'ಹೀರೋಯಿನ್ ಆಗೋಕೆ ಲಾಯಕ್ಕಿಲ್ಲ' ಎಂದ ನೆಟ್ಟಿಗನಿಗೆ ನಟಿ ಅನುಪಮಾ ಕೂಲ್ ರಿಯಾಕ್ಷನ್: ಅಭಿಮಾನಿಗಳ ಮೆಚ್ಚುಗೆ

Published : Jun 11, 2023, 01:45 PM ISTUpdated : Jun 11, 2023, 01:49 PM IST
'ಹೀರೋಯಿನ್ ಆಗೋಕೆ ಲಾಯಕ್ಕಿಲ್ಲ' ಎಂದ ನೆಟ್ಟಿಗನಿಗೆ ನಟಿ ಅನುಪಮಾ ಕೂಲ್ ರಿಯಾಕ್ಷನ್: ಅಭಿಮಾನಿಗಳ ಮೆಚ್ಚುಗೆ

ಸಾರಾಂಶ

'ಹೀರೋಯಿನ್ ಆಗೋಕೆ ಲಾಯಕ್ಕಿಲ್ಲ' ಎಂದ ನೆಟ್ಟಿಗನಿಗೆ ನಟಿ ಅನುಪಮಾ ಕೂಲ್ ರಿಯಾಕ್ಷನ್ ಅಭಿಮಾನಿಗಳ ಮೆಚ್ಚುಗೆ ಕಾರಣವಾಗಿದೆ. 

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಮಾಡಿರುವ ನಟಿ ಅನುಪಮಾ ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 18 ಪೇಜ್ ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಅನುಪಮಾ ಪರಮೇಶ್ವರನ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ನೆಟ್ಟಿಗರೊಬ್ಬರ ಹೇಳಿಕೆಗೆ ಅನುಪಮಾ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಟ್ರೋಲ್‌ಗಳ ಕಾಟ ಯಾವ ಕಲಾವಿದರನ್ನು ಬಿಟ್ಟಿಲ್ಲ. ನಟಿ ಅನುಪಮಾ ಕೂಡ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ. ಆದರೆ ಸರಿಯಾಗಿ ಉತ್ತಮ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. 

ಹೀರೋಯಿನ್ ಆಗೋಕೆ ಲಾಯಕ್ಕಿಲ್ಲ ಎಂದ ನೆಟ್ಟಿಗರಿಗೆ ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ. ದೊಡ್ಡ ನಾಯಕಿಯಲ್ಲ, ದೊಡ್ಡ ಸಿನಮಾಗಳನ್ನು ಮಾಡಿಲ್ಲ ಎಂದವರಿಗೆ ಸರಿಯಾಗಿ ತಿರುಗೇಟು ನೀಡುವ ಮೂಲಕ ಬಾಯಿಮುಚ್ಚಿಸಿದ್ದಾರೆ. ಅನುಪಮಾ ಪ್ರತಿಕ್ರಿಯೆ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟಕ್ಕೂ ನೆಟ್ಟಿಗ ಹೇಳಿದ್ದೇನು? 'ಯಾವುದೇ ದೊಡ್ಡ ಸಿನಿಮಾಗಳಿಲ್ಲ. ನನಗೆ, ಅವಳು ಹೀರೋಯಿನ್ ಆಗೋಕೆ ಲಾಯಕ್ಕಿಲ್ಲ' ಎಂದು ಹೇಳಿದ್ದಾರೆ. 

ನೆಟ್ಟಗನಿಗೆ ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ. 'ಸರಿಯಾಗಿ ಹೇಳಿದ್ರಿ ಅಣ್ಣಾ, ನಾನು ಹೀರೋಯಿನ್ ಟೈಪ್ ಅಲ್ಲ, ನಾನು ಆಕ್ಟರ್ ಟೈಪ್' ಎಂದು ಹೇಳಿದ್ದಾರೆ. ಜೊತೆಗೆ ಸ್ಮೈಲಿ ಎಮೋಜಿ ಸೇರಿಸಿದ್ದಾರೆ.

ಬ್ಯಾಕ್ ಲೆಸ್ ಡ್ರೆಸ್‌ನಲ್ಲಿ 'ನಟಸಾರ್ವಭೌಮ' ನಟಿಯ ಹಾಟ್ ಪೋಸ್

ನಟಿ ಅನುಪಮಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ. ಮಲಯಾಳಂನ ಸೂಪರ್ ಹಿಟ್ ಪ್ರೇಮ್ ಸಿನಿಮಾ ಮೂಲಕ ಅನುಪಮಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಸಿನಿಮಾವೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಬಳಿಕ ಅನುಪಮಾ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. 

ಅನುಪಮಾಗೆ ಮಗಳು ಎಂದ ಅಲ್ಲು ಅರ್ಜುನ್ ತಂದೆ; ಮಾವಯ್ಯ ಎಂದು ಕಾಲೆಳೆದ ನೆಟ್ಟಿಗರು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾವರ್ಭೌಮ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿದ್ದರು. ಆ ಸಿನಿಮಾ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?