ಅಮೆರಿಕದಲ್ಲಿ ಆಫ್ರಿಕನ್ ಮೂಲದ ಹಿಂದೂ ಪುರೋಹಿತರೊಬ್ಬರು ಸಂಸ್ಕೃತ ಮಂತ್ರಗಳನ್ನು ನಿರರ್ಗಳವಾಗಿ ಪಠಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಸ್ಪಷ್ಟ ಉಚ್ಛಾರಣೆ ಮತ್ತು ಭಕ್ತಿಯಿಂದ ಕೂಡಿದ ಆತನ ಶೈಲಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲವು ಹಿಂದೂ ಧಾರ್ಮಿಕ ಗ್ರಂಥಗಳ ಸಂಸ್ಕೃತ ಭಾಷೆಯಲ್ಲಿರುವ ಮಂತ್ರವನ್ನು ಸ್ವತಃ ಹಿಂದೂಗಳು ಸ್ಪಷ್ಟವಾಗಿ ಉಚ್ಚರಿಸುವುದಕ್ಕೆ ಕಷ್ಟಪಡುತ್ತಾರೆ. ಹೀಗಿರುವಾಗ ಆಫ್ರಿಕನ್ ಪ್ರಜೆಯೊಬ್ಬ ಅಮೆರಿಕಾದಲ್ಲಿ ಪುರೋಹಿತನಾಗಿ ಪೂಜೆ ಮಾಡುತ್ತಾ ಮಂತ್ರೋಚ್ಛಾರಣೆ ಮಾಡುತ್ತಿರುವ ವೀಡಿಯೋವೊಂದು ಭಾರಿ ವೈರಲ್ ಆಗಿದೆ. ಆತನ ಸ್ಪಷ್ಟವಾದ ಉಚ್ಛಾರ ಆತ ಮಂತ್ರವನ್ನು ಹೇಳುವ ರೀತಿ ಅನೇಕರನ್ನು ಅಚ್ಚರಿಗೊಳಿಸಿದೆ. ಸಾಂಸ್ಕೃತಿಕ ಸಮ್ಮಿಲನ ಮತ್ತು ಆಧ್ಯಾತ್ಮಿಕ ಸಮರ್ಪಣೆಯ ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ.
tv1indialive ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಆಫ್ರಿಕನ್ ಪ್ರಜೆ ಹಿಂದೂ ಧರ್ಮವನ್ನು ಸ್ವೀಕರಿಸಿ ತರಬೇತಿ ಪಡೆದ ಹಿಂದೂ ಪುರೋಹಿತನಾಗಿದ್ದು ಅಮೆರಿಕದಲ್ಲಿ ಸಾಂಪ್ರದಾಯಿಕ ಪೂಜೆಗಳನ್ನು ಮಾಡುತ್ತಿದ್ದಾನೆ. ಆತನ ಪ್ರಯಾಣವು ಗಡಿಗಳನ್ನು ಮೀರಿದ ಹಿಂದೂ ಆಧ್ಯಾತ್ಮಿಕತೆಯ ಸಾರ್ವತ್ರಿಕ ಆಕರ್ಷಣೆಯನ್ನು ಪ್ರತಿಬಿಂಬಿಸುತ್ತಿದೆ. ಮತ್ತು ಒಂದು ನಂಬಿಕೆಯು ವೈವಿಧ್ಯಮಯ ಸಂಸ್ಕೃತಿಗಳನ್ನು ಹೇಗೆ ಬೆರೆಸುತ್ತದೆ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮಂಟ್ ಮಾಡಿದ್ದಾರೆ. ಆತನ ಮಂತ್ರೋಚ್ಛಾರಣೆಯ ಸ್ಪಷ್ಟತೆ ನೋಡಿದರೆ ಅದರಲ್ಲಿ ಭಾರತೀಯತೆ ಎದ್ದು ಕಾಣುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದ್ಭುತ... ಅವರ ಉಚ್ಚಾರಣೆಗಳು ಬೆಂಕಿ. ಇದು ಜಾಗತೀಕರಣದ ನಿಜವಾದ ಚೈತನ್ಯ ಮತ್ತು ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯವು ಏನನ್ನು ಪ್ರತಿನಿಧಿಸುತ್ತದೆ ಎಂಬುದರ ನಿಜ ಜೀವನದ ಉದಾಹರಣೆಯಾಗಿದೆ. ಇಂದಿನ ಜಗತ್ತಿನಲ್ಲಿ ನಾವು ಅನುಭವಿಸಬಹುದಾದ ಯಾವುದೇ ಕೌಶಲ್ಯ, ಭಾಷೆ, ಧರ್ಮವನ್ನು ಕಲಿಯುವ ಮತ್ತು ಅಭ್ಯಾಸ ಮಾಡುವ ಸ್ವಾತಂತ್ರ್ಯ. ಅವರಿಗೆ ಧನ್ಯವಾದಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಮತ್ತೊಬ್ಬರು ವಿದೇಶದಲ್ಲಿನ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನು ಸಿಡ್ನಿಯಲ್ಲಿ ನನ್ನ ಸೋದರಳಿಯನ ಮದುವೆಗೆ ಹಾಜರಾಗಿದ್ದೆ. ಅವರು ಅಲ್ಲಿ ಪುರೋಹಿತ ಎಂದು ಕರೆಯುತ್ತಿದ್ದ ವ್ಯಕ್ತಿ ಐರಿಶ್ ಆಗಿದ್ದು, ಅವರು ತಮಿಳುನಾಡಿನ ಶ್ರೀಪೆರುಂಬದೂರ್ ನಲ್ಲಿ ಸಂಸ್ಕೃತ ಪಾಠಗಳನ್ನು ಕಲಿತು ವೇದಭ್ಯಾಸ ಮಾಡಿದ್ದರು ಈ ಸಮಯದಲ್ಲಿ ಅವರ ಜೊತೆಗಿದ್ದವರು ಚಿಕಾಗೋದ ಆಫ್ರಿಕನ್ ಅಮೇರಿಕನ್ ಆಗಿದ್ದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಲಕ್ಷಾಂತರ ವರ್ಷಗಳಿಂದ ಉಳಿದುಕೊಂಡಿರುವ ಈ ಅತ್ಯಂತ ಹಳೆಯ ಜೀವನ ವಿಧಾನವಾದ ಹಿಂದೂ ಧರ್ಮದಲ್ಲಿ ನಿಜವಾದ ಶಾಂತಿ, ಪ್ರೀತಿ ಮತ್ತು ಸಮೃದ್ಧಿ ಇದೆ ಎಂಬುದನ್ನು ಜಗತ್ತು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕು. ಆದರೂ ಕೆಲವು ಆಚರಣೆಗಳನ್ನು ಕೆಲವು ಜನರು ತಮ್ಮ ಅಗತ್ಯಕ್ಕೆ ತಕ್ಕಂತೆ ತಿರುಗಿಸಿದರು. ಆದರೆ ಹಿಂದೂ ಧರ್ಮವು ನಿಜವಾಗಿಯೂ ದಯೆ ಮತ್ತು ಮಾನವೀಯತೆಯೊಂದಿಗೆ ಉತ್ತಮ ಜೀವನ ವಿಧಾನವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಆಫ್ರಿಕನ್ ಪುರೋಹಿತನ ಮಂತ್ರೋಚ್ಛಾರಣೆಗೆ ಹಲವರು ಫಿದಾ ಆಗಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.
