Funny reels: ಮಹಿಳೆ ಸೋಫಾದ ಅಂಚಿನಲ್ಲಿ ಕುಳಿತು ಫೋನ್‌ನಲ್ಲಿ ಏನೋ ನೋಡ್ತಿದ್ದಾಳೆ. ನಂತರ ಇದಕ್ಕಿದ್ದಂತೆ ಬರುವ ಆಕೆಯ ಗಂಡ ಪೊರಕೆಯಲ್ಲಿ ಬಟ್ಟೆಯನ್ನು ನೇತುಹಾಕಿಕೊಂಡು ಮೇಲಕ್ಕೆ ನೋಡುತ್ತಾ ಹೋಗುವುದನ್ನು ನೋಡುತ್ತಾಳೆ. ಹೆಂಡತಿಗೆ ಗಂಡನ ವರ್ತನೆ ನೋಡಿ ಆಶ್ಚರ್ಯವಾಗುತ್ತೆ.
ಸಾಮಾಜಿಕ ಮಾಧ್ಯಮವು ಯಾವಾಗಲೂ ಎಲ್ಲಾ ರೀತಿಯ ವಿಡಿಯೋಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಂದ ತುಂಬಿರುತ್ತದೆ. ನೀವು ಇಲ್ಲಿಗೆ ಭೇಟಿ ನೀಡಿದಾಗಲೆಲ್ಲಾ ಸ್ಕ್ರಾಲ್ ಮಾಡುತ್ತಾ ಹೋದರೆ ಚಿತ್ರ-ವಿಚಿತ್ರ ಮಾತ್ರವಲ್ಲ, ಸುಂದರವಾದ ವಿಡಿಯೋಗಳೂ ಇರ್ತವೆ. ಈ ವಿಡಿಯೋದಲ್ಲಿ ಹಲವು ವೈರಲ್ ಆಗುತ್ತವೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಬಹುಶಃ ಇದು ಸ್ಕ್ರಿಪ್ಟೆಡ್ ಅನಿಸುತ್ತದೆ. ಆದ್ರೂ ಹಾಸ್ಯಮಯವಾಗಿದೆ. ಹಾಗಾದ್ರೆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡೋಣ.
ವೈರಲ್ ವಿಡಿಯೋದಲ್ಲಿ ಏನಿದೆ?
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ಮಹಿಳೆ ಸೋಫಾದ ಅಂಚಿನಲ್ಲಿ ಕುಳಿತು ಫೋನ್‌ನಲ್ಲಿ ಏನೋ ನೋಡ್ತಿದ್ದಾಳೆ. ನಂತರ ಇದಕ್ಕಿದ್ದಂತೆ ಬರುವ ಆಕೆಯ ಗಂಡ ಪೊರಕೆಯಲ್ಲಿ ಬಟ್ಟೆಯನ್ನು ನೇತುಹಾಕಿಕೊಂಡು ಮೇಲಕ್ಕೆ ನೋಡುತ್ತಾ ಹೋಗುವುದನ್ನು ನೋಡುತ್ತಾಳೆ. ಹೆಂಡತಿಗೆ ಗಂಡನ ವರ್ತನೆ ನೋಡಿ ಆಶ್ಚರ್ಯವಾಗುತ್ತೆ. ನಂತರ ಅವಳು ಮತ್ತೆ ಫೋನ್ ನೋಡ್ತಾ ಸುಮ್ನಾಗ್ತಾಳೆ. ಹಾಗೆ ಹೋದ ಗಂಡ ಮತ್ತೆ ಹಿಂತಿರುಗುತ್ತಾನೆ. ಮತ್ತದೇ ರೀತಿಯಲ್ಲಿ. ಈ ಬಾರಿ ಒಂದೇ ವ್ಯತ್ಯಾಸವೆಂದರೆ ಅವನ ಇನ್ನೊಂದು ಕೈ ಖಾಲಿಯಾಗಿಲ್ಲ, ಬದಲಿಗೆ ಡ್ರಿಂಕ್ಸ್ ಬಾಟಲಿಯಿದೆ. ಇದನ್ನ ಹೆಂಡ್ತಿ ಗಮನಿಸಲ್ಲ. ಆ ವ್ಯಕ್ತಿ ಬಾಟಲಿಯನ್ನು ತೆಗೆದುಕೊಳ್ಳಲು ಇಷ್ಟೆಲ್ಲಾ ಮಾಡ್ತಾನೆ.
ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ
ನೀವು ಈಗಷ್ಟೇ ವೀಕ್ಷಿಸಿದ ವಿಡಿಯೋವನ್ನ @OGitala ಎಂಬ ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದೆ. ವಿಡಿಯೋದ ಜೊತೆಗೆ ಶೀರ್ಷಿಕೆ "ದೇವರು ಎಲ್ಲರಿಗೂ ಇಂತಹ ಮುಗ್ಧ ಹೆಂಡತಿಯನ್ನು ಕೊಡಲಿ." ಎಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ವಿಡಿಯೋವನ್ನ 29,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಇತರ ಖಾತೆಗಳಿಂದಲೂ ಮರು ಪೋಸ್ಟ್ ಮಾಡಲಾಗುತ್ತಿದೆ. ವಿಶಿಷ್ಟತೆಯಿಂದಾಗಿ ವಿಡಿಯೋ ವೈರಲ್ ಆಗ್ತಿದೆ.
ಮಹಿಳೆಯ ವಿಡಿಯೋ ವೈರಲ್ ಆಗಿತ್ತು
ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಒಬ್ಬ ಮಹಿಳೆ "ಗಂಡನ ಜೇಬಿನಿಂದ ದುಡ್ಡನ್ನು ಹೇಗೆ ಎತ್ತಿಕೊಳ್ಳುವುದು"?. ಎಂಬುದನ್ನು ಹಾಸ್ಯಮಯ ರೀತಿಯಲ್ಲಿ ಹೇಳಿದ್ದಾರೆ. ಇದಲ್ಲದೆ, ಗಂಡನ ಜೇಬಿನಿಂದ ಹಣವನ್ನು ತೆಗೆದುಕೊಳ್ಳುವಾಗ ಒಂದು ವೇಳೆ ಸಿಕ್ಕಿಬಿದ್ದರೆ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ.
ವಿಡಿಯೋದಲ್ಲಿ ಮಹಿಳೆಯು ವೈವಾಹಿಕ ಜೀವನದಲ್ಲಿ ಗಂಡನ ಜೇಬು ಹೆಚ್ಚಾಗಿ ಹೆಂಡತಿಯರಿಗೆ ಒಂದು ನಿಧಿಯಾಗಿರುತ್ತದೆ ಎಂದು ಹಾಸ್ಯಮಯವಾಗಿ ವಿವರಿಸಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ ಸಣ್ಣ ಖರ್ಚುಗಳಿಗಾಗಿ ಅಥವಾ ಅಗತ್ಯವಿದ್ದಾಗ ತಮ್ಮ ಕೈಗಳನ್ನು ಇಡುವುದೇ ಗಂಡನ ಜೇಬಿನಲ್ಲಿ. ಆದರೆ ಅವರು ಸಿಕ್ಕಿಬಿದ್ದಾಗ ಸಮಸ್ಯೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಿಕ್ಕಿಬಿದ್ದಾಗ ತಕ್ಷಣವೇ ನಾಟಕ ಮಾಡಿ ವಾತಾವರಣವನ್ನು ಹೇಗೆ ತಿಳಿಯಾಗಿಸಬಹುದು ಎಂಬುದನ್ನು ವಿವರಿಸಿದ್ದಾರೆ.
ವಿಡಿಯೋದ ಆರಂಭದಲ್ಲಿ ಆ ಮಹಿಳೆ "ಒಬ್ಬ ಸಹೋದರಿ, ನಾನು ಅವರ ಜೇಬಿನಿಂದ ಹಣ ತೆಗೆದ ತಕ್ಷಣ ತಿಳಿಯುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ" ಹಾಗಾಗಿ ಈ ಕಾಮೆಂಟ್ ಅನ್ನು ಉಲ್ಲೇಖಿಸಿ ಹೇಳುವುದಾದರೆ ಎನ್ನುತ್ತಾ..ನಗುತ್ತಾ.. ಗಂಡಂದಿರ ಈ ಅಭ್ಯಾಸ ಸಾಮಾನ್ಯ ಎಂದು ಹೇಳುತ್ತಾರೆ. ಜೊತೆಗೆ ತಮಾಷೆಯಾಗಿ ಪರಿಹಾರವನ್ನೂ ನೀಡಿದ್ದಾರೆ. ಗಂಡನ ಕೈಲಿ ಸಿಕ್ಕಿ ಬಿದ್ದರೆ ತಕ್ಷಣ ಮುಗ್ಧವಾಗಿ ವರ್ತಿಸಲು ಪ್ರಾರಂಭಿಸಿ ಎಂದಿದ್ದಾರೆ.
ಗಂಡ, "ನಾನೇ ಇಲ್ಲಿ ಹಣ ಇಟ್ಟಿದ್ದೆ" ಎಂದು ಹೇಳಿದ ತಕ್ಷಣ, ಅದು ಹೇಗೆ ಕಾಣೆಯಾಯ್ತು? ಎಂದು ಆ ಸಮಯದಲ್ಲಿ ನೀವು ಶಾಕ್ ಆಗಿ, ಆಶ್ಚರ್ಯದ ರೀತಿಯಲ್ಲಿ ಕೇಳಬೇಕು. ನಂತರ ನೀವು ನಿಜ ಹೇಳಬೇಕು. ಅದು ನನ್ನ ಹಣ ಎಂದು ನಾನು ಭಾವಿಸಿದೆ ಅಥವಾ ನಿಮ್ಮ ಹಣ ನಮ್ಮದು ಎಂದು ನೀವು ತಮಾಷೆಯಾಗಿ ಹೇಳಬಹುದು. ಬಿಡಿ, ಈಗ ಮನೆಯಲ್ಲಿ ದುಡ್ಡನ್ನ ಯಾರು ಇಡುತ್ತಾರೆ" ಎಂದು ತಿಳಿಸಿದ್ದಾರೆ. ಸದ್ಯ ಈ ವಿಡಿಯೋವನ್ನು ಇನ್‌ಸ್ಟಾದಲ್ಲಿ ಕಾಂಚನ್‌ಶರ್ಮರಂಜನ್ ಎಂಬ ಖಾತೆಯಿಂದ ಶೇರ್ ಮಾಡಲಾಗಿದ್ದು, ಇದನ್ನು ಸಾವಿರಾರು ಜನರು ನೋಡಿ ಇಷ್ಟಪಟ್ಟಿದ್ದಾರೆ.