ಸದ್ಯ ವಿವಾಹದ ವಿಡಿಯೋವೊಂದು ವೈರಲ್ ಆಗಿದ್ದು, ವರನು ವಧುವನ್ನು ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾನೆ. ಆದರೆ ಇದಾದ ನಂತರ…
ಮದುವೆ ಮಂಟಪ, ಸಭಾಂಗಣ ಅಂದ್ರೆ ನಮ್ಮೆಲ್ಲರಿಗೂ ನೆನಪಾಗುವ ದೃಶ್ಯ..ಸಂತೋಷದಿಂದ ಓಡಾಡುವ ಜನರು, ಕುಣಿದಾಡುವ ಮಕ್ಕಳು, ಮೇಕಪ್‌ನಲ್ಲೇ ಕಾಲಕಳೆಯುವ ಹೆಂಗಳೆಯರು, ಕಾಲೆಳೆಯುವ ಹುಡುಗರು...ಇದನ್ನೆಲ್ಲಾ ಹೇಳುವುದಕ್ಕಿಂತ, ಬರೆಯುವುದಕ್ಕಿಂತ ಅನುಭವಿಸಿದರೆ ಚೆನ್ನ. ವಿಶೇಷವಾಗಿ ವಧು ವರರಿಗೆ ಇಲ್ಲಿ ಪ್ರತಿ ಕ್ಷಣವೂ ವಿಶೇಷ ಮತ್ತು ಸ್ಮರಣೀಯ. ಆದರೆ ಇಲ್ಲೊಂದು ಮದುವೆಯ ವಿಡಿಯೋ ವೈರಲ್ ಆಗಿದೆ. ಅದನ್ನ ನೋಡಿದ್ರೆ ನಿಮಗೇನು ಅನ್ಸತ್ತೆ ಅನ್ನೋದನ್ನ ನಮಗೆ ಕಾಮೆಂಟ್ ಸೆಕ್ಷನ್‌ನಲ್ಲಿ ತಿಳಿಸಿ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಲೆಕ್ಕವಿಲ್ಲದಷ್ಟು ಮದುವೆ ವಿಡಿಯೋಗಳು ವೈರಲ್ ಆಗುತ್ತಿರುವುದು ಗಮನಿಸಬೇಕಾದ ಸಂಗತಿ. ಅಲ್ಲಿ ಕೆಲವೊಮ್ಮೆ ವಧು-ವರರ ನೃತ್ಯ, ಮತ್ತೆ ಕೆಲವೊಮ್ಮೆ ಬೀಳ್ಕೊಡುಗೆ, ಹಳದಿ, ಸಂಗೀತ ಸಮಾರಂಭದಲ್ಲಿ ನಡೆಯುವಂತಹ ಘಟನೆಗಳು ಚರ್ಚೆಯ ವಿಷಯವಾಗುತ್ತವೆ.
ಸದ್ಯ ವಧು-ವರರ ವಿವಾಹದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಇಬ್ಬರೂ ಒಟ್ಟಿಗೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ವರನು ತನ್ನ ವಧುವನ್ನು ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾನೆ. ಆದರೆ ಇದಾದ ನಂತರ ಪರಿಸ್ಥಿತಿ ಹೇಗಿತ್ತೆಂದರೆ ಈಗ ಆ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ವರನ ಜೊತೆ ಕೆಳಗೆ ಬಿದ್ದ ವಧು
ವಿಡಿಯೋದಲ್ಲಿ ತೋರಿಸಿರುವಂತೆ ವಧು ಕೆಂಪು ಬಣ್ಣದ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ವರನು ಸಂಪೂರ್ಣ ಕಪ್ಪು ಬಣ್ಣದ ಶೇರ್ವಾನಿಯಲ್ಲಿದ್ದಾನೆ. ಈ ಸಮಯದಲ್ಲಿ ವರನು ವಧುವನ್ನು ಎತ್ತಿಕೊಂಡು ಹೋಗುತ್ತಿರುತ್ತಾನೆ. ಬಹುಶಃ ಅವನಿಗೆ ವಧುವಿನ ಭಾರದ ಲೆಹೆಂಗಾ ಜೊತೆಗೆ ಅವಳ ತೂಕವನ್ನು ಅಂದಾಜು ಮಾಡಲು ಸಾಧ್ಯವಾಗದಿರಬಹುದು. ಆರಂಭದಲ್ಲಿ ವರನು ವಧುವನ್ನು ಎತ್ತಿಕೊಂಡು ಎರಡು-ಮೂರು ಮೆಟ್ಟಿಲುಗಳನ್ನು ಹತ್ತಲು ಪ್ರಯತ್ನಿಸುತ್ತಾನೆ. ಆದರೆ ನಂತರ ಅವನ ಸ್ಥಿತಿ ...ಕೊನೆಗೆ ಅವನು ಅವಳೊಂದಿಗೆ ಕೆಳಗೆ ಬೀಳುತ್ತಾನೆ.
ಜನರಿಗೆ ಇಷ್ಟ ಆಯ್ತು ಈ ವಿಡಿಯೋ
ಈ ವಿಡಿಯೋವನ್ನು @chinmoy_sutradhar_ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಲಾಗಿದ್ದು, ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯುವತಿಗೆ ಟಿಸಿ ಮೇಲೆ ಕ್ರಶ್ ಆದ ವಿಡಿಯೋವಿದು!
ಕೆಲವು ದಿನಗಳ ಹಿಂದೆಯಷ್ಟೇ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಆಕೆಗೆ ಟಿಸಿ ಮೇಲೆಯೇ ಕ್ರಶ್ ಆಗಿದೆ. ಯಾವ ಲೆವೆಲ್‌ಗೆ ಅಂದರೆ ಆಕೆ ಕದ್ದು ಮುಚ್ಚಿ ಟಿಸಿ ವಿಡಿಯೋ ಮಾಡಿದ್ದಲ್ಲದೆ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದಲ್ಲದೆ, ಜನರು ಇದೀಗ ಈ ಹ್ಯಾಂಡ್‌ಸಂ ಟಿಕೆಟ್ ಕಲೆಕ್ಟರ್ ಅನ್ನ ಹುಡುಕಲು ಪ್ರಾರಂಭಿಸಿದ್ದಾರೆ.
ಕದ್ದು ಮುಚ್ಚಿ ವಿಡಿಯೋ ಮಾಡಿದ ಯುವತಿ
ಗಡ್ಡಧಾರಿ ಟಿಕೆಟ್ ಕಲೆಕ್ಟರ್ (ಟಿಸಿ) ರೈಲಿನ ಎಸಿ ವಿಭಾಗದಲ್ಲಿ ಬಹುಶಃ ವಂದೇ ಭಾರತ್ ಕೋಚ್ ಅನ್ಸುತ್ತೆ. ಟಿಕೆಟ್ ಪರಿಶೀಲಿಸುತ್ತಿರುವುದು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಒಂದು ಸಣ್ಣ ರೀಲ್ಸ್ ಆಗಿದೆ. ಅಂದಹಾಗೆ ಕ್ಲಿಪ್ ನೋಡಿದಾಗ ಟಿಸಿ ರೈಲಿನೊಳಗೆ ನಡೆದುಕೊಂಡು ಹೋಗುತ್ತಿರುವಾಗ ಟಿಕೆಟ್‌ಗಳನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಅವನ ಮುಂದೆ ಕುಳಿತಿದ್ದಾಳೆ. ಸುಂದರ ಟಿಸಿ ತನ್ನ ಕೆಲಸದಲ್ಲಿ ಮಗ್ನನಾಗಿ ಕಾಣುತ್ತಾರೆ. ಅವರನ್ನು ನೋಡಿದೊಡನೆ ಕಂಪಾರ್ಟ್‌ಮೆಂಟ್‌ನಲ್ಲಿರುವ ಅನೇಕ ಹೆಣ್ಮಕ್ಕಳ ಹೃದಯಗಳು ವೇಗವಾಗಿ ಬಡಿಯುತ್ತಿರುವಂತೆ ಕಾಣುತ್ತಿದೆ. ವಿಡಿಯೋ ಶೇರ್ ಮಾಡಿರುವ ಯುವತಿ, "ನಾನು ಇನ್ಮೇಲೆ ದಿನಾ ರೈಲಿನಲ್ಲಿ ಓಡಾಡ್ತೀನಿ " ಎಂದು ಕ್ಯಾಪ್ಷನ್ ಕೊಟ್ಟಿದ್ದಾಳೆ. ವಿಡಿಯೋದ ಹಿನ್ನೆಲೆಯಲ್ಲಿ 'ಕಮಾಂಡೋ 3' ಚಿತ್ರದ ಅರಿಜಿತ್ ಸಿಂಗ್‌ರ "ಅಖಿಯಾನ್ ಮಿಲವಂಗಾ" ಹಾಡು ಪ್ಲೇ ಆಗುತ್ತಿರುವುದನ್ನು ಕಾಣಬಹುದು.