ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಕಾವ್ಯ ಶೈವ, ಅಶ್ವಿನಿ ಗೌಡ ನಡುವೆ ಜಗಳ ಶುರುವಾಗಿತ್ತು. ಫಿನಾಲೆಯಲ್ಲಿ ಇರಲು ಯಾರು ಅರ್ಹರಲ್ಲ ಎಂಬ ಪ್ರಶ್ನೆ ಬಂದಿತ್ತು. ಆಗ ಜಗಳ ಶುರುವಾಗಿದೆ. 

ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ದಿನವೇ ಜಗಳ ಶುರುವಾಗಿದೆ, ಆದರೆ ಈ ಜಗಳವು ಗಿಲ್ಲಿಯಿಂದ ಆರಂಭವಾಗಿ ಗಿಲ್ಲಿಯಿಂದ ನಿಂತಿದೆ. ಹೌದು, ಕಾಲಿಗೆ ಬೀಳ್ತೀನಿ ಎಂದು ಹೇಳಿದ್ದಕ್ಕೆ ಜಗಳ ನಿಂತಿದೆ. 

ಟಾಸ್ಕ್‌ ಏನು?

ಬಿಗ್‌ ಬಾಸ್‌ ಕನ್ನಡದ ಈ ಹಿಂದಿನ ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ, ಈ ಸೀಸನ್‌ ಭಾರೀ ವಿಭಿನ್ನವಾಗಿದೆ. ಈಗಾಗಲೇ ಸಾಕಷ್ಟು ಟ್ವಿಸ್ಟ್‌ ಕೊಟ್ಟಿರೋ ಬಿಗ್‌ ಬಾಸ್‌ ಈ ಬಾರಿ ಮೂರನೇ ವಾರಕ್ಕೆ ಮೊದಲ ಫಿನಾಲೆ ನಡೆಯಲಿದೆಯಂತೆ. ಅಲ್ಲಿಯವರೆಗೆ ಈ ಮನೆಗೆ ಕ್ಯಾಪ್ಟನ್‌ ಕೂಡ ಇರೋದಿಲ್ಲ. ಡಬಲ್‌ ಟ್ವಿಸ್ಟ್‌ಗಳು ಸಿಗುತ್ತ, ಫಿನಾಲೆ ಕೂಡ ಡಬಲ್‌ ಇದ್ದು, ವಿಜೇತರು ಕೂಡ ಡಬಲ್‌ ಆಗಿರಬಹುದು ಎಂದು ಬಿಗ್‌ ಬಾಸ್‌ ಹೇಳಿದ್ದಾರೆ.

ದಿನವು ಮಿಂಚಿನಂತೆ ಕಳೆಯುತ್ತಿದ್ದರೂ ಕೂಡ, ಸ್ಪರ್ಧಿಗಳು ಮಾತ್ರ ರಗ್ಗು ಹೊದ್ದುಕೊಂಡು ಮಲಗಿದ್ದಾರೆ. ಈಗತಾನೇ ಕಣ್ಣುಬಿಡಬೇಕೋ ಬೇಡವೋ ಎಂದು ಯೋಚನೆ ಮಾಡುತ್ತಿದ್ದಾರೆ. ಮೊದಲ ಫಿನಾಲೆಯಲ್ಲಿ ಇರಲು ಅರ್ಹತೆ ಇರದ ಎರಡು ಜಂಟಿ ಜೋಡಿಗಳ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆಮೇಲೆ ಹೆಚ್ಚು ಮತ ಪಡೆದ ಮೂರು ಜೋಡಿಗಳ ಹೆಸರು ಹೇಳಬೇಕಿತ್ತು. ಆಗ ಅಶ್ವಿನಿ ಗೌಡ ಅವರು ಗಿಲ್ಲಿ ನಟ- ಕಾವ್ಯ ಶೈವ ಹೆಸರು ತಗೊಂಡರು, ಅಲ್ಲಿ ಜಗಳ ಶುರು ಆಯ್ತು.

ಮಾತಿನ ಚಕಮಕಿ

ಅಶ್ವಿನಿ ಗೌಡ ಅವರು, “ನನ್ನ ಮೊದಲ ಆಯ್ಕೆ ಕಾವ್ಯ-ಗಿಲ್ಲಿ. ಗಿಲ್ಲಿ ಮೇಲೆ ನನಗೆ ನಿರೀಕ್ಷೆಯಿದೆ, ಮನರಂಜನೆ ನೀಡುತ್ತಿರುವ ಗಿಲ್ಲಿ ತುಂಬ ಪರ್ಸನಲ್‌ ಆಗಿ ತಗೊಳ್ತಿದ್ದಾರೆ ಅಂತ ಅನಿಸ್ತು, ಹೀಗಾಗಿ ಗಿಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ. ಸುಧಿ ಅವರು ಹೊರಗಡೆ ಮಾತಾಡುವಾಗ ಕುಟುಂಬದ ಹೆಸರು ಬಂತು, ಆಗ ನೀವು ಪರ್ಸನಲ್‌ ಆಗಿ ತಗೊಳ್ತೀನಿ ಅಂತ ಹೇಳಿದ್ರಿ, ಇಲ್ಲಿ ಎಲ್ಲರೂ ಅವರವರ ವೃತ್ತಿಯಲ್ಲಿ ದೊಡ್ಡವರೇ” ಎಂದು ಹೇಳಿದ್ದರು.

ಗಿಲ್ಲಿ ಅವರು, “ಪರ್ಸನಲ್‌ ಆಗಿ ಮಾತಾಡಬೇಡಿ, ಪ್ರೊಫೆಶನಲ್‌ ಆಗಿ ಮಾತಾಡಿ, ನಾನು ಪರ್ಸನಲ್‌ ಆಗಿ ತಗೋತೀನಿ ಅಂತ ಹೇಳಿಲ್ಲ” ಎಂದು ಹೇಳಿದ್ದಾರೆ.

ಸುಧಿ ಅವರ ಯಾವ ಮಾತಿಗೆ ಗಿಲ್ಲಿ ಪರ್ಸನಲ್‌ ಆಗಿ ತಗೋತೀನಿ ಅಂತ ಹೇಳಿದ್ದು ಎಂದು ಕಾವ್ಯ ಪ್ರಶ್ನೆ ಮಾಡಿದ್ದಾರೆ. ಆಗ ಅಶ್ವಿನಿ ಗೌಡ ಏರುದನಿಯಿಂದ ಮಾತನಾಡಿದ್ದಾರೆ.

ಅಶ್ವಿನಿ: ನಾನು ಟಾಯ್ಲೆಟ್‌ ಹೋಗಿ ಬರ್ತೀನಿ ಅಂತ ಕಾವ್ಯನ ಜೊತೆ ಹೋದಿರಿ, ನಾವು ಇದ್ದರೂ ಕೇರ್‌ ಮಾಡಲಿಲ್ಲ.

ಗಿಲ್ಲಿ: ಅಲ್ಲಿ ಆಡೋ ಆಟವನ್ನು ಇಲ್ಲೇ ಆಡುತ್ತಿದ್ದೆವು

ಅಶ್ವಿನಿ: ನೀವು ಗೌರವಯುತವಾಗಿ ನಡೆದುಕೊಂಡರೆ ನಿಮಗೂ ಗೌರವ, ನಮಗೂ ಗೌರವ. ನೀವು ಕೇರ್‌ಲೆಸ್‌ ಆದರೆ ನಾನು ಮಾತನಾಡೋದಿಲ್ಲ

ಗಿಲ್ಲಿ: ಗೌರವ ಇದ್ದಿದ್ದಕ್ಕೆ ಮೇಡಂ ಅಂತ ಕರೆಯುತ್ತಿದ್ದೇನೆ

ಅಶ್ವಿನಿ: ಇಲ್ಲ ಅಂದ್ರೆ ಏನು ಮಾತಾಡ್ತಿದ್ರಿ? ಮರ್ಯಾದೆ ಕೊಟ್ಟು ಮಾತನಾಡಬೇಕು

ಗಿಲ್ಲಿ: ಹೋಗೆ ಬಾರೆ ಅಂತ ಮಾತನಾಡುತ್ತಿದ್ದೆ

ಅಶ್ವಿನಿ ಗೌಡ: ನಾನು ನಿನ್ನ ಫ್ರೆಂಡ್‌ ಅಲ್ಲ, ಹೋಗೆ ಬಾರೆ ಅಂತ ನನಗೆ ಹೇಗೆ ಕರೆಯುತ್ತೀಯಾ?

ಗಿಲ್ಲಿ: ನನಗೆ ಲಾವಣ್ಯಾ ಅನ್ನೋದು ಸುಧಿ ಅಕ್ಕನ ಹೆಸರು ಎನ್ನೋದು ಗೊತ್ತಿಲ್ಲ, ಸುಮ್ಮನೆ ಕಾಮಿಡಿ ಮಾಡಿದೆವು

ಅಶ್ವಿನಿ ಗೌಡ: ನಾವು ಗೌರವಯುತವಾಗಿ ನಡೆದುಕೊಂಡಾಗ ನಮಗೂ ಗೌರವ ಕೊಡಬೇಕು ಅಂತ ನಿರೀಕ್ಷೆ ಮಾಡುತ್ತೇವೆ. ನಾವು ಕಲಾವಿದರು, ಎಸಿ ರೂಮ್‌ನಲ್ಲಿ ಇರೋಕೆ ಗೊತ್ತು, ನೆಲದ ಮೇಲೆ ಕೂರೋಕೆ ಗೊತ್ತು.

ಗಿಲ್ಲಿ: ಸರಿ ಮೇಡಂ

ಆಮೇಲೆ ಕಾವ್ಯ ಶೈವ ಅವರು ಮಾತನಾಡಿದ್ದಾರೆ. ಮತ್ತೆ ಅಶ್ವಿನಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ನಮಗೆ ಮಾತಾಡೋಕೆ ಬಿಡಿ” ಎಂದು ಕಾವ್ಯ ಹೇಳಿದಾಗ, ಅಶ್ವಿನಿ “ಸುಳ್ಳು ಹೇಳಬೇಡಿ” ಎಂದು ಅಶ್ವಿನಿ ಹೇಳಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

“ತಪ್ಪು ಮಾಡಿದಾಗ ಕ್ಷಮೆ ಕೇಳಬೇಕು, ವಾದ ಮಾಡೋದು ಏನಿದೆ? ಬಿಗ್‌ ಬಾಸ್‌ ನಿಮಗೆ ಶಿಕ್ಷೆ ಕೊಡಲಿ” ಎಂದು ಅಶ್ವಿನಿ ಹೇಳಿದ್ದಾರೆ.

ಆಗ ಗಿಲ್ಲಿ “ನಿಮ್ಮನ್ನು ಹೋಗೆ ಬಾರೆ ಅಂತ ಕರೆಯಲಿಲ್ಲ. ನಿಮ್ಮನ್ನು ನಾನು ಮೇಡಂ ಅಂತ ಕರೆಯುತ್ತಿದ್ದೇನೆ. ಕಾವ್ಯ ನನ್ನ ಫ್ರೆಂಡ್‌ ಆಗಿದ್ದಕ್ಕೆ ಹೋಗೆ ಬಾರೆ ಅಂತ ಕರೆಯುತ್ತೇನೆ ಅಷ್ಟೇ, ನಿಮಗೆ ಕಾಲಿಗೆ ಬೀಳ್ತೀನಿ, ಬಿಟ್ಟುಬಿಡಿ” ಎಂದು ಹೇಳಿದ್ದಾರೆ. ಅಲ್ಲಿಗೆ ಇವರ ಜಗಳ ನಡೆದಿದೆ.