ಸಿಂಗ್-ರಾಜನ್ ಕಾಲದಲ್ಲೇ ವಿನಾಶ: ನಿರ್ಮಲಾ ಹೇಳಿಕೆಗೆ ನಡುಗಿತು ಆಕಾಶ!

Published : Oct 16, 2019, 08:54 PM IST
ಸಿಂಗ್-ರಾಜನ್ ಕಾಲದಲ್ಲೇ ವಿನಾಶ: ನಿರ್ಮಲಾ ಹೇಳಿಕೆಗೆ ನಡುಗಿತು ಆಕಾಶ!

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಘುರಾಮ್ ರಾಜನ್ ವಿರುದ್ಧ ನಿರ್ಮಲಾ ಆರೋಪ| ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧೋಗತಿಗೆ ಸಿಂಗ್-ರಾಜನ್ ಕಾರಣ ಎಂದ ನಿರ್ಮಲಾ | ಸಾರ್ವಜನಿಕ ವಲಯದ ದುಸ್ಥಿತಿಗೆ ಸಿಂಗ್-ರಾಜನ್ ನೇರ ಕಾರಣ ಎಂದು ವಿತ್ತ ಸಚಿವೆ| ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಚೈತನ್ಯ ತುಂಬುವುದು ತಮ್ಮ ಆದ್ಯ ಕರ್ತವ್ಯ ಎಂದ ನಿರ್ಮಲಾ| ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದ ಸೀತಾರಾಮನ್| 'ರಾಜನ್​ ಕಾಲದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳಿಗೆ ಫೋನ್​ ಕರೆ ಮೂಲಕ ಸಾಲ ಸಿಗುತ್ತಿತ್ತು'|

ನವದೆಹಲಿ(ಅ.16): ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಹಾಗೂ ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಅವರ ಆಡಳಿತಾವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್​ಗಳು ದುಸ್ಥಿತಿ ತಲುಪಿದ್ದವು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದ ಸಭೆ ಉದ್ದೇಶಿಸಿ ಮಾತನಾಡಿದ ನಿರ್ಮಲಾ, ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಅಧೋಗತಿಗೆ ತಲುಪಲು ಸಿಂಗ್-ರಾಜನ್ ಜೋಡಿಯೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಚೈತನ್ಯ ತುಂಬುವುದು ತಮ್ಮ ಆದ್ಯ ಕರ್ತವ್ಯ ಎಂದಿರುವ ವಿತ್ತ ಸಚಿವೆ, ಈ ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದ್ದಾರೆ.

ರಘುರಾಮ್ ರಾಜನ್​ ಆರ್​ಬಿಐ ಗವರ್ನರ್​ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳಿಗೆ ಒಂದು ಫೋನ್​ ಕರೆ ಮೂಲಕ ಸಾಲ ಸಿಗುತ್ತಿತ್ತು. ಅದರಿಂದ ಉಂಟಾದ ತೊಂದರೆಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ನಿರ್ಮಲಾ ನೇರವಾಗಿಯೇ ಆರೋಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್​ ಪನಗರಿಯಾ, ಪ್ರೊ. ಜಗದೀಶ್​ ಭಾಗ್ವತಿ ಮತ್ತು ನ್ಯೂಯಾರ್ಕ್​ನಲ್ಲಿರುವ ಭಾರತದ ಕೌನ್ಸಿಲ್​ ಜನರಲ್​  ಸಂದೀಪ್​ ಚಕ್ರವರ್ತಿ ಭಾಗವಹಿಸಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Business Idea: ಕಡಿಮೆ ಬಂಡವಾಳ, ಅಧಿಕ ಆದಾಯ.. ಎಂದಿಗೂ ಲಾಸ್‌ ಆಗದ ವ್ಯವಹಾರಗಳಿವು!
Whatsapp ಮೂಲಕವೂ ಗ್ಯಾಸ್​ ಸಿಲಿಂಡರ್​ ಬುಕಿಂಗ್​ಗೆ ಅವಕಾಶ: ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ