ಬಾಲಿವುಡ್ ನಟಿ ಇದ್ದ ವಿಮಾನ ಹೈಜಾಕ್ ಕೇಸ್ ಕರ್ಕಿ ನೇಪಾಳ ಪಿಎಂ ಆಗ್ತಿದ್ದಂಗೆ ಮುನ್ನಲೆಗೆ ಬಂದಿದ್ದೇಕೆ? ಪ್ರಶ್ನೆಗೆ ಇಲ್ಲಿದೆ ಉತ್ತರ. ನೇಪಾಳ ನೂತನ ಪ್ರಧಾನಿಯ ಸುಶೀಲಾ ಕರ್ಕಿಗೂ, ಹೈಜಾಕ್ ಪ್ರಕಣಕ್ಕೂ ಏನು ಸಂಬಂಧ?
ನವದೆಹಲಿ (ಸೆ.13) ನೇಪಾಳದಲ್ಲಿ ಜೆನ್ ಝೀ ನಡೆಸಿದ ಪ್ರತಿಭಟನೆಯಲ್ಲಿ ಸರ್ಕಾರವೇ ಅಸ್ಥಿರಗೊಂಡು ಇದೀಗ ಹೊಸ ಸರ್ಕಾರ ರಚನೆಯಾಗಿದೆ. ಪ್ರತಿಭಟನಕಾರರು ಸೂಚಿಸಿದಂತೆ ನೇಪಾಳ ನಿವೃತ್ತಿ ನ್ಯಾಯಮೂರ್ತಿ ಸುಶೀಲಾ ಕರ್ಕಿ ಪ್ರಧಾನಿಯಾಗಿದ್ದಾರೆ. ಸುಶೀಲಾ ಕರ್ಕಿ ನೇಪಾಳ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ, ಇದೀಗ ನೇಪಾಳದ ಮೊದಲ ಮಹಿಳಾ ಪ್ರಧಾನಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ ಸುಶೀಲಾ ಕರ್ಕಿ ನೇಪಾಳದ ಪ್ರಧಾನಿಯಾಗುತ್ತಿದ್ದಂತೆ ಬಾಲಿವುಡ್ ನಟಿ ಇದ್ದ ವಿಮಾನ ಹೈಜಾಕ್ ಪ್ರಕರಣ ಸದ್ದು ಮಾಡುತ್ತಿದೆ.
ವಿಮಾನ ಹೈಜಾಕ್‌ಗೂ ಸುಶೀಲಾ ಕರ್ಕಿಗೂ ಸಂಬಂಧವೇನು?
ಸುಶೀಲಾ ಕರ್ಕಿ ಪತಿ ದುರ್ಗಾ ಪ್ರಸಾದ್ ಸುಬೇದಿ. ನೇಪಾಳ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ. ಸರಿಸುಮಾರು 50 ವರ್ಷಗಳ ಹಿಂದೆ ಅಂದರೆ ಜೂನ್ 10, 1973ರಲ್ಲಿ ಇದೇ ದುರ್ಗಾ ಪ್ರಸಾದ್ ಸುಬೇದಿ ನೇಪಾಳ ಕಾಂಗ್ರೆಸ್ ಪಕ್ಷದ ಯುವ ನಾಯಕನಾಗಿದ್ದರು. ಈ ವೇಳೆ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದ ಗಿರಿಜಾ ಪ್ರಸಾದ್ ಕೊಯಿರಾಲ ಜೊತೆ ಸೇರಿಕೊಂಡು ವಿಮಾನ ಹೈಜಾಕ್ ಮಾಡಿದ್ದರು. ಇದೇ ಗಿರಿಜಾ ಪ್ರಸಾದ್ ಕೊಯಿಲಾರ ಬಳಿಕ ನಾಲ್ಕು ಬಾರಿ ನೇಪಾಳ ಪ್ರಧಾನಿಯಾಗಿದ್ದಾರೆ. ಇತ್ತ ದುರ್ಗಾಪ್ರಸಾದ್ ಸುಬೇದಿ, ಸುಶೀಲಾ ಕರ್ಕಿ ಮದುವೆಯಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಹೊತ್ತಿ ಉರಿದ ನೇಪಾಳದಲ್ಲಿ ಪ್ರಧಾನಿಯಾದ ಸುಶೀಲಾ ಕರ್ಕಿ ಯಾರು, ಭಾರತದ ಜೊತೆಗಿದೆ ಸಂಬಂಧ
ವಿಮಾನ ಹೈಜಾಕ್ ಪ್ರಕರಣ
ನೇಪಾಳದಲ್ಲಿ ರಾಜರ ಆಡಳಿತವಿತ್ತು. ರಾಜರ ಆಡಳಿತ ಕೊನೆಗಾಣಿಸಬೇಕು ಎಂದು ನೇಪಾಲ ಕಾಂಗ್ರೆಸ್ ಹೋರಾಟ ಶುರುಮಾಡಿತ್ತು. ಆದರೆ ಜನರು ರಾಜ ಆಡಳಿತದ ಮೇಲೆ ವಿಶ್ವಾಸವಿಟ್ಟಿದ್ದರು. ಹೀಗಾಗಿ ನೇಪಾಳ ಕಾಂಗ್ರೆಸ್ ಹೋರಾಟಕ್ಕೆ ಹಿನ್ನಡೆಯಾಗಿತ್ತು. ಹೀಗಾಗಿ ನೇಪಾಳ ಕಾಂಗ್ರೆಸ್ ಕೆಲ ನಾಯಕರು ಪ್ರಮುಖವಾಗಿ ಗಿರಿಜಾ ಪ್ರಸಾದ್ ಕೊಯಿರಾಲ, ಯುವ ನಾಯಕ ದುರ್ಗಾ ಪ್ರಸಾದ್ ಸುಬೇದಿ ಸೇರಿದ ಗುಂಪು ರಾಜ ಮಹೇಂದ್ರ ವಿರುದ್ದ ಶಸಸ್ತ್ರ ಹೋರಾಟಕ್ಕೆ ಮುಂದಾಗಿತ್ತು. ಇದಕ್ಕಾಗಿ ಹಣದ ಅವಶ್ಯಕತೆ ಇತ್ತು.ಹಣ ಒಗ್ಗೂಡಿಸಲು ವಿಮಾನ ಹೈಜಾಕ್ ಪ್ಲಾನ್ ಮಾಡಿದ್ದರು.
ವಿಮಾನದಲ್ಲಿದ್ದ ಬಾಲಿವುಡ್ ನಟಿ
ವಿಮಾನ ಹೈಜಾಕ್ ಮಾಡಲು ದುರ್ಗಾ ಪ್ರಸಾದ್ ಸುಬೇದಿ, ಗಿರಿಜಾ ಪ್ರಸಾದ್ ಕೊಯಿರಾಲ ಸೇರಿದಂತೆ ತಂಡ ಸಜ್ಜಾಗಿತ್ತು. ನೇಪಾಳ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಬಿರತ್‌ನಗರದಿಂದ ಕಾಠ್ಮಂಡುಗೆ ಹೊರಟ ವಿಮಾನ ಹೈಜಾಕ್ ಮಾಡಿ ಭಾರತದ ಬಿಹಾರದ ಫೊರ್ಬೆಸ್‌ಗಂಜ್‌ನಲ್ಲಿ ಇಳಿಸಲಾಗಿತ್ತು. ಈ ವಿಮಾನದಲ್ಲಿ 60 ಹಾಗೂ 70ರ ದಶಕದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದ ಮಾಲಾ ಸಿನ್ಹ ಇದ್ದರು.
ಪೈಲೆಟ್‌ಗೆ ಪಿಸ್ತೂಲ್ ತೋರಿಸಿ ವಿಮಾನ ಹೈಜಾಕ್ ಮಾಡಲಾಗಿತ್ತು. ಬಳಿಕ $400,000 ಹಣಕ್ಕೆ ಬೇಡಿಕೆ ಇಡಲಾಗಿತ್ತು. ರಾಜರ ಆಡಳಿತ ಅಂತ್ಯಗೊಳಿಸಲು ನೇಪಾಳ ರಾಜ ಆಡಳಿತ ವಿರುದ್ದ ಶಸಸ್ತ್ರ ಹೋರಾಟದ ರೂಪುರೇಶೆಗೆ ಈ ಹಣ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಅಪಹರರಣದಲ್ಲಿ ಪ್ರಯಾಣಿಕರು, ಸಿಬ್ಬಂದಿಗಳಿಗೆ ಯಾವುದೇ ಹಾನಿಯಾಗಿರಲಿಲ್ಲ. ಹೈಜಾಕ್ ಮಾಡಿದವರ ಉದ್ದೇಶ ಹಣವಾಗಿತ್ತು. ಈ ಗ್ಯಾಂಗ್‌ನಲ್ಲನ ನೇಪಾಳ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಕೂಡ ಇದ್ದರು. ನೇಪಾಳದಲ್ಲಿ ರಾಜರ ಆಡಳಿತ ಅಂತ್ಯಗೊಳಿಸಲು ಈ ರೀತಿ ಪ್ರಯತ್ನ ನಡೆಸಲಾಗಿತ್ತು. ನೇಪಾಳ ಸರ್ಕಾರ ಕೇಳಿದ ಹಣ ನೀಡಿ ಪ್ರಯಾಣಿಕರನ್ನು ಬಿಡಿಸಲಾಗಿತ್ತು.
Nepal ಜೆನ್ ಝೀ ನಡುವೆ ಒಡಕು, ಸೇನಾ ಕಚೇರಿ ಮುಂದೆ ಘರ್ಷಣೆ
ಹೈಜಾಕ್ ಮಾಡಿದ ವರ್ಷದಲ್ಲೇ ಆರೋಪಿಗಳು ಅರೆಸ್ಟ್
ಬಿಹಾರದಲ್ಲಿ ವಿಮಾನ ಇಳಿಸಿದ ಕಾರಣ ಈ ಪ್ರಕರಣವನ್ನು ಭಾರತ ಕೂಡ ತನಿಖೆ ಮಾಡಿತ್ತು. ಬಳಿಕ ಅದೇ ವರ್ಷದಲ್ಲಿ ಹಲವು ಆರೋಪಿಗಳನ್ನು ಭಾರತ ಬಂಧಿಸಿತ್ತು. ನೂತನ ಪ್ರಧಾನಿಯಾಗಿರುವ ಸುಶೀಲಾ ಕರ್ಕಿ ಪತಿ ದುರ್ಗಾ ಪ್ರಸಾದ್ ಸುಬೇದಿ ಸೇರಿದಂತೆ ಇತರ ಆರೋಪಿಗಳು ಎರಡು ವರ್ಷ ಭಾರತದ ಜೈಲಿನಲ್ಲಿ ಕಳೆಯಬೇಕಾಯಿತು.
