ನಟಿ ಕಾಜೋಲ್​ ಬಟ್ಟೆ ಬದಲಿಸುವ ಶಾಕಿಂಗ್​ ವಿಡಿಯೋ ವೈರಲ್​? ನಿಜಕ್ಕೂ ಆಗಿರೋದೇನು?

By Suvarna News  |  First Published Nov 17, 2023, 11:35 AM IST

ನಟಿ ಕಾಜೋಲ್​ ಮುಖಹೊಂದಿರುವ ಮಹಿಳೆಯೊಬ್ಬರ ಬಟ್ಟೆ ಬದಲಿಸುವ ಶಾಕಿಂಗ್​ ವಿಡಿಯೋ ವೈರಲ್​ ಆಗಿದೆ. ಆದರೆ ಈ ವಿಡಿಯೋದ ಅಸಲಿಯತ್ತು ಏನು? 
 


ನಟಿ ಕಾಜೋಲ್​ ಅವರು ಬಟ್ಟೆ ಬದಲಿಸುವ ಶಾಕಿಂಗ್​ ವಿಡಿಯೋ ಒಂದು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಈ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ಇದರಲ್ಲಿ ಬಟ್ಟೆ ಅಂಗಡಿಯೊಂದರ ಟ್ರಯಲ್​ ರೂಮಿನಲ್ಲಿ  ನಟಿ ಕಾಜೋಲ್​ ಅವರು, ಬಟ್ಟೆ ಬಿಚ್ಚಿ ಹೊಸ ಬಟ್ಟೆ ಹಾಕಿಕೊಳ್ಳುವಂತೆ ಕಾಣುತ್ತಿದೆ. ಆದರೆ ಇದರ ಅಸಲಿಯತ್ತೇ ಬೇರೆ. ರಶ್ಮಿಕಾ ಮಂದಣ್ಣ ಹಾಗೂ ಕತ್ರೀನಾ ಕೈಫ್​ ಅವರಂತೆಯೇ ಇದೀಗ ಕಾಜೋಲ್​ ಅವರೂ ಡೀಪ್​ಫೇಕ್​ ತಂತ್ರಜ್ಞಾನಕ್ಕೆ ಗುರಿಯಾಗಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಬೇರೆ ಮಹಿಳೆಯ ಮುಖಕ್ಕೆ ಕಾಜೋಲ್​ ಅವರ ಮುಖವನ್ನು ಸೇರಿಸಿ ವಿಡಿಯೋ ವೈರಲ್​ ಮಾಡಲಾಗಿದೆ. 

ಇತ್ತೀಚಿಗೆ Get ready with me ಟ್ರೆಂಡ್​ ಶುರುವಾಗಿದೆ. ಇದರಲ್ಲಿ ಸೆಲೆಬ್ರಿಟಿಗಳು ಬಟ್ಟೆ ಮಳಿಗೆಯಲ್ಲಿ ವಿವಿಧ ರೀತಿಯ ಔಟ್​ಫಿಟ್​ಗಳನ್ನು ಧರಿಸಿ, ಪ್ರದರ್ಶಿಸುತ್ತಾರೆ. ಇದೇ ರೀತಿ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಒಬ್ಬರು ಬಟ್ಟೆ ಚೇಂಜ್​ ಮಾಡುತ್ತಿರುವ ವಿಡಿಯೋಕ್ಕೆ ನಟಿ ಕಾಜೋಲ್​ ಅವರ ಮುಖವನ್ನು ಮಾರ್ಫ್​ ಮಾಡಲಾಗಿದ್ದು, ಅದನ್ನು ವೈರಲ್​  ಮಾಡಲಾಗಿದೆ. ಇದರಿಂದ ಮಹಿಳೆಯರ ಸುರಕ್ಷತೆಯ ಬಗ್ಗೆ ಸಾಕಷ್ಟು ಭಯ ವಾತಾವರಣ ಸೃಷ್ಟಿಯಾಗಿದೆ. 

Tap to resize

Latest Videos

ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ಪ್ರಕರಣ: 19 ವರ್ಷದ ಯುವಕ ಪೊಲೀಸರ ಬಲೆಗೆ- ಈತ ಹೇಳಿದ್ದೇನು?

ಆದ್ದರಿಂದ ಇಂಥ ವಿಡಿಯೋ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ, ಮುಂದೆ ಈ ರೀತಿ ಮಾಡಲು ಜನರು ಹೆದರುತ್ತಾರೆ ಎನ್ನುವ ಕಾರಣಕ್ಕೆ ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಇದೀಗ ಬಿಹಾರದ 19 ವರ್ಷದ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.  ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು. ಇದಾಗಲೇ ಜಾರಾ ಅವರು ಇದರಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಜೊತೆಗೆ ಈ ರೀತಿಯಾದುದಕ್ಕೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದರು.  ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲ ಎಂದು Instagram ಕೂಡ ಹೇಳಿತ್ತು.

ಈ ಮೊದಲದು ರಶ್ಮಿಕಾ ಮಂದಣ್ಣ ಮತ್ತು ಕತ್ರೀನಾ ಕೈಫ್​ ಇದರ ಸುಳಿಗೆ ಸಿಲುಕಿದ್ದರು.  ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್​ ಫೇಕ್​. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಇದನ್ನು ಮಾಡಲಾಗಿದೆ.  ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿತ್ತು.  ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ.  ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು.  ಈ ಪ್ರಕರಣದಲ್ಲಿ ಬಿಹಾರದ 19 ವರ್ಷದ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.  

ಡೀಪ್‌ಫೇಕ್‌ ಫೋಟೋದ ಭಯಾನಕ ಅನುಭವ ಹಂಚಿಕೊಂಡ ನಟಿ ಸೊನ್ನಾಳ್ಳಿ ಸೇಗಲ್‌

ಅದೇ ರೀತಿ, ಟೈಗರ್​-3 ಚಿತ್ರದಲ್ಲಿ ನಟಿ ಕತ್ರೀನಾ ಕೈಫ್​ ಅವರ ಟವಲ್​ ಫೈಟಿಂಗ್​ ದೃಶ್ಯವನ್ನು ಮಾರ್ಫ್​ ಮಾಡಿ ಆಕೆಯನ್ನು ಅಶ್ಲೀಲವಾಗಿ ಬಿಂಬಿಸಿ ವೈರಲ್​ ಮಾಡಲಾಗುತ್ತಿದೆ. ಇದೀಗ ಕಾಜೋಲ್​ ಸರದಿ! 
 

click me!