ಬಿಗ್‌ ಬಾಸ್‌ 19 ಮನೆಗೆ ಬಂದಿರೋ ತಾನ್ಯಾ ಮಿತ್ತಲ್‌ ಅವರು “ನಾನು 800 ಸೀರೆ, 50kg ಜ್ಯುವೆಲರಿ ತಂದಿದ್ದೇನೆ” ಎಂದು ಹೇಳೋದಲ್ಲದೆ ತನ್ನ ಬಗ್ಗೆ ಕೊಚ್ಚಿಕೊಂಡಿದ್ದರು. ಇವರ ಅಸಲಿ ವಿಷಯಗಳನ್ನು ಬಾಯ್‌ಫ್ರೆಂಡ್‌ ರಿವೀಲ್‌ ಮಾಡಿದ್ದಾರೆ. 

ಬಿಗ್‌ ಬಾಸ್‌ 19 ಶೋನಲ್ಲಿ ನನ್ನ ಮನೆ ಸ್ವರ್ಗದ ಥರ ಇದೆ, ನಮ್ಮದು ಅಷ್ಟು ಆಸ್ತಿ ಇದೆ, ಇಷ್ಟು ಬಾಡಿಗಾರ್ಡ್‌ ಇದ್ದಾರೆ, ನಾನು ಇಲ್ಲಿಗೆ 800 ಸೀರೆ ತಂದಿದ್ದೇನೆ ಎಂದೆಲ್ಲ ಮಾತುಗಳನ್ನಾಡಿಕೊಂಡು, ತಾನ್ಯಾ ಮಿತ್ತಲ್‌ ಅವರು ದೊಡ್ಡ ಮಟ್ಟದಲ್ಲಿ ಟ್ರೋಲ್‌ ಆಗುತ್ತಿದ್ದಾರೆ. “ನಾನು ಸುಂದರವಾಗಿಲ್ಲ ಅಂತ ಬಾಯ್‌ಫ್ರೆಂಡ್‌ ನನ್ನ ಬಿಟ್ಟಿದ್ದಾನೆ” ಎಂದು ತಾನ್ಯಾ ಮಿತ್ತಲ್‌ ಹೇಳಿದ್ದರು. ಬಾಲರಾಜ್‌ ಸಿಂಗ್‌ ಅವರು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಾನ್ಯಾ ಮಿತ್ತಲ್‌ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ಅವರು ಅಸಲಿ ಮುಖ ರಿವೀಲ್‌ ಮಾಡಿದ್ದಾರೆ.

ಬಾಲರಾಜ್‌ ಸಿಂಗ್‌ ಹೇಳಿದ್ದೇನು?

“ದೇವಸ್ಥಾನಕ್ಕೆ ಹೋಗಿ ತನಗೆ ಬೇಕಾದ ವಿಡಿಯೋ ಮಾಡುತ್ತಾಳೆ. ಆಮೇಲೆ ಅದೇ ದೇವಸ್ಥಾನದ ಪೂಜಾರಿಗಳ ಬಗ್ಗೆ ಮಾತನಾಡುತ್ತಾಳೆ. ಸೀರೆ ಚೆನ್ನಾಗಿ ಉಡುತ್ತಾಳೆ, ಡಿಸೈನ್‌ ಚೆನ್ನಾಗಿರುತ್ತದೆ ಅಂತ ಅನೇಕರು ಅವಳನ್ನು ಫಾಲೋ ಮಾಡುತ್ತಾರೆ. ಸ್ಮೋಕಿಂಗ್‌ ರೂಮ್‌ಗೂ ಹೋಗೋದಿಲ್ಲ ಅಂತ ಅವಳು ಹೇಳಿರೋದೆಲ್ಲ ನಾಟಕ. ಪ್ಲಾಸ್ಟಿಕ್‌ ಬಾಟಲ್‌ ಬಳಕೆ ಮಾಡೋದಿಲ್ಲ ಅಂತ ಅವಳು ಹೇಳಿದ್ದೆಲ್ಲ ಸುಳ್ಳು. ನನ್ನ ಪ್ಲಾಸ್ಟಿಕ್‌ ಬಾಟಲಿಯಿಂದ ಅವಳು ನೀರು ಕುಡಿದಿದ್ದಾಳೆ” ಎಂದು ಬಾಲರಾಜ್‌ ಸಿಂಗ್‌ ಹೇಳಿದ್ದಾರೆ.

“ಬಿಗ್‌ ಬಾಸ್‌ ಮನೆಗೆ ನನ್ನ ಫ್ರೆಂಡ್‌ ಆಗಿ ಬಂದು ಮಾತನಾಡುತ್ತೀಯಾ ಎಂದು ಅವಳು ನನಗೆ ಮೆಸೇಜ್ ಮಾಡಿದ್ದಳು. ಮಹಾಕುಂಭದಲ್ಲಿ ಒಂದು ಹುಡುಗಿ ಇವಳನ್ನು ಬಚಾವ್‌ ಮಾಡಿದ್ದಳು. ಬಾಸ್‌ ಅಂತ ಕರೆಯಿರಿ ಅಂತ ಹೇಳ್ತಾಳೆ, ಅದನ್ನು ಹೇಳಿ ಕರೆಸಿಕೊಳ್ಳೋದು ಸರಿ ಅಲ್ಲ. ಅವಳ ವರ್ತನೆ ಸರಿ ಇಲ್ಲದಿದ್ದಕ್ಕೆ ನಾನು ಒತ್ತಾಯ ಮಾಡಿ ಅವಳಿಂದ ಕ್ಷಮೆ ಕೂಡ ಕೇಳಿಸಿದ್ದೇನೆ” ಎಂದು ಬಾಲರಾಜ್‌ ಸಿಂಗ್‌ ಹೇಳಿದ್ದಾರೆ.

“ತಾನ್ಯಾ ಮಿತ್ತಲ್‌ ಜೊತೆ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನನ್ನ ಬಗ್ಗೆ ಸುಳ್ಳು ಹೇಳಿದರೆ ಬೇಸರ ಆಗುತ್ತದೆ. ತಾನ್ಯಾ ಮಿತ್ತಲ್‌ ಅವರು ರಿಯಾಲಿಟಿಯಲ್ಲಿ ಬದುಕಬೇಕು, ಈ ರಿಯಾಲಿಟಿಗೆ ಬಂದರೆ ಬಿಗ್‌ ಬಾಸ್‌ ಮನೆಯಲ್ಲಿ ಅವರೇ ಸ್ಟ್ರಾಂಗ್‌ ಆಗುತ್ತಾಳೆ, ತಾನ್ಯಾ ಮಿತ್ತಲ್‌ ಅವರು ಸಿಕ್ಕಾಪಟ್ಟೆ ಬ್ಯುಸಿನೆಸ್‌ ಮೈಂಡ್‌ ಆಗಿದ್ದಾರೆ. ಇದೇ ರೀತಿ ಮುಂದುವರೆದರೆ ಅವರು ಹೊರಗಡೆ ಬರಬೇಕು, ಇಲ್ಲದಿದ್ದರೆ ನಾವು ಹೊರಗಡೆ ಕರೆದುಕೊಂಡು ಬರ್ತೀವಿ” ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ತಾನ್ಯಾ ಮಿತ್ತಲ್‌ ಹೇಳಿದ್ದೇನು?

“ಗ್ವಾಲಿಯರ್‌ ಮೂಲದವಳು, ಅಲ್ಲಿ ನಮ್ಮ ಕುಟುಂಬದ ಸಾಕಷ್ಟು ಆಸ್ತಿ ಇದೆ. ಸೋಲಾರ್‌ ಪ್ಯಾನಲ್‌ಗಳನ್ನು ನಡೆಸುತ್ತಾರೆ. ಇದರಿಂದ ಕರೆಂಟ್‌ ಉಳಿತಾಯ ಆಗುವುದು. ಅಷ್ಟೇ ಅಲ್ಲದೆ ತರಕಾರಿಗಳನ್ನು ಬೆಳೆಯುತ್ತಾರೆ, ಗೋಶಾಲೆಯಿಂದ ಹಾಲು ಸಿಗುತ್ತದೆ. ನಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಮೌಲ್ಯವನ್ನು ಹೇಳಿಕೊಟ್ಟಿದ್ದಾರೆ. ದುಡ್ಡು ಉಳಿಸೋದರಲ್ಲಿ ನಮ್ಮ ಸಂಬಂಧಿಕರು ತುಂಬ ನಾಜೂಕು ವಹಿಸಿತ್ತಾರೆ. ನನಗೆ 13 ಸಹೋದರರು ಇದ್ದಾರೆ” ಎಂದು ತಾನ್ಯಾ ಮಿತ್ತಲ್‌ ಅವರು ದೊಡ್ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಇವರು ಬಿಗ್‌ಬಾಸ್‌ಮನೆಯಲ್ಲಿಯೂ ಬಾತ್‌ರೂಮ್‌ಗೂ ಸೀರೆ ಧರಿಸಿ ಹೋಗುತ್ತಾರೆ. ಈ ಬಗ್ಗೆ ಮಾತನಾಡಿರೋ ಅವರು "ಸೀರೆ ಉಟ್ಟುಕೊಂಡು ಇಲ್ಲಿಗೆ ಬರೋದು ಸುಲಭ ಇಲ್ಲ. ನಾನು ಅಷ್ಟು ಒಪನ್‌ ಇಲ್ಲ" ಎಂದು ಹೇಳಿದ್ದರು. ಆನಂತರ ಶಾರ್ಟ್‌ ಡ್ರೆಸ್‌ ಧರಿಸಿದ ವಿಡಿಯೋಗಳು ಸೋಶಿಯಲ್‌ಮೀಡಿಯಾದಲ್ಲಿ ವೈರಲ್‌ಆಗುತ್ತಿವೆ. ಬಿಗ್‌ಬಾಸ್‌ಮನೆಗೆ 800 ಸೀರೆ, 50kg ಜ್ಯುವೆಲರಿ ತಂದಿದ್ದಾರಂತೆ.

ಇನ್ನು ಮಹಾಕುಂಭಮೇಳದಲ್ಲಿ ಅವರ ಸೆಕ್ಯುರಿಟಿಗಳೇ 100 ಜನರನ್ನು ಸೇರಿಸಿದ್ದಾರಂತೆ. ಅದರಲ್ಲಿ ಪೊಲೀಸರು ಕೂಡ ಸೇರಿದ್ದಾರಂತೆ.

ನಾನು 2000ರಲ್ಲಿ ಹುಟ್ಟಿದ್ದೇನೆ ಎಂದು ತಾನ್ಯಾ ಹೇಳಿಕೊಂಡರೆ, 2017ರಲ್ಲಿ ಇವರು 18ನೇ ಜನ್ಮದಿನ ಆಚರಿಸಿಕೊಂಡ ಫೋಟೋ ಕೂಡ ಸೋಶಿಯಲ್‌ಮೀಡಿಯಾದಲ್ಲಿ ವೈರಲ್‌ಆಗ್ತಿದೆ.

"ನಾನು ನೋಡೋಕೆ ಚೆನ್ನಾಗಿಲ್ಲ ಅಂತ ನನ್ನ ಬಾಯ್‌ಫ್ರೆಂಡ್‌ 2018ರಲ್ಲಿ ಬ್ರೇಕಪ್‌ಮಾಡಿಕೊಂಡ. ಆಮೇಲೆ ದೈಹಿಕವಾಗಿ, ಮಾನಸಿಕವಾಗಿ ನಾನು ಬದಲಾದೆ" ಎಂದು ಕೂಡ ಅವರು ಹೇಳಿದ್ದರು.