Bigg Boss Ranjith: ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ, ನಟ ರಂಜಿತ್ ಹಾಗೂ ಅವರ ಸಹೋದರಿ ರಶ್ಮಿ ನಡುವಿನ ಗಲಾಟೆಯಲ್ಲಿ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ರಶ್ಮಿ ಅವರಿಗೆ ಮಗಳಿದ್ದಾಳೆ ಎನ್ನೋದು ಈಗ ಗೊತ್ತಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಖ್ಯಾತಿಯ ರಂಜಿತ್ ಅವರು ಕಳೆದ ಮೂರು ತಿಂಗಳ ಹಿಂದೆ ಮಾನಸಾ ಗೌಡರನ್ನು ಮದುವೆಯಾಗಿದ್ದರು. ಈಗ ಫ್ಲ್ಯಾಟ್ ವಿಚಾರಕ್ಕೆ ರಂಜಿತ್ ಹಾಗೂ ಅವರ ಅಕ್ಕನ ಜೊತೆ ಜಗಳ ಶುರುವಾಗಿದೆ. ಅಸಭ್ಯ ಭಾಷೆಗಳಿಂದ ನಿಂದಿಸುವುದರ ಜೊತೆಗೆ ದೈಹಿಕ ಹಲ್ಲೆ ಕೂಡ ಆಗಿರುವಂತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಎರಡು ಫ್ಲ್ಯಾಟ್ ತಗೊಂಡೆ
ಈ ಪ್ರಕರಣದ ಬಗ್ಗೆ ರಂಜಿತ್ ಅಕ್ಕ ರಶ್ಮಿ ಅವರು ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. “2017-18ರಲ್ಲಿ ಬುಕ್ಕಿಂಗ್ ಮಾಡಿಕೊಂಡೆ, 2018ರಿಂದ ಇಎಂಐ ಕಟ್ಟುತ್ತಿದ್ದೇನೆ. ಮದುವೆಯಾಗಿ ಮೊದಲ ತಿಂಗಳು ನಾನು ಅವನು ಬಾಡಿಗೆ ಥರ ಕಟ್ಟಿದೆ. ಎರಡನೇ ತಿಂಗಳು ಇಎಂಐ ಕೊಡು ಅಂದಾಗ, “ನನ್ನ ಹತ್ತಿರ ದುಡ್ಡಿಲ್ಲ, ನನ್ನ ಹೆಂಡ್ತಿ ಹೆಸರಿಗೆ ಬರೆದುಕೊಡು ಅಂತ ಹೇಳ್ತಿದ್ದಾನೆ. ನಾನು ಕೆಲಸ ಮಾಡುತ್ತಿದ್ದೇನೆ. 2019ರಲ್ಲಿ ನಾನು ಫ್ಲ್ಯಾಟ್ ತಗೊಂಡೆ, ಒಟ್ಟೂ ಎರಡು ಫ್ಲ್ಯಾಟ್ ತಗೊಂಡೆ, ಒಂದು ಫ್ಲ್ಯಾಟ್ ಬಾಡಿಗೆಗೆ ಕೊಟ್ಟು ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ” ಎಂದು ರಶ್ಮಿ ಹೇಳಿದ್ದಾರೆ.
ತಂದೆಯನ್ನು ಹೊರಗಡೆ ಹಾಕಿದ
“ನನ್ನ ತಂದೆ ಅಲ್ಲಿದ್ದಾರೆ, ತಾಯಿ ತೀರಿಕೊಂಡ ಜಾಗ ಅದು ಅಂತ ಅವರು ಅಲ್ಲಿಯೇ ಇರುತ್ತಾರೆ. ನನ್ನ ತಂದೆಯನ್ನು ಅವನು ಹೊರಗಡೆ ಹಾಕಿದ್ದಾನೆ. ಒಂದೂವರೆ ತಿಂಗಳಿನಿಂದ ನನ್ನ ತಂದೆ ಊಟ-ತಿಂಡಿಗೆ ನಮ್ಮ ಮನೆಗೆ ಬಂದಿದ್ದಾರೆ, ಅಲ್ಲಿ ಉಳಿಯುತ್ತಿದ್ದಾರೆ. ತಂದೆಯನ್ನು ಕೂಡ ಮನೆಯಿಂದ ಹೊರಗಡೆ ಹಾಕಿದ್ದಕ್ಕೆ, ಅವರು ಬೇಸ್‌ಮೆಂಟ್‌ನಲ್ಲಿ ಮಲಗಿದ್ದರು. ಕಾರ್‌ನಲ್ಲಿ ಮಲಗ್ತೀನಿ ಎಂದು ಹೇಳಿದರೂ ಕೂಡ ಕಾರ್ ಕೀ ಕೊಡಲಿಲ್ಲ. ಪೊಲೀಸರು ಮನೆಗೆ ಬಂದರೂ ಕೂಡ ಬಾಗಿಲು ತೆಗೆಯಲಿಲ್ಲ” ಎಂದು ರಶ್ಮಿ ಹೇಳಿದ್ದಾರೆ.
ಮಾನಸಾ ಗೌಡಗೆ ಮೊದಲೇ ಮಗಳಿದ್ದಾಳೆ
“ಮಾನಸಾ ಗೌಡಗೆ ಮೊದಲೇ ಹದಿಮೂರು ವರ್ಷದ ಮಗಳಿದ್ದಾಳೆ. ಮದುವೆಯಾದಮೇಲೆ ರಂಜಿತ್ ಹಾಗೂ ಮಾನಸಾಗೆ ಒಂದು ರೂಮ್, ಮಗಳಿಗೆ ಒಂದು ರೂಮ್, ತಂದೆಗೆ ಇನ್ನೊಂದು ರೂಮ್ ಬೇಕು ಅಂತ ಅಂದನು. ನಾನು ಓಕೆ ಎಂದೆ, ಬಾಡಿಗೆ ಕೊಡ್ತೀನಿ ಅಂತ ಹೇಳಿದ. ಇಎಂಐ ಕಟ್ಟುವಷ್ಟು ಹಣ ಕೊಡು ಅಂದರೂ ಕೊಡಲಿಲ್ಲ. ರಂಜಿತ್, ಮಾನಸಾ ಗೌಡ ಕೂಡ ನನಗೆ ಹೊಡೆದಿದ್ದಾರೆ” ಎಂದು ರಶ್ಮಿ ಹೇಳಿದ್ದಾರೆ.
ಅಂದಹಾಗೆ ಮಾನಸಾ ಗೌಡಗೆ ಈಗಾಗಲೇ ಮದುವೆಯಾಗಿ ಹದಿಮೂರು ವರ್ಷದ ಮಗಳಿರೋದು ಇಲ್ಲಿಯವರೆಗೆ ಬಯಲಾಗಿರಲಿಲ್ಲ. ಈ ಬಗ್ಗೆ ಮಾತನಾಡಿದ ರಶ್ಮಿ, “ಮಾನಸಾಗೆ ಮಗಳಿರೋದು ಅವರ ವೈಯಕ್ತಿಕ ವಿಷಯ, ಅದು ನನಗೆ ಬೇಕಿಲ್ಲ” ಎಂದು ಹೇಳಿದ್ದಾರೆ.
ರಂಜಿತ್ ಸ್ಪಷ್ಟನೆ ಏನು?
“2017-18ರಲ್ಲಿ ನಾನು ಫ್ಲ್ಯಾಟ್ ತಗೊಂಡೆ, ಕಲಾವಿದ, ಸಾಲಕ್ಕೆ ಸಮಸ್ಯೆ ಆಗುತ್ತದೆ ಎಂದು ಅಕ್ಕನ ಹೆಸರಿನಲ್ಲಿ ಫ್ಲ್ಯಾಟ್ ತಗೊಂಡೆ. ಅಕ್ಕ ಕೆಲಸ ಮಾಡುತ್ತಿದ್ದು, ಸಾಲ ಸಿಗಲು ಸಮಸ್ಯೆ ಆಗೋದಿಲ್ಲ ಎಂದುಕೊಂಡೆ. ಅಲ್ಲಿಂದ ಇಲ್ಲಿಯವರೆಗೆ ನಾನು ಸಾಲಕ್ಕೆ ಇಎಂಐ ತುಂಬುತ್ತಿದ್ದರೂ ಕೂಡ ಅವಳು ಮಾತ್ರ ಫ್ಲ್ಯಾಟ್ ಬಿಟ್ಟುಕೊಡು ಎನ್ನುತ್ತಿದ್ದಾಳೆ. ಸಿವಿಲ್ ಅಲ್ಲಿ ಬಗೆಹರಿಸಬೇಕಾದ ಮ್ಯಾಟರ್ ಇದು. ಆದರೆ ಅವಳು ಮಾತ್ರ ಮನೆಗೆ ಬಂದು ಗಲಾಟೆ ಮಾಡಿ ವಿಡಿಯೋ ಮಾಡ್ತಾಳೆ, ಅವಳ ಗಂಡ ಆರ್ಮಿಯಲ್ಲಿದ್ದವನು ಅಶ್ಲೀಲವಾಗಿ ನನ್ನ ಹೆಂಡ್ತಿ ನಡೆದುಹೋಗುವ ವಿಡಿಯೋ ಮಾಡ್ತಾನೆ” ಎಂದು ರಂಜಿತ್ ಅವರು ಮಾಧ್ಯಮದ ಜೊತೆ ಹೇಳಿದ್ದಾರೆ.
