Shravani Subramanya Serial Today Episode: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸಂಸಾರ ಶುರು ಮಾಡಬೇಕು ಎಂದು ಕನಸು ಕಾಣುತ್ತಿದ್ದ ಸುಬ್ಬುಗೆ ಶ್ರಾವಣಿ ಅರಗಿಸಿಕೊಳ್ಳಲಾಗದ ತಿರುಗೇಟು ಕೊಟ್ಟಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು? 

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಹಾಗೂ ಸುಬ್ಬು ಕೊನೆಗೂ ಮದುವೆಯಾಗಿದ್ದಾರೆ. ತಂದೆ ವೀರಭದ್ರನ ಸಮ್ಮತಿಯೊಂದಿಗೆ ಶ್ರಾವಣಿ, ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಆಗಿದ್ದಾಳೆ. ಮದುವೆಯಾದರೂ ಕೂಡ ಇನ್ನೂ ಸುಬ್ಬು ಮಾತ್ರ ಶ್ರಾವಣಿಗೆ ಪ್ರೀತಿಯ ವಿಷಯವನ್ನು ಹೇಳಿಕೊಂಡಿಲ್ಲ.

ಮದುವೆ ನಾಟಕ ಮಾಡಿದ್ದ ಶ್ರಾವಣಿ

ವೀರಭದ್ರನನ್ನು ಕಂಡರೆ ಸುಬ್ಬುಗೆ ಎಲ್ಲಿಲ್ಲದ ಪ್ರೀತಿ, ಗೌರವ. ಸದಾ ಯಜಮಾನ್ರೇ ಎಂದು ಅವರು ಹೇಳಿದಂತೆ ಕೇಳುವ ಸುಬ್ಬುಗೆ ಶ್ರಾವಣಿ ಮೇಲೆ ಲವ್‌ ಇರೋದು ಗೊತ್ತೇ ಇರಲಿಲ್ಲ. ಆರಂಭದಲ್ಲಿ ಶ್ರಾವಣಿಗೂ, ಅವಳ ಅತ್ತೆ ಮಗ ಮದನ್‌ಗೂ ಮದುವೆ ಫಿಕ್ಸ್‌ ಆಗಿತ್ತು. ಆದರೆ ಈ ಮದುವೆ ಇಷ್ಟವಿಲ್ಲದೆ ಅವಳು ತಾನೇ ತಾಳಿ ಕಟ್ಟಿಕೊಂಡು, ಸುಬ್ಬು ತಾಳಿ ಕಟ್ಟಿದ ಅಂತ ಸುಳ್ಳು ಹೇಳಿದ್ದಳು.

ಶ್ರಾವಣಿಯನ್ನು ಸೊಸೆ ಅಂತ ಒಪ್ಪಿರಲಿಲ್ಲ

ಶ್ರಾವಣಿ ಈ ರೀತಿ ಹೇಳಿಕೆ ಕೊಟ್ಟಿದ್ದು ಸುಬ್ಬುಗೆ ಶಾಕ್‌ ತಂದಿತ್ತು. ಇನ್ನೊಂದು ಕಡೆ ಸುಬ್ಬುನನ್ನು ಪ್ರೀತಿಸಿ, ಅವನನ್ನು ಮದುವೆ ಆಗಬೇಕು ಅಂತಿದ್ದ ಶ್ರೀವಲ್ಲಿಗೆ ಭೂಮಿಯೇ ಇಬ್ಭಾಗ ಆಗುವಂಥ ಶಾಕ್‌ ಕೊಟ್ಟಿತ್ತು. ಆರಂಭದಲ್ಲಿ ಸುಬ್ಬು ಮನೆಯವರು ಶ್ರಾವಣಿಯನ್ನು ಸೊಸೆ ಅಂತ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಶ್ರಾವಣಿ ಸಾಕಷ್ಟು ಕಷ್ಟಪಟ್ಟಿದ್ದಳು.

ಶ್ರಾವಣಿ-ಸುಬ್ಬು ಮದುವೆಯಾಯ್ತು

ಕೊನೆಗೆ ಎಲ್ಲರಿಗೂ ಶ್ರಾವಣಿ-ಸುಬ್ರಹ್ಮಣ್ಯ ಮದುವೆ ಆಯ್ತು. ಮದನ್‌ ಜೊತೆ ಮದುವೆ ಆಗೋದು ಶ್ರಾವಣಿಗೆ ಇಷ್ಟ ಇರಲಿಲ್ಲ, ಹೀಗಾಗಿ ಅವಳು ಈ ರೀತಿ ಮಾಡಿದ್ದಾಳೆ ಅಂತಲೂ ಗೊತ್ತಾಗಿದೆ. ಈಗ ಮನೆಯವರೇ ಶ್ರಾವಣಿ-ಸುಬ್ಬು ಮದುವೆ ಮಾಡಿಸಿದ್ದಾರೆ. ಆದರೆ ಇನ್ನೂ ಸುಬ್ಬು, ಶ್ರಾವಣಿ ಬಳಿ ಪ್ರೀತಿ ವಿಷಯವನ್ನು ಹೇಳಿಕೊಂಡಿಲ್ಲ.

ಬೇಸರ ತರಿಸಿದ ಸುಬ್ಬು ಮಾತು

ಮದುವೆಯಾದಮೇಲೆ ಪ್ರೀತಿ ಹೇಳಿಕೊಳ್ಳಬೇಕು ಅಂತ ಸುಬ್ಬು ಅಂದುಕೊಂಡರೂ ಕೂಡ ಹೇಳಲಾಗುತ್ತಿಲ್ಲ. ಇನ್ನೊಂದು ಕಡೆ ಸುದ್ದಿಗೋಷ್ಠಿಯಲ್ಲಿ ಯಜಮಾನರ ಮಾನ ಉಳಿಸಿಕೊಳ್ಳಬೇಕು ಎಂದು ಅವನು, “ಯಜಮಾನ್ರು ಹೇಳಿದರು ಅಂತ ನಾನು ಶ್ರಾವಣಿ ಅವರನ್ನು ಮದುವೆ ಆದೆ” ಅಂತ ಹೇಳಿದ್ದಾನೆ. ಇದು ಶ್ರಾವಣಿಗೆ ಬೇಸರ ತರಿಸಿದೆ.

ಶಾಕ್‌ ಕೊಟ್ಟ ಶ್ರಾವಣಿ

ಸುಬ್ಬು ನನ್ನನ್ನು ಪ್ರೀತಿ ಮಾಡ್ತಿಲ್ಲ ಅಂತ ಶ್ರಾವಣಿಗೆ ಬೇಸರ ಆಗಿದೆ. ಇವತ್ತಲ್ಲ ಅಥವಾ ನಾಳೆ ನಾನು ನನ್ನ ಪ್ರೇಮ ನಿವೇದನೆ ಮಾಡಿಕೊಳ್ತೀನಿ ಅಂತ ಸುಬ್ಬು ಅಂದುಕೊಳ್ಳುತ್ತಿದ್ದಾನೆ. ಅಷ್ಟೇ ಅಲ್ಲದೆ ಶ್ರಾವಣಿ ಜೊತೆಗೆ ಸಂಸಾರ ಶುರು ಮಾಡುವ ಕನಸು ಕೂಡ ಕಾಣುತ್ತಿದ್ದಾನೆ. ಹೀಗಿರುವಾಗ ಶ್ರಾವಣಿ ಅವನಿಗೆ ಶಾಕ್‌ ಕೊಟ್ಟಿದ್ದಾಳೆ.

“ಸುಬ್ಬು ನನ್ನ ಪ್ರೀತಿ ಮಾಡ್ತಿಲ್ಲ, ಅವನಿಗೆ ನಾನು ಬೇಕಿಲ್ಲ. ನನ್ನ ತಂದೆ ವೀರಭದ್ರ ಹೇಳಿದ ಅಂತ ಅವನು ನನ್ನನ್ನು ಮದುವೆಯಾದ” ಅಂತ ಶ್ರಾವಣಿ ನಂಬಿಕೊಂಡಿದ್ದಾಳೆ. ಸುಬ್ಬುಗೆ ನನ್ನ ಮೇಲೆ ಲವ್‌ ಇದೆ ಎನ್ನುವ ವಿಷಯ ಶ್ರಾವಣಿಗೆ ಗೊತ್ತೇ ಇಲ್ಲ. ಇನ್ನೊಂದು ಕಡೆ ಶ್ರಾವಣಿಯು ಸುಬ್ಬುಗೆ ಡಿವೋರ್ಸ್‌ ಕೊಡಲು ರೆಡಿ ಆಗಿದ್ದಾಳೆ. ಲಾಯರ್‌ನನ್ನು ಕರೆಸಿ, ನಿನಗೆ ಡಿವೋರ್ಸ್‌ ಕೊಡ್ತಿದೀನಿ ಅಂತ ಶ್ರಾವಣಿ ಹೇಳಿದ್ದಾಳೆ. ಈ ಮಾತು ಕೇಳಿ ಸುಬ್ಬು ಕಂಗಾಲಾಗಿದ್ದಾನೆ. ಶ್ರಾವಣಿ ನಿಜವಾಗಿಯೂ ಇದಕ್ಕೆ ಕಾರಣ ಏನು ಎಂದು ಹೇಳಿದಾಗ, ಸುಬ್ಬು ಆಗ ನಿಜವಾದ ಸತ್ಯ ಏನೆಂದು ಹೇಳಬಹುದು. ಒಟ್ಟಿನಲ್ಲಿ ಇವರಿಬ್ಬರು ಪರಸ್ಪರ ಯಾವಾಗ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೋ ಏನೋ

ಒಟ್ಟಿನಲ್ಲಿ ಈ ಧಾರಾವಾಹಿ ಎಪಿಸೋಡ್‌ಗಳು ಭಾರೀ ಕುತೂಹಲ ಮೂಡಿಸುತ್ತಿವೆ, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾಮೆಂಟ್‌ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ

ಪಾತ್ರಧಾರಿಗಳು

ಶ್ರಾವಣಿ- ಆಸಿಯಾ ಫಿರ್‌ದೋಸ್‌

ಸುಬ್ರಹ್ಮಣ್ಯ-ಅಮೋಘ್‌

ವೀರಭದ್ರ-ಮೋಹನ್