ಮದುವೆ ಎಂದರೆ ಅದೊಂದು ಜವಾಬ್ದಾರಿ, ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಸುಖ ಸಿಗೋದು ಎಂದು ಹೇಳೋದುಂಟು. ಈಗ ಬಿಗ್‌ ಬಾಸ್‌ ಸ್ಪರ್ಧಿ, ನಂ 1 ಸೀರಿಯಲ್‌ ನಟ ಪತ್ನಿಗೋಸ್ಕರ ತ್ಯಾಗ ಮಾಡಿದ್ದಾರೆ. 

ಮದುವೆ, ಮಗು ಎನ್ನೋದು ವೈಯಕ್ತಿಕ ಆಯ್ಕೆ. ಎಷ್ಟೋ ಜನರು ಮದುವೆಯಾದ್ಮೇಲೆ ಮಗು ಆಗಿಲ್ಲ ಎಂದು ಒದ್ದಾಡೋದುಂಟು. ಇನ್ನೂ ಕೆಲ ದಂಪತಿಗಳಿಗೆ ಮಕ್ಕಳು ಬೇಕಾಗಿಲ್ಲ. ಇನ್ನೂ ಕೆಲವೊಮ್ಮೆ ಗಂಡನಿಗೆ ಮಗು ಬೇಕಿದ್ರೆ, ಹೆಂಡ್ತಿಗೆ ಬೇಕಿರೋದಿಲ್ಲ. ಆದರೆ ಸಂಬಂಧ ಚೆನ್ನಾಗಿರಬೇಕು, ದಾಂಪತ್ಯ ಮುಂದುವರೆಯಬೇಕು ಅಂದರೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಇದಕ್ಕೆ ನಟ ಗೌರವ್‌ ಖನ್ನಾ ಉದಾಹರಣೆಯಾಗಿದ್ದಾರೆ.

‘ಅನುಪಮಾ’ ಎನ್ನುವ ನಂ 1 ಸೀರಿಯಲ್‌ ಹೀರೋ ಗೌರವ್‌ ಖನ್ನಾ ಈಗ ಬಿಗ್‌ ಬಾಸ್‌ 19 ಶೋನಲ್ಲಿ ಭಾಗವಹಿಸಿದ್ದಾರೆ. ಗಾರ್ಡನ್‌ ಏರಿಯಾದಲ್ಲಿ ನಡೆದ ಮಾತುಕತೆ ವೇಳೆ ಇಷ್ಟು ವರ್ಷವಾದರೂ ಯಾಕೆ ಮಗು ಮಾಡಿಕೊಂಡಿಲ್ಲ ಎಂಬ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಯಾಕೆ ಮಗು ಮಾಡಿಕೊಂಡಿಲ್ಲ?

“ನವೆಂಬರ್‌ಗೆ ನಾವು ಮದುವೆಯಾಗಿ 9 ವರ್ಷಗಳು ಆಗುತ್ತವೆ. ನನ್ನ ಹೆಂಡ್ತಿ ಆಕಾಂಕ್ಷಾಗೆ ಮಕ್ಕಳು ಅಂದರೆ ಇಷ್ಟ ಇಲ್ಲ. ಆದರೆ ನನಗೆ ಮಕ್ಕಳು ಅಂದ್ರೆ ಇಷ್ಟ. ಲವ್‌ ಮ್ಯಾರೇಜ್‌ ಆಗಿದ್ದಕ್ಕೆ ನಾನು ಅವಳ ಮಾತನ್ನು ಕೇಳಬೇಕಾಗುತ್ತದೆ. ನೀವು ಲವ್‌ ಮ್ಯಾರೇಜ್‌ ಮಾಡಿಕೊಂಡಿದ್ದರೆ ಹೀಗೆ ಸಾಗಬೇಕಾಗುತ್ತದೆ. ನನ್ನ ಪತ್ನಿಗೆ ಅವಳದ್ದೇ ಆದ ವಿಚಾರಧಾರೆಗಳಿವೆ” ಎಂದು ಗೌರವ್‌ ಖನ್ನಾ ಹೇಳಿದ್ದಾರೆ.

ಆಕಾಂಕ್ಷಾ ಯಾರು?

ಮುಂಬೈನಲ್ಲಿ ಹುಟ್ಟಿ ಬೆಳೆದ ಆಕಾಂಕ್ಷಾ ಅವರು ಅಲ್ಲಿಯೇ ಶಿಕ್ಷಣ ಪೂರೈಸಿದರು. ಆ ಬಳಿಕ ‘ಸ್ವರ್ಗಿನಿ’, ‘ಭೂತು’, ‘ಕೈಸೆ ಮುಜೆ ತುಮ್‌ ಮಿಲ್‌ ಗಯೇ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಭೇಟಿ ಎಲ್ಲಿ ಆಗಿತ್ತು?

ಆಡಿಷನ್‌ ವೇಳೆ ಆಕಾಂಕ್ಷಾ, ಗೌರವ್‌ ಭೇಟಿಯಾಗಿತ್ತು. ಆಕಾಂಕ್ಷಾಗೆ ತಾನು ಹೊಸಬ ಅಂತ ಗೌರವ್‌ ಪರಿಚಯ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಆಕಾಂಕ್ಷಾ ಇನ್ನೊಂದು ಆಡಿಷನ್‌ಗೆ ಹೋಗಬೇಕಿದ್ದರಿಂದ ಗೌರವ್‌ ಅವರೇ ತಮ್ಮ ವೆಹಿಕಲ್‌ನಲ್ಲಿ ಡ್ರಾಪ್‌ ಕೊಟ್ಟಿದ್ದರು. ಆಕಾಂಕ್ಷಾ ಮೇಲೆ ಗೌರವ್‌ಗೆ ಆಗಲೇ ಲವ್‌ ಆಗಿತ್ತು. ಅದಾದ ಬಳಿಕ 100 ಬಲೂನ್‌ಗಳೊಂದಿಗೆ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ಗೌರವ್‌ ಊರು ಕಾನ್ಪುರದಲ್ಲಿ 2017ರಲ್ಲಿ ಅದ್ದೂರಿಯಾಗಿ ಮದುವೆ ಆಗಿತ್ತು. ಇವರಿಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಸದ್ದು ಮಾಡ್ತಿರೋ ನಟ

ಬಿಗ್ ಬಾಸ್ 19ರ ಮನೆಯವರು ಗೌರವ್ ಖನ್ನಾ ಅವರನ್ನು ಟಾರ್ಗೆಟ್ ಮಾಡಿ ಅವರ ಬೆನ್ನ ಹಿಂದೆ ಟೀಕೆ ಮಾಡ್ತಿದ್ದಾರೆ. ಮನೆಯವರ ಪ್ರಕಾರ, ಗೌರವ್ ಅನಾವಶ್ಯಕವಾಗಿ ಹೀರೋ ಆಗಲು ಪ್ರಯತ್ನಿಸುತ್ತಿದ್ದಾರೆ, ಆದರೆ ಬಿಗ್ ಬಾಸ್ ಅವರಿಗೆ ಅಂತಹ ಯಾವುದೇ ಜವಾಬ್ದಾರಿ ನೀಡಿಲ್ಲ. ಜೀಶಾನ್ ಕಾದ್ರಿ ಪ್ರಕಾರ, ಗೌರವ್ ಇತರರಿಗೆ ಆದೇಶ ನೀಡುತ್ತಾರೆ, ಮನೆಗೆಲಸ ಮಾಡಲು ಒತ್ತಾಯಿಸುತ್ತಾರೆ, ಆದರೆ ಅವರು ಏನನ್ನೂ ಮಾಡುವುದಿಲ್ಲ. ನೀಲಂ ಗಿರಿ ಪ್ರಕಾರ, ಗೌರವ್ ಅವರೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತಾರೆ, ಅವರ ಮಾತಿಗೆ ಗಮನ ಕೊಡುವುದಿಲ್ಲ, ಮಾತನಾಡಲು ಹೋದಾಗ, ಅವರು ನಿರ್ಲಕ್ಷಿಸುತ್ತಾರೆ, ಇತರರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಇತರ ಸ್ಪರ್ಧಿಗಳು ಗೌರವ್ ಮೇಲೆ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ನಾಮಿನೇಶನ್‌ ಟಾಸ್ಕ್‌ ಬಂದಾಗ ಅವೇಜ್ ದರ್ಬಾರ್ ಅವರು ಗೌರವ್ ಹೆಸರನ್ನು ತೆಗೆದುಕೊಂಡರು. ಇದರಿಂದಾಗಿ ಇಬ್ಬರ ನಡುವೆ ದೊಡ್ಡ ಜಗಳ ನಡೆಯಿತು.

43 ವರ್ಷದ ಗೌರವ್ ಈಗ ಖ್ಯಾತ ನಟ. ನಟನೆಗೆ ಬರುವ ಮುನ್ನ ಒಂದು ವರ್ಷ ಐಟಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಜಾಹೀರಾತುಗಳ ಮೂಲಕ ವೃತ್ತಿಜೀವನ ಆರಂಭಿಸಿದರು. ಮೊದಲು ಭಾಭಿ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಅನುಪಮಾ ಧಾರಾವಾಹಿಯಲ್ಲಿ ಅನುಜ್ ಪಾತ್ರದಿಂದ ಹೆಸರುವಾಸಿಯಾದರು. 2021 ರಿಂದ 2024 ರವರೆಗೆ ಈ ಶೋನಲ್ಲಿದ್ದರು. 2025 ರ ಸೆಲೆಬ್ರಿಟಿ ಮಾಸ್ಟರ್‌ಶೆಫ್ ಇಂಡಿಯಾ ಮೊದಲ ಸೀಸನ್ ವಿಜೇತರಾದರು. ಈಗ ಬಿಗ್ ಬಾಸ್ 19ರ ಸ್ಪರ್ಧಿ.