Bigg boss 19: ಬಿಗ್ ಬಾಸ್ 19 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಶೋ ಯಾವ ಚಾನೆಲ್ ನಲ್ಲಿ ಪ್ರಸಾರ ಆಗ್ತಿದೆ, ಎಷ್ಟು ಗಂಟೆಗೆ ಎಂಬ ಮಾಹಿತಿ ಇಲ್ಲಿದೆ.
ದೇಶದಾದ್ಯಂತ ಶೀಘ್ರವೇ ಬಿಗ್ ಬಾಸ್ (Big Boss) ಜ್ವರ ಶುರುವಾಗಲಿದೆ. ಒಂದ್ಕಡೆ ಕನ್ನಡ ಬಿಗ್ ಬಾಸ್ 12 (Bigg Boss 12) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸ್ಪರ್ಧಿಗಳು ಯಾರು, ಯಾವಾಗ ಶೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ (Kiccha Sudeep) ಶೋ ನಡೆಸಿಕೊಡ್ತಿರೋದ್ರಿಂದ ರಿಲ್ಯಾಕ್ಸ್ ಆಗಿರುವ ವೀಕ್ಷಕರು, ಆದಷ್ಟು ಬೇಗ ಬಿಗ್ ಬಾಸ್ ಕನ್ನಡ 12 ಶುರು ಆಗ್ಲಿ ಎನ್ನುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮಂಚದಲ್ಲಿ ಧೂಳೆಬ್ಬಿಸೋಕೆ ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ (Salman Khan) ಸಿದ್ಧವಾಗಿದ್ದಾರೆ. ಹಿಂದಿಯಲ್ಲಿ ಬಿಗ್ ಬಾಸ್ ಆರಂಭಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇದೆ. ಇದೇ ಆಗಸ್ಟ್ 24 ರಂದು ಬಿಗ್ ಬಾಸ್ 19 (Bigg Boss 19)ರ ಶೋ ಶುಭಾರಂಭಗೊಳ್ಳಲಿದೆ.
ಬಿಗ್ ಬಾಸ್ 19 ಶೋ ಎಲ್ಲಿ ನೋಡ್ಬಹುದು? : ಬಿಗ್ ಬಾಸ್ 19 ಶೋವನ್ನು ವೀಕ್ಷಕರು ಎರಡು ಕಡೆ ನೋಡೋಕೆ ಅವಕಾಶ ಸಿಗ್ತಿದೆ. ಒಟಿಟಿ ಹಾಗೂ ಟಿವಿ ಎರಡರಲ್ಲೂ ಈ ಬಾರಿ ಬಿಗ್ ಬಾಸ್ ಶೋ ಪ್ರಸಾರವಾಗ್ತಿದೆ. ವೀಕ್ಷಕರು ಜಿಯೋಹಾಟ್ಸ್ಟಾರ್ನಲ್ಲಿ ಬಿಗ್ ಬಾಸ್ ಶೋ ನೋಡ್ಬಹುದು. ರಾತ್ರಿ 9 ಗಂಟೆಗೆ ಶೋ ಲೈವ್ ಪ್ರಸಾರವಾಗಲಿದೆ. ಒಂದ್ವೇಳೆ ನಿಮಗೆ ಲೈವ್ ಶೋ ನೋಡೋಕೆ ಸಾಧ್ಯವಿಲ್ಲ ಅಂತಾದ್ರೆ ಟಿವಿಯಲ್ಲೂ ನೀವು ಶೋ ನೋಡ್ಬಹುದು. ಜಿಯೋ ಹಾಟ್ ಸ್ಟಾರ್ ಇಲ್ಲ ಎನ್ನುವವರು 10.30ರವರೆಗೆ ಕಾಯ್ಬೇಕು. ರಾತ್ರಿ 10.30 ಕ್ಕೆ ಕಲರ್ಸ್ ಟಿವಿಯಲ್ಲಿ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ.
ಈ ಬಾರಿ ಸಿಗಲಿದೆ ತ್ರಿಬಲ್ ಮಜಾ : ಸತತ 18 ಸೀಸನ್ ನಿರೂಪಣೆಯನ್ನು ಸಲ್ಮಾನ್ ಖಾನ್ ಮಾಡಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಜೊತೆ ಅಭಿಮಾನಿಗಳಿಗೆ ಇನ್ನಿಬ್ಬರು ನಿರೂಪಕರನ್ನು ನೋಡುವ ಅವಕಾಶ ಸಿಗ್ತಿದೆ. ಬಿಗ್ ಬಾಸ್ ವೇದಿಕೆ ಮೇಲೆ ಫರಾ ಖಾನ್ ಮತ್ತು ಕರಣ್ ಜೋಹರ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಅಂತ ಮೂಲಗಳು ಹೇಳಿವೆ.
ರಾಜಕೀಯದ ಝಲಕ್ : ಈ ಬಾರಿ ಬಿಗ್ ಬಾಸ್ ಥೀಮ್ 'ಘರ್ವಾಲೋಂ ಕಿ ಸರ್ಕಾರ್'. ಬಿಗ್ ಬಾಸ್ ಮನೆಯನ್ನು ಸಂಸತ್ತಿನ ರೀತಿ ತಯಾರಿಸಲಾಗಿದೆ. ಇದರಲ್ಲಿ ಸ್ಪರ್ಧಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಚರ್ಚೆ, ಮತ, ವಾದ – ವಿವಾದಗಳು ನಡೆಯಲಿವೆ. ಈ ಬಾರಿ ಬಿಗ್ ಬಾಸ್ ಮನೆಗೆ ನಾಯಕನ ಬದಲು ಎರಡು ರಾಜಕೀಯ ಪಕ್ಷಗಳಿರಲಿವೆ. ಪಕ್ಷದಲ್ಲಿ ಪ್ರಚಾರ, ಮತದಾನ ಎಲ್ಲ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಾರಾ ಈ ಸ್ಪರ್ಧಿಗಳು? : ಬಿಗ್ ಬಾಸ್ ಶುರು ಆದ್ಮೇಲೇ ಯಾರೆಲ್ಲ ಮನೆಗೆ ಬರ್ತಾರೆ ಅನ್ನೋದು ಕನ್ಫ್ರ್ಮ್ ಆಗುತ್ತೆ. ಆದ್ರೆ ವರದಿ ಪ್ರಕಾರ ಗೌರವ್ ಖನ್ನಾ, ಪಾಯಲ್ ಧರೆ, ಹುನಾರ್ ಹ್ಯಾಲಿ ಗಾಂಧಿ, ಅವೇಜ್ ದರ್ಬಾರ್, ನಗ್ಮಾ ಮಿರಾಜ್ಕರ್, ಅಶ್ನೂರ್ ಕೌರ್, ಸಿವೆತ್ ತೋಮರ್, ಬಸೀರ್ ಅಲಿ, ಶಫಾಕ್ ನಾಜ್ ಮತ್ತು ನಯನ್ದೀಪ್ ರಕ್ಷಿತ್ ಮನೆಗೆ ಬರ್ತಾರೆ ಎನ್ನಲಾಗ್ತಿದೆ.
ಐದು ತಿಂಗಳು ನಡೆಯಲಿದೆ ಬಿಗ್ ಬಾಸ್ ಶೋ : ಈ ಬಾರಿ ಬಿಗ್ ಬಾಸ್ ಶೋ ಸತತ 5 ತಿಂಗಳು ನಡೆಯಲಿದೆ ಎನ್ನಲಾಗ್ತಿದೆ. ಆದ್ರೆ ಐದು ತಿಂಗಳ ಕಾಲ ಸಲ್ಮಾನ್ ಖಾನ್ ಮಾತ್ರ ನಿರೂಪಣೆ ಮಾಡೋದಿಲ್ಲ ಎನ್ನಲಾಗ್ತಿದೆ. ಆಗಾಗ ಸಲ್ಮಾನ್ ಖಾನ್ ಬ್ರೇಕ್ ಪಡೆಯಲಿದ್ದು, ಸಲ್ಲು ಬದಲು ಫರಾ ಖಾನ್ ಮತ್ತು ಕರಣ್ ಜೋಹರ್ ರಂತಹ ಸ್ಟಾರ್ಸ್ ಕೂಡ ನಿರೂಪಣೆ ಮಾಡಲಿದ್ದಾರೆ.
