Amruthadhaare Serial: ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್‌ ಮುಖಾಮುಖಿಯಾಗಿದೆ. ಇವರಿಬ್ಬರು ಒಂದಾಗ್ತಾರಾ? ಗೌತಮ್‌ ಒಂದಾಗೋಣ ಎಂದಾಗ, ಭೂಮಿಕಾ ಏನು ಹೇಳುತ್ತಾಳೆ? ಒಟ್ಟಿನಲ್ಲಿ ಈ ಎಪಿಸೋಡ್‌ ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.  

‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ಕುಶಾಲನಗರದಲ್ಲಿ ಕೊನೆಗೂ ಭೂಮಿಕಾ ಹಾಗೂ ಗೌತಮ್‌ ಭೇಟಿಯಾಗಿದೆ. ಈ ಎಪಿಸೋಡ್‌ಗೋಸ್ಕರ ವೀಕ್ಷಕರು ಕಾಯುತ್ತಿದ್ದರು. ಸದ್ಯ ವಾಹಿನಿಯು ಪ್ರೋಮೋ ರಿಲೀಸ್‌ ಮಾಡಿದೆ. ಕಳೆದ ಐದು ವರ್ಷಗಳಿಂದ ಗೌತಮ್‌ ದಿವಾನ್‌ ತನ್ನ ಮನದರಸಿ ಭೂಮಿಕಾಳನ್ನು ಹುಡುಕಿಕೊಂಡು ಕಾರ್‌ ಡ್ರೈವರ್‌ ಆಗಿ ಊರೂರು ಅಲೆಯುತ್ತಿದ್ದಾನೆ. ಕುಶಾಲನಗರದಲ್ಲಿ ಅವನಿಗೆ ಪತ್ನಿ ಸಿಕ್ಕಿದ್ದಾಳೆ.

ಗೌತಮ್ ಗಾಢ ಪ್ರೀತಿಗಿದು ಶುಭ ಘಳಿಗೆ! ಮನದರಸಿ ಭೂಮಿ ಕಣ್ಣೆದುರು ಬಂದಾಯ್ತು, ರೋಚಕ ಘಟ್ಟದಲ್ಲಿ ಅಮೃತಧಾರೆ ಎಂಬ ಟೈಟಲ್‌ ಅಡಿಯಲ್ಲಿ ಹೊಸ ಪ್ರೋಮೋ ರಿಲೀಸ್‌ ಆಗಿದೆ.

ಭೂಮಿಕಾಳನ್ನು ಗೌತಮ್‌ ಹುಡುಕುತ್ತಿದ್ದನು. ಅವನನ್ನು ನೋಡಲು ಆನಂದ್‌ ಕೂಡ ಅಲ್ಲಿಗೆ ಬಂದಿದ್ದನು. ಶಾಲೆ ಬಳಿ ಗೌತಮ್‌ಗೆ ಭೂಮಿಕಾ ಕಂಡಿದ್ದಾಳೆ. ಆಗ ಅವನಿಗೆ ಇಲ್ಲಿಯೇ ಭೂಮಿಕಾ ಟೀಚರ್‌ ಆಗಿ ಕೆಲಸ ಮಾಡುತ್ತಿರೋದು ಗೊತ್ತಾಗಿದೆ. ಮರುದಿನ ಅವನು ಓರ್ವ ವಿದ್ಯಾರ್ಥಿನಿ ಬಳಿ ಹೂ ತಲುಪಿಸಿ, “ನಿಮಗೆ ಹೂ ಕೊಡೋ ಧೈರ್ಯ ಯಾರಿಗಿದೆ? ನಾನು, ನಿಮ್ಮ ಗೌತಮ್” ಎಂದು ಪತ್ರದಲ್ಲಿ ಬರೆದಿದ್ದಾನೆ.‌ ಅದಾದ ಬಳಿಕ ಗೌತಮ್‌ ಹಾಗೂ ಭೂಮಿಕಾ ಮುಖಾಮುಖಿಯಾಗಿದ್ದಾರೆ.

“ನಾವಿಬ್ಬರು ಒಟ್ಟಿಗೆ ಬದುಕೋಕೆ ನೂರಾರು ಕಾರಣಗಳಿತ್ತು. ಯಾಕೆ ನನ್ನನ್ನು ಒಂಟಿಯಾಗಿ ಮಾಡಿ ಬಿಟ್ಟು ಹೋದ್ರಿ..?” ಎಂದು ಗೌತಮ್‌ ಪ್ರಶ್ನೆ ಮಾಡಿದ್ದಾನೆ. ಗೌತಮ್‌ ಮಾತಿಗೆ ಭೂಮಿಕಾ ಏನು ಹೇಳಿದ್ದಾಳೆ ಎಂದು ತಿಳಿದುಕೊಳ್ಳಲು ವೀಕ್ಷಕರು ಕಾತುರದಿಂದಿದ್ದಾರೆ. ಮಗಳು ಹುಟ್ಟಿರೋದು, ಕಿಡ್ನ್ಯಾಪ್‌ ಆಗಿರೋ ವಿಚಾರವನ್ನು ಪತಿ ತನ್ನಿಂದ ಮುಚ್ಚಿಟ್ಟನು, ಶಕುಂತಲಾ ನನ್ನ ಮಗಳನ್ನು ಸಾಯಿಸಿದಳು ಅಂತ ಬೇಸರ ಮಾಡಿಕೊಂಡು ಭೂಮಿಕಾ ತನ್ನ ಮಗನ ಜೊತೆ ಬೇರೆ ಊರಿಗೆ ಹೋಗಿದ್ದಳು.

ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಏನು ಹೇಳಿದರು?

  • ಸದ್ಯ ರಬ್ಬರ್ ಥರ ಏಳಿಲಿಲ್ಲ
  • ದಯವಿಟ್ಟು ಇವರಿಬ್ಬರನ್ನು ಒಂದು ಮಾಡಿ, ಜೊತೆ ಇದ್ರೆ ಚಂದ
  • ಮೊದಲ ಮಗು ಸಿಕ್ಕಿದರೆ ಚೆನ್ನಾಗಿತ್ತು
  • ಈಗ ಬನ್ನಿ ಇಬ್ಬರೂ ಒಂದಾಗಿ ಇನ್ನೊಂದು ಮಗು ಹುಡುಕೋಣ ಅಂತ ಹೇಳಬಹುದು
  • ಈ ಎಪಿಸೋಡ್ ಎಷ್ಟು ತಿಂಗಳುಗಳ ನಂತರ ತೋರಿಸ್ತೀರಾ?
  • ಈ ಕ್ಷಣ ನೋಡೋದಕ್ಕೆ ಕಾಯ್ತಾ ಇದೀವಿ
  • ಇವತ್ತಾದ್ರೂ ಇವರಿಬ್ರು ನಾ ಒಂದು ಮಾಡಿದಲ್ಲ ಹಾಗೆ ಆ ಕಳ್ದೋಗಿರೋ ಮಗು ಆದಷ್ಟು ಬೇಗ ಸಿಗಲಿ
  • ಗೌತಮ್ ಭೂಮಿಕಾ ಒಂದಾಗಿ ಬಾಳುವುದು ಚೆಂದ
  • ಖುಷಿ ಆಯಿತು ಎರಡು ಜೀವಗಳು ಒಂದಾಗಿದ್ದು ನೋಡಿ
  • ಯಾಕೋ ಇದು ಕನಸು ಇರ್ಬೋದು
  • ಓ ಗಾಡ್, ಇವತ್ತಾದ್ರೂ ಇವರಿಬ್ಬರನ್ನು ಒಂದು ಮಾಡಿದಲ್ಲ ಹಾಗೆ
  • ಕಳೆದುಹೋಗಿರೋ ಆ ಮಗು ಆದಷ್ಟು ಬೇಗ ಸಿಗಲಿ
  • ಏನೇ ಆದ್ರೂ ಕಣ್ಣಲ್ಲಿ ನೀರು ಬಂತು
  • ಈ ಘಳಿಗೆಗೆ ಎಷ್ಟೋ ಅಭಿಮಾನಿಗಳು ಕಾಯ್ತಾ ಇದಾರೆ
  • ಯಾವುದೇ ಚಾನೆಲ್‌ನಲ್ಲಿ ಆದ್ರೂ ಯಾವುದೇ ಸೀರಿಯಲ್ ಆದ್ರೂ ಇಷ್ಟು ಫಾಸ್ಟ್ ಆಗಿ ಮೂವ್ ಆಗಿಲ್ಲ.
  • ಸೀರಿಯಲ್ ಅಂದ್ರೆ ಅಮೃತಧಾರೆ
  • ಕಥೆ ಚೂಯಿಂಗ್ ಗಮ್ ತರ ಎಳೆದುಕೊಳ್ಳೋದಿಲ್ಲ ಎಂದು ಅಮೃತಧಾರೆ ಎಲ್ಲರಿಗೂ ಇಷ್ಟ ಆಗುವುದು.
  • ಗೌತಮ್ ಮನದರಸಿ ಭೂಮಿ, ಇದೊಂದು ಕಥೆ, ನಟನೆ ಅಂತ ಗೊತ್ತಿದ್ದರೂ ಕೂಡ ಈ ಥರ ಇಬ್ಬರು ದೂರ ಆದವರು ಒಂದಾಗ್ತಾ ಇದ್ದಾರೆ ಅಂದರೆ ಒಂಥರ ಸಂತೋಷ
  • ನಿಮಗೆ ಹೂವು ಕೊಡೋ ಧೈರ್ಯ ಯಾರಿಗಿದೆ ಭೂಮಿಕಾ? ನಿಮ್ಮ ಗೌತಮ್
  • ಅಂತು ಗೌತಮ್-ಭೂಮಿ ಭೇಟಿ ಬೇಗ ಆಯ್ತು, ಇದೊಂದೆ ಧಾರಾವಾಹಿ ಮಾತ್ರ ಎಲ್ಲಿಯೂ ಎಳಿಯೊಲ್ಲ
  • ನಿಜವಾದ ಪ್ರೀತಿ ಅಂದ್ರೆ ಇದೆ ಅನಿಸುತ್ತದೆ
  • ಈ ಶುಭ ಘಳಿಗೆ ಅಭಿಮಾನಿಗಳೆಲ್ಲರೂ ಕಾತುರದಿಂದ ಕಾಯುತ್ತಿರುವೆವು ದಯವಿಟ್ಟು ಬೇಗ ಈ ಎಪಿಸೋಡ್ ಪ್ರಸಾರ ಮಾಡಿ. ತುಂಬಾ ದಿನ ತಗೋಬೇಡಿ... ಮರಳುಗಾಡಿನಲ್ಲಿ ನೀರು ಸಿಕ್ಕಷ್ಟು ಸಂತೋಷವಾಯಿತು
  • ಈ ಸೀರಿಯಲ್ ಡೈರೆಕ್ಟರ್ ಒಬ್ಬರಿಗೆ ಅರ್ಥ ಆಗಿದೆ ಎಲ್ಲೂ ಡ್ರಾಗ್ ಮಾಡದೆ ನೀಟಾಗಿ ಎಪಿಸೋಡ್ ಮಾಡಿದ್ರೆ ಜನಕ್ಕೆ ಇಷ್ಟ ಆಗೋದು ಅಂತ
  • ಇದನ್ನು ಕನಸ್ಸು ಅಂತ ತೋರಿಸ ಬೇಡಿ.. ಹಾಗೇನಾದ್ರೂ ಆದ್ರೇ ಈ ಡೈರೆಕ್ಟರ್ ಸಂಸಾರ ಹೀಗೆ ಹಾಳಾಗಿ ಹೋಗ್ಲಿ ದೇವರೆ.
  • ಬೇರೆ ಸೀರಿಯಲ್ ಆಗಿದ್ದಿದ್ರೆ ಭೂಮಿ-ಗೌತಮ್ ಮೀಟ್ ಮಾಡೋಕೆ ಒಂದೆರಡು ವರ್ಷ ಆಗಿರೋದು, ಅದಿಕ್ಕೆ ಅಮೃತಧಾರೆ ಫಾಸ್ಟ್ moving ಸೀರಿಯಲ್

View post on Instagram