2024ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಪರಾಜಿತರಾಗಿದ್ದ ಅಂದಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ‘ನಾನಿನ್ನು ರಾಜಕೀಯ ಜೀವನ ಮುಗಿಸಿಲ್ಲ. 2028ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದ್ದಾರೆ.
ವಾಷಿಂಗ್ಟನ್: 2024ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಪರಾಜಿತರಾಗಿದ್ದ ಅಂದಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ‘ನಾನಿನ್ನು ರಾಜಕೀಯ ಜೀವನ ಮುಗಿಸಿಲ್ಲ. 2028ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದ್ದಾರೆ. ಬಿಬಿಸಿ ಜತೆ ಸಂದರ್ಶನದಲ್ಲಿ ಮಾತನಾಡಿದ ಕಮಲಾ, ‘ನನ್ನ ಜೀವನವನ್ನೇ ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದೇನೆ. ನನ್ನ ಮೂಳೆ ತುಂಬಾ ಸೇವೆಯೇ ತುಂಬಿದೆ. ನನ್ನ ಮೊಮ್ಮಕ್ಕಳು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಸಹ ಮಹಿಳಾ ಅಧ್ಯಕ್ಷರನ್ನು ನೋಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದರು. ಅದು ನೀವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲಾ, ‘ಇದ್ದರೂ ಇರಬಹುದು’ ಎಂದು ಹೇಳಿದರು.
ಭಾರತದ ಸಂಬಂಧ ಬಲಿಗೊಟ್ಟು ಪಾಕ್ ಜತೆ ಸ್ನೇಹವಿಲ್ಲ: ಅಮೆರಿಕ
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರವಾಗಿ ಭಾರತ-ಅಮೆರಿಕ ಸಂಬಂಧ ಹಳಸುತ್ತಿರುವುದು ಮತ್ತು ಪಾಕಿಸ್ತಾನ ಅಮೆರಿಕಕ್ಕೆ ಹತ್ತಿರವಾಗಲು ಯತ್ನಿಸುತ್ತಿರುವ ನಡುವೆಯೇ ‘ಭಾರತದೊಂದಿಗಿನ ಸಂಬಂಧವನ್ನು ಬಲಿಗೊಟ್ಟು ಪಾಕಿಸ್ತಾನದ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಶನಿವಾರ ಹೇಳಿಕೆ ಹೇಳಿದ್ದಾರೆ.
ಭಾರತೀಯರು ತುಂಬಾ ಪ್ರಬುದ್ಧರು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುಬಿಯೋ, ‘ರಾಜತಾಂತ್ರಿಕತೆ ಮತ್ತು ಆ ರೀತಿಯ ವಿಷಯಗಳಿಗೆ ಬಂದಾಗ ಭಾರತೀಯರು ತುಂಬಾ ಪ್ರಬುದ್ಧರು. ಪಾಕಿಸ್ತಾನ ಭಾರತದೊಂದಿಗೆ ಹೊಂದಿರುವ ಸವಾಲುಗಳ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ ಉಗ್ರನಿಗ್ರಹದ ರೀತಿಯ ವಿಷಯಗಳಲ್ಲಿ ಪಾಕಿಸ್ತಾನದೊಂದಿಗೆ ಸಹಭಾಗಿತ್ವ ಹೊಂದಿರುವ ದೀರ್ಘ ಇತಿಹಾಸವನ್ನು ನಾವು ಹೊಂದಿದ್ದೇವೆ. ಸಾಧ್ಯವಾದರೆ, ಅದನ್ನು ಮೀರಿ ನಮ್ಮ ಸಂಬಂಧವನ್ನು ವಿಸ್ತರಿಸಲು ಬಯಸುತ್ತೇವೆ. ಆದರೆ ನಾವು ಪಾಕಿಸ್ತಾನದೊಂದಿಗೆ ಮಾಡುತ್ತಿರುವ ಯಾವುದೇ ಕೆಲಸವು ಭಾರತದೊಂದಿಗಿನ ನಮ್ಮ ಆಳವಾದ ಮತ್ತು ಐತಿಹಾಸಿಕವಾದ ಸಂಬಂಧ ಅಥವಾ ಸ್ನೇಹವನ್ನು ಹಾಳುಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ’ ಎಂದಿದ್ದಾರೆ.
