ಈ ವಿಡಿಯೋ ತಮಾಷೆ ಎನ್ನಿಸಿದರೂ ಹಲವಾರು ವಾಸ್ತವ ಸಂಗತಿಗಳನ್ನು ಹೇಳುವಂತಿದೆ. 'ಕಳೆದ ಜನರೇಶನ್‌'ವರೆಗೂ ಇಂತಹ ಘಟನೆಗಳು ಹಳ್ಳಿಗಳಲ್ಲಿ ನಡೆಯುತ್ತಿದ್ದವು. ಅಂತಹ ಘಟನೆಗಳು ತೀರಾ ಹೊಸದೇನೂ ಅಲ್ಲ ಎಂಬುದನ್ನು ಹಲವರು ಕಣ್ಣೆದುರಿನ ಅನುಭವ ಎಂಬಂತೆಯೂ ನೋಡಿದ್ದಾರೆ.

ಹುಡುಗಿ ಅಮ್ಮ ತುಂಬಾ ಆತಂಕದಿಂದ ಮಗಳನ್ನು ರೆಡಿ ಮಾಡುತ್ತಿದ್ದಾಳೆ!

ಅದೊಂದು ರೀಲ್ಸ್ (Reels) ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಸದ್ದು ಮಾಡ್ತಿದೆ. ಒಬ್ಬರ ಹುಡುಗ ಹುಡುಗಿ ನೋಡಲು ಇನ್ನೊಬ್ಬನನ್ನು ಕರೆದುಕೊಂಡು ಒಂದು ಮನೆಗೆ ಹೋಗುತ್ತಾನೆ. ಅಲ್ಲಿ ಹುಡುಗಿ ಅಮ್ಮ ತುಂಬಾ ಆತಂಕದಿಂದ ಮಗಳನ್ನು ರೆಡಿ ಮಾಡುತ್ತಿದ್ದು, ತನ್ನ ಮಗಳಿಗೆ ಹಾಗೆ ಮಾಡು ಹೀಗೆ ಇರು ಎಂದು ಉಪದೇಶ ಮಾಡುತ್ತಾಳೆ. ಅಷ್ಟರಲ್ಲಿ ಒಬ್ಬ ಹುಡುಗ ಆ ಮದುವೆಯಾಗಲಿರುವ ಹುಡುಗನನ್ನು ಕರೆದುಕೊಂಡು ಬರುತ್ತಾನೆ.

ಮನೆಯೊಳಕ್ಕೆ ಬಂದ ಹುಡುಗ, ಅಂದರೆ ಮದುವೆ ಆಗಲಿರುವ ಗಂಡು ಇನ್ನೊಬ್ಬನ ಬಳಿ ಕಿವಿಯಲ್ಲಿ 'ಹುಡುಗಿ ದಪ್ಪವಾಗಿದ್ದಾಳೆ' ಅಂತಾನೆ. ಕರೆದುಕೊಂಡ ಬಂದ ವ್ಯಕ್ತಿ 'ಈಗ ಸಮ್ನೆ ಕುಳಿತಿದ್ರೆ ಸರಇ' ಅಂತಾನೆ. ಅಷ್ಟರಲ್ಲಿ ಹುಡುಗಿಯ ಎಂಟ್ರಿ ಆಗುತ್ತದೆ. ಹುಡುಗಿ ಟೀನೋ ಕಾಫಿನೋ ಕೊಟ್ಟು, ಪಕ್ಕದಲ್ಲಿ ನಿಂತು ಹುಡುಗನನ್ನು ಕದ್ದು ಕದ್ದು ನೋಡುತ್ತಾಳೆ. ಆ ಹುಡುಗ ಕೂಡ ಕದ್ದು ಕದ್ದು ನೋಡುತ್ತಾ ಅವಳು ಕೊಟ್ಟ ಕಾಫಿ ಕುಡಿಯುತ್ತಾನೆ.

ಹುಡುಗ-ಹುಡುಗಿ ಇಬ್ಬರಿಗೂ ಪರಸ್ಪರ ಇಷ್ಟವಾಗುತ್ತದೆ. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡುತ್ತ ಕಣ್ಣಲ್ಲೇ ಮಾತನ್ನಾಡುತ್ತಿರುವ ಸಮಯದಲ್ಲಿ ಹುಡುಗಿ ತಾಯಿ ಅಡುಗೆಮನೆಯಿಂದ ಹಾಲ್‌ಗೆ ಬರುತ್ತಾಳೆ. ಹುಡುಗಿ ಅಮ್ಮ ಹುಡುಗನನ್ನು ನೋಡಿ ಮೊದಲು ಗಾಬರಿ ಆಗುತ್ತಾಳೆ. ಮದುವೆ ಗಂಡು ಕೂಡ ಹುಡುಗಿ ಅಮ್ಮನನ್ನು ನೋಡಿ ಕಕ್ಕಾಬಿಕ್ಕಿ ಅಗುತ್ತಾನೆ.

ಯಾಕಮ್ಮಾ, ಹುಡುಗನಿಗೆ ಪೊರಕೆ ತೋರಿಸ್ತೀರಾ?

ಹುಡುಗಿ ಅಮ್ಮನಿಗೆ ಕೋಪ ಉಕ್ಕೇರಿ ಬರುತ್ತದೆ. ಅವಳು ಅಲ್ಲೆ ಪಕ್ಕದಲ್ಲಿದ್ದ ಪೊರಕೆ ತೆಗೆದುಕೊಂಡು ಅವನ ಬಳಿಗೆ ಹೋಗಿ ಹೊಡೆಯಲು ಎತ್ತಿ, 'ಬೇ*ರ್ಸಿ, ಹೊರಟು ಹೋಗು' ಇಲ್ಲಿಂದ ಅಂತಾಳೆ. ಯಾಕಮ್ಮಾ, ಹುಡುಗನಿಗೆ ಪೊರಕೆ ತೋರಿಸ್ತೀರಾ ಅಂತ ಕರೆದುಕೊಂಡು ಬಂದಾತ ಕೇಳಲು ಆಕೆ 'ಇವ ನನ್ನ ನೋಡೋಕೂ ಬಂದಿದ್ದ' ಅಂತಾಳೆ. ಅಷ್ಟರಲ್ಲಿ ಹುಡುಗ ಆ ಮನೆಯೊಳಗಿಂದ ಹೊರಟು ಹೋಗುತ್ತಿರಲು ಕರೆದುಕೊಂಡು ಬಂದವನು ಹಿಂಬಾಲಿಸುತ್ತಾನೆ.

ಅಮ್ಮನ ಪಕ್ಕ ನಿಂತಿರುವ ಹುಡುಗಿ ನುಲಿಯುತ್ತಾ 'ಕ್ಯೂಟ್ ಆಗಿದಾನೆ' ಅಂತಾಳೆ. ಕೋಪದಿಂದ ಅವಳಮ್ಮ 'ಕ್ಯೂಟ್ ಅಂತೆ ಕ್ಯೂಟ್.. ಹೋಗೆ ಒಳಕ್ಕೆ..' ಎಂದು ಜೋರಾಗಿ ಗದರುತ್ತಾಳೆ.

ಹೊರಗೆ ಆ ಗಂಡನ್ನು ಕರೆದುಕೊಂಡು ಬಂದಾತ 'ನೀನು ಆ ಹುಡುಗಿ ಅಮ್ಮನನ್ನೂ ನೋಡೋಕೆ ಬಂದಿದ್ಯಾ?' ಅಂತ ಕೇಳಲು ಹುಡುಗ 'ಹೌದು, ಬಂದಿದ್ದೆ' ಅಂತಾನೆ. ಅದಕ್ಕೆ ಆತ 'ಯಾರು ಕರೆದುಕೊಂಡು ಬಂದಿದ್ದು?' ಎಂದು ಕೇಳಲು ಹುಡುಗ 'ನಿಮ್ಮಪ್ಪ..' ಅಂತಾನೆ. ಅದನ್ನು ಕೇಳಿ ಕರೆದುಕೊಂಡು ಬಂದ ಹುಡುಗ ಸೈಲೆಂಟ್ ಅಗಿಬಿಡುತ್ತಾನೆ. ಅಷ್ಟೊತ್ತಿಗಾಗಲೇ ವಿಡಿಯೋ ನೋಡುತ್ತಿರುವರಿಗೆ ನಗು ತಡೆದುಕೊಳ್ಳಲಾಗದೇ ಬಿದ್ದೂಬಿದ್ದೂ ನಗುತ್ತಾ ಇರುವಂತಾಗುತ್ತದೆ.

ಈ ವಿಡಿಯೋ ತಮಾಷೆ ಎನ್ನಿಸಿದರೂ ಹಲವಾರು ವಾಸ್ತವ ಸಂಗತಿಗಳನ್ನು ಹೇಳುವಂತಿದೆ!

ಈ ವಿಡಿಯೋ ತಮಾಷೆ ಎನ್ನಿಸಿದರೂ ಹಲವಾರು ವಾಸ್ತವ ಸಂಗತಿಗಳನ್ನು ಹೇಳುವಂತಿದೆ. 'ಕಳೆದ ಜನರೇಶನ್‌'ವರೆಗೂ ಇಂತಹ ಘಟನೆಗಳು ಹಳ್ಳಿಗಳಲ್ಲಿ ನಡೆಯುತ್ತಿದ್ದವು, ಮತ್ತು ಅಂತಹ ಘಟನೆಗಳು ತೀರಾ ಹೊಸದೇನೂ ಅಲ್ಲ ಎಂಬುದನ್ನು ಹಲವರು ಕಣ್ಣೆದುರಿನ ಅನುಭವ ಎಂಬಂತೆಯೂ ನೋಡಿದ್ದಾರೆ. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ಈಗ ಹುಡುಗಿ ನೋಡಲು ಬಂದ ವರನಿಗೆ ಹುಡುಗಿಯೇ 'ಈ ಹುಡುಗ ನನ್ನ ಸ್ನೇಹಿತೆಯ ಮಗ' ಎಂದರೂ ಅಚ್ಚರಿಯಿಲ್ಲ ಎಂಬಷ್ಟು ಕಾಲ ಬದಲಾಗಿದೆ ಎನ್ನಬಹುದು. ಒಟ್ಟಿನಲ್ಲಿ, ಈ ವಿಡಿಯೋ ಮೂಲಕ ಮನಃಪೂರ್ವಕವಾಗಿ ನಕ್ಕು ನೀವು ಸ್ವಲ್ಪ ರಿಲಾಕ್ಸ್ ಮೂಡ್‌ಗೆ ಜಾರಬಹುದು, ನೋಡಿ..!

View post on Instagram