ಇದನ್ನು ನೋಡಿದ ಮೇಲೆ ಪ್ರತಿಯೊಬ್ಬ ವ್ಯಕ್ತಿ ನಮ್ಮಲ್ಲೇನಿದೆಯೋ ಅದಕ್ಕೆ ಸಂತೃಪ್ತಿ ಪಡಬೇಕು ಅನಿಸುವುದಂತೂ ಖಂಡಿತ.

ಅನ್ನ, ಬಟ್ಟೆ, ಮನೆ... ಈ ಮೂರು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯ. ಆದರೆ ಮೂರಕ್ಕೂ ಪರದಾಡುತ್ತಿರುವ ಕೆಲವು ಜನರಿದ್ದಾರೆ. ಇದಕ್ಕಾಗಿ ಮೂರು ಹೊತ್ತೂ ಹೆಣಗಾಡುತ್ತಾರೆ. ಆದರೆ ಯಾವುದಕ್ಕೂ ಕೊರತೆ ಇರದ ಅನೇಕರಿಗೆ ಇದರ ಬೆಲೆಯೇ ಗೊತ್ತಾಗಲ್ಲ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ಮೇಲೆ ಪ್ರತಿಯೊಬ್ಬ ವ್ಯಕ್ತಿ ನಮ್ಮಲ್ಲೇನಿದೆಯೋ ಅದಕ್ಕೆ ಸಂತೃಪ್ತಿ ಪಡಬೇಕು ಅನಿಸುವುದಂತೂ ಖಂಡಿತ. ಆದ್ದರಿಂದ ಸಮಯ ವ್ಯರ್ಥ ಮಾಡದೆ ಈ ವೈರಲ್ ವಿಡಿಯೋದಲ್ಲಿ ಏನಿದೆ ನೋಡೋಣ..

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಏನೋ ಕಾರ್ಯಕ್ರಮ ನಡೆಯುತ್ತಿರುವುದು ಕಾಣುತ್ತಿದೆ. ಜನರು ಅಲ್ಲಿ ಊಟ ಮಾಡುತ್ತಿದ್ದಾರೆ. ಊಟ ಮಾಡಿದ ನಂತರ ತಮ್ಮ ತಟ್ಟೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಅಲ್ಲಿಗೆ ಬರುವ ಒಬ್ಬ ಹುಡುಗಿ ಆ ತಟ್ಟೆಗಳಲ್ಲಿರುವ ಆಹಾರದ ಕಾಳುಗಳನ್ನು ಆಯುತ್ತಿದ್ದಾಳೆ. ವಿಡಿಯೋ ನೋಡಿದರೆ ಕೆಲವರಿಗೆ ಎಲ್ಲವೂ ಇದೆ, ಇನ್ನು ಕೆಲವರಿಗೆ ಒಂದು ಹೊತ್ತು ಊಟಕ್ಕೂ ಕಷ್ಟ ಎಂದು ತೋರಿಸುತ್ತದೆ. "ಇದನ್ನು ನೋಡಿದಾಗ, ಪ್ರತಿಯೊಂದು ಆಹಾರದ ಕಾಳು ಅಮೂಲ್ಯ ಮತ್ತು ಅದನ್ನು ವ್ಯರ್ಥ ಮಾಡಬಾರದು ಎಂದು ಅರ್ಥವಾಗುತ್ತದೆ. ಏನನ್ನಾದರೂ ಎಸೆಯುವ ಮೊದಲು, ಅದನ್ನು ನಿರ್ಗತಿಕರಿಗೆ ನೀಡಬೇಕು ಎಂದು ಜನರಿಗೆ ಅರ್ಥವಾಗುವಂತೆ ವಿಡಿಯೋ ಮಾಡಿರಬೇಕು".

ನೀವು ಈಗಷ್ಟೇ ನೋಡಿದ ವಿಡಿಯೋವನ್ನು @ReshmaM15238489 ಹೆಸರಿನ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಪೋಸ್ಟ್ ಮಾಡುವಾಗ, 'ಹಸಿವು ಏನೆಂದು ತಿಳಿಯದವರ ತಟ್ಟೆಗಳಿಂದ ಆಹಾರ ಕಸಕ್ಕೆ ಹೋಗುತ್ತದೆ' ಎಂದು ಶೀರ್ಷಿಕೆ ಬರೆಯಲಾಗಿದೆ. ವಿಡಿಯೋ ನೋಡಿದ ನಂತರ, ಬಳಕೆದಾರರು "ಒಬ್ಬ ವ್ಯಕ್ತಿಯ ಹೊಟ್ಟೆ ತುಂಬಿದಾಗ, ಅವನು ಇತರರ ಹಸಿವನ್ನು ಅನುಭವಿಸುವುದನ್ನು ನಿಲ್ಲಿಸುತ್ತಾನೆ", "ಅದನ್ನು ಸುಲಭವಾಗಿ ಪಡೆಯುವವರು, ಮೌಲ್ಯವನ್ನು ಹೇಗೆ ತಿಳಿದುಕೊಳ್ಳಬಹುದು", "ಆಹಾರದ ಮಹತ್ವವನ್ನು ಅರ್ಥಮಾಡಿಕೊಳ್ಳಿ" ಎಂದೆಲ್ಲಾ ಬರೆಯಲಾಗಿದೆ. ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ..

Scroll to load tweet…

ಎಲ್ಲರಿಗೂ ದೊಡ್ಡ ಪಾಠ ಕಲಿಸಿದ ಬಾಲಕನ ನಡೆ
ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ವಿಡಿಯೋಗಳು ವೈರಲ್ ಆಗ್ತಾನೆ ಇರ್ತಾವೆ. ಇವುಗಳಲ್ಲಿ ಕೆಲವು ವಿಡಿಯೋಗಳು ರಂಜಿಸಿದರೆ, ಮತ್ತೆ ಕೆಲವು ವಿಡಿಯೋಗಳು ಜಗತ್ತಿನಲ್ಲಿ ಇಂತಹವರು ಇರ್ತಾರ ಎಂದು ಯೋಚಿಸುವಂತೆ ಮಾಡುತ್ತವೆ. ಸದ್ಯ ಅಂತಹ ಒಂದು ವಿಡಿಯೋ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ವಿಡಿಯೋದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿರುವುದು ಬಾಲಕನ ಮುಗ್ಧತೆ. ಇದು ಎಲ್ಲರ ಹೃದಯ ಗೆದ್ದಿದೆ. ನಿಮ್ಮಲ್ಲಿ ಉತ್ತಮ ಮೌಲ್ಯಗಳಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ ಎಂದು ಬಾಲಕ ತೋರಿಸಿದ್ದಾನೆ. ಇದು ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಬಾಲಕನ ನಡವಳಿಕೆಗೆ ಫಿದಾ ಆದ ಜನ್ರು
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಓರ್ವ ಬಾಲಕ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಪ್ರಯಾಣದ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಇದ್ದಕ್ಕಿದ್ದಂತೆ ಅವನ ಕೈಯಿಂದ ನೆಲದ ಮೇಲೆ ಬೀಳುತ್ತದೆ. ಬಾಟಲಿ ಬಿದ್ದ ತಕ್ಷಣ, ಡ್ರಿಂಕ್ಸ್ ಚೆಲ್ಲುತ್ತದೆ ಮತ್ತು ನೆಲವು ಒದ್ದೆಯಾಗುತ್ತದೆ. ಅಂತಹ ಪರಿಸ್ಥಿತಿ ಬಂದಾಗ ನಮ್ಮ ಮಕ್ಕಳು ಏನು ಮಾಡಬಹುದು ಎಂದು ಯೋಚಿಸಿ. ನಮ್ಮ ಮಕ್ಕಳು ಏನ್ ಮಾಡ್ತಾರೋ ಗೊತ್ತಿಲ್ಲ ಆದ್ರೆ ಆ ಮಗು ಏನು ಮಾಡಿದೆ ಅಂತೀರಾ?. ಸದ್ಯ ಬಾಲಕನ ಆ ನಡವಳಿಕೆಯೇ ಇಂದು ವಿಡಿಯೋ ವೈರಲ್ ಆಗಲು ಕಾರಣವಾಗಿದೆ. ಇದೇ ಕಾರಣಕ್ಕೆ ಜನರು ಇದನ್ನು ಹೆಚ್ಚೆಚ್ಚು ಶೇರ್ ಮಾಡ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಇನ್ನು ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ ಕೂಲ್ ಡ್ರಿಂಕ್ಸ್ ಬಾಟಲ್ ಕೆಳಗೆ ಬಿದ್ದ ತಕ್ಷಣ, ಬಾಲಕ ತನ್ನ ಬ್ಯಾಗ್‌ನಿಂದ ಟಿಶ್ಯೂ ಪೇಪರ್ ತೆಗೆದು ಚೆಲ್ಲಿದ ಪಾನೀಯವನ್ನು ತನ್ನ ಮನೆ ಎಂಬಂತೆಯೇ ಒರೆಸುತ್ತಾನೆ. ಈ ದೃಶ್ಯವನ್ನು ನೋಡಿ ಅಲ್ಲಿದ್ದ ಇತರ ಪ್ರಯಾಣಿಕರು ಶಾಕ್ ಆಗ್ತಾರೆ. ಯಾಕಂದ್ರೆ ಅಲ್ಲಿ ನರೆದಿದ್ದ ಜನರು ಬಾಲಕನು ಈ ರೀತಿ ನಡೆದುಕೊಳ್ಳುತ್ತಾನೆ ಎಂದು ಊಹಿಸಿರಲಿಲ್ಲ. ಬಹುತೇಕರು ಸಾರ್ವಜನಿಕ ಸ್ಥಳವೆಂದರೆ ಸಾಕು ಕಸ ಹಾಕುವ ಅಥವಾ ನಿರುಪಯುಕ್ತ ವಸ್ತುಗಳನ್ನು ಚೆಲ್ಲಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಈ ಬಾಲಕನ ನಡೆ ಇದೀಗ ಎಲ್ಲರಿಗೂ ದೊಡ್ಡ ಪಾಠವನ್ನು ಕಲಿಸಿದೆ.

View post on Instagram