ಭಾರತ ಸರ್ಕಾರವು ಅಮೆರಿಕಗೆ ಹೋಗುವ ಎಲ್ಲಾ ರೀತಿಯ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿದೆ. ಅಮೆರಿಕ ಸರ್ಕಾರದ ಹೊಸ ತೆರಿಗೆ ನೀತಿಯ ಕುರಿತು ಗೊಂದಲಗಳು ಇನ್ನೂ ಬಗೆಹರಿಯದ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ನವದೆಹಲಿ: ಭಾರತ ಸರ್ಕಾರವು ಅಮೆರಿಕಗೆ ಹೋಗುವ ಎಲ್ಲಾ ರೀತಿಯ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿದೆ. ಅಮೆರಿಕ ಸರ್ಕಾರದ ಹೊಸ ತೆರಿಗೆ ನೀತಿಯ ಕುರಿತು ಗೊಂದಲಗಳು ಇನ್ನೂ ಬಗೆಹರಿಯದ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇದಕ್ಕೂ ಮೊದಲು 8500 ರು.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳ ಸ್ವೀಕಾರ ಸ್ಥಗಿತಗೊಳಿಸಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ, ‘ಅಮೆರಿಕಕ್ಕೆ ಕಳುಹಿಸಲಾಗುವ ಪತ್ರಗಳು, ದಾಖಲೆಗಳು, 8500 ರು. ಮೌಲ್ಯದ ವರೆಗಿನ ಉಡುಗೊರೆ ವಸ್ತುಗಳು ಸೇರಿದಂತೆ ಎಲ್ಲಾ ವರ್ಗದ ಮೇಲ್‌ಗಳ ಬುಕಿಂಗ್‌ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿದೆ.

ಪೆಪ್ಸಿಯಿಂದ ಮ್ಯಾಕ್‌ಡೋನಲ್ಡ್‌ವರೆಗೆ: ಟ್ರಂಪ್ ತೆರಿಗೆಯಿಂದಾಗಿ ಅಮೆರಿಕನ್ ಕಂಪನಿಗಳಿಗೆ ಭಾರತೀಯರ ಸ್ವದೇಶಿ ಬಿಸಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೇರಿರುವ ಶೇ.50ರಷ್ಟು ತೆರಿಗೆಯಿಂದಾಗಿ ಈಗ ಭಾರತದಲ್ಲಿರುವ ಅಮೆರಿಕನ್ ಕಂಪನಿಗಲಿಗೆ ಸಂಕಷ್ಟ ಎದುರಾಗಿದೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್‌ಸಿ, ಮ್ಯಾಕ್‌ಡೋನಾಲ್ಡ್ ಈಗ ದೇಶದಲ್ಲಿ ಬಹಿಷ್ಕಾರದ ಬಿಸಿ ಎದುರಿಸುತ್ತಿವೆ.

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಕ್ಷಿಣ ಏಷ್ಯಾ ರಾಷ್ಟ್ರವಾದ ಭಾರತಕ್ಕೆ ಶೇ.50 ರಷ್ಟು ತೆರಿಗೆ ವಿಧಿಸಿದಾಗಿನಿಂದ ಅಮೆರಿಕ ವಿರೋಧಿ ಅಲೆ ಭಾರತದಲ್ಲಿ ಆವರಿಸಿದೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದಕ್ಕೆ ಅಸಮಾಧಾನಗೊಂಡಿರುವ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ದುಬಾರಿ ಶೇ.50ರಷ್ಟು ತೆರಿಗೆ ಹೇರಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಎನಿಸಿದೆ.

ಇದರ ಪರಿಣಾಮವಾಗಿ ಅಮೆರಿಕನ್ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲಾ, ಸಬ್‌ವೇ, ಕೆಎಫ್‌ಸಿ, ಮೆಕ್‌ಡೊನಾಲ್ಡ್ಸ್‌ನಂತಹ ಅಮೇರಿಕನ್ ಬಹುರಾಷ್ಟ್ರೀಯ ಕಂಪನಿಗಳು ಬಹಿಷ್ಕಾರದ ಬೆದರಿಕೆಯನ್ನು ಎದುರಿಸುತ್ತಿವೆ. ಭಾರತದ ಮೇಲೆ ಟ್ರಂಪ್ ವಿಧಿಸಿರುವ ಸುಂಕವನ್ನು ಖಂಡಿಸಿರುವ ಯೋಗ ಗುರು ಬಾಬಾ ರಾಮ್‌ದೇವ್ ಭಾರತೀಯರು ಅಮೆರಿಕದ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಲಹೆ ನೀಡಿದ್ದಾರೆ.

'ಪೆಪ್ಸಿ, ಕೋಕಾ-ಕೋಲಾ, ಸಬ್‌ವೇ, ಕೆಎಫ್‌ಸಿ ಅಥವಾ ಮೆಕ್‌ಡೊನಾಲ್ಡ್ಸ್ ಕೌಂಟರ್‌ಗಳಲ್ಲಿ ಒಬ್ಬ ಭಾರತೀಯನೂ ಕಾಣಿಸಬಾರದು. ಇಷ್ಟೊಂದು ಬೃಹತ್ ಬಹಿಷ್ಕಾರ ನಡೆಯಬೇಕು. ಈ ರೀತಿ ಆದರೆ ಅಮೆರಿಕಾಗೆ ತನ್ನ ಎಡವಟ್ಟಿನ ಅರಿವಾಗುತ್ತದೆ. ಅಲ್ಲು ಸಮಸ್ಯೆ ಆಗುತ್ತದೆ ಎಂದು ಅವರು ಸ್ವದೇಶಿ ಅಭಿಯಾನಕ್ಕೆ ಕರೆ ನೀಡಿದ್ದಾರೆ