ಮುಂಬೈನಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಆರೋಪದ ಮೇಲೆ ಧಾರಾವಾಹಿ ನಟಿ ಅನುಷ್ಕಾ ಮೋನಿ ಮೋಹನ್ ದಾಸ್ ಬಂಧನ. ಯುವತಿಯರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಆರೋಪ.
ಮುಂಬೈ (ಸೆ.5): ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಹೀರೋಯಿನ್ ಆಗುವ ಕನಸು ಕಂಡ ಬಂದ ಯುವತಿಯರನ್ನು ತನ್ನ ಸೆಕ್ಸ್ ರಾಕೆಟ್‌ಗೆ ಬಳಸಿಕೊಳ್ಳುತ್ತಿದ್ದ ಆರೋಪದಲ್ಲಿ ಪ್ರಖ್ಯಾತ ಸೀರಿಯಲ್ ನಟಿಯನ್ನು ಮುಂಬೈ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸಿನಿಮಾಗಳು ಹಾಗೂ ಧಾರವಾಹಿಯಲ್ಲಿ ಚಾನ್ಸ್ ಕೊಡಿಸುವ ನೆಪದಲ್ಲಿ ಯುವತಿಯರನ್ನು ಲೈಂಗಿಕ ಜಾಲ ನಡೆಸುತ್ತಿದ್ದ ಆರೋಪದಲ್ಲಿ ನಟಿಯನ್ನು ಬಂಧಿಸಲಾಗಿದೆ. ಬಂಧಿತ ನಟಿಯನ್ನು 41 ವರ್ಷದ ಅನುಷ್ಕಾ ಮೋನಿ ಮೋಹನ್ ದಾಸ್ ಎಂದು ಗುರುತಿಸಲಾಗಿದೆ.
ಮುಂಬೈನ ಥಾಣೆಯಲ್ಲಿ ಈಕೆ ತನ್ನ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಅದರ ಆಧಾರದ ಮೇಲೆ ಈಕೆಯನ್ನು ಬಂಧಿಸಲಾಗಿದೆ. ಇದೇ ವೇಳೆ ಈಕೆಯ ಬಕೆಗೆ ಬಿದ್ದಿದ್ದ ಇಬ್ಬರು ಸಿನಿಮಾ ತಾರೆಯರನ್ನು ಕೂಡ ಪೊಲೀಸರು ರಕ್ಷಿಸಿದ್ದಾರೆ. ಇವರುಗಳು ಟಿವಿ ಸೀರಿಯಲ್‌ಗಳು ಹಾಗೂ ಬಾಂಗ್ಲಾ ಸಿನಿಮಾಗಳಲ್ಲಿ ಈಗಲೂ ನಟಿಸುತ್ತಿರುವ ನಟಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ತನ್ನನ್ನು ತಾನು ಮಾಡೆಲ್, ಸೀರಿಯಲ್ ನಟಿ ಹಾಗೂ ಬಾಲಿವುಡ್ ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡುವ ತಾರೆ ಎಂದು ಮೋನಿ ಮೋಹನ್ ದಾಸ್ ಬರೆದುಕೊಂಡಿದ್ದಾರೆ. ಅನುಷ್ಕಾ ಬಹಳ ಸಮಯದಿಂದ ವೇಶ್ಯಾವಾಟಿಕೆ ಕೇಂದ್ರವನ್ನು ನಡೆಸುತ್ತಿದ್ದಳು. ತನ್ನ ಕ್ಲೈಂಟ್‌ಗಳ ಅಗತ್ಯಗಳಿಗೆ ಅನುಗುಣವಾಗಿ ಮಹಿಳೆಯರನ್ನು ತಲುಪಿಸುವುದು ಆಕೆಯ ವಿಧಾನವಾಗಿತ್ತು. ಅನುಷ್ಕಾ ಸಿನಿಮಾ ಮತ್ತು ಸೀರಿಯಲ್ ಸ್ಟಾರ್‌ಗಳ ಡೇಟ್‌ಗಾಗಿ ಕ್ಲೈಂಟ್‌ಗಳಿಂದ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸುತ್ತಿದ್ದಳು. ತನ್ನ ವ್ಯವಹಾರಗಳಿಗಾಗಿ ನಟಿಯರೂ ಸೇರಿದಂತೆ ಜನರನ್ನು ಬೆದರಿಸಿ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ.
ಈಕೆಯ ಜಾಲದ ಬಗ್ಗೆ ತಿಳಿದ ಪೊಲೀಸರು ಅನುಷ್ಕಾ ಮೇಲೆ ಕಣ್ಣಿಟ್ಟಿದ್ದರು. ಮಾಹಿತಿ ನಿಜ ಎಂದು ಸ್ಪಷ್ಟವಾದಾಗ ಪೊಲೀಸರು ಸಾಕ್ಷ್ಯಾಧಾರಗಳೊಂದಿಗೆ ಆಕೆಯನ್ನು ಬಂಧಿಸಲು ಪ್ರಯತ್ನಿ ಮಾಡಿದ್ದರು. ಕ್ಲೈಂಟ್‌ಗಳ ಸೋಗಿನಲ್ಲಿ ಪೊಲೀಸ್ ತಂಡ ಆಗಮಿಸಿತು. ಅವರು ಪೊಲೀಸರು ಎಂದು ಅರಿತುಕೊಳ್ಳದ ಅನುಷ್ಕಾ, ಮಾಲ್‌ನಲ್ಲಿ ಅವರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಳು ಅವರು ಅಲ್ಲಿಗೆ ಬಂದಾಗ, ಕಾಯುತ್ತಿದ್ದ ಪೊಲೀಸ್ ತಂಡ ಅನುಷ್ಕಾಳನ್ನು ಬಂಧಿಸಿದೆ.
ಈ ಜಾಲದಿಂದ ರಕ್ಷಿಸಲ್ಪಟ್ಟ ಸೀರಿಯಲ್ ಯುವತಿಯರನ್ನು ಆಶ್ರಯ ಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈ ಲೈಂಗಿಕ ಜಾಲದ ಹಿಂದೆ ಇತರ ಜನರಿದ್ದಾರೆ ಮತ್ತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಷ್ಕಾ ಬಲೆಗೆ ಇನ್ನೂ ಹೆಚ್ಚಿನ ನಟಿಯರು ಬಿದ್ದಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಯಾರೀಕೆ ಅನುಷ್ಕಾ ಮೊನಿ ಮೋಹನ್ ದಾಸ್
41 ವರ್ಷದ ಅನುಷ್ಕಾ ಮೋನಿ ಮೋಹನ್ ದಾಸ್ ಅವರನ್ನು ಮೂನ್ ದಾಸ್ ಎಂದೇ ಕರೆಯಲಾಗುತ್ತದೆ. ಬಂಗಾಳಿ ನಟಿ ಮಾಜಿ ಮಾಡೆಲ್ ಆಗಿದ್ದು, ಬಂಗಾಳಿ ಚಿತ್ರ ಲೋಫರ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಕ್ರಾನಿಕಲ್ ಪ್ರಕಾರ, ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದು, ಹನಿ ಸಿಂಗ್, ಮಿಕಾ ಸಿಂಗ್ ಮತ್ತು ಉದಿತ್ ನಾರಾಯಣ್ ಅವರಂತಹ ಗಾಯಕರೊಂದಿಗೆ ಕಾರ್ಯಕ್ರಮ ನೀಡಿದ್ದಾರೆ.

ಅನುಷ್ಕಾ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 143(3) ಅಡಿಯಲ್ಲಿ ಮಾನವ ಕಳ್ಳಸಾಗಣೆ ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಹೇಳುವಂತೆ ಸೆಕ್ಸ್ ದಂಧೆಯು ಗಣ್ಯ ಸಮುದಾಯದ ಕ್ಲೈಂಟ್‌ಗಳಿಗೆ ಸೇವೆ ಸಲ್ಲಿಸುತ್ತಿತ್ತು ಮತ್ತು ಅನುಷ್ಕಾ ಮಧ್ಯವರ್ತಿಯಾಗಿದ್ದಳು. ಅನುಷ್ಕಾ ಜೊತೆಗೆ, ಬಾರ್ ಮಾಲೀಕರು, ವ್ಯವಸ್ಥಾಪಕರು ಮತ್ತು ವೇಟರ್‌ಗಳು ಸೇರಿದಂತೆ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ.
