Published : Jan 31, 2026, 03:05 PM ISTUpdated : Feb 01, 2026, 05:51 PM IST

Union Budget 2026 LIVE Update: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಷೇರು ಮಾರುಕಟ್ಟೆ ಡೌನ್

ಸಾರಾಂಶ

Union Budget 2026 expectations live updates: ಕರ್ನಾಟಕಕ್ಕೆ ಎರಡು ಸ್ಪೀಡ್ ಟ್ರೈನ್ ಘೋಷಣೆಯಾಗಿದ್ದು ಈ ಸಲ ರಾಜ್ಯದ ಜನರಿಗೆ ಖುಷಿ ತಂದಿದ್ದು ಬಿಟ್ಟರೆ, ಆದಾಯ ತೆರಿಗೆ ವಿಷಯದಲ್ಲಿ ಮಧ್ಯಮ ವರ್ಗದ ಜನರಿಗೆ ಅನೂ ಕೊಡುಗೆ ಇಲ್ಲ. ಟ್ರಂಪ್ ತೆರಿಗೆ ಭೀತಿ ನಡುವೆಯೇ ಫಾರ್ಮಸಿ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್, ಜವಳಿ ಉತ್ಯಮ ಸೇರಿ ಹಲವು ಕ್ಷೇತ್ರಗಳಿಗೆ ಆದ್ಯತೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್. ನಿರೀಕ್ಷಿಸಿದಂತೆ ಚುನಾವಣೆ ಎದುರಿಸುತ್ತಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚರಿಗೆ ಯಾವುದೇ ವಿಶೇಷ ಕೊಡುಗೆ ಇಲ್ಲ. ಸೆನ್ಸೆಕ್ಸ್, ನಿಫ್ಟಿ ಡೌನ್ ಆಗಿದ್ದು, ಹೂಡಿಕೆದಾರರು ನೀರಸ ಪ್ರತಿಕ್ರಿಯೆ ತೋರಿದ್ದಾರೆ. 

 

05:51 PM (IST) Feb 01

ಶೇರ್ ಮಾರ್ಕೆಟ್‌ನಲ್ಲಿ SGB ಕೊಂಡಿದ್ದೀರಾ? ಏಪ್ರಿಲ್ 1 ರಿಂದ ಬದಲಾಗಲಿದೆ ನಿಮ್ಮ ಲಾಭದ ಲೆಕ್ಕಾಚಾರ!

ಸಾವರಿನ್‌ ಗೋಲ್ಡ್‌ ಬಾಂಡ್‌ಗಳ (SGBs) ಮೆಚುರಿಟಿ ಮೇಲಿನ ತೆರಿಗೆ ವಿನಾಯಿತಿ ನಿಯಮದಲ್ಲಿ ಬದಲಾವಣೆ ಪ್ರಸ್ತಾಪಿಸಲಾಗಿದೆ. ಈ ಪ್ರಯೋಜನವು ಇನ್ನು ಮುಂದೆ, ಆರ್‌ಬಿಐನಿಂದ ನೇರವಾಗಿ ಬಾಂಡ್‌ ಖರೀದಿಸಿ, ಮೆಚುರಿಟಿ ತನಕ ಹೊಂದಿರುವ ಮೂಲ ಹೂಡಿಕೆದಾರರಿಗೆ ಮಾತ್ರ ಅನ್ವಯವಾಗಲಿದೆ.

Read Full Story

04:59 PM (IST) Feb 01

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ರಸ್ತೆ ಅಪಘಾತ ಸಂತ್ರಸ್ತರ ಪರಿಹಾರಕ್ಕೆ ಶೂನ್ಯ ತೆರಿಗೆ

ಕಣ್ಣೀರಿನ ಕುಟಂಬಕ್ಕೆ ಕೇಂದ್ರದ ಬಜೆಟ್ ಗಿಫ್ಟ್, ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಭರ್ಜರಿ ವಿನಾಯಿತಿ ನೀಡಿದೆ. ಈ ಪೈಕಿ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೂ ಹೊಸ ಪದ್ಧತಿ ಘೋಷಿಸಲಾಗಿದೆ.

Read Full Story

02:29 PM (IST) Feb 01

ಕೇಂದ್ರ ಬಜೆಟ್ ಮಂಡಿಸಿದ 15 ನಿಮಿಷಕ್ಕೆ ಷೇರು ಮಾರುಕಟ್ಟೆಯಲ್ಲಿ ₹30,000 ಕೋಟಿ ನಷ್ಟ: ಜಿ.ಸಿ. ಚಂದ್ರಶೇಖರ್ ಆಕ್ರೋಶ

ಕೇಂದ್ರ ಬಜೆಟ್ ಕುರಿತು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದು, ಬಜೆಟ್‌ನಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 30 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ. ಕರ್ನಾಟಕದ ಪ್ರಮುಖ ಬೇಡಿಕೆಗಳಾದ ಮಹದಾಯಿ, ಏಮ್ಸ್ ಯೋಜನೆಗಳ ಕಡೆಗಣಿಸಲಾಗಿದೆ ಎಂದರು.

Read Full Story

01:21 PM (IST) Feb 01

ಶೇರು ಮಾರುಕಟ್ಟೆ ತಲ್ಲಣ, ಇದರಿಂದ ಗೊತ್ತಾಗುತ್ತೆ ಬಜೆಟ್ ಹೇಗಿದೆ ಅಂತ: ಜಿಸಿ ಚಂದ್ರಶೇಖರ್

ಷೇರು ಮಾರುಕಟ್ಟೆಯಲ್ಲಿ ಹದಿನೈದು ನಿಮಿಷದಲ್ಲಿ ಮೂವತ್ತು ಸಾವಿರ ಕೋಟಿ ನಷ್ಟವಾಗಿದೆ. ಇದರಿಂದ ಬಜೆಟ್ ಹೇಗೆ ಇದೆ ಎಂದು ಗೊತ್ತಾಗುತ್ತಿದೆ.ಡಾಲರ್ ಮೌಲ್ಯ ಏನಾಗಿದೆ, 100 ತಲುಪಿದೆ ಇದು ಯಾವ ತರದ ಅಭಿವೃದ್ಧಿ. ಡಾಲರ್‌ಗೆ ಒಂದು ರೂಪಾಯಿ ಬರುತ್ತೆ ಅಂತಾ ಬಿಜೆಪಿ ನಾಯಕರು ಹೇಳಿದ್ದರು. ಅವರು ಎರಡು ಸೊನ್ನೆ ಮರೆತಿದ್ದಾರೆ. ದೇಶದ ಮೇಲಿನ ಸಾಲ ಹೆಚ್ಚಾಗುತ್ತಿದೆ, ಹತ್ತು ವರ್ಷದಲ್ಲಿ 150 ಲಕ್ಷ ಸಾಲ ಹೆಚ್ಚಾಗಿದೆ. ಕರ್ನಾಟಕ ಬಹಳ ನಿರೀಕ್ಷೆ ಇಟ್ಟುಕೊಂಡಿತ್ತು. 

ಮಂಡ್ಯದಲ್ಲಿ ಕೈಗಾರಿಕೆ ಕಾರಿಡಾರ್ ತರಲಾಗುವುದು ಎಂದು ನಮ್ಮ ಕೇಂದ್ರ ಸಚಿವರು ಹೇಳಿದ್ದರು. ಎಲ್ಲಿದೆ ಬಜೆಟ್‌ನಲ್ಲಿ ಕಾರಿಡಾರ್, ನಮ್ಮ ಕೇಂದ್ರ ಮಂತ್ರಿಗಳಿಗೆ ಕಿಮ್ಮತ್ತೇ ಇಲ್ಲ. ನೀರಾವರಿ ಯೋಜನೆ ಪೈಕಿ ಒಂದು ರಾಷ್ಟ್ರೀಯ ಯೋಜನೆಯಾಗಲಿಲ್ಲ. ಪ್ರಹ್ಲಾದ್ ಜೋಶಿಯಂತಹ ನಾಯಕರಿಗೆ ಮಹದಾಯಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಏಮ್ಸ್ ರಾಯಚೂರಿಗೆ ತರಲು ಸಾಧ್ಯವಾಗಲಿಲ್ಲ. ಹದಿನಾರನೆ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಹದಿನೈದನೆಯ ಆಯೋಗದಲ್ಲಿ ಆದ ಅನ್ಯಾಯ ಸರಿಪಡಿಸಿಲ್ಲ. ನರೇಗಾ ಬದಲಾವಣೆಯಿಂದ ಎರಡು ಸಾವಿರ ಕೋಟಿ ಕರ್ನಾಟಕಕ್ಕೆ ನಷ್ಟವಾಗಲಿದೆ. ಟ್ಯಾಕ್ಸ್ ನಲ್ಲಿನ ಹಣ ರಾಜ್ಯಗಳಿಗೆ ನೀಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಕೇಂದ್ರ ಸೆಸ್ ಹೆಚ್ಚಚ್ಚಿಸುತ್ತಿದೆ: ಜಿಸಿ ಚಂದ್ರಶೇಖರ್ 

01:11 PM (IST) Feb 01

ಚೀನಾಕ್ಕೆ ನಡುಕ ತಂದ ಭಾರತದ ಬಜೆಟ್! ಸೆಮಿಕಂಡಕ್ಟರ್ ಕ್ರಾಂತಿಗೆ ನಿರ್ಮಲಾ ಸೀತಾರಾಮನ್ 40,000 ಕೋಟಿ ರೂ. ಬೂಸ್ಟ್!

Nirmala Sitharaman Union Budget 2026: ಭಾರತವು ಅಪರೂಪದ ಭೂಮಿಯ ಖನಿಜಗಳಿಂದ ಹಿಡಿದು ಸೆಮಿಕಂಡಕ್ಟರ್‌ವರೆಗೆ ಚೀನಾಕ್ಕೆ ದೊಡ್ಡ ಹೊಡೆತ ನೀಡಲು ಸಿದ್ಧತೆ ನಡೆಸುತ್ತಿದೆ. ಇದು ದೇಶೀಯ ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಲಿದೆ.

Read Full Story

01:09 PM (IST) Feb 01

ಕೇಂದ್ರದಲ್ಲಿ ಬೆಂಗಳೂರಿಗೆ ಮಹತ್ವದ ಕೊಡುಗೆ: ತೇಜಸ್ವಿ ಸೂರ್ಯ

ನರೇಂದ್ರ ಮೋದಿ ಅವರ ಬಜೆಟ್ ದೂರದರ್ಶಿಯಾಗಿದೆ. ವಿಕಸಿತ ಭಾರತ ಮಾಡಲು ಎಲ್ಲಾ ಆಯಾಮಗಳಲ್ಲಿ ತೋರಿದೆ. ಬರುವಂತಹ ದಶಕದಲ್ಲಿ ಪ್ರಪಂಚದಲ್ಲಿ ಬದಲಾವಣೆ ಏನಿದೆ. ಎಐ, ಇವಿ, ರೆವೂಲೇಷನ್ ಸೇರಿ ಮುಖ್ಯ ಅಂಶಗಳನ್ನು ಗಮನಿಸಲಾಗಿದೆ. ಇದು ಭಾರತದ ಸಮಾಜ ಸುಧಾರಿಸಲು ನೆರವಾಗುತ್ತದೆ. ಎಲ್ಲಾ‌ ದೃಷ್ಟಿಯಿಂದ ಯುವಕರನ್ನು ಭವಿಷ್ಯಕ್ಕೆ ತಯಾರಿ ಮಾಡಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. 

ಕರ್ನಾಟಕಕ್ಕೆ ದೊಡ್ಡ ಕೊಡುಗೆ: 

ಬೆಂಗಳೂರುನವರಿಗೆ, ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗೋಡಂಬಿ ಬೆಳೆಗಾರರಿಗೆ ಒತ್ತು ನೀಡಲಾಗಿದೆ. ಟೆಕ್ಸಟೈಲ್ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಲಕ್ಷಾಂತರ ಜನರಿಗೆ ಅನುಕೂಲ ಆಗಲಿದ್ದು, ಬೆಂಗಳೂರು ಹೈದರಾಬಾದ್, ಚೆನೈ  ,ಹೈಸ್ಪಿಡ್ ರೈಲು ಕಾರಿಡಾರ್ ಘೋಷಣೆ ಆಗಿದ್ದು, ಇದರಿಂದ ಅನುಕೂಲ ಆಗಲಿದೆ.

ಹೈ ಸ್ಪೀಡ್ ರೈಲಿನಿಂದ ಅನುಕೂಲ. ಐಟಿ‌ ಸೆಕ್ಟರ್‌ಗೂ ಬೆಂಗಳೂರಿಗೆ ಅನುಕೂಲ ಆಗಲಿದೆ. ಐಟಿಯಲ್ಲಿ ‌ಬೆಂಗಳೂರಿಗೆ ಅನುಕೂಲ. ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಸಿಂಹ ಪಾಲು ಬೆಂಗಳೂರಿಗೆ ಸಿಕ್ಕಿದೆ. ಸಾಕಷ್ಟು ಉದ್ಯೋಗ ಸಿಗಲಿದೆ. ದೇಶದ ಬೇರೆ ಭಾಗಗಳಲ್ಲಿಯೂ ನಿಮಾನ್ಸ್ ಘೋಷಣೆ ಆಗಿದೆ.

ನಮ್ಮ ಕರ್ನಾಟಕದಲ್ಲಿರುವ ಸ್ಥಳಿಯರಿಗೆ ಅನುಕೂಲ ಆಗಲಿದೆ. ಕೃಷಿಕರಿಗೆ ಯುವಕರಿಗೆ ವಿದ್ಯಾರ್ಥಿಗಳಿಗೆ ಐಟಿಯವರಿಗೆ ದೇಶದ ಎಲ್ಲಾ ಆಯಾಮ ಗಮನಿಸಿ ಬಜೆಟ್ ನೀಡಲಾಗಿದೆ. ಮೋದಿ ಯವರಿಗೆ ನಿರ್ಮಲವರೆಗೆ ಅಭಿನಂದಿಸಿದ್ದಾರೆ.

12:15 PM (IST) Feb 01

ಮೊಬೈಲ್, ಇವಿ ಕಾರುಗಳ ತಯಾರಿಕೆಯಲ್ಲಿ ಇನ್ನು ಭಾರತವೇ ಕಿಂಗ್; ಬಜೆಟ್‌ನಲ್ಲಿ 'ಖನಿಜ ಕ್ರಾಂತಿ'ಗೆ ಮುನ್ನುಡಿ!

ತಮ್ಮ ಬಜೆಟ್ ಭಾಷಣದಲ್ಲಿ, ನಿರ್ಮಲಾ ಸೀತಾರಾಮನ್ ಅವರು, ಖನಿಜ ಸಮೃದ್ಧ ರಾಜ್ಯಗಳು ಮೀಸಲಾದ ಅಪರೂಪದ ಭೂಮಿಯ ಕಾರಿಡಾರ್‌ಗಳನ್ನು ನಿರ್ಮಿಸಲು ಸರ್ಕಾರ ಬೆಂಬಲ ನೀಡಲಿದೆ ಎಂದು ಹೇಳಿದರು. ಈ ಕಾರಿಡಾರ್‌ಗಳು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡನ್ನು ಸಂಪರ್ಕಿಸುತ್ತವೆ.

Read Full Story

12:13 PM (IST) Feb 01

ಕ್ರೀಡೆಗೆ ಉತ್ತೇಜನ: ಸಂಕೀರ್ಣಗಳ ಸ್ಥಾಪನೆ

12:07 PM (IST) Feb 01

ಹೊಸ ಆದಾಯ ತೆರಿಗೆ ಕಾನೂನು ಜಾರಿ

ಅನಿವಾಸಿ ಭಾರತೀಯ ಸ್ತಿರಾಸ್ಥಿ ಮೇಲಿನ ತೆರಿಗೆ ಕಡಿತ. 
ವಿದೇಶ ಯಾತ್ರೆಗಳ ಟಿಸಿಎಂಸ್ ಕಡಿತ
ಅಪಘಾತ ವಿಮೆಗಿನ್ನು ಟಿಡಿಎಸ್ ಇರುವುದಿಲ್ಲ. 
ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ. 
ಮಾ.31ರ ತನಕ ತೆರಿಗೆ ಸಲ್ಲಿಸಲು ಅನುವು. 
ಹೊಸ ಆದಾಯ ತೆರಿಗೆ ಕಾನೂನು ಜಾರಿ

 

11:55 AM (IST) Feb 01

ಬೆಂಗಳೂರು ಸೇರಿ ಏಳು ಹೈ ಸ್ಪೀಡ್‌ ರೈಲು ಕಾರಿಡಾರ್‌ ಯೋಜನೆ ಘೋಷಣೆ

2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳು ಸೇರಿದಂತೆ ದೇಶಾದ್ಯಂತ ಒಟ್ಟು ಏಳು ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

Read Full Story

11:53 AM (IST) Feb 01

ರಾಂಚಿ, ಜೈಪುರದಲ್ಲಿಯೂ ನಿಮ್ಹಾನ್ಸ್ ಸ್ಥಾಪನೆ

ಉತ್ತರ ಭಾರತದ ರಾಂಚಿ, ಜೈಪುರದಲ್ಲಿ ನಿಮ್ಹಾನ್ಸ್ ಸ್ಥಾಪನೆ. ಈಶಾನ್ಯ ರಾಜ್ಯಗಳಲ್ಲಿ ಬುದ್ದಿಸ್ಟ್ ಸಕ್ರ್ಯೂಟ್ ಸ್ಥಾಪನೆ.

11:51 AM (IST) Feb 01

Union Budget 2026: ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ 10ಸಾವಿರ ಕೋಟಿ ಅನುದಾನ ಮೀಸಲು!

11:49 AM (IST) Feb 01

ತೆಂಗು ಬೆಳೆಗೆ ಉತ್ತೇಜನ, ಮಾರಾಟಕ್ಕೆ ವಿಶೇಷ ಯೋಜನೆ

ತೆಂಗು, ಶ್ರೀಗಂಧ ಬೆಳೆಯಲು ಉತ್ತೇಜನ. ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಒತ್ತು. 

11:43 AM (IST) Feb 01

ಕರ್ನಾಟಕ, ಕೇರಳ ಕರಾವಳಿ ಅಭಿವೃದ್ಧಿಗೆ ಆದ್ಯತೆ

ಭಾರತೀಯ ಟೂರಿಸಂ ಅಭಿವೃದ್ಧಿಗೆ ಉತ್ತೇಜಸಲು ನಿರ್ಧರಿಸಿದ್ದು, 20 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ 10 ಸಾವಿರ ಗೈಡ್ ಗಳಿಗೆ 12 ಗಂಟೆ ತರಬೇತಿ ನೀಡಲು ನಿರ್ಧರಿಸಲಾಗಿದೆ. 

11:39 AM (IST) Feb 01

ಕಂಟೆಂಟ್ ಕ್ರಿಯೇಟರ್ಸ್‌ಗೆ ಜಾಕ್ ಪಾಟ್

15 ಸಾವಿರ ಶಾಲೆಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆರ. ಆ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಉದ್ಯೋಗ ಕಂಡು ಕೊಳ್ಳುವವರಿಗೆ ಉತ್ತೇಜನ. 

11:37 AM (IST) Feb 01

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಯುರ್ವೇದ ಸ್ಥಾಪನೆ, ವೈದ್ಯಕೀಯ ಟೂರಿಸಮ್ ಅಭಿವೃದ್ಧಿಗೆ ಒತ್ತು

ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದ, ಯೋಗ ಅಭಿವೃದ್ಧಿಗೆ ಯೋಜನೆ ಘೋಷಿಸಿದ ನಿರ್ಮಲಾ, ಮೆಡಿಕಲ್ ಟೂರಿಸಮ್ ಅಭಿವೃದ್ಧಇಗೆ ಐದು ಮೆಡಿಕಲ್ ರೀಜಿನಲ್ ಹಬ್ಸ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ವೈದ್ಯರು, ಪ್ಯಾರಾ ಮೆಡಿಕಲು ಪದವೀಧರರು ಹಾಗೂ ಹಲವರಿಗೆ ಉದ್ಯೋಗ ಸಿಗಲಿದೆ. ದೇಶದ ಮೂರು ಕಡೆ ಆಯುರ್ವೇದ ಸಂಸ್ಥೆಗಳನ್ನು ನಿರ್ಮಿಸಲು ನಿರ್ಧಾರ. ಖಾಸಗಿ ವಲಯದ ಜೊತೆ ಕೈ ಜೋಡಿಸಿ, ಮೆಡಿಕಲ್ ಹಬ್ ಅಭಿವೃದ್ಧಿಗೆ ಒತ್ತು. 

11:35 AM (IST) Feb 01

ಅತ್ಯುತ್ತಮ ಗುಣಮಟ್ಟದ ಕ್ರೀಡಾ ಪರಿಕರಗಳ ಉತ್ಫಾದನೆಗೆ ಒತ್ತು

ಭಾರತದ ಕ್ರೀಡಾ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಕ್ರೀಡಾಳುಗಳನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಪರಿಕರಗಳನ್ನು ಉತ್ಪಾದಿಸಲು ಸರಕಾರ ಉತ್ತೇಚಿಸಲದೆ. 

 

 

11:26 AM (IST) Feb 01

ಬಾಹ್ಯಾಕಾಶದಲ್ಲಿ ಆತ್ಮ ನಿರ್ಭರತೆ

National Fibre Scheme ಯೋಜನೆ ಘೋಷಿಸಿದ ನಿರ್ಮಲಾ. 
ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲ ಮಾರ್ಗ ನಿರ್ಮಾಣ
ಪ್ರಮುಖ ಬಂದರು ಸಂಪರ್ಕಿಸಲು ಇದು ಸಹಕಾರಿ. ಇದರಿಂದ ರಫ್ತು ಉತ್ತೇಜನಕ್ಕೆ ಒತ್ತು. 
ಪವರ್, ಸ್ಟೀಲ್, ರಿಫೈನರೀಸ್, ಕೆಮಿಕಲ್  ಸೇರಿ ಐದು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು. 
2-3ನೇ ಹಂತದ ನಗರಗಳಿಗೆ ಮೂಲ ಸೌಕರ್ಯ ಹೆಚ್ಚಿಸಿ, ಭಾರತದ ಪ್ರತಿಯೊಂದೂ ನಗರವೂ ದೇಶದ ಆರ್ಥಿಕತೆಗೆ ಪುಷ್ಠಿ ನೀಡುವಂತೆ ಅಭಿವೃದ್ಧಿ ಪಡಿಸಲು ಆದ್ಯತೆ. 
ಹೈ ಸ್ಪೀಡ್ ಕಾರಿಡಾರ್ ರೈಲುಗಳನ್ನು ಪರಚಯಿಸಿ ದೇಶದ ಪ್ರಮುಖ ನಗರಗಳ ನಡುವೆ ಕನೆಕ್ಟಿವಿಟಿ ಹೆಚ್ಚಿಸಲು ಒತ್ತು. 

ಮುಂಬೈ- ಪುಣೆ
ಹೈದರಾಬಾದ್ ಬೆಂಗಳೂರು
ಚೆನ್ನೈ-ಬೆಂಗಳೂರಿಗೆ ಹೈ ಸ್ಪೀಡ್ ರೈಲು

11:22 AM (IST) Feb 01

ನರೇಗಾ ಹೆಸರು ಬದಲಾವಣೆ ಗಲಾಟೆ ನಡುವೆ ಖಾದಿ ಉದ್ಯಮಕ್ಕೆ ಗಾಂಧಿ ಹೆಸರು

ನರೇಗಾ ಹೆಸರು ಬದಲಾಯಿಸಿ ಜಿ ರಾಮ ಜೀ ಎಂದು ಬದಲಾಯಿಸುವ ನಿರ್ಧಾರ ನಡುವೆಯ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಿದ್ದು, ಮಹಾತ್ಮ ಗಾಂಧಿ ಹೆಸರು ಯೋಜನೆಯನ್ನು ಘೋಷಿಸಿದೆ. 

11:19 AM (IST) Feb 01

SME Growth Funds ಘೋಷಣೆ

ಸಣ್ಣ ಉದ್ಯಮಗಳು ಭವಿಷ್ಯದಲ್ಲಿ ಜಾಗತಿಕವಾಗಿ ಸ್ಪರ್ಧೆ ಒಡ್ಡುವಂತೆ ಮಾಡಲು 10 ಸಾವಿರ ಕೋಟಿ ನೀಡಲಾಗುತ್ತದೆ. ಇದರಿಂದ ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳಿಗೂ ಅನುಕೂಲವಾಗುತ್ತಿದ್ದು, ಖಾದಿ ಗ್ರಾಮೋದ್ಯಗ ಯೋಜನೆಗೂ ಒತ್ತು ನೀಡಲಾಗುತ್ತದೆ ಎಂದರು. 

11:17 AM (IST) Feb 01

350 ಸುಧಾರಣೆಗಳಲ್ಲಿ ಹ್ಯಾಂಡಲೂಮ್‌ಗೂ ಒತ್ತು

ಜವಳಿ ಉದ್ಯಮ ಅಭಿವೃದ್ಧಿಗೆ ಕೇಂದ್ರದಿಂದ ಒತ್ತು. ಜಾಗತಿಕವಾಗ ಸ್ಪರ್ಧೆಯೊಡ್ಡುವಂತೆ ಜವಳಿ ಕ್ಷೇತ್ರ ಅಭಿವೃದ್ಧಿಗೆ ಒತ್ತು. 

11:15 AM (IST) Feb 01

ವಿರಳ ಲೋಹಗಳ ಸಂಗ್ರಹಕ್ಕೆ ಕಾರಿಡಾರ್ ನಿರ್ಮಾಣ

ಒಡಿಶಾ, ಕೇರಳ, ತಮಿಳುನಾಡಿನಲ್ಲಿ  ಆಂಧ್ರದಲ್ಲಿ ರೇರ್ ಅರ್ಥ್ ಕಾರಿಡಾರ್ ಯೋನೆಜ. 

ಸೆಮಿಕಂಡಕ್ಟರ್ ಯೋಜನೆಗಾಗಿ 40 ಸಾವಿರ ಕೋಟಿ ಘೋಷಿಸಿದ ಸರಕಾರ.

11:13 AM (IST) Feb 01

3 ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ

  1. ಉತ್ಪಾದನೆ ಹೆಚ್ಚಳ, 
    2. ಜನರ ಆಶೋತ್ತರ ಈಡೇರಿಸುವುದು
    3. ಸಬ್ ಕಾ ಸಾತ್, ಸಬ್ ಕಾ ವಿಕಾಸ್

     

11:12 AM (IST) Feb 01

Union Budget 2026: 7 ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸಲು ಒತ್ತು

ನಗರಗಳ ಪ್ರಗತಿ ಗಮನದಲ್ಲಿಟ್ಟುಕೊಂಡು, ಆರ್ಥಿಕ ಸುಧಾರಣೆ ಹೆಚ್ಚಿಸಲು ಒತ್ತು ಸೇರಿ ಏಳು ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸಲು ಒತ್ತು ನೀಡಲಾಗುತ್ತದೆ. 
ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಭಾರತದ ಬಯೋ ಫಾರ್ಮ್ ಶಕ್ತಿ ಯೋಜನೆ. 10 ಸಾವಿರ ಕೋಟಿ ವೆಚ್ಚದಲ್ಲಿ ಆರೋಗ್ಯ ಕ್ಷೇತ್ತ ಉತ್ತೇಜಿಸಿ, ಜನ ಸಾಮಾನ್ಯರ ಆರೋಗ್ಯ ಸುಧಾರಿಸಲು ಹೆಚ್ಚಿನ ಗಮನ. 

ಔಷಧ ತಯಾರಿಕಾ ಕ್ಷೇತ್ರವನ್ನು ಸುಧಾರಿಸಲು ಹೆಚ್ಚಿನ ಆದ್ಯತೆ. 

 

11:04 AM (IST) Feb 01

ಟ್ರಂಪ್ ಸುಂಕದ ಬರೆ ಹೆಚ್ಚಾಗದಂತೆ ವಹಿಸಬೇಕು ಎಚ್ಚರ

ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಸುಂಕದ ಸುರಿಮಳೆ ಸುರಿಸುತ್ತಿದ್ದು, ಭಾರತ ತೆಗೆದುಕೊಳ್ಳುವ ನಿಲುವು ಬಹಳ ಮಹತ್ವ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಎಲ್ಲ ಸವಾಲುಗಳನ್ನು ಎದುರಿಸಿ, ಹೇಗೆ ಮುಂದುವರಿಯುತ್ತಾರೆಂಬುವುದು ಮುಖ್ಯ. ಜಾಗತಿಕ ವಿದ್ಯಾಮಾನಗಳು ಭಾರತದ ಆರ್ಥಿಕತೆ ಮೇಲೆ ಯಾವುದು ಪ್ರತಿಕೂಲ ಪರಿಣಾಮ ಬೀರದಂತೆ ಎಚ್ಚರವಹಿಸಬೇಕಾದ ಹೊಣೆ ಇದೆ. ಈಗಾಗಲೇ ಭಾರತದ ಆರ್ಥಿಕತೆ ವೇಗ ಪಡೆದು ಕೊಂಡಿದ್ದು, ತೆಗೆದುಕೊಳ್ಳುವ ನಿರ್ಧಾರವೂ ಅದು ಮಂದಗತಿಯಲ್ಲಿ ಸಾಗದಂತಿರಬೇಕು.

ವಿತ್ತೀಯ ಶಿಸ್ತು, ನೀತಿ ಸುಧಾರಣೆಗಳನ್ನೂ ಮುಂದುವರಿಸಬೇಕಾಗಿದೆ. ಕಳೆದ ಆದಾಯ ತೆರಿಗೆಯಲ್ಲಿ ಸ್ವಲ್ಪ ಮಟ್ಟಿಗಿನ ವಿನಾಯತಿ ನೀಡಿದ್ದಲ್ಲದೇ, ಜಿಎಸ್‌ಟಿ ದರವನ್ನೂ ಇಳಿಸಿ, ಶ್ರೀ ಸಾಮಾನ್ಯನಿಗೆ ಸಿಹಿ ಸುದ್ದಿ ನೀಡಿತ್ತು. ಈ ನಡುವೆಯೂ ಜನ ಸಾಮಾನ್ಯರು ಮತ್ತಷ್ಟು ಸಿಹಿ ಸಿದ್ದಿ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದು, ಈ ಎಲ್ಲ ಸವಾಲುಗಳನ್ನು ನಿರ್ಮಲಾ ಹೇಗೆ ಎದುರಿಸುತ್ತಾರೆಂಬ ಕುತೂಹಲವಿದೆ.

 

 

 

10:43 AM (IST) Feb 01

Union Budget 2026: ಬಜೆಟ್‌ ದಿನ ಗಮನಸೆಳೆಯಬಹುದಾದ 11 ಷೇರುಗಳು!

NMDC, ಭಾರತ್ ಎಲೆಕ್ಟ್ರಾನಿಕ್ಸ್, ಲಾರ್ಸೆನ್ & ಟೂಬ್ರೊ, ಜುಪಿಟರ್ ವ್ಯಾಗನ್ಸ್, ಹಿಂದೂಸ್ತಾನ್ ಏರೋನಾಟಿಕ್ಸ್, ಟಿವಿಎಸ್ ಮೋಟಾರ್, ವಾರೀ ಎನರ್ಜಿಸ್ ಸೇರಿದಂತೆ 11 ಷೇರುಗಳ ಬಗ್ಗೆ ಗಮನವಿರಲಿ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

 

Read Full Story

10:34 AM (IST) Feb 01

ಕರ್ತವ್ಯ ಭವನ್ ಹೊಸ ಸಚಿವಾಲಯದ ಕಟ್ಟಡದಲ್ಲಿ ಬಜೆಟ್ ತಯಾರಿ

ನಿರ್ಮಲಾ ಸೀತಾರಾಮನ್ 9ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಈತನಕ ನಾತ್೯ ಬ್ಲಾಕ್‌ನಲ್ಲಿದ್ದ ಹಣಕಾಸು ಸಚಿವಾಲಯದ ಬದಲು ಬಜೆಟ್ ಪೂರ್ವ ತಯಾರಿ, ಇದೀಗ ಕರ್ತವ್ಯ ಭವನ್‌ದಲ್ಲಿ ಮೊದಲು ಸಿದ್ಧವಾಗಿದೆ. ಈಗಾಗಲೇ ಸಚಿವಾಲಯ ಕ್ಕೆ ಆಗಮಿಸಿದ ರಾಜ್ಯಖಾತೆ ಸಚಿವ ಪಂಕಜ್ ಚೌದರಿ. 

10:23 AM (IST) Feb 01

ಕೆಂಪು ಮೈ, ನೀಲಿ ಬಾರ್ಡರ್ ಕಂಚಿ ಸೀರೆಯಲ್ಲಿ ನಿರ್ಮಲಾ ಸೀತರಾಮನ್

ಕೇಂದ್ರೀ ವಿತ್ತ ಮಂತ್ರಿ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಲು ಉಡುವ ಸೀರೆ ಮೇಲೆ ಈ ವಿತ್ತೀಯ ವರ್ಷದ ಬಜೆಟ್ ಹೇಗಿರುತ್ತೆ ಅಂತ ತಜ್ಞರು ವಿಶ್ಲೇಷಿಸುತ್ತಾರೆ. ಸಾಮಾನ್ಯವಾಗಿ ಚುನಾವಣೆಗಳಿರುವ ರಾಜ್ಯಗಳ ಮಹತ್ವ ಇರೋ ಸೀರೆಯನ್ನೇ ಉಡುವ ನಿರ್ಮಾಲಾ, ಈ ಸಲ ತಮ್ಮ ತವರು ರಾಜ್ಯ ತಮಿಳುನಾಡಿನ ಪ್ರಸಿದ್ಧ ಕಂಚಿ ಸೀರೆ ಉಟ್ಟಿದ್ದಾರೆ. ದಕ್ಷಿಣ ಭಾರತದ ಕೇರಳ ಹಾಗೂ ತಮಿಳು ನಾಡು ರಾಜ್ಯಗಳು ಈ ಸಲ ಚುನಾವಣೆ ಎದುರಿಸಲಿದೆ. 

 

 

 

10:07 AM (IST) Feb 01

Union Budget 2026 Live: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ನಿರ್ಮಲಾ ಸೀತಾರಾಮನ್‌

Budget 2026 Live: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ಸೀತಾರಾಮನ್ ಅವರಲ್ಲದೆ, ಬಜೆಟ್ ತಂಡದ ಇತರ ಪ್ರಮುಖ ಸದಸ್ಯರು ಸಹ ರಾಷ್ಟ್ರಪತಿ ಭವನದಲ್ಲಿದ್ದಾರೆ. ಇದರ ನಡುವೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಹೆಚ್ಚಾಗಿ ಸ್ಥಿರವಾಗಿ ವಹಿವಾಟು ನಡೆಸುತ್ತಿವೆ, ಆದರೆ ಎಂಸಿಎಕ್ಸ್ ಷೇರುಗಳು 10–14% ರಷ್ಟು ಕುಸಿದಿವೆ.

10:06 AM (IST) Feb 01

Union Budget 2026 Live: ಸಂಸತ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

Budget 2026 Live: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಆಗಮಿಸಿದ್ದಾರೆ.

 

10:05 AM (IST) Feb 01

Union Budget 2026 Live: ಕೇಂದ್ರ ಬಜೆಟ್‌ಗೂ ಮುನ್ನ ಹೊರಬಿದ್ದ ಜನವರಿ ಜಿಎಸ್‌ಟಿ ಡೇಟಾ

Budget 2026 Live: ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಜನವರಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 6.2 ರಷ್ಟು ಹೆಚ್ಚಾಗಿ 1.93 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

 

07:55 AM (IST) Feb 01

Union Budget 2026: ಬಜೆಟ್‌ ಅರ್ಥ ಆಗ್ಬೇಕಾ? ಮೊದಲು ಇದನ್ನು ಓದಿ

ಬಜೆಟ್ ಮಂಡನೆಯಲ್ಲಿ ಬಳಸಲಾಗುವ ಜಿಡಿಪಿ, ವಿತ್ತೀಯ ಕೊರತೆ, ನೇರ ಮತ್ತು ಪರೋಕ್ಷ ತೆರಿಗೆಗಳಂತಹ ಹಲವಾರು ಆರ್ಥಿಕ ಪದಗಳನ್ನು ಈ ಲೇಖನವು ಸರಳವಾಗಿ ವಿವರಿಸುತ್ತದೆ.

Read Full Story

07:46 AM (IST) Feb 01

ಬಜೆಟ್‌ಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ! LPG ಸಿಲಿಂಡರ್ ದರದಲ್ಲಿ ಹೆಚ್ಚಳ

ಕೇಂದ್ರ ಬಜೆಟ್‌ಗೂ ಮುನ್ನವೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಿಸಿವೆ. ಆದರೆ, ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬೆಲೆ ಏರಿಕೆಯಿಂದಾಗಿ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರಗಳು ಪರಿಷ್ಕರಣೆಗೊಂಡಿವೆ.

 

Read Full Story

07:26 AM (IST) Feb 01

Union Budget: ಇಂದು ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ; ವಾರ್ಷಿಕ ಆಯವ್ಯಯದ ಕುತೂಹಲಕಾರಿ ಮಾಹಿತಿ

ಕೇಂದ್ರ ಸರ್ಕಾರದ ವಾರ್ಷಿಕ ಆಯವ್ಯಯ ಮಂಡನೆಯ ಹಿನ್ನೆಲೆಯಲ್ಲಿ, 'ಬಜೆಟ್' ಪದದ ಮೂಲ, ಭಾರತದಲ್ಲಿ ಅದರ ಇತಿಹಾಸ, ದಾಖಲೆಗಳು ಮತ್ತು ಆರು ತಿಂಗಳ ಸುದೀರ್ಘ ತಯಾರಿಯ ಪ್ರಕ್ರಿಯೆಯನ್ನು ಈ ಲೇಖನ ವಿವರಿಸುತ್ತದೆ. ಜೊತೆಗೆ, ಬಜೆಟ್ ಭಾಷಣದಲ್ಲಿ ಬಳಸುವ ಪ್ರಮುಖ ಆರ್ಥಿಕ ಪದಗಳ ಸರಳ ಅರ್ಥವನ್ನು ಸಹ ನೀಡಲಾಗಿದೆ.

 

Read Full Story

10:47 PM (IST) Jan 31

ಕೇಂದ್ರ ಬಜೆಟ್ 75 ವರ್ಷದ ಸಂಪ್ರದಾಯಕ್ಕೆ ಬ್ರೇಕ್, ಇದೇ ಮೊದಲ ಬಾರಿ ಪಾರ್ಟ್ Bಗೆ ಒತ್ತು

ಕೇಂದ್ರ ಬಜೆಟ್ 75 ವರ್ಷದ ಸಂಪ್ರದಾಯಕ್ಕೆ ಬ್ರೇಕ್, ಇದೇ ಮೊದಲ ಬಾರಿ ಪಾರ್ಟ್ Bಗೆ ಒತ್ತು ನೀಡಲಾಗುತ್ತಿದೆ. ನಿರ್ಮಲಾ ಸೀತಾರಾಮನ್ ಈ ಬಾರಿ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಏನಿದು ಬಜೆಟ್ ಪಾರ್ಟಿ ಬಿ

Read Full Story

04:46 PM (IST) Jan 31

Union Budget 2026 - ಆದಾಯ ತೆರಿಗೆಯಲ್ಲಿ ನೌಕರರಿಗೆ ಈ ಬಾರಿಯೂ ಬಂಪರ್​? ಬಜೆಟ್​ ಸಾಧ್ಯತೆ ಏನು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಕೇಂದ್ರ ಬಜೆಟ್ ಮಂಡಿಸಲಿದ್ದು, ಮಧ್ಯಮ ವರ್ಗದವರು ಆದಾಯ ತೆರಿಗೆಯಲ್ಲಿ ಹೆಚ್ಚಿನ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

 

Read Full Story

04:32 PM (IST) Jan 31

Union Budget 2026 - ಈ 3 ಘೋಷಣೆ ಮಾಡಿದರೆ ಸಾಕು, ಷೇರು ಮಾರುಕಟ್ಟೆ ಗಗನಕ್ಕೇರುತ್ತೆ

Budget announcements: ಈ ಬಜೆಟ್‌ನಲ್ಲಿ ಸರ್ಕಾರ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದರೆ, ಷೇರು ಮಾರುಕಟ್ಟೆ ಗಗನಕ್ಕೇರುತ್ತದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೆರೋಧಾ ಸಿಇಒ ನಿತಿನ್ ಕಾಮತ್ ಕೂಡ ಈ ಬೇಡಿಕೆಗಳನ್ನು ಬೆಂಬಲಿಸಿದ್ದಾರೆ ಎಂಬುದು ಗಮನಾರ್ಹ.

Read Full Story

03:17 PM (IST) Jan 31

Union Budget 2026 expectations live updates: MSME ಗಳಿಗೆ ಬಲವಾದ ಬೆಂಬಲ ಸಿಗುವ ನಿರೀಕ್ಷೇ: UCCI ಮುಖ್ಯಸ್ಥ

ಉತ್ಕಲ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಪ್ರಬೋಧ್ ಮೊಹಂತಿ, ಕೇಂದ್ರ ಬಜೆಟ್ MSME ವಲಯಕ್ಕೆ, ವಿಶೇಷ ಸಾಲ , ಆಧುನೀಕರಣ ಮತ್ತು ನಿಯಂತ್ರಕ ಸರಾಗತೆ ಮುಂತಾದ ಕ್ಷೇತ್ರಗಳಲ್ಲಿ ಬಲವಾದ ಬೆಂಬಲವನ್ನು ತರುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ANI ಜೊತೆ ಮಾತನಾಡಿದ ಮೊಹಂತಿ, MSME ಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಬೆಳೆಯಲು, ಆಧುನೀಕರಿಸಲು ಮತ್ತು ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡಲು ಸರ್ಕಾರವು ಸುಧಾರಿತ ಸೌಲಭ್ಯಗಳು ಮತ್ತು ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ ಎಂದು ನಿರೀಕ್ಷಿಸುವುದಾಗಿ ಹೇಳಿದರು. ಸಣ್ಣ ವ್ಯವಹಾರಗಳಿಗೆ ಪ್ರಮುಖ ಆದ್ಯತೆಯಾಗಿ ಮೇಲಾಧಾರವಿಲ್ಲದೆ ಸಾಲವನ್ನು ಸುಲಭವಾಗಿ ಪಡೆಯುವುದು ಮುಖ್ಯ ಎಂದು ಅವರು ಹೇಳಿದರು.

 

03:15 PM (IST) Jan 31

Union Budget 2026 expectations live: 2026 ರ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ, ಕೃಷಿ, ಎಂಎಸ್‌ಎಂಇಗಳ ಮೇಲೆ ಕೇಂದ್ರ ಗಮನ ಹರಿಸುವ ಸಾಧ್ಯತೆ

ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ರಾಯ್ಕಿಂಡಿ ಅವರು ಸರ್ಕಾರವು ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಅಂತರ್ಗತ ಉತ್ಪಾದನೆ, ಡಿಜಿಟಲ್ ರೂಪಾಂತರ ಮತ್ತು ಗ್ರಾಮೀಣ-ನಗರ ಏಕೀಕರಣದತ್ತ ಗಮನ ಹರಿಸುವ ಸಾಧ್ಯತೆಯಿದೆ ಎಂದು ಹೇಳಿದರು. ರಕ್ಷಣೆ, ರೈಲ್ವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಎಂಎಸ್‌ಎಂಇಗಳು, ಗ್ರಾಮೀಣಾಭಿವೃದ್ಧಿ ಮತ್ತು ಹಸಿರು ಆರ್ಥಿಕತೆಯಂತಹ ಪ್ರಮುಖ ಕ್ಷೇತ್ರಗಳು ಗಮನಾರ್ಹ ಗಮನ ಮತ್ತು ಹೂಡಿಕೆಯನ್ನು ಪಡೆಯುವ ನಿರೀಕ್ಷೆಯಿದೆ.

"ಪ್ರಸ್ತುತ ಭಾರತೀಯ ಆರ್ಥಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸುಸ್ಥಿರ ಬೆಳವಣಿಗೆಗೆ, ನಾವು ಆಶಾವಾದದಿಂದ ಎದುರುನೋಡಬಹುದು. ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಅಂತರ್ಗತ ಉತ್ಪಾದನೆ, ಡಿಜಿಟಲ್ ಪರಿವರ್ತನೆ, ಗ್ರಾಮೀಣ-ನಗರ ಏಕೀಕರಣ ಮತ್ತು ಹಸಿರು ಆರ್ಥಿಕತೆಯಂತಹ ಕ್ಷೇತ್ರಗಳಿಗೆ ಭಾರತ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಭಾರತವು ರಾಷ್ಟ್ರವ್ಯಾಪಿ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಬಹುದು. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ತೆರಿಗೆ ಸ್ಲ್ಯಾಬ್‌ಗಳು, ಕೈಗೆಟುಕುವ ವಸತಿ, ಆರೋಗ್ಯ ರಕ್ಷಣೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಹಾರವನ್ನು ಎದುರು ನೋಡುತ್ತಿದ್ದಾನೆ" ಎಂದು ಅವರು ಹೇಳಿದರು.

 

03:12 PM (IST) Jan 31

ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ ನಡುವಿನ ವ್ಯತ್ಯಾಸ

ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ ನಡುವಿನ ವ್ಯತ್ಯಾಸವೇನು?

 


More Trending News