Kannada Serial: ಸೀರಿಯಲ್‌ನಲ್ಲಿ ನಟಿಸುವ ನಟಿಯರಿಗೆ ತುಂಬ ಕಡಿಮೆ ಸಂಭಾವನೆ ಸಿಗುತ್ತದೆ. ಆದರೆ ಅವರು ದುಬಾರಿ ಬಟ್ಟೆ ಹಾಕುತ್ತಾರೆ. ಇದು ಹೇಗೆ ಎನ್ನುವ ಪ್ರಶ್ನೆಗೆ ಅಗ್ನಿಸಾಕ್ಷಿ ಧಾರಾವಾಹಿ ನಟ ಕೊಡೆಮುರುಗ ಅವರು ಉತ್ತರ ಕೊಟ್ಟಿದ್ದಾರೆ.
ಇಂದು ಸೀರಿಯಲ್‌ನಲ್ಲಿ ನಟಿಸುವ ನಟಿಯರು ಫಾರಿನ್ ಟ್ರಿಪ್ ಮಾಡ್ತಾರೆ, ದುಬಾರಿ ಬಟ್ಟೆಗಳನ್ನು ಕೂಡ ಹಾಕ್ತಾರೆ. ಕೆಲ ನಟಿಯರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ತಾರೆ, ಯುಟ್ಯೂಬ್‌ನಿಂದ ದುಡಿಯುತ್ತಾರೆ, ಇನ್ನೂ ಕೆಲವರು ಬೇರೆ ಉದ್ಯಮವನ್ನು ಕೂಡ ಹೊಂದಿರುತ್ತಾರೆ. ಇನ್ನೂ ಕೆಲವರು ರೀಲ್ಸ್ ಎಂದುಕೊಂಡು ಒಂದಿಷ್ಟು ಹಣವನ್ನು ದುಡಿಯುತ್ತಾರೆ. ಆದರೆ ಕೆಲವರು ಮಾತ್ರ ದೇಹ ಮಾರಿಕೊಂಡು ಹಣ ಮಾಡುತ್ತಿದ್ದಾರೆ ಎಂದು ಅಗ್ನಿಸಾಕ್ಷಿ ಧಾರಾವಾಹಿ ನಟ ಕೊಡೆಮುರುಗ ಅವರು ಸುದ್ದಿಮನೆ ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.
ಕೊಡೆ ಮುರುಗ ಯಾರು?
ಬೃಂದಾವನ, ಸಾಗುತ ದೂರ ದೂರ, ಸುಕನ್ಯಾ, ಬದುಕು, ಪುನರ್ ವಿವಾಹ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಇವರಿಗೆ ಹೆಸರು ಬಂತು. ಮೊದಲು ಇವರು ರಾಣಿ ಮಹಾರಾಣಿ ಸಿನಿಮಾದಲ್ಲಿ ಕೂಡ ನಟಿಸಿದ್ದರು.
ಕೊಡೆ ಮುರುಗ ಏನಂತಾರೆ?
“ಇಂದಿನ ಹೆಣ್ಣು ಮಕ್ಕಳಿಗೆ ಯಾರಾದರೂ ಫಿಸಿಕಲೀ ಕಮಿಟ್‌ಮೆಂಟ್ ಕೇಳಿದಾಗ ಕಪಾಳಕ್ಕೆ ಹೊಡೆದು ಆಗೋದಿಲ್ಲ ಎಂದು ಹೇಳಬೇಕು. ಓರ್ವ ನಟಿ ನನ್ನ ಬಳಿ ಬಂದು, ಏನು ಕಾಣುತ್ತೋ ಅದು ಸೇಲ್ ಆಗತ್ತೆ, ಏನು ಕಾಣಿಸಿಲ್ಲವೋ ಅದು ಸೇಲ್ ಆಗೋದಿಲ್ಲ ಎಂದು ಹೇಳಿದ್ದಳು. ಇಂದು ಎಲ್ಲರೂ ಹೈಫೈ ಆಗಿ ಬದುಕಬೇಕು ಎಂದುಕೊಳ್ತಾರೆ” ಎಂದು ಹೇಳಿದ್ದಾರೆ.
ಸೀರಿಯಲ್‌ನಲ್ಲಿ ನಟಿಸಲು ಎಷ್ಟು ಹಣ ಕೊಡ್ತಾರೆ?
“ಸೀರಿಯಲ್‌ನಲ್ಲಿ ಹೀರೋಯಿನ್‌ಗೆ ಮಿನಿಮಮ್ 8 ಅಥವಾ 10 ದಿನ ಶೂಟಿಂಗ್ ಇರುತ್ತದೆ. ಹೊಸ ಹೀರೋಯಿನ್‌ಗೆ ದಿನಕ್ಕೆ 3000 ಸಾವಿರ ರೂಪಾಯಿ ಕೊಡ್ತಾರೆ. ಹೊಸ ಹೀರೋಯಿನ್‌ಗೆ ಹತ್ತು ದಿನಕ್ಕೆ 30000 ರೂಪಾಯಿ ಕೊಡ್ತಾರೆ. ಆದರೆ ಅವರ ಕಾಸ್ಟ್ಯೂಮ್ ಬೆಲೆ ಎಷ್ಟು ಅಂಥ ಗೊತ್ತಾ? ಅವರಿಗೆಲ್ಲ ದುಡ್ಡು ಎಲ್ಲಿಂದ ಬರುತ್ತದೆ?” ಎಂದು ಕೊಡೆ ಮುರುಗ ಅವರು ಪ್ರಶ್ನೆ ಮಾಡಿದ್ದಾರೆ.
ದೇಹ ಮಾರಿಕೊಂಡು ಬದುಕ್ತಾರೆ
“ದೇಹ ಮಾರಿಕೊಂಡು ಈ ರೀತಿ ಮಾಡ್ತಾರೆ. ಇನ್ನೂ ಕೆಲವರು ರೀಲ್ಸ್ ಇನ್ನೇನೋ ಮಾಡಿಕೊಂಡು ಬದುಕ್ತಾರೆ. ಎಷ್ಟೋ ಹುಡುಗಿಯರು ದೇಹ ಮಾರಿಕೊಂಡು ಬದುಕೋದು ಬೇಡ, ಇದೆಲ್ಲ ಬೇಡ ಅಂತ ಮನೆಯಲ್ಲಿ ಕೂತ್ಕೊಂಡವರು ಕೂಡ ಇದ್ದಾರೆ. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ಈ ಮಾತಿಗೆ ಬೇರೆಯವರು ಕೋಪ ಮಾಡಿಕೊಂಡ್ರೂ ಬೇಸರ ಇಲ್ಲ. ಇಂದು ಯಾರು ಸೀರಿಯಲ್‌ನಲ್ಲಿ ನಟಿಸಬೇಕು ಎಂದು ಚಾನೆಲ್ ಡಿಸೈಡ್ ಮಾಡುವುದು” ಎಂದು ಕೊಡೆ ಮುರುಗ ಹೇಳಿದ್ದಾರೆ.
