Bigg Boss Kannada 12 Contestants: ಯಾವಾಗ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಲಿದೆ ಎಂಬ ಪ್ರಶ್ನೆ ಜೋರಾಗಿ ಕೇಳಿಬರುತ್ತಿರುವಾಗಲೇ ಕಿಚ್ಚ ಸುದೀಪ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್ ಕನ್ನಡ ಸೀಸನ್ 12 ( Bigg Boss Kannada 12 ) ನಿರೂಪಣೆಯನ್ನು ಯಾರು ಮಾಡುತ್ತಾರೆ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಕೊನೆಗೂ ನಾನೇ ಬಿಗ್ ಬಾಸ್ ನಿರೂಪಣೆ ಮಾಡ್ತೀನಿ ಅಂತ ಕಿಚ್ಚ ಸುದೀಪ್ ಹೇಳಿದ್ದರು. ಹಾಗಾದರೆ ಯಾವಾಗ ಬಿಗ್ ಬಾಸ್ ಶುರುವಾಗಲಿದೆ ಎಂದು ವೀಕ್ಷಕರು ತಲೆಕೆಡಿಸಿಕೊಂಡಿರುವಾಗ ಪರೋಕ್ಷವಾಗಿ ಸುದೀಪ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಿಚ್ಚ ಸುದೀಪ್ ಏನಂದ್ರು?
ನಿರ್ಮಾಪಕ ಸಂದೇಶ ನಾಗರಾಜ್ ಅವರ ಜನ್ಮದಿನ ಆಚರಣೆಯಲ್ಲಿ ಭಾಗಿಯಾದ ಕಿಚ್ಚ ಸುದೀಪ್ ಅವರು ಆದಷ್ಟು ಬೇಗ ಸೆಪ್ಟೆಂಬರ್ 28ರಿಂದ ಟಿವಿಯಲ್ಲಿ ಸಿಗ್ತೀನಿ ಎಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ ಸೆಪ್ಟೆಂಬರ್ 28ಕ್ಕೆ ಶುರುವಾಗಲಿದೆ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಪ್ರೋಮೋ ಶೂಟ್‌ನಲ್ಲಿ ಇನ್ನೂ ಭಾಗಿಯಾದಂತಿಲ್ಲ. ಇನ್ನು ಎರಡು ಪ್ರೋಮೋಗಳು ರಿಲೀಸ್ ಆದ ಬಳಿಕ ಬಿಗ್ ಬಾಸ್ ಕನ್ನಡ 12 ಪ್ರಸಾರ ಆಗಬೇಕಿದೆ.
ಭವ್ಯವಾದ ಮನೆ!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಬಿಡದಿ ಬಳಿಯಿರುವ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಶೂಟ್ ನಡೆಯಲಿದ್ದು, ಇದಕ್ಕಾಗಿ ಭವ್ಯವಾದ ಮನೆ ನಿರ್ಮಾಣ ಆಗುತ್ತಲಿದೆಯಂತೆ. ಈ ಬಾರಿ ಯಾವ ರೀತಿಯ ಥೀಮ್ ಇರಲಿದೆ? ಸ್ಪರ್ಧಿಗಳು ಯಾರು? ಯಾರು ಎಂಬ ಕುತೂಹಲವೂ ಇದೆ.
ಸ್ಪರ್ಧಿಗಳ ಆಯ್ಕೆ ಹೇಗಿರುತ್ತದೆ?
ಸ್ಪರ್ಧಿಗಳ ಆಯ್ಕೆಯಲ್ಲಿ ನಾನು ಭಾಗಿಯಾಗೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಹೊರಗಡೆ ಇರುವವರಿಗೆ ಒಳಗಡೆ ಹೋಗಲು ಯಾಕೆ ಅವಕಾಶ ಕೊಡಬಾರದು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ವ್ಯಕ್ತಿತ್ವಗಳ ಆಧಾರದ ಮೇಲೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ರಂಗದ, ವಿವಿಧ ವ್ಯಕ್ತಿತ್ವಗಳಿರುವವರನ್ನು ದೊಡ್ಮನೆಗೆ ಹೋಗಲು ಅವಕಾಶ ನೀಡಲಾಗುವುದು.
ಕನ್ನಡಕ್ಕೆ ಆದ್ಯತೆ
ಕಳೆದ ಸೀಸನ್‌ಗಳಲ್ಲಿ ಕನ್ನಡಕ್ಕೆ ಅಷ್ಟಾಗಿ ಆದ್ಯತೆ ಸಿಕ್ಕಿಲ್ಲ ಎಂದು ಕಿಚ್ಚ ಸುದೀಪ್ ಅವರು ಬೇಸರ ಮಾಡಿಕೊಂಡು, ಇನ್ನು ಮುಂದೆ ಬಿಗ್ ಬಾಸ್ ಶೋ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ದರು. ಹೀಗಾಗಿ ಈ ಬಾರ ಕನ್ನಡಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆಯಂತೆ. ಅಂದಹಾಗೆ ಬಿಗ್ ಬಾಸ್ ಕನ್ನಡ 12 ರ ಲೋಗೋದಲ್ಲಿ ಸಂಪೂರ್ಣ ಕನ್ನಡ ಪದಗಳನ್ನು ಬಳಸಲಾಗಿದೆ.
ಸ್ಪರ್ಧಿಗಳು ಯಾರು?
ಯುಟ್ಯೂಬರ್ ಡಾ ಬ್ರೋ, ಗಿಲ್ಲಿ ನಟ, ಅಖಿಲಾ ಪಜುಮಣ್ಣು ನಿರೂಪಕಿ ಜಾನ್ವಿ, ಯುಟ್ಯೂಬರ್ ವರುಣ್ ಆರಾಧ್ಯ, ನಟ ಕರಣ್ ಆರ್ಯನ್, ನಟಿ ಸೋನಿ ಮುಲೇವಾ, ಮಡೆನೂರು ಮನು, ರೀಲ್ಸ್ ರೇಷ್ಮಾ, ಶಿವರಾಜ್ ಕೆಆರ್‌ಪೇಟೆ, ಕಾಮಿಡಿ ಕಿಲಾಡಿಗಳು ಸೂರಜ್, ನಟ ಅಶೋಕ್ ಶರ್ಮಾ, ಕಾಮಿಡಿಯನ್ ರಾಘವೇಂದ್ರ ಆಚಾರ್ಯ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಕಾಂಟ್ರವರ್ಸಿ ಮಾಡಿಕೊಂಡವರಿಗೆ, ರೀಲ್ಸ್ ಮಾಡುವವರಿಗೆ ಆದ್ಯತೆ ಜಾಸ್ತಿ ಎಂಬ ಆರೋಪವೂ ಇದೆ.
