ಪ್ರವಾಹ ಬಂದಾಗ ಜನರು ಭಯಪಡಬೇಕಿಲ್ಲ. ಪ್ರವಾಹ ಶಾಪವಲ್ಲ, ಅದು ದೇಶಕ್ಕೆ ಸಿಕ್ಕಿರುವ ವರ. ನೀರು ಹರಿದು ಬಂದಾಗ ಟ್ಯೂಬ್, ಟ್ಯಾಂಕ್‌ಗಳಲ್ಲಿ ಶೇಖರಿಸಿಟ್ಟರೆ ಪ್ರವಾಹವನ್ನೂ ವರದಾನ ಮಾಡಬಹುದು ಎಂದು ಪಾಕ್ ರಕ್ಷಣಾ ಸಚಿವ ಸಲಹೆ ಭಾರಿ ಟ್ರೋಲ್ ಆಗುತ್ತಿದೆ.
ಇಸ್ಲಾಮಾಬಾದ್ (ಸೆ.02) ಹಲವು ದೇಶಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಭಾರತದ ಹಲವು ರಾಜ್ಯಗಳು ಪ್ರವಾಹಕ್ಕೆ ತತ್ತರಿಸಿದೆ. ಅತ್ತ ಪಾಕಿಸ್ತಾನ ಕೂಡ ಭೀಕರ ಪ್ರವಾಹದಲ್ಲಿ ಸಿಲುಕಿ ತತ್ತರಿಸಿದೆ. ಪಾಕಿಸ್ತಾನದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಕ್ಷಣಾ ಕಾರ್ಯಾಚರಣೆಯೂ ಸರಿಯಾಗಿ ನಡೆಯುತ್ತಿಲ್ಲ, ಇತ್ತ ಪರಿಹಾರವವೂ ಇಲ್ಲ, ಇರುವ ಮನೆ ಹಾಗೂ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಇತ್ತ ಮೂರು ಹೊತ್ತು ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಪುರ್ನವಸತಿಯೂ ಇಲ್ಲದೆ ಜನರು ಕಂಗಲಾಗಿದ್ದಾರೆ. ಹೀಗಾಗಿ ಪಾಕಿಸ್ತಾನದ ಹಲವೆಡೆ ಸರ್ಕಾರದ ವಿರುದ್ದ ಪ್ರತಿಭಟೆಗಳು ನಡೆಯುತ್ತಿದೆ. ಇದರ ನಡುವೆ ಪ್ರವಾಹ ಪರಿಸ್ಥಿತಿ ಎದುರಿಸಲು ಪಾಕಿಸ್ತಾನ ರಕ್ಷಣಾ ಸಚಿವ ಮಹತ್ವದ ಸಲಹೆ ನೀಡಿದ್ದಾರೆ. ಪ್ರವಾಹವನ್ನು ಶಾಪ ಎಂದು ಪರಿಗಣಿಸಿದರೆ ಘೋರ. ಆದರೆ ಪ್ರವಾಹವನ್ನು ವರದಾನ ಎಂದು ಪರಿಗಣಿಸಿದರೆ ಹಲವು ಪ್ರಯೋಜನವಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸೀಫ್ ಹೇಳಿದ್ದಾರೆ.
ಪ್ರವಾಹ ನೀರನ್ನು ಮನೆಗೆ ತೆಗೆದುಕೊಂಡು ಹೋಗಿ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸಂಪೂರ್ಣ ಪ್ರವಾಹಕ್ಕೆ ಸಿಲುಕಿದೆ. 2.4 ಮಿಲಿಯನ್ ಪಾಕಿಸ್ತಾನಿಯರು ಪ್ರವಾಹದಿಂದ ನಲುಗಿದ್ದಾರೆ. ಸಾವಿರಕ್ಕೂ ಹೆಚ್ಚು ಹಳ್ಳಿ ಜಲಾವೃತಗೊಂಡಿದೆ. ಈ ಜನರು ಇದೀಗ ಬದುಕು ಕಟ್ಟಿಕೊಳ್ಳಲು ಆಗದೆ, ಇತ್ತ ಒಂದು ಹೊತ್ತು ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಖವಾಜಾ ಆಸಿಫ್, ಪ್ರವಾಹ ಪರಿಸ್ಥಿತಿ ವಿರುದ್ದ ಪ್ರತಿಭಟನೆ ನಡೆಸುವುದಕ್ಕಿಂತ, ಪ್ರವಾಹ ನೀರನ್ನು ಮನೆಗೆ ತೆಗೆದುಕೊಂಡು ಹೋಗಿ ದೇಶ ಉದ್ಧಾರವಾಗುತ್ತದೆ ಎಂದಿದ್ದಾರೆ.
SCO ಶೃಂಗಸಭೆಯಲ್ಲಿ 3 ರಾಷ್ಟ್ರಕ್ಕೆ ಮೋದಿ 3 ಸಿಗ್ನಲ್:ಟ್ರಂಪ್‌ಗೆ ಸಂದೇಶ, ಚೀನಾ ನೆನಪಿಸಿ ಪಾಕ್‌ಗೆ ಎಚ್ಚರಿಕೆ
ಪ್ರವಾಹ ಬಂದಾಗ ಜನರು ನೀರನ್ನು ಟ್ಯೂಬ್, ಟ್ಯಾಂಕ್ ಸೇರಿದಂತೆ ಇತರ ದೊಡ್ಡ ಕಂಟೈನರ್‌ಗಳಲ್ಲಿ ಶೇಖರಿಸಿಡಬೇಕು. ಇದರಿಂದ ಬೇಸಿಗೆ ಕಾಲದಲ್ಲಿ ಪಾಕಿಸ್ತಾನಕ್ಕೆ ನೀರಿನ ಸಮಸ್ಯೆಯಾಗುವುದಿಲ್ಲ. ಕೃಷಿ, ವ್ಯವಸಾಯಕ್ಕೆ ಈ ನೀರನ್ನು ಉಪಯೋಗಿಸಬಹುದು ಎಂದು ಖವಾಜಾ ಆಸೀಫ್ ಭಾಷಣ ಮಾಡಿದ್ದಾರೆ.
ಹಸಿವಿನಿಂದ ಹೋರಾಡುತ್ತಿರುವವರ ಮುಂದೆ ರಕ್ಷಣಾ ಸಚಿವನ ಉಪದೇಶ
ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಪಾಕಿಸ್ತಾನ ಹೈರಾಣಾಗಿದೆ. ಇದರ ನಡುವೆ ಪಾಕಿಸ್ತಾನ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಜನರು ಮನೆ ಕಳೆದುಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಈ ವೇಳೆ ರಕ್ಷಣಾ ಸಚಿವ ಖವಾಜಾ ಪ್ರವಾಹ ನೀರನ್ನು ಶೇಖರಿಸಿಡಲು ಉಪದೇಶ ಮಾಡಿದ್ದಾರೆ. ಜನರು ಊಟದ ತಟ್ಟೆಯಿಂದ ಹಿಡಿದು ಮನೆಯನ್ನೇ ಕಳೆದುಕೊಂಡಿದದಾರೆ. ಪ್ರವಾಹ ಬಂದಾಗ ಪ್ರಾಣ ಉಳಿಸಿಕೊಳ್ಳಲು ಹಣಗಾಡಿದ್ದಾರೆ. ಹಲವರು ಜಲಸಮಾಧಿಯಾಗಿದ್ದಾರೆ. ಇವರ ಮುಂದೇ ನೀರು ಶೇಖರಿಸಿಡುವ ಸಲಹೆ ನೀಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಆಪರೇಶನ್ ಸಿಂದೂರ್ ವೇಳೆಯೂ ಅಸಂಬದ್ಧ ಹೇಳಿಕೆ ನೀಡಿ ಭಾರತೀಯರ ಆಕ್ರೋಶಕ್ಕೆ ಮಾತ್ರವಲ್ಲ, ಪಾಕಿಸ್ತಾನಿಯರಿಗೂ ಇರಿಸು ಮುರಿಸು ತಂದಿದ್ದರು. ಇದೀಗ ಪ್ರವಾಹ ಪರಿಸ್ಥಿತಿಯನ್ನು ವರ ಎಂದು ಪರಿಗಣಿಸಿ ನೀರು ಶೇಖರಿಸಿಡಲು ಸೂಚಿಸಿದ್ದಾರೆ. ಈ ಮೂಲಕ ಭಾರತ ಸಿಂಧೂ ನದಿ ಒಪ್ಪಂದ ರದ್ದು ಮಾಡಿದರೂ ಪಾಕಿಸ್ತಾನ ನೀರಿಗಾಗಿ ಭಾರತದ ಮುಂದೆ ಕೈಕಾಚುವದು ತಪ್ಪಲಿದೆ ಅನ್ನೋ ದೂರದೃಷ್ಟಿ ಯೋಜನೆ ಕುರಿತು ಪೀಠಿಕೆ ಹಾಕಿದ್ದಾರೆ. ಆದರೆ ಖವಾಜಾ ಆಸಿಫ್ ಉಪದೇಶದಿಂದ ಟ್ರೋಲ್ ಆಗಿದ್ದಾರೆ.
ಏಷ್ಯಾಕಪ್ 2025: ಟೀಂ ಇಂಡಿಯಾ ತಲೆನೋವು ಹೆಚ್ಚಿಸಲು ರೆಡಿಯಾದ ಪಾಕಿಸ್ತಾನದ ನಾಲ್ವರು ಆಟಗಾರರಿವರು!
