ಹುಡುಗ ಸಾಹಸದ ವಿಡಿಯೋ ಮಾಡಲು ಫ್ಲೈಓವರ್ ಮೇಲಿನಿಂದ ಕೆಳಕ್ಕೆ ಹಾರುತ್ತಾನೆ, ಆದರೆ ಅದರ ನಂತರ ಏನಾಗುತ್ತದೆ ಎಂಬುದನ್ನು ನೋಡಿದರೆ…

ಸಾಮಾಜಿಕ ಜಾಲತಾಣದಲ್ಲಿ ತುಂಬಾ ನೋವಿನ ಮತ್ತು ಆಘಾತಕಾರಿ ವಿಡಿಯೋವೊಂದು ಕಾಣಿಸಿಕೊಂಡಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಟ್ರೆಂಡಿಂಗ್ ಎಲ್ಲರನ್ನೂ ಆಕರ್ಷಿಸುತ್ತಿದೆ. ರಾತ್ರೋರಾತ್ರಿ ಜನಪ್ರಿಯರಾಗಲು ಮತ್ತು ಕೆಲವೇ ಸೆಕೆಂಡುಗಳ ವಿಡಿಯೋ ವೈರಲ್ ಮಾಡಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲಿ ಯುವಕನೊಬ್ಬ ಫ್ಲೈಓವರ್ ಮೇಲೆ ಅಪಾಯಕಾರಿ ಸಾಹಸ ಮಾಡಲು ಪ್ರಯತ್ನಿಸಿದಾಗ ಅವನ ಜೀವನವೇ ಶಾಶ್ವತವಾಗಿ ಕೊನೆಗೊಂಡಿದೆ.

ವೈರಲ್ ವಿಡಿಯೋ ಎಲ್ಲಿಂದ ಬಂತು ಎಂಬುದರ ಕುರಿತು ಮಾಹಿತಿ ಕಂಡುಬಂದಿಲ್ಲ. ಈ ವಿಡಿಯೋ ನೋಡಿದ್ರೆ ದುಃಖವಾಗುತ್ತದೆ. ವೈರಲ್ ವಿಡಿಯೋದಲ್ಲಿ, ಒಬ್ಬ ಹುಡುಗ ಫ್ಲೈಓವರ್ ಮೇಲೆ ಇರುವುದನ್ನು ಮತ್ತು ಕ್ಯಾಮೆರಾ ಆನ್ ಆಗಿರುವುದನ್ನು ಕಾಣಬಹುದು. ಹುಡುಗ ಸಾಹಸದ ವಿಡಿಯೋ ಮಾಡಲು ಮೇಲಿನಿಂದ ಕೆಳಕ್ಕೆ ಹಾರುತ್ತಾನೆ, ಆದರೆ ಅದರ ನಂತರ ಏನಾಗುತ್ತದೆ ಎಂಬುದನ್ನು ನೋಡಿದರೆ ನಿಮ್ಮ ಮೈ ಜುಂ ಎನ್ನದೇ ಇರಲಾರದು.

ಅಷ್ಟಕ್ಕೂ ಘಟನೆ ಹೇಗಾಯ್ತು?
ಇಲ್ಲಿ ಹುಡುಗ ಫ್ಲೈಓವರ್ ಮೇಲಿಂದ ಹಾರಲು ಸಿದ್ಧನಾಗಿದ್ದಾನೆ ಮತ್ತು ಕೆಳಗೆ ಕಸದ ವಾಹನ ಹಾದುಹೋಗುತ್ತಿದೆ. ಕ್ಯಾಮೆರಾ ಆನ್ ಮಾಡಿದ ತಕ್ಷಣ, ಹುಡುಗ ಜಿಗಿಯುತ್ತಾನೆ, ಮತ್ತೇ ಎದ್ದೇಳಲು ಸಾಧ್ಯವಾಗುವುದಿಲ್ಲ. ಅವನು ಬಿದ್ದ ನಂತರ, ಜನರು ಅಲ್ಲಿಗೆ ತಲುಪಿ ಅವನನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾರೆ, ಆದರೆ ಅವನು ಉಸಿರು ಚೆಲ್ಲಿರುವುದು ವಿಡಿಯೋದಲ್ಲಿ ಕಾಣಬಹುದು.

ಈ ವೈರಲ್ ವಿಡಿಯೋವನ್ನು ಎಕ್ಸ್‌ನ ಲಾಫ್‌ಎನ್‌ಲಾಜಿಕ್ ಎಂಬ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಾಹನದ ಮೇಲೆ ಹಾರಿ ವೈರಲ್ ರೀಲ್ ಮಾಡುವುದು ಯುವಕನ ಉದ್ದೇಶವಾಗಿತ್ತು ಎಂದು ಜನರು ಹೇಳುತ್ತಾರೆ. "ಆ ಸಂಭಾವಿತ ವ್ಯಕ್ತಿ ರೀಲ್ ಮಾಡಲು ಫ್ಲೈಓವರ್ ಹತ್ತಿದ್ದರು" ಎಂದು ವಿಡಿಯೋ ಶೀರ್ಷಿಕೆಯಲ್ಲಿಯೂ ಹೇಳಲಾಗಿದೆ. ಕಸದ ವಾಹನ ತನ್ನ ಮುಂದೆ ಬಂದ ತಕ್ಷಣ ಅದರ ಮೇಲೆ ಹಾರಿದಾಗ ವಿಡಿಯೋ ವೈರಲ್ ಆಗುತ್ತದೆ ಎಂದು ಅವನು ಭಾವಿಸಿದನು. ಆದರೆ ಕಸದ ವಾಹನ ಮುಂದೆ ಬಂದಿತು. ಅವನು ಜಿಗಿಯಲು ವಿಳಂಬ ಮಾಡಿದನು ಕೊನೆಗದು ದುರಂತ ಅಂತ್ಯ ಕಂಡಿದೆ.

Scroll to load tweet…

ವೈರಲ್ ವಿಡಿಯೋದ ಬಗ್ಗೆ ಜನರು ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದಕ್ಕೂ ಮುಂಚೆಯೂ, ರೀಲ್ಸ್‌ನಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಆದರೂ ಜನರಿಗೆ ಬುದ್ಧಿ ಬಂದಂತಿಲ್ಲ.

ಸದ್ಯ ಅವರಿಬ್ಬರಿಗೂ ಏನೂ ಆಗ್ಲಿಲ್ಲ!
ಇತ್ತೀಚೆಗಷ್ಟೇ ವಿಡಿಯೋವೊಂದು ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ ಕಾಲುವೆಯ ಬಳಿ ನಿಂತಿರುವುದು ಕಂಡುಬರುತ್ತದೆ. ಕಾಲುವೆಯಲ್ಲಿ ನೀರಿನ ಹರಿವು ತುಂಬಾ ವೇಗವಾಗಿದೆ. ಕಾಲುವೆ ತುತ್ತ ತುದಿಗೆ ಬಂದು ನಿಂತ ಇಬ್ಬರೂ ಪರಸ್ಪರ ಹಿಡಿದುಕೊಂಡು ನದಿಗೆ ಬೀಳುತ್ತಾರೆ. ಥೇಟ್ ಸಿನಿಮಾಗಳಲ್ಲಿ ನೋಡುವಂತೆ. ಈ ಸಮಯದಲ್ಲಿ ಅನೇಕ ಜನರು ಅಲ್ಲಿಯೇ ನಿಂತು ಅವರ ಚೆಲ್ಲಾಟ ನೋಡುತ್ತಿದ್ದಾರೆ. ವಿಡಿಯೋದಲ್ಲಿ ಒರ್ವ ವ್ಯಕ್ತಿ ದಂಪತಿಯ ವಿಡಿಯೋ ಸಹ ಮಾಡುತ್ತಿರುವುದು ಕಂಡುಬರುತ್ತದೆ. ಆದ್ರೆ ದೇವ್ರು ದೊಡ್ಡವನು ಅವರಿಬ್ಬರಿಗೂ ಏನೂ ಆಗ್ಲಿಲ್ಲ.

Scroll to load tweet…