Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಇಷ್ಟುದಿನಗಳಿಂದ ಗೌತಮ್ ದತ್ತುಪುತ್ರಿ ಮಿಂಚು ಒಂದೂ ಮಾತನಾಡಿರಲಿಲ್ಲ. ಇಷ್ಟುದಿನ ಯಾಕೆ ಸೈಲೆಂಟ್ ಆಗಿದ್ದೆ ಎಂದು ಅವಳು ಹೇಳಿದ್ದಾಳೆ. ಇದನ್ನು ಕೇಳಿದರೆ ನಿಜಕ್ಕೂ ಸಂಕಟ ಆಗುವುದು. ಹಾಗಾದರೆ ಏನು ಕಾರಣ ಇರಬಹುದು?
ಅಮೃತಧಾರೆ ಧಾರಾವಾಹಿಯಲ್ಲಿ( Amruthadhaare Tv Serial ) ಮಿಂಚು ಇಷ್ಟುದಿನ ಮಾತನಾಡಿರಲಿಲ್ಲ. ಈಗ ಅವಳು ಮಾತನಾಡೋಕೆ ಶುರು ಮಾಡಿದಳು. ಆ ಪುಟ್ಟ ಹುಡುಗಿ ಬಂದಿದ್ದೇ ಬಂದಿದ್ದು ಇಡೀ ವಠಾರದಲ್ಲಿರುವ ಎಲ್ಲ ಸಮಸ್ಯೆಗಳು ಒಂದೊಂದಾಗಿ ಬದಲಾದವು. ಈಗ ಗೌತಮ್, ಭೂಮಿಕಾ ಒಂದೇ ವಠಾರದಲ್ಲಿ ಇರುವ ಹಾಗೆ ಆಯ್ತು. ಎಲ್ಲರೂ ಈ ಹುಡುಗಿಯನ್ನು ಅದೃಷ್ಟ ದೇವತೆ ಎಂದು ಕರೆಯುತ್ತಿದ್ದಾರೆ.
ಗೌತಮ್ ಬದುಕಿನಲ್ಲಿ ಪವಾಡ
ಭೂಮಿಕಾ ತನ್ನ ವಠಾರಕ್ಕೆ ಬಂದಿದ್ದು, ತನ್ನ ಪಕ್ಕದಲ್ಲೇ ಮನೆ ಮಾಡಿಕೊಂಡಿರೋದು ಮಾತ್ರ ಗೌತಮ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. “ವಠಾರದಲ್ಲಿರುವವರು ಎಲ್ಲರೂ ನಿನ್ನನ್ನು ಅದೃಷ್ಟ ದೇವತೆ ಎಂದು ಹೇಳ್ತಾರೆ. ಆದರೆ ನಾನು ನಂಬದೆ ಸುಮ್ಮನಿದ್ದೆ. ನೀನು ಅದೃಷ್ಟದೇವತೆಯೋ? ಶಾಪಗ್ರಸ್ಥ ಗಂಧರ್ವಳೋ ಏನೋ ನನ್ನ ಜೀವನದಲ್ಲಿ ಬಂದಮೇಲೆ ಪವಾಡ ನಡೆಯಿತು” ಎಂದು ಹೇಳಿದ್ದಾನೆ. ಆಗ ಅವಳು ಮಾತನಾಡಲು ಆರಂಭಿಸಿದ್ದಾಳೆ.
ಮಾತೇ ಬರಲ್ಲ ಅಂದುಕೊಂಡಿದ್ದ ಗೌತಮ್
ಗೌತಮ್ ಅಂತೂ ಖುಷಿಯಿಂದ ಆ ಪುಟ್ಟ ಮಗುವನ್ನು ತಬ್ಬಿಕೊಂಡಿದ್ದಾನೆ. ಆಗ ಅವಳು ಥ್ಯಾಂಕ್ಯು ಅಂತ ಹೇಳಿದ್ದಾಳೆ. ಯಾಕೆ ಇಷ್ಟುದಿನ ಮಾತನಾಡಲಿಲ್ಲ ಅಂತ ಗೌತಮ್ ಅವಳನ್ನು ಕೇಳಿದ್ದಾನೆ. ಅವನಿಗಂತೂ ಆ ಹುಡುಗಿಗೆ ಮಾತೇ ಬರೋದಿಲ್ಲ ಎಂದುಕೊಂಡಿದ್ದನು. ಈಗ ಅವನಿಗೆ ಉತ್ತರ ಸಿಕ್ಕಿದೆ.
ಇಷ್ಟುದಿನ ಮಾತಾಡದೆ ಇರಲು ಕಾರಣ ಏನು?
“ನಾನು ತುಂಬ ಮಾತಾಡ್ತೀನಿ ಅಂತ ನನ್ನ ಅಪ್ಪ-ಅಮ್ಮ ಬರೆ ಹಾಕ್ತೀನಿ ಅಂತ ಹೇಳಿದ್ದರು. ಮಾತಾಡಿದ್ರೆ ಬರೆ ಹಾಕ್ತೀನಿ ಅಂದಿದ್ದಕ್ಕೆ ನಾನು ಸುಮ್ಮನಿದ್ದೆ. ನಾನು ಮಾತನಾಡೋದು ಯಾರಿಗೂ ಇಷ್ಟ ಇರಲಿಲ್ಲ. ಅಪ್ಪ ಅಂತೂ ಯಾವಾಗಲೂ ಹೊಡೆಯೋರು. ನನ್ನ ಅದೃಷ್ಟದಿಂದ ಹೊಸ ಪಾಪು ಬಂತು, ಆಮೇಲೆ ನನಗೆ ಹೊಡೆದು ಬಡೆಯೋರು. ಒಂದು ರಾತ್ರಿಯಂತೂ ಇಡೀ ದಿನ ನನ್ನನ್ನು ಮನೆಯಿಂದ ಹೊರಗಡೆ ನಿಲ್ಲಿಸಿದ್ದರು. ನಾನು ಅವರ ನಿಜವಾದ ಮಗಳಲ್ಲವಂತೆ, ಎಲ್ಲಿಂದಲೋ ನನ್ನನ್ನು ಕರೆದುಕೊಂಡು ಬಂದರಂತೆ” ಎಂದು ಮಿಂಚು, ಗೌತಮ್ ಬಳಿ ಹೇಳಿಕೊಂಡಿದ್ದಳು.
ಪಪ್ಪ ಅಂತ ಕರೆದ ಹುಡುಗಿ
“ನೀವು ನನ್ನನ್ನು ತುಂಬ ಇಷ್ಟಪಡ್ತೀರಿ, ನನ್ನನ್ನು ತುಂಬ ಪ್ರೀತಿ ಮಾಡ್ತೀರಿ. ನಿಮ್ಮನ್ನು ಕಂಡರೆ ನನಗೆ ತುಂಬ ಇಷ್ಟ. ಹೀಗಾಗಿ ನನಗೆ ಮಾತನಾಡಬೇಕು ಅಂತ ಅನಿಸತ್ತೆ. ಅಪ್ಪ-ಅಮ್ಮ ಮತ್ತೆ ಬಂದು, ನಮ್ಮ ಜೊತೆಗೆ ಬಾ ಅಂದರೂ ನಾನು ಹೋಗೋದಿಲ್ಲ, ನಾನು ನಿಮ್ಮ ಜೊತೆಗೆ ಇರುತ್ತೇನೆ. ನಾನು ನಿಮ್ಮನ್ನು ಪಪ್ಪ ಅಂತ ಕರೆಯುತ್ತೇನೆ” ಎಂದು ಗೌತಮ್ ಬಳಿ ಆ ಹುಡುಗಿ ಹೇಳಿದ್ದಾಳೆ.
ಮುಂದೆ ಏನಾಗುವುದು?
ಗೌತಮ್ ಹಾಗೂ ಭೂಮಿಕಾ ಒಂದಾಗಬೇಕಿದೆ. ಇನ್ನೊಂದು ಕಡೆ ಸಾಲ ತೀರಿಸಬೇಕು, ಅದಿಕ್ಕೆ ಭೂಮಿಕಾ ಸಹಿ ಹಾಕಬೇಕು. ಹೀಗಾಗಿ ಜಯದೇವ್, ಅವರಿಬ್ಬರ ಹುಡುಕಾಟ ಮಾಡುತ್ತಿದ್ದಾನೆ. ಇವರಿಬ್ಬರು ಕಣ್ಣಿಗೆ ಬಿದ್ದರೆ ಇನ್ನೇನು ಮಾಡುತ್ತಾನೋ ಏನೋ! ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
