ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಸಮಾಜ ಸೇವೆಗೆ ಹಣ ನೀಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಎಡೆನ್‌ಗೀವ್ ಹರೂನ್ ಇಂಡಿಯಾ ಸಂಸ್ಥೆ ಅತಿಹೆಚ್ಚು ದಾನ ಮಾಡಿದ ಭಾರತದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್ 1, 2017ರಿಂದ ಸೆಪ್ಟೆಂಬರ್ 31, 2018ರ ವರೆಗೆ ಶ್ರೀಮಂತ ಉದ್ಯಮಿಗಳು ನೀಡಿದ ದಾನದ ಆಧಾರದಲ್ಲಿ ಪಟ್ಟಿಬಿಡುಗಡೆ ಮಾಡಲಾಗಿದೆ.
ಜಗತ್ತಿನ ನಂ.1 ಹಾಗೂ ನಂ.2 ಶ್ರೀಮಂತರಾಗಿದ್ದ ಅಮೆರಿಕದ ಬಿಲ್‌ಗೇಟ್ಸ್ ಹಾಗೂ ವಾರನ್ ಬಫೆಟ್ ಕೆಲ ವರ್ಷಗಳ ಹಿಂದೆ ಆರಂಭಿಸಿದ್ದ ‘ದಾನ’ ಸಂಪ್ರದಾಯ ಈಗ ಭಾರತಕ್ಕೂ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ಬಿಲ್‌ಗೇಟ್ಸ್ ಮತ್ತು ವಾರನ್ ಬಫೆಟ್ ತಮ್ಮ ಆಸ್ತಿಯ ಬಹುಪಾಲನ್ನು ಸಮಾಜ ಸೇವೆಗೆ ದಾನ ಮಾಡಿ, ಜಗತ್ತಿನ ಇತರ ಶ್ರೀಮಂತರೂ ಹೀಗೇ ಮಾಡಬೇಕೆಂದು ಆಂದೋಲನ ಆರಂಭಿಸಿದ್ದರು.
ಅದಕ್ಕೆ ಭಾರತದ ಶ್ರೀಮಂತರೂ ಉದಾರ ಮನಸ್ಸಿನಿಂದ ಕೈಜೋಡಿಸಿದ್ದು, ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಸಮಾಜ ಸೇವೆಗೆ ಹಣ ನೀಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಎಡೆನ್‌ಗೀವ್ ಹರೂನ್ ಇಂಡಿಯಾ ಸಂಸ್ಥೆ ಅತಿಹೆಚ್ಚು ದಾನ ಮಾಡಿದ ಭಾರತದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದೆ.
ಬಡ ಎಕನಾಮಿಕ್ಸ್ ಗೆ ಶ್ರೀಮಂತ ಪ್ರಶಸ್ತಿ; ಭಾರತೀಯ ಸಂಝಾತನಿಗೆ ನೊಬೆಲ್ ಗರಿ!
ಅಕ್ಟೋಬರ್ 1, 2017ರಿಂದ ಸೆಪ್ಟೆಂಬರ್ 31, 2018ರ ವರೆಗೆ ಶ್ರೀಮಂತ ಉದ್ಯಮಿಗಳು ನೀಡಿದ ದಾನದ ಆಧಾರದಲ್ಲಿ ಪಟ್ಟಿಬಿಡುಗಡೆ ಮಾಡಲಾಗಿದೆ. ಆ ಶ್ರೀಮಂತರು ಯಾರು, ಅವರು ಏನು ಕೆಲಸ ಮಾಡುತ್ತಾರೆ, ಅವರ ಆದಾಯವೆಷ್ಟು, ಎಷ್ಟುದಾನ ಮಾಡಿದ್ದಾರೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.
ಶಿವ ನಾಡರ್
ದಾನ 826 ಕೋಟಿ
ಆಸ್ತಿ: 1,06,560 ಕೋಟಿ
ಪದ್ಮಭೂಷಣ ಪುರಸ್ಕೃತ ಶಿವ ನಾಡರ್ ಎಚ್‌ಸಿಎಲ್ ಕಂಪನಿಯ ಸಂಸ್ಥಾಪಕ. ನಾಡರ್ ಕ್ಯಾಲ್ಕು್ಯಲೇಟರ್ ಮತ್ತು ಮೈಕ್ರೋಫೆä್ರಸೆಸರ್‌ಗಳನ್ನು ತಯಾರಿಸುವ ಎಚ್‌ಸಿಎಲ್ ಕಂಪನಿಯನ್ನು 1976ರಲ್ಲಿ ಸ್ಥಾಪಿಸಿದರು. ಕೆಲವೇ ವರ್ಷಗಳಲ್ಲಿ ಅದು ಬಹುರಾಷ್ಟ್ರೀಯ ಕಂಪನಿಯಾಗಿ ಜಗತ್ತಿನಾದ್ಯಂತ ಹೆಸರು ಮಾಡಿತು. ಸದ್ಯ ಎಚ್‌ಸಿಲ್ ಮುಖ್ಯಸ್ಥರಾಗಿರುವ 74 ವರ್ಷದ ನಾಡರ್, ಶಿವನಾಡರ್ ಎಂಬ ಫೌಂಡೇಶನ್ ಸ್ಥಾಪಿಸಿ ಸಾಮಾಜಿಕ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯು ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ನೀಡಿ ಸಹಾಯ ಮಾಡುತ್ತಿದೆ.
ಅಜೀಂ ಪ್ರೇಮ್‌ಜಿ
ದಾನ 453 ಕೋಟಿ
ಆಸ್ತಿ: 51,153 ಕೋಟಿ
74 ವರ್ಷದ ಅಜೀಂ ಪ್ರೇಮ್‌ಜಿ ವಿಪ್ರೋ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕ. ಟೈಮ್ ಮ್ಯಾಗಜಿನ್ ಪ್ರಕಟಿಸಿದ್ದ ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಇವರು ಹೆಸರೂ ಇತ್ತು. ಜಗತ್ತಿನ ನಂ.1 ಶ್ರೀಮಂತರಾಗಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತು ಜಗತ್ತಿನ 2ನೇ ಶ್ರೀಮಂತರಾಗಿದ್ದ ವಾರನ್ ಬಫೆಟ್ ಕೆಲ ವರ್ಷಗಳ ಹಿಂದೆ ‘ದಿ ಗಿವಿಂಗ್ ಪ್ಲೆಡ್ಜ್’ ಎಂಬ ಯೋಜನೆ ಆರಂಭಿಸಿದ್ದರು. ದೊಟ್ಟದೊಡ್ಡ ಉದ್ಯಮಿಗಳು ತಮ್ಮ ಆಸ್ತಿಯ ಬಹುಪಾಲನ್ನು ಸಮಾಜ ಸೇವೆಗೆ ದಾನ ನೀಡುವ ಯೋಜನೆಯಿದು. ಈ ಯೋಜನೆಗೆ 2013ರಲ್ಲಿ ಅಜೀಂ ಪ್ರೇಮ್‌ಜಿ ಸಹಿ ಮಾಡಿದ್ದಾರೆ. 2001ರಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಸ್ಥಾಪಿಸಿ ಇದುವರೆಗೆ 21000 ಕೋಟಿ ರು. ದಾನ ನೀಡಿದ್ದಾರೆ.
12 ನೇ ಬಾರಿಗೆ ಅಂಬಾನಿ ಸಿರಿವಂತ ನಂ 1, ಟಾಪ್ 100 ರಲ್ಲಿ 7 ಕನ್ನಡಿಗರು!
ಮುಕೇಶ್ ಅಂಬಾನಿ
ದಾನ 402 ಕೋಟಿ
ಆಸ್ತಿ- 3,79,440 ಕೋಟಿ
ರಿಲಯನ್ಸ್ ಟೆಲಿಕಾಂ ಸಂಸ್ಥೆಯ ಮುಖ್ಯಸ್ಥರಾಗಿರುವ ಮುಕೇಶ್ ಅಂಬಾನಿ 402 ಕೋಟಿ ರು. ಸಂಪತ್ತನ್ನು ದಾನ ಮಾಡಿ ಭಾರತೀಯ ಉದ್ಯಮಿಗಳ ಪೈಕಿ ಮೂರನೇ ಅತಿ ದೊಡ್ಡ ದಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿ ಆಗರ್ಭ ಶ್ರೀಮಂತ. 1996ರಲ್ಲಿ ಇವರ ತಂದೆ ಧೀರೂಬಾಯಿ ಅಂಬಾನಿ 1996ರಲ್ಲಿ ಸಣ್ಣದೊಂದು ಜವಳಿ ಉದ್ಯಮವನ್ನು ತೆರೆದಿದ್ದರು. ವರ್ಷಗಳು ಉರುಳಿದಂತೆ ಈ ಕಂಪನಿ ತನ್ನ ದಿಕ್ಕನ್ನೇ ಬದಲಾಯಿಸಿ ಟೆಲಿ ಕಮ್ಯುನಿಕೇಶನ್‌ನತ್ತ ಕಣ್ಣು ಹಾಯಿಸಿತು. 2018ರ ಪೋಬ್ಸ್‌ರ್ ಪ್ರಕಟಿಸಿರುವ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕೂಡ ಮುಂಚೂಣಿಯಲ್ಲಿದ್ದರು. ರಿಲಯನ್ಸ್ ಫೌಂಡೇಶನ್ ಮುಖಾಂತರ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಕ್ಷೇತ್ರಗಳಿಗೆ ದಾನ ಮಾಡಿದ್ದಾರೆ. ಕಳೆದ ವರ್ಷ ಕೇರಳದಲ್ಲಿ ಪ್ರವಾಹ ಉಂಟಾದಾಗ ಇವರು 71 ಕೋಟಿ ನಗದು ನೆರವು ನೀಡಿದ್ದರು.
ನಂದನ್ ನಿಲೇಕಣಿ
ದಾನ 204 ಕೋಟಿ
ಆಸ್ತಿ - 13,680 ಕೋಟಿ
ಹೆಸರಾಂತ ಇಸ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಾಗಿರುವ ನಂದನ್ ನಿಲೇಕಣಿ 190 ಕೋಟಿ ಡಾಲರ್ ಒಡೆಯ. ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ 2017ರಲ್ಲಿ ತಮ್ಮ ಆಸ್ತಿಯ ಬಹುಪಾಲನ್ನು ಸಮಾಜದ ಒಳಿತಿಗಾಗಿ ಮೀಸಲಿಡುವ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಮಾಡಿದ್ದಾರೆ. ಅದಲ್ಲದೆ ಪ್ರತಿ ವರ್ಷ ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಿಗೆ ಅಗಾಧ ಪ್ರಮಾಣದ ನೆರವು ನೀಡುತ್ತಿದ್ದಾರೆ. 2014ರಲ್ಲಿ ರಾಜಕೀಯ ಪ್ರವೇಶಿಸಿರುವ ನಂದನ್ ನಿಲೇಕಣಿ ಅದೇ ವರ್ಷ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಅಜಯ್ ಪಿರಾಮಲ್
ದಾನ 200 ಕೋಟಿ
ಆಸ್ತಿ: 18,000 ಕೋಟಿ
ಅಜಯ್ ಪಿರಾಮಲ್ ಅವರು ಪಿರಾಮಲ್ ಉದ್ಯಮ ಸಮೂಹದ ಮುಖ್ಯಸ್ಥರು. ಆರೋಗ್ಯ, ವಿಮೆ, ರಿಯಲ್ ಎಸ್ಟೇಟ್‌ಗಳಲ್ಲಿ ತೊಡಗಿಸಿಕೊಂಡಿರುವ ಈ ಗ್ರೂಪ್ ಪಿರಾಮಲ್ ಫೌಂಡೇಶನ್ ಮುಖಾಂತರ ಸಾಮಾಜಿಕ ಕಾರ‍್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆರೋಗ್ಯ, ಶಿಕ್ಷಣ, ಯುವ ಜನರಿಗೆ ಉದ್ಯೋಗ ಹೀಗೆ ಸಮಾಜಕ್ಕೆ ಬೇಕಾದ ಮೂಲಭೂತ ಸೌಕರ‍್ಯ ಒದಗಿಸುವಲ್ಲಿ ನೆರವು ನೀಡುತ್ತಿದೆ.
ಆದಿ ಗೋದ್ರೇಜ್
ದಾನ 84 ಕೋಟಿ
ಆಸ್ತಿ - 19,440 ಕೋಟಿ
ಗೋದ್ರೇಜ್ ಗ್ರೂಪ್ ಮುಖ್ಯಸ್ಥ ಆದಿ ಗೋದ್ರೇಜ್ ವಲ್ಡ್‌ರ್ ವೈಲ್ಡ್‌ಲೈಫ್ ಫಂಡ್ ಸ್ಥಾಪಿಸಿ ವನ್ಯಜೀವಿಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಹಾಗೆಯೇ ಸಮಾಜೋದ್ಧಾರಕ್ಕೂ ಸಾಕಷ್ಟುನೆರವು ನೀಡುತ್ತಿದ್ದಾರೆ. ಆದಿ ಗೋದ್ರೇಜ್ ಗ್ರೂಪ್‌ನ 25% ಶೇರನ್ನು ಲಾಭರಹಿತ ಟ್ರಸ್ಟ್‌ಗಳಿಗೆ ಮೀಸಲಿಟ್ಟಿದ್ದಾರೆ. ಪರಿಸರ ಸುಸ್ಥಿರತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ದಾನ ಮಾಡುತ್ತಿದ್ದಾರೆ.
ಗೌತಮ್ ಅದಾನಿ 76
ದಾನ ಕೋಟಿ ಕೋಟಿ
ಆಸ್ತಿ- 74,880 ಕೋಟಿ
ಗೌತಮ್ ಅದಾನಿ ಕಾಲೇಜು ತೊರೆದು ಮಹಿಂದ್ರಾ ಬ್ರದರ್ಸ್ ಕಂಪನಿಯಲ್ಲಿ ವಜ್ರದ ಪರೀಕ್ಷಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಇಂದು ಜಗತ್ತಿನಾದ್ಯಂತ ಹೆಸರು ಮಾಡಿರುವ ಅದಾನಿ ಗ್ರೂಪ್‌ನ ಒಡೆಯ. ಸ್ವಂತ ಉದ್ಯಮ ಸ್ಥಾಪಿಸಿ ಹೆಸರು ಮಾಡಿರುವ ಗೌತಮ್ 1996ರಲ್ಲಿ ಅದಾನಿ ಫೌಂಡೇಶನ್ ಸ್ಥಾಪಿಸಿದ್ದಾರೆ. ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಅಹ್ಮದಾಬಾದ್, ಭಂದೇಶ್ವರ್ ಮತ್ತಿತರ ಕಡೆ ಅದಾನಿ ವಿದ್ಯಾಮಂದಿರ ಸ್ಥಾಪಿಸಿದ್ದಾರೆ. ಸುಮಾರು 300 ಸರ್ಕಾರಿ ಶಾಲೆಗಳಿಗೆ ಮತ್ತು 1,00,000 ವಿದ್ಯಾಥಿಗಳಿಗೆ ನೆರವು ನೀಡುತ್ತಿದ್ದಾರೆ.
ಯೂಸುಫ್ ಅಲಿ ಮಾ
ದಾನ 70 ಕೋಟಿ
ಆಸ್ತಿ - 30,240 ಕೋಟಿ
ಯೂಸುಫ್ ಅಲಿ ಮಾ ಭಾರತೀಯ ಮೂಲದ ಯುಎಇ ಉದ್ಯಮಿ. ಲುಲು ಇಂಟರ್‌ನ್ಯಾಷನಲ್ ಗ್ರೂಪ್‌ನ ಸಂಸ್ಥಾಪಕ ಮತ್ತು ಪ್ರಸ್ತುತ ಅದರ ಮುಖ್ಯಸ್ಥರೂ ಆಗಿರುವ ಯೂಸುಫ್ ಅಲಿ ಪದ್ಮಶ್ರೀ ಪುರಸ್ಕೃತರೂ ಹೌದು. 2001ರ ಗುಜರಾತ್ ಭೂಕಂಪ, 2014ರ ಜಮ್ಮು-ಕಾಶ್ಮೀರ ಜಲಪ್ರಳಯ ಮತ್ತಿತರ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಅಗಾಧ ಪ್ರಮಾಣದ ನೆರವು ನೀಡಿದ್ದಾರೆ. ನೇಪಾಳ ಮತ್ತು ಗಾಜಾದಲ್ಲೂ ಶಾಲೆಯನ್ನು ದತ್ತು ಪಡೆದಿದ್ದಾರೆ.
ಶಪೂರ್ ಪಲ್ಲೋಂಜಿ ಮಿಸ್ತ್ರಿ ಮತ್ತು ಸೈರಸ್ ಪಲ್ಲೋಂಜಿ ಮಿಸ್ತ್ರಿ 36 ಕೋಟಿ
ಆಸ್ತಿ - ತಲಾ 960 ಕೋಟಿ
ಶಪೂರ್‌ಜಿ ಮಿಸ್ತ್ರಿ 2003ರಿಂದ ಶಪೂರ್‌ಜಿ ಪಲ್ಲೋಂಜಿ ಗ್ರೂಪ್‌ನ ಮುಖ್ಯಸ್ಥರು. ಸೈರಸ್ 2012-16ರ ವರೆಗೆ ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿದ್ದರು. ಇವರಿಬ್ಬರೂ ಶಿಕ್ಷಣ, ಆರೋಗ್ಯ, ಬಡತನ ನಿವಾರಣೆಗೆ ಸಂಬಂಧಿಸಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಅಭ್ಯಸಿಸುತ್ತಿರುವ ಅರ್ಹ ವಿದಾರ್ಥಿಗಳಿಗೆ ಕಂಪನಿ ವತಿಯಿಂದ ಆರ್ಥಿಕ ನೆರವು ನೀಡಿ ಸಹಕರಿಸುತ್ತಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ದಾನ
ಸಾಮಾಜಿಕ ಒಳಿತಿಗಾಗಿ 5 ಕೋಟಿಗಿಂತ ಹೆಚ್ಚಿನ ದಾನ ಮಾಡಿದವರ ಸಂಖ್ಯೆ ಒಂದು ವರ್ಷದಲ್ಲಿ ದುಪ್ಪಟ್ಟಾಗಿದ್ದು, 38ರಿಂದ 72ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟಾರೆಯಾಗಿ ಸಾಮಾಜಿಕ ಒಳಿತಿಗಾಗಿ ನೀಡಿದ ದಾನದ ಪ್ರಮಾಣವೂ ದುಪ್ಪಟ್ಟಾಗಿದ್ದು, 4,391 ಕೋಟಿ ರು. ತಲುಪಿದೆ ಎಂದು ವರದಿ ತಿಳಿಸಿದೆ. ದಾನಕ್ಕೆ ಶಿಕ್ಷಣ ಅತ್ಯಂತ ಮೆಚ್ಚಿನ ಕ್ಷೇತ್ರವೆನಿಸಿಕೊಂಡಿದೆ. ಬಳಿಕ ಆರೋಗ್ಯ ಸೇವೆಗೆ ಹೆಚ್ಚಿನ ದಾನ ನೀಡಲಾಗಿದೆ.
ಜಗತ್ತಿನ ಟಾಪ್ 10 ದಾನಿಗಳು
ವಾರನ್ ಬಫೆಟ್
ಬಿಲ್‌ಗೇಟ್ಸ್
ಮೈಕೆಲ್ ಬ್ಲೂಮ್‌ಬರ್ಗ್
ಫಿಲ್ ನೈಟ್ ಮತ್ತು ಕುಟುಂಬ
ಮೈಕೆಲ್ ಡೆಲ್
ಕಾರ್ಲ್ಸ್ ಸ್ಲಿಮ್ ಮತ್ತು ಕುಟುಂಬ
ಮಾ ಹುಟೆಂಗ್
ಲಿ ಕಾ-ಶಿಂಗ್
ಹೆ ಕ್ಸಿಯಾನ್ ಜಿಯಾನ್
ಸರ್ಜಿ ಬ್ರಿನ್