ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರ ಇತ್ತೀಚಿನ ಅಡುಗೆ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಎರಡನೇ ಮದುವೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಚಂದನ್ ಶೆಟ್ಟಿಯಿಂದ ವಿಚ್ಛೇದನದ ನಂತರ, ಆರ್ಥಿಕವಾಗಿ ಸ್ವಾವಲಂಬಿಯಾಗಲು ಬಯಸುವ ನಿವೇದಿತಾ, ಈ ಹಿಂದೆ ಮರುಮದುವೆಯ ಬಗ್ಗೆ ಮಾತನಾಡಿದ್ದಾರೆ.
ಬಿಗ್ಬಾಸ್ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಸದ್ಯ ರೀಲ್ಸ್ನಲ್ಲಿ ಬಿಜಿಯಾಗಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಯಾಗಲು ಐಟಂ ಸಾಂಗ್ ಮಾಡಲು ಬೇಕಿದ್ರೆ ರೆಡಿ ಎಂದು ಇದಾಗಲೇ ಸಂದರ್ಶನದಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ಯಾವಾಗಲೂ ಬಿಕಿನಿ, ಟೂ ಪೀಸ್, ತುಂಡುಡುಗೆ ತೊಟ್ಟುಕೊಂಡು ಧಾರಾಳ ದೇಹ ಪ್ರದರ್ಶನ ಮಾಡ್ತಿರೋ ನಿವೇದಿತಾ ಅದರಿಂದ ಬಿಡುವು ಕೊಟ್ಟು ಅಡುಗೆ ಮಾಡ್ತಿರೋದನ್ನು ನೋಡಿದ ಅವರ ಅಭಿಮಾನಿಗಳಿಗೆ ಇನ್ನಿಲ್ಲದ ಪ್ರಶ್ನೆ ಎದುರಾಗಿದೆ. ನಿವೇದಿತಾ ಯಾವ ಪೋಸ್ಟ್ ಹಾಕಿದರೂ ಅದಕ್ಕೆ ನೆಗೆಟಿವ್ ಕಮೆಂಟ್ ಹಾಕಿ, ಟ್ರೋಲ್ ಮಾಡುವುದಕ್ಕಾಗಿಯೇ ಒಂದಷ್ಟು ಮಂದಿ ಕಾಯುತ್ತಿರುತ್ತಾರೆ. ಇದೀಗ ನಟಿ ಅಡುಗೆಯ ವಿಡಿಯೋ ಮಾಡಿದ್ರೂ ಅದಕ್ಕೂ ಬೇರೆಯದ್ದೇ ರೀತಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಎರಡನೆಯ ಮದ್ವೆಗೆ ರೆಡಿನಾ ಎಂದು ಕಮೆಂಟ್ ಬಾಕ್ಸ್ನಲ್ಲಿ ಪ್ರಶ್ನೆಗಳ ಸುರಿಮಳೆಯಾಗಿದೆ.
ವಿಡಿಯೋ ಮಾಡ್ತಿರೋದು ಯಾರು?
ನಿವೇದಿತಾ ಗೌಡ ಅಡುಗೆ ಮಾಡ್ತಿರೋ ವಿಡಿಯೋ ಮಾಡ್ತಿರೋದು ಯಾರು ಎಂಬ ಪ್ರಶ್ನೆ ಹಲವರದ್ದು. ಆದರೆ ಅದು ಬಹುಶಃ ನಿವೇದಿತಾ ಅವರ ಸಹೋದರ ಇದ್ದಿರಬಹುದೇನೋ. ಆದರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ವಿಡಿಯೋ ಮಾಡುತ್ತಿರುವವರು ಉಪ್ಪು ಎಲ್ಲಿಂದ ಬರತ್ತೆ ಎನ್ನುವುದು ಗೊತ್ತಾ ಎಂದಾಗ ಸಮುದ್ರದಿಂದ ಎಂದು ಹೇಳಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು, ಪರವಾಗಿಲ್ಲ ಇದಾದ್ರೂ ಗೊತ್ತಲ್ಲ ಎನ್ನುತ್ತಿದ್ದಾರೆ. ಇಷ್ಟು ಮಾತನಾಡುತ್ತಿದ್ದಂತೆಯೇ ನಿವೇದಿತಾಗೆ ಉಪ್ಪು ಯಾವಾಗ ಹಾಕಬೇಕು ಎನ್ನೋದು ಕನ್ಫ್ಯೂಸ್ ಆಗಿ ಹೋಗಿದೆ. ಆಗ ಉಪ್ಪು ಯಾವಾಗ ಹಾಕಬೇಕು ಎಂದು ಕೇಳಿದ್ದಾರೆ. ಆಮೇಲೆ ಟೊಮೆಟೊ ಚಿಂತೆ ಶುರುವಾಗಿದೆ. ಟೊಮೆಟೊ ಸರಿ ಹಾಕಿದ್ನೋ ಇಲ್ವೋ ಎನ್ನುವ ಪ್ರಶ್ನೆಯನ್ನೂ ನಿವೇದಿತಾ ಕೇಳಿದ್ದಾರೆ.
2ನೇ ಮದ್ವೆ ಬಗ್ಗೆ ಪ್ರಸ್ತಾಪ
ಕೆಲ ದಿನಗಳ ಹಿಂದೆ ಮಾಧ್ಯಮದ ಮುಂದೆ 2ನೇ ಮದ್ವೆ ಬಗ್ಗೆ ನಟಿ ಪ್ರಸ್ತಾಪಿಸಿದ್ದರು. ಸದ್ಯಕ್ಕೆ ಮದುವೆ ವಿಷಯ ಬಂದರೆ ಭಯ. ಭವಿಷ್ಯದಲ್ಲಿ ಯಾರಾದ್ರೂ ತುಂಬಾ ಇಷ್ಟ ಪಟ್ಟು, ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂದರೆ ನಾನು ಕುಟುಂಬ ಮುಂದುವರೆಸಲು ಇಷ್ಟ ಪಡುತ್ತೇನೆ ಎಂದು ಹೇಳಿದ್ದರು. ಮುಂದೊಂದು ದಿನ ಒಳ್ಳೆ ಹುಡುಗ ಸಿಕ್ಕರೆ, ಅರ್ಥಮಾಡಿಕೊಳ್ಳುವ ಹುಡುಗ ಸಿಕ್ಕರೆ ಕುಟುಂಬ ಮುಂದುವರೆಸಲು ಇಷ್ಟ ಪಡ್ತೀನಿ ಎಂದಿದ್ದರು. ಅದಕ್ಕಾಗಿಯೇ ಆ ಹುಡುಗ ಸಿಕ್ಕನಾ ಎಂದು ಅಡುಗೆಯ ವಿಡಿಯೋಗೆ ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.
ಸದ್ಯ ನಟಿಯ ಲೆವೆಲ್ಲೇ ಬೇರೆ
ಅಷ್ಟಕ್ಕೂ, Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಅವರ ಲೆವೆಲ್ಲೇ ಈಗ ಬೇರೆಯಾಗಿದೆ. ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ, ಫಾರಿನ್ ಟೂರ್ ಹೆಚ್ಚಾಗಿದೆ, ಜೊತೆಗೆ ತುಂಡುಡುಗೆ ಕುಣಿತವೂ ಅಷ್ಟೇ ಜೋರಾಗಿದೆ. ವಾಣಿ ಎನ್ನುವ ಸ್ನೇಹಿತೆಯ ಜೊತೆ ಟ್ರೋಲ್ ಆಗುವಂಥ ರೀಲ್ಸ್ ಮಾಡುತ್ತಾ ಅಷ್ಟೇ (ಕು)ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. ಟ್ರೋಲ್ ಆದಷ್ಟೂ ಹೆಚ್ಚು ಹೆಚ್ಚು ಫೇಮಸ್ ಆಗುತ್ತಾ, ಹೆಚ್ಚಿಗೆ ದುಡಿಯುತ್ತಿದ್ದಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಭರ್ಜರಿ ಆಫರ್ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಗೌಡ ಅವರ ರೇಂಜ್ ಇದೊಂದು ವರ್ಷದಲ್ಲಿ ಬೇರೆಯದ್ದೇ ಲೆವೆಲ್ಲಿಗೆ ಹೋಗಿದೆ ಎನ್ನಬಹುದು. ಇನ್ನೂ ವಯಸ್ಸು 20 ಇರುವಾಗಲೇ ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿಯವರ ಲವ್ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವ ಯುವತಿಯೇ.
ಐಷಾರಾಮಿ ಜೀವನ
ಒಟ್ಟಿನಲ್ಲಿ ನಿವೇದಿತಾ ಅವರಿಗೆ ಐಷಾರಾಮಿ ಜೀವನ ಬೇಕು. ಇದೇ ಕಾರಣಕ್ಕೆ ತಮಗೂ ಈಕೆಗೂ ಹೊಂದಾಣಿಕೆ ಆಗಿಲ್ಲ ಎಂದೂ ಚಂದನ್ ಶೆಟ್ಟಿ (Chandan Shetty) ಹೇಳಿದ್ದು ಇದೆ. ಆದರೆ ನಿವೇದಿತಾ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಐಷಾರಾಮಿ ಜೀವನಕ್ಕೆ ತಾವೇ ದುಡಿದುಕೊಂಡು ಮಾದರಿ ಕೂಡ ಆಗಿದ್ದಾರೆ. ಫೈನಾನ್ಷಿಯಲಿ ನಾನು ಯಾರ ಸಹಾಯವನ್ನೂ ಕೇಳುವವಳಲ್ಲ, ಚಂದನ್ ಶೆಟ್ಟಿ ಜೊತೆಗೆ ಇರುವಾಗಲೂ ನನ್ನದೇ ದುಡ್ಡಿನಿಂದ ವಸ್ತು ಖರೀದಿಸುತ್ತಿದ್ದೆ ಎಂದಿದ್ದಾರೆ. ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.
ಇದನ್ನೂ ಓದಿ: ಆದಾಯದ ಮೂಲ ತೆರೆದಿಟ್ಟು ಶಾಕ್ ಕೊಟ್ಟ ಬಿಗ್ಬಾಸ್ Niveditha Gowda- ಫಾರಿನ್ ಟೂರ್ ಬಗ್ಗೂ ರಿವೀಲ್
