ಕನ್ನಡ ಬಿಗ್ ಬಾಸ್ ಸ್ಪರ್ಧಿಗಳು ಪೇಶನ್ಸ್ ಕಳೆದುಕೊಂಡಂತಿದೆ. ಅಶ್ವಿನಿ ಆದ್ಮೇಲೆ ಈಗ ಕಾಕ್ರೋಚ್ ಸುಧಿ ಸರದಿ. ಈಗಾಗಲೇ ಸಡೆ ಎನ್ನುವ ಪದ ಬಳಸಿ ಕೋಪಕ್ಕೆ ಗುರಿ ಆಗಿರುವ ಸುಧಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ತಾರಾ?

ಬಿಗ್ ಬಾಸ್ (Bigg Boss) ಮನೆಯಲ್ಲಿ ಗಲಾಟೆಯದ್ದೇ ಸದ್ದು. ಬರೀ ಕೂಗಾಟ ಕೇಳುತ್ತಿದೆಯೇ ವಿನಃ ಮತ್ತೇನೂ ಇಲ್ಲ ಎನ್ನುವಂತಾಗಿದೆ. ಇಷ್ಟು ದಿನ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಗೆ ಬೈದಿದ್ದ ಪದಗಳು ಚರ್ಚೆಯಲ್ಲಿದ್ವು. ಕಿಚ್ಚ ಸುದೀಪ್ (Kiccha Sudeep), ವೀಕೆಂಡ್ ನಲ್ಲಿ ಅಶ್ವಿನಿ ಗೌಡ ಬೆವರಿಳಿಸಿದ್ದರು. ಹೋಗ್ತಾ ಹೋಗ್ತಾ ಎಲ್ಲರ ಬಾಯಿ ಯಾಕೋ ಎಲ್ಲೆ ಮೀರ್ತಿದೆ. ಎಲುಬಿಲ್ಲದ ನಾಲಿಗೆಯಿಂದ ಸ್ಪರ್ಧಿಗಳು ಮನಸ್ಸಿಗೆ ಬಂದಿದ್ದನ್ನು ಮಾತನಾಡ್ತಿದ್ದಾರೆ ಎಂಬ ಗಂಬೀರ ಆರೋಪ ಸ್ಪರ್ಧಿಗಳ ಮೇಲೆ ಬರ್ತಿದೆ. ಕೋಪದಲ್ಲಿ ಅವ್ರು ಮಾತನಾಡಿದ್ದು ಅವ್ರಿಗೇ ನೆನಪಿರದೆ ಇರ್ಬಹುದು, ಆದ್ರೆ ಹೊರಗೆ ಇಂಚಿಂಚೂ ನೋಡ್ತಿರುವ ವೀಕ್ಷಕರ ಕಿವಿಗೆ ಬೀಳ್ದೆ ಇರುತ್ತಾ? ಅಶ್ವಿನಿ ಗೌಡ ನಂತ್ರ ಈಗ ಕಾಕ್ರೋಚ್ ಸುಧಿ, ರಕ್ಷಿತಾಗೆ ಬೈದು ಸುದ್ದಿಯಲ್ಲಿದ್ದಾರೆ.

ವೀಕೆಂಡ್ ನಲ್ಲಿ ಕಿಚ್ಚನ ಪಾಠ ಗ್ಯಾರಂಟಿ : 

ತನ್ನ ಮಾತನ್ನು ರಕ್ಷಿತಾ ಕೇಳಲಿಲ್ಲ ಎನ್ನುವ ಕಾರಣಕ್ಕೆ ಕಾಕ್ರೋಚ್ ಸುಧಿ ಕೋಪಗೊಂಡಿದ್ದಾಯ್ತು. ಕೋಪದಲ್ಲಿ ಸಡೆ ಎನ್ನುವ ಪದವನ್ನೂ ಬಳಸಿದ್ದಾಗಿದೆ. ನಾಲಿಗೆ ಕತ್ತರಿಸಿ ಬಿಡ್ತೇನೆ ಅಂತ ಸುಧಿ ಹೇಳಿದ್ದಾರೆ. ಇದನ್ನು ಕೇಳಿದ ರಕ್ಷಿತಾ, ಕೂಗಿದ್ದು ಕೇಳಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ ಸಡೆ ಎಂಬ ಪದ ಬಳಕೆ ಈಗ ಬಿಗ್ ಬಾಸ್ ಮನೆ ಒಳಗೆ ಮಾತ್ರವಲ್ಲ ಹೊರಗೆ ಬಿಸಿ ಏರಿಸಿದೆ. ರಕ್ಷಿತಾಗೆ, ಸುಧಿ ಬಳಸಿರುವ ಈ ಪದ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ಈ ವೀಕೆಂಡ್ ನಲ್ಲಿ ಸುದೀಪ್, ಸಡೆ ಪದದ ಅರ್ಥವನ್ನು ಸರಿಯಾಗಿ ಹೇಳ್ತಾರೆ, ಸುಧಿಗೆ ಬುದ್ದಿ ಕಲಿಸೋ ಅಗತ್ಯವಿದೆ ಎನ್ನುತ್ತಿದ್ದಾರೆ ವೀಕ್ಷಕರು.

Bigg Boss ವೇಳೆ ಸುದೀಪ್​ ಹಿಡಿದಿರೋ ಗ್ಲಾಸ್​ನಲ್ಲಿ ಇರೋ ಡ್ರಿಂಕ್ಸ್​ ಏನು? ಕಿಚ್ಚನಿಂದ ಕೊನೆಗೂ ಗುಟ್ಟು ರಿವೀಲ್​

ಬಿಗ್ ಬಾಸ್ ಮನೆಯಲ್ಲಿ ಆಗಿದ್ದೇನು? : 

ಬಿಗ್ ಬಾಸ್ ಮನೆಯಲ್ಲಿ ಕೆಲ್ಸ ಹಂಚುವ ಬಗ್ಗೆ ಚರ್ಚೆ ಆಗ್ತಿತ್ತು. ಈ ಟೈಂನಲ್ಲಿ ಕಾಕ್ರೋಚ್ ಸುಧಿ, ರಕ್ಷಿತಾರನ್ನು ಕರೆದಿದ್ದಾರೆ. ಮಾತಿನ ಮಧ್ಯೆ ರಕ್ಷಿತಾ ಅವರ ಕೂಗಿಗೆ ರೆಸ್ಪಾನ್ಸ್ ಮಾಡಲಿಲ್ಲ. ಇದ್ರಿಂದ ಕೋಪಗೊಂಡ ಸುಧಿ, ನಿನ್ನೆ ಮೊನ್ನೆ ಬಂದ ಸಡೆ ಅಂತ ಬೈದಿದ್ದಾರೆ. ಅಷ್ಟೇ ಅಲ್ಲ, ಮಧ್ಯದಲ್ಲಿ ಮಾತನಾಡಿದ್ರೆ ನಾಲಿಗೆ ಸೀಳಿಬಿಡ್ತೇನೆ ಎಂದಿದ್ದಾರೆ. ಈ ವಿಷ್ಯ ಕೊನೆಗೆ ಮನೆಯಲ್ಲಿ ಚರ್ಚೆಯಾಗಿದೆ. ಸುಧಿ, ಸಡೆ ಶಬ್ಧ ಬಳಸಬಾರದಿತ್ತು ಅಂತ ಗಿಲ್ಲಿ ಹೇಳ್ತಾರೆ. ಅದಕ್ಕೆ ಸುಧಿ, ಸಡೆ ಪದದ ಅರ್ಥ ಹೇಳಿದ್ದಾರೆ. ಸಡೆ ಅಂದ್ರೆ ಚಿಕ್ಕವರು ಎಂದರ್ಥ. ರಕ್ಷಿತಾ ನನಗಿಂತ 20 ವರ್ಷ ಚಿಕ್ಕವರು. ಅದಕ್ಕೆ ಈ ಪದ ಬಳಸಿದೆ ಎನ್ನುತ್ತಾರೆ. ನಂತ್ರ ತಪ್ಪಿನ ಅರಿವಾಗಿ ಎಲ್ಲರ ಕ್ಷಮೆ ಕೇಳಿದ್ದಾರಂತೆ. ಇದನ್ನು ಜಾಹ್ನವಿ ಹೇಳಿದ್ದಾರೆ. ಒಟ್ಟಿನಲ್ಲಿ ತಪ್ಪು ಮಾತನಾಡಿ ಕೊನೆಗೆ ಸುಧಿ ಕ್ಷಮೆ ಕೇಳಿದ್ದಾರೆ. ಆದ್ರೆ ತಪ್ಪು ತಪ್ಪೇ ಅನ್ನೋದು ವೀಕ್ಷಕರ ವಾದ.

Karna Serial ರೋಚಕ ಟ್ವಿಸ್ಟ್​: ಮದುಮಗ ತೇಜಸ್​ ಕಿಡ್ನಾಪ್​- 3 ತಿಂಗಳ ಗಡುವು ಕೇಳಿದ ನಿತ್ಯಾ!

ರಕ್ಷಿತಾಗೆ ಬೈದು ಈಗ ಅಶ್ವಿನಿ ಸಂಕಷ್ಟದಲ್ಲಿದ್ದಾರೆ. ಸುಧಿಗೂ ಇದೆ ಪರಿಸ್ಥಿತಿ ಬರಬೇಕು. ಚಿಕ್ಕ ಹುಡುಗಿಯನ್ನು ಬೈದ್ರೆ ಏನಾಗುತ್ತೆ ಗೊತ್ತಾಗ್ಬೇಕು ಅನ್ನೋದು ವೀಕ್ಷಕರ ವಾದ. ಸುಧಿ ತಪ್ಪು ಮಾಡಿದ್ದು, ಅವ್ರನ್ನು ಮನೆಯಿಂದ ಹೊರಗೆ ಹಾಕಿ, ವೀಕೆಂಡ್ ನಲ್ಲಿ ಬುದ್ಧಿ ಕಲಿಸಿ ಅಂತೆಲ್ಲ ವೀಕ್ಷಕರು ಸಲಹೆ ನೀಡಿದ್ದಾರೆ. ವೀಕೆಂಡ್ ನಲ್ಲಿ ಬರುವ ಕಿಚ್ಚ ಸುದೀಪ್, ಸುಧಿಗೆ ಕ್ಲಾಸ್ ತೆಗೆದುಕೊಳ್ತಾರಾ? ಸುಧಿ ಉತ್ತರ ಏನು? ಅದಕ್ಕೆ ರಕ್ಷಿತಾ ಹೇಗೆ ಟಕ್ಕರ್ ನೀಡ್ತಾರೆ ಅನ್ನೋದನ್ನು ವೀಕ್ಷಕರು ಕಾದು ನೋಡ್ಬೇಕಿದೆ.