲಿಯೇ ಹೋದರೂ ಅಮ್ಮನ ಕೈ ಗಟ್ಟಿಯಾಗಿ ಹಿಡಿದುಕೊಂಡು ಕ್ಯಾಮೆರಾ ಕಣ್ಣಿನಿಂದ ಮರೆ ಮಾಚುವುದನ್ನು ನೋಡಬಹುದು. ಇಂದು ಈಕೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅಪ್ಪ ಅಭಿಷೇಕ್ ಹಾಗೂ ತಾಯಿ ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಐಶ್ವರ್ಯ ರೈ ಅವರು ಮಗಳ ಜೊತೆಗಿನ ಹಳೆಯ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಆರಾಧ್ಯಳನ್ನು ಮುದ್ದಾಡುತ್ತಿರುವುದನ್ನು ನೋಡಬಹುದು. ನಾನು ನಿನ್ನನ್ನು ಅನಂತವಾಗಿ, ಬೇಷರತ್ತಾಗಿ, ಶಾಶ್ವತವಾಗಿ ಪ್ರೀತಿಸುತ್ತೇನೆ. ನೀನೇ ನನ್ನ ಪ್ರಿಯ ಏಂಜೆಲ್, ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ. ನೀನೇ ನನ್ನ ಆತ್ಮ ಎಂದಿರುವ ಐಶ್ವರ್ಯ ಪುತ್ರಿಯ ಮೇಲೆ ಮಮತೆ ಹೊಳೆಯನ್ನೇ ಹರಿಸಿದ್ದಾರೆ. ಅದೇ ವೇಳೆ ಅಪ್ಪ ಅಭಿಷೇಕ್ ಬಚ್ಚನ್ ಕೂಡ ಶುಭಾಶಯ ಕೋರಿದ್ದು, ನನ್ನ ಮುದ್ದು ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಬಹಿರಂಗವಾಗಿ ಅಮ್ಮ ಐಶ್ವರ್ಯ ರೈ ಗುಟ್ಟು ತಿಳಿಸಿದ ಮಗಳು ಆರಾಧ್ಯಾ
ಇದೇ ವೇಳೆ ಸೆಲೆಬ್ರಿಟಿಗಳ ಮಕ್ಕಳು ಎಂದ ಮೇಲೆ ಸಹಜವಾಗಿ ಅವರ ಬಗ್ಗೆ ಗೂಗಲ್ನಲ್ಲಿ ಜನರು ಒಂದಿಷ್ಟು ವಿಷಯ ಸರ್ಚ್ ಮಾಡುವುದು ನಡೆದೇ ಇರುತ್ತದೆ. ಅದೇ ರೀತಿ ಆರಾಧ್ಯಳ ಬಗ್ಗೆಯೂ ಸರ್ಚ್ ಮಾಡಿದ್ದಾರೆ. ಈ ಹಿಂದೆ ಆರಾಧ್ಯಳ ಶಾಲೆಯ ಶುಲ್ಕದ ವಿಷಯ ಸಕತ್ ಸದ್ದು ಮಾಡಿತ್ತು. ಅಂದಹಾಗೆ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ಅವರು ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 8ನೇ ತರಗತಿ ಈಕೆ ಓದುತ್ತಿದ್ದು, ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಫೀಸ್ 1.70 ಲಕ್ಷ ರೂ., 8-10ನೇ ತರಗತಿಗೆ 4.48 ಲಕ್ಷ ರೂ. ಫೀಸ್ ಮತ್ತು 11 ಮತ್ತು 12ನೇ ತರಗತಿ 9.65 ಲಕ್ಷ ರೂ. ಶುಲ್ಕ ಇದೆ ಎನ್ನಲಾಗಿದೆ.
ಇವಳು ಹುಟ್ಟಿದ ಹಬ್ಬ, ಓದುವ ಸ್ಕೂಲ್... ಇವೆಲ್ಲವೂ ಗೂಗಲ್ನಲ್ಲಿ ಸರ್ಚ್ ಮಾಡಿದ್ದರೂ, ಆರಾಧ್ಯ ಯಾವಾಗ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಾಳೆ, ಯಾವಾಗ ನಟನೆ ಮಾಡುತ್ತಾಳೆ ಎಂಬ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಅವರ ನಿಜವಾದ ತಂದೆ ಯಾರು ಎಂಬ ಬಗ್ಗೆಯೂ ಕೆಲವರು ಪ್ರಶ್ನಿಸಿದ್ದಾರೆ. ಚಿತ್ರ ತಾರೆಯರ ಮಕ್ಕಳು ನಟ-ನಟಿಯರಾಗುವುದು ಸಾಮಾನ್ಯ ಆಗಿರುವ ಕಾರಣ, ಆರಾಧ್ಯ ಯಾವಾಗ ಚಿತ್ರರಂಗಕ್ಕೆ ಬರುತ್ತಾಳೆ ಎಂಬ ಕುತೂಹಲ ಜನರದ್ದು. ಈಕೆ ಮಾಡೆಲಿಂಗ್ಗೆ ಎಂಟ್ರಿ ಕೊಡುತ್ತಾಳೋ, ನೇರವಾಗಿ ಸಿನಿಮಾಕ್ಕೆ ಬರುತ್ತಾಳೋ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಐಶ್ ಫ್ಯಾನ್ಸ್. ಇದು ಅತಿ ಹೆಚ್ಚು ಹುಡುಕಿದ ಪ್ರಶ್ನೆಯಾಗಿದೆ. ಅಂದಹಾಗೆ ಐಶ್ವರ್ಯ ರೈ ಅವರು 18ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮ್ಯಾಗಜೀನ್ ಒಂದಕ್ಕೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆಗ ಆಕೆಗೆ 1,500 ರೂಪಾಯಿಗಳನ್ನು ನೀಡಲಾಗಿತ್ತತಂತೆ. ಆದರೆ ಆರಾಧ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಬಗ್ಗೆ ಇದುವರೆಗೆ ಬಚ್ಚನ್ ಕುಟುಂಬಸ್ಥರು ಯಾವ ವಿಷಯವನ್ನೂ ಹೊರಕ್ಕೆ ಹಾಕಲಿಲ್ಲ.
Aishwarya Rai@50: ಅಭಿಷೇಕ್ಗೆ ಮದ್ವೆಯಾದ್ರೆ ನಟಿಗಿತ್ತು ಅಪಾಯ! ಜಾತಕ ದೋಷದ ಪರಿಹಾರ ಮಾಡಿದ್ದು ಹೇಗೆ?