Packing Hack: ಅದೆಷ್ಟೇ ದೊಡ್ಡ ಸೂಟ್‌ಕೇಸ್ ತಂದುಕೊಟ್ಟರೂ ಬಟ್ಟೆ ಪ್ಯಾಕ್ ಮಾಡುವುದೇ ಒಂದು ದೊಡ್ಡ ತಲೆನೋವು ಎನ್ನುವವರು ಈ ಮಹಿಳೆ ವಿಡಿಯೋದಲ್ಲಿ ತೋರಿಸಿರುವ ಟ್ರಿಕ್‌ ಬಳಸಬಹುದು. ಇದು ಒಬ್ಬರಲ್ಲ, ಇಬ್ಬರಲ್ಲ ಸಾವಿರಾರು ಜನರಿಗೆ ಇಷ್ಟವಾಗಿರುವುದಂತೂ ಸುಳ್ಳಲ್ಲ.

ಬಹುತೇಕ ಭಾರತದ ಪ್ರತಿಯೊಬ್ಬ ಮಹಿಳೆಯೂ ತಮ್ಮ ಮನೆಕೆಲಸವನ್ನ ಸುಲಭಗೊಳಿಸಿಕೊಳ್ಳಲು ಈಸಿಯಾಗಿರುವ ಕೆಲವು ಹ್ಯಾಕ್ ಅಥವಾ ಟ್ರಿಕ್ ಬಳಸುವುದನ್ನ ನೀವು ನೋಡಿರಬಹುದು. ಈ ವಿಭಿನ್ನ ವಿಧಾನಗಳಲ್ಲಿ ಕೆಲವು ಬಹಳ ಪರಿಣಾಮಕಾರಿ ಎಂದು ಸಾಬೀತಾಗಿವೆ. ಅನೇಕ ಜನರು ಇಂತಹ ವಿಡಿಯೋ ಮಾಡಿ ಪೋಸ್ಟ್ ಮಾಡುವುದನ್ನ ನಾವು ಕಾಲಕಾಲಕ್ಕೆ ನೋಡಬಹುದು. ಇವುಗಳಲ್ಲಿ ಕೆಲವು ವಿಡಿಯೋ ಮಾತ್ರ ವೈರಲ್ ಆಗುತ್ತವೆ. ಪ್ರಸ್ತುತ ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಏನೆಂದು ನೋಡೋಣ ಬನ್ನಿ..

ವೈರಲ್ ವಿಡಿಯೋದಲ್ಲಿ ಏನಿದೆ?

ಸಾಮಾನ್ಯವಾಗಿ ನಾವು ನಮ್ಮ ಬ್ಯಾಗ್‌ನಲ್ಲಿ ಬಟ್ಟೆಗಳನ್ನು ಪ್ಯಾಕ್ ಮಾಡುವಾಗ ಅವುಗಳನ್ನು ಅಡ್ಡಲಾಗಿ ಮಡಚಿ ಇಡುತ್ತೇವೆ. ಆದರೆ ಈ ವೈರಲ್ ವಿಡಿಯೋದಲ್ಲಿ ಬ್ಯಾಗ್‌ ಅನ್ನು ಲಂಬವಾಗಿ ಇರಿಸಿರುವುದಲ್ಲದೆ, ಬೀರುವಿನಲ್ಲಿ ಮಡಚಿಡುವ ಹಾಗೆ ಇಡುತ್ತಿರುವುದರಿಂದ ಹೆಚ್ಚಿನ ಬಟ್ಟೆಗಳನ್ನು ಹಿಡಿದಿಟ್ಟುಕೊಳ್ಳಬಹುದು ಎಂದು ಮಹಿಳೆ ವಿವರಿಸಿದ್ದಾರೆ. ವಿಡಿಯೋದಲ್ಲಿ ಮಹಿಳೆ ಮೊದಲು ಸೂಟ್‌ಕೇಸ್‌ ತೆಗೆದುಕೊಂಡು ಅಡ್ಡಲಾಗಿ, ಆ ನಂತರ ಲಂಬವಾಗಿ ಎರಡೂ ರೀತಿ ಜೋಡಿಸುವುದನ್ನು ತೋರಿಸಲಾಗಿದೆ. ಆದರೆ ಲಂಬವಾದ ಜೋಡಣೆಯು ಹೆಚ್ಚಿನ ಬಟ್ಟೆಗಳನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ತೋರುತ್ತದೆ. ಈ ಹ್ಯಾಕ್ ಅನ್ನು ಪ್ರದರ್ಶಿಸಲು ಮಹಿಳೆ ವಿಡಿಯೋ ಪೋಸ್ಟ್ ಮಾಡಿದ್ದು, ಸದ್ಯ ಅದು ವೈರಲ್ ಆಗಿದೆ.

ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ

Scroll to load tweet…

ನೀವು ಈಗಷ್ಟೇ ನೋಡಿದ ವಿಡಿಯೋವನ್ನು @HasnaZaruriHai ಹೆಸರಿನ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'Packing hack. This aunty needs to go Viral' ಎಂದು ಶೀರ್ಷಿಕೆ ಬರೆಯಲಾಗಿದೆ. ಈ ಸುದ್ದಿ ಬರೆಯುವವರೆಗೆ, 44 ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದಾರೆ. ವಿಡಿಯೋ ನೋಡಿದ ನಂತರ ಜನರು "ಭಾರತೀಯ ಮಹಿಳೆಯರು ಎಲ್ಲದರಲ್ಲೂ ಎಲ್ಲರಿಗಿಂತ ಶ್ರೇಷ್ಠರು", "ವಾಹ್, ಎಂತಹ ಐಡಿಯಾ, ಸೂಪರ್", "ನಾನು ಇಷ್ಟು ಬಟ್ಟೆಗೆ 3 ಸೂಟ್‌ಕೇಸ್‌ಗಳನ್ನು ಖರೀದಿಸುತ್ತಿದ್ದೆ", "ಮಹಿಳೆಯರು ಎಲ್ಲರಿಗಿಂತ ಶ್ರೇಷ್ಠರು" ಎಂದೆಲ್ಲಾ ಬರೆದಿದ್ದಾರೆ.

ವೈರಲ್ ಆಗಿತ್ತು ತಮಾಷೆಯ ವಿಡಿಯೋ

ಇಂತಹುದೇ ಒಂದು ವಿಡಿಯೋ ವೈರಲ್ ಆಗಿತ್ತು. ಆದರೆ ಅದು ಸಿಕ್ಕಾಪಟ್ಟೆ ತಮಾಷೆಯಾಗಿತ್ತು. ಹೌದು, ಒಬ್ಬ ಮಹಿಳೆ ತನ್ನ ಗಂಡನ ಹಳೆಯ ಒಳ ಉಡುಪುಗಳನ್ನು ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಕ್ಕಾಗಿ ಬಳಸಿರುವ ವಿಡಿಯೋ ವೈರಲ್ ಆಗಿತ್ತು. ಆ ಮಹಿಳೆ ಅದನ್ನು ಬ್ಯಾಗನ್ನಾಗಿ ಪರಿವರ್ತಿಸಿ ತರಕಾರಿಗಳನ್ನು ಖರೀದಿಸಲು ಹೋಗಿದ್ದಳು.

ಇನ್‌ಸ್ಟಾಗ್ರಾಮ್ ಬಳಕೆದಾರರಾದ ರಾಧಿಕಾರಿಯಾ ಕುಮಾವತ್ 5 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಅವರು ಆಗಾಗ್ಗೆ ಇಂತಹ ತಮಾಷೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಅವರು ಇನ್ನರ್‌ವೇರ್‌ನಿಂದ ಮಾಡಿದ ಬ್ಯಾಗ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ವಿಡಿಯೋ ಹಂಚಿಕೊಂಡಿದ್ದರು. ಈ ಬ್ಯಾಗ್ ಪುರುಷರ ಒಳ ಉಡುಪುಗಳಿಂದ ಮಾಡಲ್ಪಟ್ಟಿರುವುದರಿಂದ ವಿಶಿಷ್ಟವಾಗಿದೆ. ಇದು ಡಾಲರ್ ಕಂಪನಿಯ ಒಳ ಉಡುಪು, ಇದನ್ನು ಚೀಲವಾಗಿ ಅಂದರೆ ಬ್ಯಾಗ್ ಆಗಿ ಮಾಡಲಾಗಿದೆ. ಅದನ್ನು ದಾರದಿಂದ ಹೊಲಿಯುವ ಮೂಲಕ ಕುತ್ತಿಗೆಗೆ ನೇತು ಹಾಕಿಕೊಳ್ಳಲಾಗಿದೆ.

ಬ್ಯಾಗ್ ಅಗಿ ಮಾರ್ಪಟ್ಟ ಒಳ ಉಡುಪು
ಈ ಮೊದಲೇ ಹೇಳಿದ ಹಾಗೆ ಕಂಟೆಂಟ್ ಕ್ರಿಯೇಟರ್ ರಾಧಿಕಾ ತಮಾಷೆಯ ವಿಡಿಯೋವನ್ನ ಪೋಸ್ಟ್ ಮಾಡುತ್ತಾರೆ. ಅವರು ಈ ಒಳ ಉಡುಪುಗಳನ್ನು ಕೇವಲ ವಿಡಿಯೋ ಮಾಡುವ ಉದ್ದೇಶಕ್ಕಾಗಿ ತಯಾರಿಸಿದ್ದಾರೆಂದು ತೋರುತ್ತದೆ. ಬಹಳ ಸಂತೋಷದಿಂದ ತರಕಾರಿಗಳನ್ನು ಖರೀದಿಸಿ ನಂತರ ಅವುಗಳನ್ನು ತಮ್ಮ ಚೀಲದಲ್ಲಿ ಇಡುತ್ತಿದ್ದಾರೆ. ತರಕಾರಿ ಮಾರುವವರು ತರಕಾರಿಗಳನ್ನು ತೂಕದ ತಟ್ಟೆಯಿಂದ ನೇರವಾಗಿ ಅವರ ಚೀಲಕ್ಕೆ ಹಾಕುತ್ತಿದ್ದಾರೆ. ರಾಧಿಕಾ ಆಗಾಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಈ ರೀತಿ ತಮಾಷೆಯ ವಿಡಿಯೋ ಮಾಡುತ್ತಾರೆ.

View post on Instagram