ಶಹಬ್ಬಾಸ್ ಅಫ್ಘಾನಿಸ್ತಾನ್: ಕೊಟ್ಟ ಏಟಿಗೆ ಮಕಾಡೆ ಮಲಗಿದ ಪಾಪಿಸ್ತಾನ್!

Published : Oct 17, 2019, 12:12 PM ISTUpdated : Oct 17, 2019, 04:32 PM IST
ಶಹಬ್ಬಾಸ್ ಅಫ್ಘಾನಿಸ್ತಾನ್: ಕೊಟ್ಟ ಏಟಿಗೆ ಮಕಾಡೆ ಮಲಗಿದ ಪಾಪಿಸ್ತಾನ್!

ಸಾರಾಂಶ

ಪಾಕಿಸ್ತಾನಕ್ಕೆ ಶಾಕ್ ಕೊಡಲು ಮುಂದಾದ ಅಫ್ಘಾನಿಸ್ತಾನ|  ಧಿಮಾಕು ತೋರಿಸುವ ಪಾಕಿಸ್ತಾನದ ಕಪಾಳಕ್ಕೆ ಬಾರಿಸಲಿದೆ ಆಫ್ಘನ್| ಪಾಕಿಸ್ತಾನದಿಂದ ಆಮದಾಗುವ ಹಣ್ಣು-ತರಕಾರಿಗಳ ಮೇಲಿನ ಆಮದು ಸುಂಕ ಹೆಚ್ಚಳಕ್ಕೆ ಚಿಂತನೆ| ಆಮದು ಸುಂಕ ಹೆಚ್ಚಿಸುವಂತೆ ಸರ್ಕಾಋಕ್ಕೆ ಮನವಿ ಮಾಡಿದ ಅಫ್ಘಾನಿಸ್ತಾನ್ ವ್ಯಾಪಾರಿಗಳು|  ಆಮದು ಸುಂಕ ಹೆಚ್ಚಿಸುವ ಆಫ್ಘನ್ ನಿರ್ಧಾರದಿಂದ ಕಂಗಾಲಾದ ಪಾಕಿಸ್ತಾನ| 

ಕಾಬೂಲ್(ಅ.17): ಧಿಮಾಕು ತೋರಿಸುವ ಪಾಕಿಸ್ತಾನಕ್ಕೆ ಅವಕಾಶ ಸಿಕ್ಕಾಗಲೆಲ್ಲಾ ಭಾರತ ಅದರ ಯೋಗ್ಯತೆಯ ಪರಿಚಯ ಮಾಡಿಕೊಡುತ್ತಲೇ ಇರುತ್ತದೆ.

ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಳ್ಳುವ ಭಾರತ, ಪ್ರಾದೇಶಿಕವಾಗಿ ಆರ್ಥಿಕ ಹೊಡೆತ ನೀಡುವ ಮೂಲಕವೂ ತಕ್ಕ ಪಾಠ ಕಲಿಸುತ್ತಲೇ ಇದೆ.

ಪಾಕಿಸ್ತಾನಕ್ಕೆ ಈಗಾಗಲೇ ತರಕಾರಿ ರಫ್ತನ್ನು ನಿಲ್ಲಿಸಿರುವ ಭಾರತ, ನೀರು ಹರಿಯುವಿಕೆಯನ್ನು ಕೂಡ ನಿಲ್ಲಿಸುವತ್ತ ಚಿಂತಿಸುತ್ತಿದೆ. ಪ್ರಧಾನಿ ಮೋದಿ ಈ ಕುರಿತು ಹರಿಯಾಣ ಚುನಾವಣಾ ಪ್ರಚಾರದಲ್ಲಿ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ.

ಇದೀಗ ತನ್ನ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಏಟು ನೀಡುವ ಸರದಿ ಅಫ್ಘಾನಿಸ್ತಾನ್’ದ್ದು. ಪಾಕಿಸ್ತಾನದಿಂದ ಆಮದಾಗುವ ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಿಸಲು ಆಫ್ಘನ್ ಮುಂದಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ, ತನ್ನ ಹಣ್ಣು-ತರಕಾರಿ ಮೇಲಿನ ಆಮದು ಸುಂಕ ಹೆಚ್ಚಿಸಲಿರುವ ಆಫ್ಘನ್ ಶಾಕ್ ತಡೆದುಕೊಳ್ಳುವುದು ಅನಿವಾರ್ಯವಾಗಲಿದೆ. 

ಪಾಕಿಸ್ತಾನದ ವಸ್ತುಗಳ ಮೇಲೆ ಆಮದು ಮೇಲಿನ ಸುಂಕ ಹೆಚ್ಚಿಸಲು ಆಫ್ಘನ್ ಪಾರಿಗಳು ತಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪಾಕಿಸ್ತಾನ ಮಾತ್ರವಲ್ಲದೆ ಇರಾನ್ ಮೇಲೂ ಆಮದು ಸುಂಕ ಹೆಚ್ಚಿಸಬೇಕು ಎಂದು ಅಫ್ಘಾನಿಸ್ತಾನ್ ದ ವ್ಯಾಪಾರಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ದೇಶೀಯ ಮಾರುಕಟ್ಟೆಗಳು ಪ್ರಸ್ತುತ ಇರಾನ್ ಮತ್ತು ಪಾಕಿಸ್ತಾನದ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿವೆ.  ಹೀಗಾಗಿ ಪಾಕಿಸ್ತಾನ ಮತ್ತು ಇರಾನ್ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವಂತೆ ವ್ಯಾಪಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇನ್ನು ಆಫ್ಘನ್ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ವ್ಯಾಪಾರಿಗಳು, ದೇಶೀಯ ಉತ್ಪಾದಕರನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೖಗೊಳ್ಳದಿರುವುದನ್ನು ಟೀಕಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್