ವಿದೇಶದಲ್ಲಿ 'ಹು ಅಂತೀಯಾ ಮಾವ' ಹಾಡಿಗೆ ಸಮಂತಾ-ವರುಣ್ ಧವನ್ ಮಸ್ತ್ ಡಾನ್ಸ್: ವಿಡಿಯೋ ವೈರಲ್

Published : Jun 11, 2023, 03:22 PM ISTUpdated : Jun 12, 2023, 12:09 PM IST
ವಿದೇಶದಲ್ಲಿ 'ಹು ಅಂತೀಯಾ ಮಾವ' ಹಾಡಿಗೆ ಸಮಂತಾ-ವರುಣ್ ಧವನ್ ಮಸ್ತ್ ಡಾನ್ಸ್: ವಿಡಿಯೋ ವೈರಲ್

ಸಾರಾಂಶ

ವಿದೇಶದಲ್ಲಿ 'ಹು ಅಂತೀಯಾ ಮಾವ' ಹಾಡಿಗೆ ಸಮಂತಾ-ವರುಣ್ ಧವನ್ ಮಸ್ತ್ ಡಾನ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

ಸೌತ್ ಸ್ಟಾರ್ ಸಮಂತಾ ಹಾಗೂ ಬಾಲಿವುಡ್ ಹೀರೋ ವರುಣ್ ಧವನ್ ಸದ್ಯ ಸಿಟಾಡೆಲ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಇಬ್ಬರೂ ಸ್ಟಾರ್ಸ್ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಚಿತ್ರೀಕರಣ ಮುಗಿಸಿ ಚಿತ್ರತಂಡ ಸದ್ಯ ವಿದೇಶಕ್ಕೆ ಹಾರಿದೆ. ಚಿತ್ರತಂಡ ಸದ್ಯ ಸರ್ಬಿಯದಲ್ಲಿದೆ. ಸಮಂತಾ ಮತ್ತು ವರುಣ್ ಧವನ್ ಇಬ್ಬರೂ ಸರ್ಬಿಯಾದಲ್ಲಿದ್ದಾರೆ. ಶೂಟಿಂಗ್ ನಡುವೆಯೂ ಇಬ್ಬರೂ ಮಸ್ತ್ ಮಜಾ ಮಾಡುತ್ತಿದ್ದಾರೆ. 

ಬಿಡುವಿನ ವೇಳೆ ಇಬ್ಬರೂ ಸರ್ಬಿಯಾ ಸುತ್ತಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಇಬ್ಬರೂ ಸರ್ಬಿಯಾದ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಮತ್ತು ವರುಣ್ ಇಬ್ಬರೂ ಕ್ಲಬ್‌ನಲ್ಲಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲಬ್‌ನಲ್ಲಿ ಇಬ್ಬರೂ ಸೂಪರ್ ಹಿಟ್ 'ಹು ಅಂತೀಯಾ ಮಾವ ಊಹೂ ಅಂತೀಯಾ' ಹಾಡಿಗೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಸರ್ಬಿಯಾದಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ಸಮಂತಾ: ಫೋಟೋ ವೈರಲ್

ಕ್ಲಬ್‌ನಲ್ಲಿ ಸಮಂತಾ ಕಪ್ಪು ಬಣ್ಣದ ಲೆದರ್ ಟಾಪ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಧರಿಸಿದ್ದರು. ವರುಣ್ ಧವನ್ ನೀಲಿ ಟೀ ಶರ್ಟ್ ಮಚ್ಚು ಡೆನಿಮ್ ಧರಿಸಿದ್ದರು. ಇಬ್ಬರೂ ಕ್ಲಬ್‌ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ.  ಸಮಂತಾ ಸರ್ಬಿಯಾದಿಂದ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸರ್ಬಿಯಾದಲ್ಲಿ ಶುಟಿಂಗ್ ಜೊತೆಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ.

ನೆಚ್ಚಿನ ಹುಡುಗಿ ಫೋಟೋ ಹಂಚಿಕೊಂಡ ವಿಜಯ್‌ ದೇವರಕೊಂಡ; ರಶ್ಮಿಕಾ ಅಲ್ಲ!
 
ಸಿಟಾಡೆಲ್ ಬಗ್ಗೆ

ಸಿಟಾಡೆಲ್‌ನ ಭಾರತೀಯ ರೂಪಾಂತರವಾಗಿದೆ. ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ. ಭಾರತದಲ್ಲಿ ಸಿಟಾಡೆಲ್‌ಗೆ ರಾಜ್ ಮತ್ತು ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸೀರಿಸ್‌ ಬಗ್ಗೆ ಸಮಂತಾ ಸಿಕ್ಕಾಪಟ್ಟೆ ಉತ್ಸುಕರಾಗಿದ್ದರು. ಅಂದಹಾಗೆ ಸಮಂತಾ ಈಗಾಗಲೇ ರಾಜ್ ಮತ್ತು ಡಿಕೆ ಜೊತೆ ಕೆಲಸ ಮಾಡಿದ್ದಾರೆ. ಸೂಪರ್ ಹಿಟ್ ಫ್ಯಾಮಿಲಿ ಮ್ಯಾನ್‌ನಲ್ಲಿ ಸಮಂತಾ ನಟಿಸಿದ್ದರು. ಇದೀಗ ಮತ್ತೆ ರಾಜ್ ಮತ್ತು ಡಿಕೆ ಜೊತೆ ಕೆಲಸ ಮಾಡುತ್ತಿದ್ದಾರೆ. 

ಸಮಂತಾ ಸಿಟಾಡೆಲ್ ಸೀರಿಸ್ ಜೊತೆಗೆ ಖುಷಿ ಸಿನಿಮಾದಲ್ಲೂ ನಿರತರಾಗಿದ್ದಾರೆ. ಇತ್ತೀಚೆಗಷ್ಟೆ ಸಮಂತಾ ಖುಷಿ ಶೂಟಿಂಗ್‌ಗಾಗಿ ಸಮಂತಾ ಟರ್ಕಿಗೆ ಭೇಟಿ ನೀಡಿದ್ದರು. ವಿಜಯ್ ದೇವರಕೊಂಡ ನಾಯಕನಾಗಿ ಕಾಮಿಸಿಕೊಂಡಿದ್ದಾರೆ. ಇಬ್ಬರೂ ಟರ್ಟಿಯಲ್ಲಿದ್ದ ಒಂದಿಷ್ಟು ಫೋಟೋಗಳು  ಅಭಿಮಾನಿಗಳ ಹೃದಯ ಗೆದ್ದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!