ಮಲೆಯಾಳಂ ನಟಿ ಜಸೀಲಾ ಪರ್ವೀಣ್ ತಮ್ಮ ಪ್ರಿಯಕರನಿಂದ ದೈಹಿಕ ಹಲ್ಲೆಗೊಳಗಾಗಿದ್ದಾರೆ. ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ನನ್ನನ್ನು ಪ್ರೀತಿ ಮಾಡುವ ಹುಡುಗ ನನ್ನ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಆತ ಮಾಡಿರುವ ಗಾಯಗಳು ಗುಣವಾಗುವುದಕ್ಕೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎಂದು ಸ್ವತಃ ನಟಿ ತನ್ನ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಲೆಯಾಳಂನಲ್ಲಿ ಟಿವಿ ವೀಕ್ಷಕರಿಗೆ ಪರಿಚಿತರಾಗಿರುವ ನಟಿ ಮತ್ತು ಮಾಡೆಲ್ ಜಸೀಲಾ ಪರ್ವೀಣ್. ಫ್ಲವರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸ್ಟಾರ್ ಮ್ಯಾಜಿಕ್ ಶೋ ಮೂಲಕ ಜಸೀಲಾ ಗಮನ ಸೆಳೆದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜಸೀಲಾ ಇತ್ತೀಚೆಗೆ ಹಂಚಿಕೊಂಡ ಕೆಲವು ಚಿತ್ರಗಳು ಮತ್ತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ತನ್ನ ಪ್ರಿಯಕರನಿಂದ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ಜಸೀಲಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ. ಡಾನ್ ಥಾಮಸ್ ಎಂಬಾತ ತನ್ನನ್ನು ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಮತ್ತು ಗಾಯಗಳು ಗುಣವಾಗಲು ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎಂದು ಜಸೀಲಾ ಹೇಳಿದ್ದಾರೆ.

ಡಾನ್ ಥಾಮಸ್ ಜೊತೆ ಜಗಳವಾದಾಗ ಅವನು ತನ್ನ ಹೊಟ್ಟೆಯ ಮೇಲೆ ಒದ್ದಿದ್ದಾನೆ ಮತ್ತು ಮುಖಕ್ಕೆ ಹೊಡೆದಿದ್ದಾನೆ ಎಂದು ಜಸೀಲಾ ಹೇಳಿದ್ದಾರೆ. ಒಂದು ಹಂತದಲ್ಲಿ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ ಎಂದು ಜಸೀಲಾ ಹೇಳಿದ್ದಾರೆ. '2024 ಡಿಸೆಂಬರ್ 31 ರಂದು ಹೊಸ ವರ್ಷದ ಪಾರ್ಟಿಯ ನಂತರ ಡಾನ್ ಥಾಮಸ್ ಮತ್ತು ನಾನು ಜಗಳವಾಡಿದೆವು. ಆಗ ಅವನು ನನ್ನ ಹೊಟ್ಟೆಯ ಮೇಲೆ ಎರಡು ಬಾರಿ ಒದ್ದನು. ನನ್ನ ಮುಖಕ್ಕೆ ಉಂಗುರ ಧರಿಸಿ ಹಲವು ಬಾರಿ ಹೊಡೆದನು. ಮುಖ ಗಾಯಗೊಂಡು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಾಯಿತು.

View post on Instagram

ಮೊದಲು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವನು ನಿರಾಕರಿಸಿದನು. ಆದರೆ ನಂತರ ಅವನು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದನು. ನಾನು ಬಿದ್ದೆ ಎಂದು ಸುಳ್ಳು ಹೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಕೆಲವು ದಿನಗಳ ನಂತರ ಅವನ ವಿರುದ್ಧ ದೂರು ನೀಡಿದೆ. ಪ್ರಕರಣ ಈಗ ವಿಚಾರಣೆಯಲ್ಲಿದೆ', ಎಂದು ಜಸೀಲಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಹಲ್ಲೆಯ ಚಿತ್ರಗಳು ಮತ್ತು ಮಾಜಿ ಪ್ರಿಯಕರ ಡಾನ್ ಥಾಮಸ್‌ನ ಚಿತ್ರಗಳನ್ನು ಜಸೀಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.