80 ಸೀರೆ, 6 ತಿಂಗಳು: ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿ ಪಾತ್ರದ ಲುಕ್ ಫೈನಲ್‌ಗೆ ಹರಸಾಹಸ

Published : Jun 11, 2023, 04:54 PM IST
80 ಸೀರೆ, 6 ತಿಂಗಳು: ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿ ಪಾತ್ರದ ಲುಕ್ ಫೈನಲ್‌ಗೆ ಹರಸಾಹಸ

ಸಾರಾಂಶ

ಹಡ್ಡಿ ಸಿನಿಮಾದ ಮಂಗಳಮುಖಿಿ ಪಾತ್ರಕ್ಕೆ ನಟ ನವಾಜುದ್ದೀನ್ ಸಿದ್ದಿಕಿ ಲುಕ್ ಫೈನಲ್‌ ಮಾಡಲು 80 ಸೀರೆ, 6 ತಿಂಗಳು ತೆಗೆದುಕೊಂಡಿದೆ ಎಂದು ನಿರ್ಮಾಪಕರು ಬಹಿರಂಗ ಪಡಿಸಿದ್ದಾರೆ.

ಸಿನಿಮಾ ಕಲಾವಿದರೂ ಉತ್ತಮ ಪಾತ್ರಕ್ಕಾಗಿ ಎಷ್ಟು ಶ್ರಮ ಬೇಕಾದರೂ ಹಾಕುತ್ತಾರೆ. ದಪ್ಪ, ಸಣ್ಣ, ಯಂಗ್ ಆಗಿ ಆಗುವುದು ಹೀಗೆ ವಿವಿಧ ಲುಕ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನ ಮಾಡುತ್ತಾರೆ. ಅನೇಕ ಸ್ಟಾರ್ಸ್ ಮಂಗಳಮುಖಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್ ನವಾಜುದ್ದೀನ್ ಸಿದ್ದಿಕಿ ಕೂಡ ಮಂಗಳಮುಖಿಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ನವಾಜುದ್ದೀನ್ ಇದೀಗ ಮಂಗಳ ಮುಖಿಯಾಗಿ ಬರ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. 

ಮಾತ್ಯಾರು ಅಲ್ಲ ನವಾಜುದ್ದೀನ್ ಸಿದ್ದಿಕಿ. ಸಿನಿಮಾ, ವೆಬ್ ಸೀರಿಸ್ ಅಂತ ಬ್ಯುಸಿ ಇರುವ ನವಾಜುದ್ದೀನ್ ಸಿದ್ದಿಕಿ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಪಾತ್ರಕ್ಕಾಗಿ ನವಾಜುದ್ದೀನ್ ಸಿದ್ಧಿಕಿ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾರೆ. ಅಂದಹಾಗೆ ನವಾಜುದ್ದೀನ್ ಹಡ್ಡಿ ಚಿತ್ರಕ್ಕಾಗಿ ಮಂಗಳಮುಖಿ ಪಾತ್ರ ಮಾಡಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ಟಾರ್ ನಟನ ಲುಕ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ನವಾಜುದ್ದೀನ್ ಅವರೇ ಎಂದು ಗುರುತು ಹಿಡಿಯಲು ಸಾಧ್ಯವಾಗದೇ ಇರುವ ಮಟ್ಟಕ್ಕೆ ಬದಲಾಗಿದ್ದಾರೆ.  

'ರಿಷಬ್ ಶೆಟ್ಟಿ ಮೇಲೆ ನನಗೆ ಹೊಟ್ಟೆಕಿಚ್ಚು' ಎಂದ ನವಾಝುದ್ದೀನ್ ಸಿದ್ದಿಕಿ; ಕಾಂತಾರ ಶಿವನ ರಿಯಾಕ್ಷನ್ ವೈರಲ್

ಈ ಪಾತ್ರಕ್ಕಾಗಿ ನವಾಜುದ್ದೀನ್ ಲುಕ್ ಅಂತಿಮಗೊಳಿಸಲು ಸಿನಿಮಾತಂಡ ಹರಸಾಹಸ ಪಟ್ಟಿದೆ. 80 ಸೀರೆ ಮತ್ತು ಅರ್ಧ ವರ್ಷ ತೆಗೆದುಕೊಂಡಿದೆಯಂತೆ. ಈ ಬಗ್ಗೆ ಸಿನಿಮಾದ ನಿರ್ಮಾಪಕ ರಾಧಿಕಾ ನಂದ ಬಹಿರಂಗ ಪಡಿಸಿದ್ದಾರೆ. 'ಚಿತ್ರೀಕರಣದ ಸಮಯದಲ್ಲಿ ನಾವು ಸುಮಾರು 80 ಸೀರೆಗಳನ್ನು ಬಳಸಿದ್ದೇವೆ. ನವಾಜುದ್ದೀನ್ ತನ್ನನ್ನು ತಾನು ಎಂದಿಗೂ ಈ ರೀತಿ ನೋಡಿರಲಿಲ್ಲವಾದ್ದರಿಂದ ಮೊದಲ ಬಾರಿಗೆ ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡರು.  ಪಾತ್ರವನ್ನು ಹತ್ತಿರದಿಂದ ಅನುಭವಿಸಲು ಸಹಾಯ ಮಾಡಿತು' ಎಂದು ಹೇಳಿದ್ದಾರೆ. 

'ಹಲವಾರು ರೀತಿಯ ಮೇಕಪ್ ಕಲಾವಿದರನ್ನು ಪರೀಕ್ಷಿಸಿದ ನಂತರ ಈ ಲುಕ್‌ಗಾಗಿ ಸುಮಾರು 6 ತಿಂಗಳುಗಳನ್ನು ತೆಗೆದುಕೊಂಡಿತು' ಎಂದು ಹೇಳಿದ್ದಾರೆ. 'ಈ ಲುಕ್‌ಗಾಗಿ ನವಾಜುದ್ದೀನ್ ಪ್ರತಿದಿನ 3 ಗಂಟೆ ತೆಗೆದುಕೊಳ್ಳುತ್ತಿದ್ದರು. ಈ ಲುಕ್‌ಅನ್ನು ಸಾಧ್ಯವಾದಷ್ಟು ನ್ಯಾಚುರಲ್ ಆಗಿ ಸೆರೆಹಿಡಿದಿದ್ದೇವೆ' ಎಂದು ಹೇಳಿದ್ದಾರೆ.

ಮಂಗಳಮುಖಿಯಾಗಿ ಬದಲಾದ ಖ್ಯಾತ ನಟ; ಯಾರೆಂದು ಗುರುತಿಸಬಲ್ಲಿರಾ?

'ಹಡ್ಡಿ ಸಿನಿಮಾದಲ್ಲಿ  ನಿಜ ಜೀವನದ ಟ್ರಾನ್ಸ್ ಮಹಿಳೆಯರೊಂದಿಗೆ ಕೆಲಸ ಮಾಡಿರುವುದು ನಂಬಲಾಗದ ಅನುಭವವಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಶಕ್ತಿಯುತವಾಗಿತ್ತು' ಎಂದು ನವಾಜುದ್ದೀನ್ ಹೇಳಿದ್ದರು. ಅಂದಹಾಗಿ ಈ ಸಿನಿಮಾದಲ್ಲಿ ಅನೇಕ ಮಂಗಳಮುಖಿಯರ ಜೊತೆ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ್ದ ನವಾಜುದ್ದೀನ್ ಸಿದ್ದಕಿ, 'ನಿಜ-ಜೀವನದ ಟ್ರಾನ್ಸ್ ಮಹಿಳೆಯರೊಂದಿಗೆ ಕೆಲಸ ಮಾಡಿರುವುವುದು ಹಡ್ಡಿಯಲ್ಲಿ ನಂಬಲಾಗದ ಅನುಭವವಾಗಿದೆ. ಸಮುದಾಯವನ್ನು ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಒಂದು ಗೌರವ ಮತ್ತು ಸವಲತ್ತು. ಅವರ ಉಪಸ್ಥಿತಿಯು ಸಬಲೀಕರಣವಾಗಿದೆ' ಎಂದು ಹೇಳಿದ್ದಾರೆ. ಹಡ್ಡಿ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಮತ್ತು ರೇಶ್ ಲಂಬಾ ಕೂಡ ನಟಿಸಿದ್ದಾರೆ. .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?