ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ದಿನವೇ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಜಗಳ ಶುರುವಾಗಿದೆ. ತಮಾಷೆ ಮಾತಿನಿಂದ ಆರಂಭವಾದ ವಿವಾದ, ಗಿಲ್ಲಿ ನಟ 'ಹೋಗೆ ಬಾರೆ' ಎಂದು ಏಕವಚನದಲ್ಲಿ ಮಾತನಾಡಿದ್ದರಿಂದ ತಾರಕಕ್ಕೇರಿದೆ. ಅಶ್ವಿನಿ, ಗಿಲ್ಲಿಗೆ ಮರ್ಯಾದೆ ಪಾಠ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಒಂದೇ ದಿನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಇಲ್ಲಿ ಕಾಮಿಡಿ ಖಿಲಾಡಿಗಳು ಖ್ಯಾತಿಯ ಗಿಲ್ಲಿ ನಟ ಹಾಗೂ ಕನ್ನಡ ಪರ ಹೋರಾಟಗಾರ್ತಿ ಹಾಗೂ ನಟಿ ಅಶ್ವಿನಿಗೌಡ ನಡುವೆ ಒಂದೇ ದಿನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಟಿ ಅಶ್ವಿನಿ ಗೌಡಗೆ ಹೋಗೆ ಬಾರೆ ಎಂದ ಗಿಲ್ಲಿಗೆ ಮರ್ಯಾದೆ ಪಾಠ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಿ ಇದೀಗ ಒಂದು ದಿನವಷ್ಟೇ ಕಳೆದಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ದಿನ ಬೆಳಗಿನ ಜಾವದವರೆಗೂ ಕಾರ್ಯಕ್ರಮ ನಡೆದಿದ್ದರಿಂದ ಈವರೆಗೆ ಮನೆಯ ವಾತಾವರಣ ಬೆಳಗ್ಗೆ ಮತ್ತು ರಾತ್ರಿ ಯಾವುದೆಂದೇ ತಿಳಿಯುತ್ತಿಲ್ಲ. ಎಲ್ಲ ಸ್ಪರ್ಧಿಗಳಿಗೆ ನಿದ್ದೆಯ ಅಭ್ಯಾಸವನ್ನೇ ಬದಲಿ ಮಾಡಲಾಗಿದೆ. ಬೆಳಗ್ಗೆ 4 ಗಂಟೆವರೆಗೂ ಟಾಸ್ಕ್ ಮಾಡಿಸಲಾಗುತ್ತಿದೆ. ಊಟದ ಅಭ್ಯಾಸವೂ ಬದಲಾಗಿದೆ. ಇನ್ನು ಮೊದಲ ದಿನದಿಂದಲೇ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ಕೊಡಲಾಗುತ್ತಿದೆ. ಇದೀಗ ಮನೆಯೊಳಗೆ ಸೇರಿದ 18 ಜನರನ್ನು ಜೋಡಿ ಮತ್ತು ಒಂಟಿ ಅರಸನ್ನಾಗಿ ಎರಡು ಗುಂಪುಗಳಾಗಿ ಮಾಡಲಾಗಿದೆ.
ಜೋಡಿ ಟಾಸ್ಕ್‌ನಲ್ಲಿ ಕಾವ್ಯ, ಗಿಲ್ಲಿನಟ ಬಗ್ಗೆ ಪರ್ಸನಲ್ ಟಾಕ್:
ಒಬ್ಬಂಟಿಯಾಗಿರುವ 6 ಜನರ ಅರಸರ ಗುಂಪಿನವರು ಹೇಳಿದ ಮಾತನ್ನು ಜೋಡಿ ಗುಂಪಿನವರು ಕೇಳಬೇಕು. ಯಾವಾಗಲೂ ಮೊದಲ ಆಯ್ಕೆ ಅರಸರದ್ದೇ ಆಗಿರುತ್ತದೆ. ಇಂದಿನ ಟಾಸ್ಕ್‌ನಲ್ಲಿ ಜೋಡಿ ಕಂಟೆಸ್ಟೆಂಟ್‌ಗಳಲ್ಲಿ ಕೆಲವರನ್ನು ನಾಮಿನೇಟ್ ಮಾಡುವುದಕ್ಕೆ ಕಾರಣಗಳನ್ನು ಕೇಳಲಾಗಿದೆ. ಆಗ ಒಬ್ಬಂಟಿ ಅರಸರ ಗುಂಪಿನಲ್ಲಿ ಸದಸ್ಯೆ ಅಶ್ವಿನಿ ಗೌಡ ಅವರು ಕಾವ್ಯ ಶೈವ ಮತ್ತು ಗಿಲ್ಲಿ ನಟ ಅವರ ಬಗ್ಗೆ ಮಾತನಾಡುತ್ತಾ ಇವರಿಬ್ಬರೂ ಯಾವುದೇ ಮಾತುಗಳನ್ನು ತುಂಬಾ ಪರ್ಸನಲ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ.
ಆದರೆ, ಇದಕ್ಕೂ ಮುಂಚೆ ನಡೆದ ಘಟನೆಯೊಂದಲ್ಲಿ ಕಾಕ್ರೋಚ್ ತಮಾಷೆಯಾಗಿ ಮಾತನಾಡುವ ಭರಾಟೆಯಲ್ಲಿ ಗಿಲ್ಲಿನಟ ಹಾಗೂ ಕಾವ್ಯ ಅವರನ್ನು ತೋರಿಸಿ 'ಇವರಿಬ್ಬರನ್ನು ನೋಡಿ, ಒಳ್ಳೆ ಪಿಕ್ ಪಾಕೆಟರ್ಸ್ ತರಹ ಇದ್ದಾರೆ' ಎಂದು ಹೇಳುತ್ತಾರೆ. ಆಗ ಅಲ್ಲಿದ್ದ ಎಲ್ಲ ಒಬ್ಬಂಟಿ ಅರಸರ ತಂಡದ ಎಲ್ಲ ಸದಸ್ಯರು ಜೋರಾಗಿ ನಗಾಡುತ್ತಾರೆ. ಈ ಅಪಹಾಸ್ಯದ ನಗುವನ್ನು ಸಹಿಸಿಕೊಳ್ಳದ ಗಿಲ್ಲಿನಟ ಸ್ವಲ್ಪ ಸಿಟ್ಟಿನಿಂದಲೇ ಇದು ತುಂಬಾ ಪರ್ಸನಲ್ ಆಯ್ತು ಎಂದು ಹೇಳುತ್ತಾನೆ. ಇದಕ್ಕೆ ಕೋಪಗೊಂಡ ಅಶ್ವಿನಿ ಗೌಡ ಅವರು, ನೀವು ಗೌರವಯುತವಾಗಿ ನಡೆದುಕೊಂಡರೆ ಮಾತ್ರ ನಮಗೂ ಒಂದು ಗೌರವ ಎಂದು ಹೇಳುತ್ತಾರೆ.
ಹೋಗೆ, ಬಾರೆ ಎಂದು ಮಾತನಾಡುತ್ತಿದ್ದೆ:
ಇದಕ್ಕೆ ಉತ್ತರ ಕೊಡುವ ಭರಾಟೆಯಲ್ಲಿ 'ಗಿಲ್ಲಿ ನಟ ನಾವು ನಿಮಗೆ ಬೆಲೆ ಕೊಟ್ಟೇ ಮಾತನಾಡ್ತಿರೋದು ಮೇಡಂ ಅಂತಾ ಹೇಳಿ, ಇಲ್ಲವೆಂದರೆ ಹೋಗೆ ಬಾರೆ ಎಂತಲೇ ಮಾತನಾಡುತ್ತಿದ್ದೆ' ಎಂದು ಹೇಳುತ್ತಾರೆ. ಇದಕ್ಕೆ ಕೋಪಗೊಂಡ ಅಶ್ವಿನಿ ಗೌಡ, ಹೋಗೆ-ಬಾರೆ ಏಕವಚನ ಎಲ್ಲ ನನ್ನತ್ರ ನಡೆಯೋದಿಲ್ಲ. ಹೋಗೆ ಬಾರೆ ಅಂತಾ ಮಾತಾಡ್ತೀನಿ ಅಂದರೆ ನೀನು ಯಾರತ್ರ ಮಾತಾಡ್ತಿದೀಯ ಗೊತ್ತಾ? ಎಂದು ಅವಾಜ್ ಹಾಕುತ್ತಾರೆ. ಇದಕ್ಕೆ ಧ್ವನಿಗೂಡಿಸಿದ ಕಾವ್ಯ ಶೈವ ಅವರು, ಇಲ್ಲಿ ಜೋರಾಗಿ ಕಿರುಚಿದರೆ ಯಾರೂ ಹೆದರಿಕೊಳ್ಳೋದಿಲ್ಲ ಎನ್ನುತ್ತಾರೆ.
ನೀವು ಗೌರವ ಕೊಟ್ಟಾಗ ಮಾತ್ರ ನಿಮಗೆ ಗೌರವ ಸಿಗುತ್ತೆ. ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು ಎಂದು ಅಶ್ವಿನಿ ಗೌಡ ಬೆರಳು ತೋರಿಸುತ್ತಲೇ ದೊಡ್ಡ ಕಣ್ಣಿನಿಂದ ಬೆದರಿಸುತ್ತಾರೆ. ಆಗ ಗಿಲ್ಲಿ ನಟ ಬೆಂಕಿಯಲ್ಲಿ ಸುಟ್ಟ ಬೆಕ್ಕಿನಂತೆ ಅಲ್ಲಾ ಮೇಡಂ ಎಂದು ಸಮಾಧಾನವಾಗಿ ಉತ್ತರ ಕೊಡುವುದಕ್ಕೆ ಮುಂದಾದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಅಶ್ವಿನಿ ಇರಲಿಲ್ಲ.
