ಪೊರಕೆಯು ಲಕ್ಷ್ಮಿಯ ಸ್ವರೂಪ. ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಪೊರಕೆಯನ್ನು ಸರಿಯಾದ ದಿನದಂದು ಖರೀದಿಸಿ, ಸರಿಯಾದ ಸಮಯದಲ್ಲಿ ಬಳಸಿ ಮತ್ತು ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ, ಆರ್ಥಿಕ ಅಭಿವೃದ್ಧಿಯಾಗುತ್ತದೆ.
ಮನೆಯಿಂದ ಹೊರಗೆ ಹೊರಡುವಾಗ ಕಾಲಿಗೆ ಪೊರಕೆ ಅಡ್ಡ ಸಿಗಬಾರದು, ಯಾವುದಾದರೂ ಶುಭ ಕೆಲಸಕ್ಕೆ ಹೋಗುವಾಗ ಕಸ ಗುಡಿಸುವುದನ್ನು ನೋಡಬಾರದು ಎಂದೆಲ್ಲ ಕೆಲವು ನಂಬಿಕೆಗಳಿವೆ. ಇದರಿಂದಾಗಿ ಪೊರಕೆಯನ್ನು ಅಶುಭ ಎಂದು ಭಾವಿಸುವವರಿದ್ದಾರೆ. ಅದರೆ ಅದು ತಪ್ಪು. ಪೊರಕೆ ಅಶುಭವಲ್ಲ, ಬದಲಾಗಿ ಅದು ಶುಭಕರ ವಸ್ತು. ವಾಸ್ತುವಿನ ದೃಷ್ಟಿಯಿಂದಲಂತೂ ಪೊರಕೆಗೆ ದೊಡ್ಡ ಆದ್ಯತೆಯೇ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಅದೃಷ್ಟ ಹಾಗೂ ಲಕ್ಷ್ಮಿಯ ಸ್ವರೂಪ ಎನ್ನಲಾಗುತ್ತದೆ. ಹಾಗಾದರೆ ಪೊರಕೆಯ ವಸ್ತು ಪ್ರಾಮುಖ್ಯತೆ ಏನು? ನವರಾತ್ರಿಯ ಈ ಸಂದರ್ಭದಲ್ಲಿ ಲಕ್ಷ್ಮಿದೇವಿಗೆ ಪ್ರಿಯವಾದ ಈ ಪೊರಕೆಯ (Broom vastu tips) ಬಗ್ಗೆ ಒಂದಿಷ್ಟು ತಿಳಿಯೋಣ.
ಸೋಮವಾರ, ಶನಿವಾರ ಖರೀದಿ ಬೇಡ
ವಾಸ್ತು ಶಾಸ್ತ್ರದ ಪ್ರಕಾರ, ಸೋಮವಾರದಂದು ಪೊರಕೆಯನ್ನು ಯಾವತ್ತೂ ಕೂಡ ಖರೀದಿ ಮಾಡಬಾರದು. ಇದರಿಂದಾಗಿ ನಿಮ್ಮ ಧನಾಗಮನದ ವಿಚಾರದಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಮೇಲೆ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಖರ್ಚುಗಳು ಹಾಗೂ ಸಾಲದ ಮೊತ್ತ ಕೂಡ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ಶನಿವಾರದ ಪೊರಕೆ ಖರೀದಿ ಸಮಸ್ಯೆಗಳನ್ನು ತರಬಹುದಾದಂತಹ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಲಕ್ಷ್ಮೀದೇವಿಯ ಕೋಪಕ್ಕೆ ಮಾತ್ರವಲ್ಲದೆ ಶನಿಯ ಕೋಪಕ್ಕೆ ಕೂಡ ನೀವು ಗುರಿಯಾಗಬೇಕಾಗುತ್ತದೆ.
ಶುಕ್ರವಾರ, ಮಂಗಳವಾರ ಉತ್ತಮ
ಒಂದು ವೇಳೆ ಮನೆಗೆ ಹೊಸ ಪೊರಕೆಯನ್ನು ಖರೀದಿ ಮಾಡಬೇಕು ಎನ್ನುವಂತಹ ಪ್ಲಾನ್ ನಿಮ್ಮ ತಲೆಯಲ್ಲಿ ಇದ್ದರೆ ಶುಕ್ರವಾರ ಹಾಗೂ ಮಂಗಳವಾರದ ದಿನದಂದು ಇದನ್ನು ಖರೀದಿ ಮಾಡಬೇಕು. ಇದರಿಂದಾಗಿ ಲಕ್ಷ್ಮಿ ಮಾತೆಯ ಕೃಪೆ ನಿಮ್ಮ ಜೀವನದಲ್ಲಿ ಇರುತ್ತದೆ. ಇನ್ನು ಅಕ್ಷಯ ತೃತೀಯದ ದಿನದಂದು ಕೂಡ ನೀವು ಪೊರಕೆಯನ್ನು ಖರೀದಿ ಮಾಡುವುದು ಸಾಕಷ್ಟು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ.
ಯಾವಾಗ ಗುಡಿಸಬೇಕು?
ಕಸ ಗುಡಿಸುವುದಕ್ಕೆ ಸರಿಯಾದ ಸಮಯ ವಾಸ್ತುಶಾಸ್ತ್ರದ ಪ್ರಕಾರ ಸೂರ್ಯೋದಯ ಆದ ನಂತರ ಹಾಗೂ ಸೂರ್ಯಾಸ್ತದ ಒಳಗೆ ಎಂಬುದಾಗಿ ನಿರ್ಧರಿಸಲಾಗಿದೆ. ಪ್ರತಿದಿನ ಸ್ವಚ್ಛ ಮಾಡುವ ಸಂದರ್ಭದಲ್ಲಿ ನೀವು ಈ ಸಮಯದ ಒಳಗೆ ಸ್ವಚ್ಛ ಮಾಡುವುದು ಉತ್ತಮ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಅಪ್ಪಿತಪ್ಪಿಯು ಕೂಡ ಯಾವತ್ತು ಸೂರ್ಯಾಸ್ತದ ನಂತರ, ರಾತ್ರಿಯಲ್ಲಿ ಮನೆ ಗುಡಿಸಬೇಡಿ. ಇದರಿಂದಾಗಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ ಹಾಗೂ ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಈ ಸಮಯ ಪ್ರತಿಯೊಬ್ಬರ ಮನೆಗೆ ಲಕ್ಷ್ಮೀದೇವಿ ಭೇಟಿ ನೀಡುವಂತಹ ಸಮಯ.
ಎಲ್ಲಿಡಬೇಕು?
ಒಂದು ವೇಳೆ ನಿಮ್ಮ ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಕೆಲಸಗಳು ಸರಿಯಾಗಿ ನಡೆಯಬೇಕು ಹಾಗೂ ನಿಮ್ಮ ಜೀವನದಲ್ಲಿ ಕೂಡ ಸಮೃದ್ಧಿ ಹೆಚ್ಚಾಗಬೇಕು ಎನ್ನುವಂತಹ ಆಸೆ ಇದ್ರೆ ನಿಮ್ಮ ಮನೆಯಲ್ಲಿ ಕೊರತೆಯನ್ನು ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದರಿಂದಾಗಿ ಲಕ್ಷ್ಮೀದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಮನೆಯಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿಗಳು ಕೂಡ ಹೆಚ್ಚಾಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ. ಆರ್ಥಿಕ ಸಂಕಷ್ಟದ ವಿಚಾರದಲ್ಲಿ ಕೂಡ ನೀವು ಯಾವುದೇ ಸಮಸ್ಯೆಗಳನ್ನು ಕಾಣುವುದಿಲ್ಲ.
ಎಲ್ಲಿಡಬಾರದು?
ಹೊರಗಿಂದ ಬರುವ ವ್ಯಕ್ತಿಗಳ ಕಣ್ಣಿಗೆ ಕಾಣುವ ರೀತಿಯಲ್ಲಿ ಪೊರಕೆಯನ್ನು ಮನೆಯ ಒಳಗೆ ಇಡಬಾರದು. ಯಾವುದೇ ಕಾರಣಕ್ಕೂ ಕಿಚನ್ ಬೆಡ್ರೂಮ್ ಹಾಗೂ ದೇವರ ಕೋಣೆಯಲ್ಲಿ ಪೊರಕೆಯನ್ನು ಇಡುವ ದುಸ್ಸಾಹಸವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಹಣ ಇಡುವ ತಿಜೋರಿಯ ಬಳಿ ಕೂಡ ಯಾವುದೇ ಕಾರಣಕ್ಕೂ ಇಡುವುದಕ್ಕೆ ಹೋಗ್ಬೇಡಿ. ಇನ್ನು ಲಕ್ಷ್ಮಿದೇವಿ ವಾಸ ಮಾಡುವ ತುಳಸಿ ಕಟ್ಟೆಯ ಬಳಿ ಕೂಡ ಯಾವುದೇ ಕಾರಣಕ್ಕೂ ಪೊರಕೆಯನ್ನು ಇಡಲು ಮುಂದಾಗಬೇಡಿ.
