ಡೋನಾಲ್ಡ್ ಟ್ರಂಪ್‌ಗೆ ಶಾಕ್ ಕೊಟ್ಟ ಕೋವಿಡ್ ಸ್ಟ್ರಾಟಸ್ ತಳಿ, ಅಮೆರಿಕದಲ್ಲಿ ತೀವ್ರಗೊಂಡ ವೈರಸ್, ದಿನದಿಂದ ದಿನಕ್ಕೆ ಕೋವಿಡ್ ಹೊಸ ತಳಿ ಪ್ರಕರಣ ಹೆಚ್ಚಾಗುತ್ತಿದೆ. ಟ್ರಂಪ್ ತೆರಿಗೆ, ಯುದ್ಧ, ನೋಬೆಲ್ ಪ್ರಶಸ್ತಿ ಜಪ ಮಾಡುತ್ತಿದ್ದಾರೆ. ಸೈಲೆಂಟ್ ಆಗಿ ಟ್ರಂಪ್‌ಗೆ ಕೋವಿಡ್ ಶಾಕ್ ಕೊಟ್ಟಿದೆ.
ವಾಶಿಂಗ್ಟನ್ (ಅ.02) ಭಾರತ ಸೇರಿದಂತೆ ಹಲವು ದೇಶಗಳಿಗೆ ದುಬಾರಿ ತೆರಿಗೆ, ಹೆಚ್1ಬಿ ವೀಸಾ ನೀತಿ ಸೇರಿದಂತೆ ಒಂದರ ಮೇಲೊಂದರಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆದೇಶಗಳ ಜಗತನ್ನೇ ಬೆಚ್ಚಿ ಬೀಳಿಸುತ್ತಿದೆ. ಡೋನಾಲ್ಡ್ ಟ್ರಂಪ್ ಪ್ರಬಲ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹೊಸ ಹೊಸ ರಣಂತ್ರ ಹೂಡುತ್ತಿದ್ದಾರೆ. ಆದರೆ ಜಗತ್ತಿಗೆ ಶಾಕ್ ಕೊಡುತ್ತಿರುವ ಡೋನಾಲ್ಡ್ ಟ್ರಂಪ್‌ಗೆ ಇದೀಗ ಕೋವಿಡ್ ವೈರಸ್ ಶಾಕ್ ಕೊಟ್ಟಿದೆ. ಅಮೆರಿಕದಲ್ಲಿ ಕೋವಿಡ್ ಹೊಸ ತಳಿ ಸ್ಟ್ರಾಟಸ್ ವೈರಸ್ ತೀವ್ರವಾಗಿ ಹರಡುತ್ತಿದೆ.
ಅಮೆರಿಕದ 19 ರಾಜ್ಯದಲ್ಲಿ ಹೈ ಅಲರ್ಟ್
ಅಮೆರಿಕದ ಸೆಂಟರ್ ಫಾರ್ ಡೀಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೇಶ್ಶನ್ (CDC) ಕೋವಿಡ್ ವೈರಸ್ ಅಂಕಿ ಅಂಶ ಪ್ರಕಟಿಸಿದೆ. ಅಮೆರಿಕದಲ್ಲಿ ಕಾಣಿಸಿಕೊಂಡಿರುವುದು ರೂಪಾಂತರಗೊಂಡಿರುವ ಕೋವಿಡ್ ಸ್ಟ್ರಾಟಸ್ ವೈರಸ್. ಇದು ಹೆಚ್ಚಾದಿ ತಾಜ್ಯ ನೀರು ಅಥವಾ ಶುಚಿಯಾಗಿಲ್ಲದ ನೀರಿನಿಂದ ಹರಡುತ್ತಿದೆ ಎಂದಿದೆ. ಅಮರಿಕದ 19 ರಾಜ್ಯದಲ್ಲಿ ಕೋವಿಡ್ ಸ್ಟ್ರಾಟಸ್ ವೈರಲ್ ತೀವ್ರಗೊಂಡಿದೆ ಎಂದು ಸಿಡಿಸಿ ತನ್ನ ವರದಿಯಲ್ಲಿ ಹೇಳಿದೆ.
ಅಮೆರಿಕದಲ್ಲಿ ಕೋವಿಡ್ ಸ್ಟ್ರಾಟಸ್ ವೈರಸ್ ಶೇಕಡಾ 85ರಷ್ಟು ಹೆಚ್ಚಳ
ಅಮೆರಿಕದಲ್ಲಿ ಕೋವಿಡ್ ವೇರಿಯೆಂಟ್ ವೈರಸ್ ಮಾರ್ಚ್ ತಿಂಗಳ ಅಂತ್ಯದಲ್ಲಿ ಶೇಕಡಾ 3ರಷ್ಟಿತ್ತು. ಆದರೆ ಸೆಪ್ಟೆಂಬರ್ 27ರ ಅಂತ್ಯದ ವೇಳೆ ಬರೋಬ್ಬರಿ ಶೇಕಡಾ 85ರಷ್ಟು ಏರಿಕೆ ಕಂಡಿದೆ. ಅಮೆರಿಕದಲ್ಲಿ ಸ್ಟ್ರಾಟಸ್ ಕೋವಿಡ್ ವೇರಿಯೆಂಟ್ ತೀವ್ರಗೊಳ್ಳುತ್ತಿದೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಬಹುತೇಕ ಪ್ರಕರಣಗಳು ಮೈಲ್ಡ್ ಆಗಿದೆ ಎಂದು ಸಿಡಿಸಿ ವರದಿ ಮಾಡಿದೆ. ಆದರೆ ಸ್ಟಾಟಸ್ ವೈರಸ್ ಆರೋಗ್ಯ ಸಮಸ್ಯೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಹೊಸ ಕೋವಿಡ್ ಸ್ಟ್ರಾಟಸ್(XFG) ವೇರಿಯೆಂಟ್
ಸದ್ಯ ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸ್ಟ್ರಾಟಸ್ ವೇರಿಯೆಂಟ್ ಅಥವಾ XFG ತಳಿ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ SARS-CoV-2 ಕೋವಿಡ್ ವೇರಿಯೆಂಟ್ ರೂಪಾಂತರದಿಂದ ಕಾಣಿಸಿಕೊಂಡಿರುವ ವೈರಸ್ ಈ ಸ್ಟ್ರಾಟಸ್. ಎರಡು ಹೈಬ್ರಿಡ್ ಒಮಿಕ್ರಾನ್ ಸಬ್ ವೇರಿಯೆಂಟ್‌ನಿಂದ ಹುಟ್ಟಿಕೊಂಡಿರುವ ಈ ಕೋವಿಡ್ ಸ್ಟ್ರಾಟಸ್(XFG) ವೇರಿಯೆಂಟ್ 2025ರ ಜನವರಿಯಲ್ಲಿ ಸೌತ್ಈಸ್ಟ್ ಏಷ್ಯಾದಲ್ಲಿ ಪತ್ತೆಯಾಗಿತ್ತು. ಆದರೆ ಈ ವೈರಸ್ ಹೆಚ್ಚು ಸದ್ದು ಮಾಡುತ್ತಿರುವುದು ಅಮೆರಿಕದಲ್ಲಿ. ಇದು ಒಮಿಕ್ರಾನ್ ವೇರಿಯೆಂಟ್‌ಗಿಂತ ತೀವ್ರವಾಗಿದೆ. ಹೆಚ್ಚು ಆರೋಗ್ಯ ಸಮಸ್ಯೆ ಸೃಷ್ಟಿಸಲಿದೆ. ಹೀಗಾಗಿ ಮುತುವರ್ಜಿ ವಹಿಸುವಂತೆ ಅಮರಿಕ ಸಿಡಿಸಿ ಕೇಂದ್ರ ಸೂಚಿಸಿದೆ.
