ನೇಪಾಳದ ಜೆನ್ ಝೀ ಪ್ರತಿಭಟನಾಕಾರರಲ್ಲಿ ಹೋರಾಟ ಹಲವು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಇವರ ನಡುವೆ ಒಡಕು ಮೂಡಿದೆ. ಇಷ್ಟೇ ಅಲ್ಲ ನೇಪಾಳ ಹಂಗಾಮಿ ಪ್ರಧಾನಿಯಾಗಿ ಸುಶೀಲಾ ಕರ್ಕಿ ಬದಲು ಇದೀಗ ಹೋರಾಟಗಾರರು ಘೀಸಿಂಗ್ ಹೆಸರು ಸೂಚಿಸಿದ್ದಾರೆ. ದಿಢೀರ್ ಬದಲಾವಣೆ ಯಾಕೆ?

ಕಾಠ್ಮಂಡು (ಸೆ.12) : ನೇಪಾಳದಲ್ಲಿ ಪ್ರತಿಭಟನೆ, ಹಿಂಸಾಚಾರಕ್ಕೆ ಸರ್ಕಾರವೇ ಬುಡಮೇಲಾಗಿದೆ. ಜೆನ್ ಝೀ ನಡೆಸಿದ ಹೋರಾಟಕ್ಕೆ ದೇಶ ನಲುಗಿ ಹೋಗಿದೆ. ನಾಯಕರು ಪರಾರಿಯಾಗಿದ್ದಾರೆ, ನಾಯಕರ ಕುಟುಂಬ ಹಲ್ಲೆಗೊಳಗಾಗಿದೆ. ಇದೀಗ ನೇಪಾಳ ಸೇನೆ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಮಧ್ಯಂತರ ಸರ್ಕಾರದ ಕಸರತ್ತು ನಡೆಯುತ್ತಿದೆ. ಹೋರಾಟಗಾರರು ತಾವು ಸೂಚಿಸಿದ ವ್ಯಕ್ತಿ ನೇಪಾಳದ ಮಧ್ಯಂತರ ಮುಖ್ಯಸ್ಥರಾಗಬೇಕು ಎಂದು ಪಟ್ಟು ಹಿಡಿದ್ದಾರೆ. ಈ ಪೈಕಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹೆಸರು ಸೂಚಿಸಲಾಗಿತ್ತು. ಆದರೆ ಇದೀಗ ಇವರ ಹಬದಲು ಹೊಸ ಹೆಸರು ಸೂಚಿಸಿದ್ದಾರೆ.

ಕರ್ಕಿ ಬದಲು ಘೀಸಿಂಗ್ ಯಾಕೆ?

ಬುಧವಾರ ‘ಜೆನ್‌ ಝೀ’ ಯುವಕರು ನ್ಯಾ. ಕರ್ಕಿಯವರನ್ನು ಆಯ್ಕೆ ಮಾಡಿದ್ದರು. ಆದರೆ ಅವರಿಗೆ 73 ವರ್ಷವಾಗಿರುವುದರಿಂದ ಯುವಸಮುದಾಯದ ನೇತೃತ್ವ ವಹಿಸಲು ಸೂಕ್ತ ವ್ಯಕ್ತಿಯಲ್ಲ ಎಂಬ ಕೂಗು ಪ್ರತಿಭಟನಾಕಾರರ ಮಧ್ಯದಿಂದಲೇ ಕೇಳಿಬಂದಿತ್ತು, ಇದರ ಜತೆಗೆ ಜಡ್ಜ್‌ ಆದವರಿಗೆ ಸರ್ಕಾರದ ಮುಖಸ್ಥರಾಗಲು ನೇಪಾಳ ಕಾನೂನು ಅಡ್ಡಿ ಬರುತ್ತದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಮಧ್ಯಂತರ ಸರ್ಕಾರಕ್ಕೆ ಕುಲ್ಮಾನ್ ಘೀಸಿಂಗ್ ಹೆಸರಿಗೆ ಜನರೇಶನ್‌ ಝೀ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ.

ನೇಪಾಳದಲ್ಲಿ ಸಿಲುಕಿರುವ ಬೆಂಗಳೂರಿನ 50ಕ್ಕೂ ಹೆಚ್ಚು ಪ್ರವಾಸಿಗರು!

ಬಲೇನ್ ಶಾ ಹೆಸರು ತಿರಸ್ಕರಿಸಿದ ರಾಷ್ಟ್ರಾಧ್ಯಕ್ಷ

ಇದೇ ವೇಳೆ, ನಾಯಕನ ಆಯ್ಕೆ ಬಗ್ಗೆ ರಾಷ್ಟ್ರಾಧ್ಯಕ್ಷರು ಹಾಗೂ ಸೇನಾ ಮುಖ್ಯಸ್ಥರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಜನ್ ಝೀ ನಾಯಕರ ಅಭಿಪ್ರಾಯವನ್ನೂ ಆಲಿಸಿದ್ದಾರೆ. ಮಧ್ಯಂತರ ಮುಖ್ಯಸ್ಥನ ಆಯ್ಕೆಗೆ ರಾಷ್ಟ್ರಾಧ್ಯಕ್ಷರ ಸಮ್ಮತಿ ಕಡ್ಡಾಯ.

ಇದಕ್ಕೂ ಮೊದಲು ಕರ್ನಾಟಕದಲ್ಲಿ ಎಂಟೆಕ್‌ ಪದವಿ ಗಳಿಸಿದ ಕಾಠ್ಮಂಡು ಮೇಯರ್‌ ಬಲೇನ್‌ ಶಾ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಅವರು ಸಮ್ಮತಿಸದ ಕಾರಣ ಅವರ ಹೆಸರನ್ನು ಕೈಬಿಡಲಾಗಿತ್ತು.

ಘೀಸಿಂಗ್ ಯಾರು?

ನೇಪಾಳದ ವಿದ್ಯುತ್‌ ಕ್ರಾಂತಿ ಹರಿಕಾರ ಘೀಸಿಂಗ್ನೇಪಾಳ ವಿದ್ಯುತ್ ಪ್ರಾಧಿಕಾರದ (ಎನ್‌ಇಎ) ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಘೀಸಿಂಗ್, ದೇಶದ ದೀರ್ಘಕಾಲದ ವಿದ್ಯುತ್ ಕೊರತೆಯನ್ನು ಕೊನೆಗಾಣಿಸಿ ದೇಶಾದ್ಯಂತ ಖ್ಯಾತರಾಗಿದ್ದಾರೆ. 2016ರಲ್ಲಿ ಅವರು ಎನ್‌ಇಎ ಚುಕ್ಕಾಣಿ ಹಿಡಿದಾಗ, ನೇಪಾಳ ದಿನಕ್ಕೆ 18 ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಅನುಭವಿಸುತ್ತಿತ್ತು. ವ್ಯವಹಾರ, ಶಿಕ್ಷಣ ಮತ್ತು ದೈನಂದಿನ ಜೀವನ ಅಸ್ತವ್ಯಸ್ತವಾಗಿತ್ತು. ಈ ಭೀಕರ ಸವಾಲನ್ನು ಎದುರಿಸಿದ ಘಿಸಿಂಗ್, ವಿದ್ಯುತ್ ಕಡಿತವನ್ನು ನಿರ್ಮೂಲನೆ ಮಾಡಿದ್ದಲ್ಲದೆ, ಎನ್‌ಇಎಯನ್ನು ಲಾಭದಾಯಕ ಸಂಸ್ಥೆಯಾಗಿ ಪರಿವರ್ತಿಸಿದರು. ತಮ್ಮ ಶುದ್ಧ ಚಾರಿತ್ರ್ಯದಿಂದ ದೇಶಾದ್ಯಂತ ಮನೆಮಾತಾಗಿದ್ದಾರೆ. ಹೀಗಾಗಿಯೇ ಜನರೇಶನ್ ಝೀ, ಅವರ ಹೆಸರನ್ನು ಆಯ್ಕೆ ಮಾಡಿದೆ.

ಸುಶೀಲಾ ಕರ್ಕಿ ಯಾರು, ಭಾರತ ಜೊತೆಗಿದೆ ಬಾಂಧವ್ಯ

ನೇಪಾಳ ಜನ್‌-ಝೀನಲ್ಲಿ ಒಡಕು: ಸೇನಾ ಕಚೇರಿ ಮುಂದೆ ಘರ್ಷಣೆ

ನೇಪಾಳಿ ಸೇನಾ ಪ್ರಧಾನ ಕಚೇರಿಯ ಹೊರಗೆ ಸತತ ಗುರುವಾರ ಜನರೇಶನ್‌ ಝೀ ಪ್ರತಿಭಟನಾಕಾರರ ನಡುವೆ ಭಿನ್ನಮತ ಭುಗಿಲೆದ್ದಿದ್ದು, 2 ಬಣಗಳು ಕಾದಾಡಿಕೊಂಡಿವೆ. ಮಧ್ಯಂತರ ನಾಯಕನ ಆಯ್ಕೆಯ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಗುರುವಾರ ಮಧ್ಯಾಹ್ನ, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಮತ್ತು ಕಠ್ಮಂಡು ಮೇಯರ್ ಬಾಲೆನ್ ಶಾ ಅವರನ್ನು ಬೆಂಬಲಿಸುವ ಪ್ರತಿಸ್ಪರ್ಧಿ ಬಣಗಳು ಸೇನಾ ಸಂಕೀರ್ಣದ ಹೊರಗೆ ಘರ್ಷಣೆ ನಡೆಸಿ, ಮಧ್ಯಂತರ ಸರ್ಕಾರದ ನೇತೃತ್ವ ಯಾರು ವಹಿಸಿಕೊಳ್ಳಬೇಕು ಎಂದು ವಾಗ್ವಾದ ನಡೆಸಿದದರು. ಒಬ್ಬರಿಗೊಬ್ಬರು ಗುದ್ದಾಡುವ ವಿಡಿಯೋಗಳೂ ವೈರಲ್‌ ಆಗಿವೆ.