Actress Sohani Kumari Fiancé Sawai Singh Dies ನಟಿ ಸೋಹಾನಿ ಕುಮಾರಿ ಅವರ ನಿಶ್ಚಿತ ವರ ಸವಾಯಿ ಸಿಂಗ್ ಹೈದರಾಬಾದ್‌ನ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಇದರಲ್ಲಿ ತನ್ನ ಹಿಂದಿನ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. 

ಹೈದರಾಬಾದ್‌ (ಸೆ.29): ಟಿವಿ ಸೀರಿಯಲ್‌ಗಳು ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ನಡಿ ಸೋಹಾನಿ ಕುಮಾರಿ ಅವರ ನಿಶ್ಚಿತ ವರ ಸವಾಯಿ ಸಿಂಗ್ ಸೆಪ್ಟೆಂಬರ್ 29 ರಂದು ಜುಬಿಲಿ ಹಿಲ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಆತ್ಮಹ*ತ್ಯೆ ಮಾಡಿಕೊಳ್ಳುವ ಮುನ್ನ ಸವಾಯಿ ಸಿಂಗ್‌ ಸೆಲ್ಫಿ ವಿಡಿಯೋ ಕೂಡ ರೆಕಾರ್ಡ್‌ ಮಾಡಿದ್ದಾರೆ. ಇದರಲ್ಲಿ ಆತ ನಾನು ಈ ಹಿಂದೆ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳು ನನಗೆ ಈಗಲೂ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ನಡೆದ ದಿನ ಸವಾಯಿ ಸಿಂಗ್ ಬೆಳಿಗ್ಗೆ 11 ಗಂಟೆಗೆ ಕಚೇರಿಗೆ ತೆರಳಿದ್ದರು, ನಂತರ ಸೋಹಾನಿ ಹೊರಗೆ ಹೋಗಿದ್ದರು. ಫ್ಲಾಟ್‌ಗೆ ಹಿಂತಿರುಗಿ ನೋಡಿದಾಗ, ಅವರು ನೇಣು ಬಿಗಿದುಕೊಂಡಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರಾಜಸ್ಥಾನ ಮೂಲದ ಸೋಹಾನಿ ಕುಮಾರಿ

ರಾಜಸ್ಥಾನ ಮೂಲದ ಸೋಹಾನಿ ಕುಮಾರಿ ಟಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸವಾಯಿ ಸಿಂಗ್‌ ಅವರು ಇನ್ಸ್‌ಟಾಗ್ರಾಮ್‌ ಮೂಲಕ ಪರಿಚಯವಾಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರು ನಂತರ ರಿಲೇಷನ್‌ಷಿಪ್‌ ಬೆಳೆಸಿಕೊಂಡರು. ಕಳೆದ ವರ್ಷ ಜುಲೈನಲ್ಲಿ ಇವರ ನಿಶ್ಚಿತಾರ್ಥ ಕೂಡ ನಡೆದಿತ್ತು. ಅಂದಿನಿಂದ, ದಂಪತಿಗಳು ಜುಬಿಲಿ ಹಿಲ್ಸ್ ಪ್ರಶಾಸನ್ ನಗರದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ಮಾಜಿ ಗರ್ಲ್‌ಫ್ರೆಂಡ್‌ ನೆನಪಲ್ಲಿ ಇದ್ದ ಸವಾಯಿ ಸಿಂಗ್‌

ತನ್ನ ಮಾಜಿ ಗರ್ಲ್‌ಫ್ರೆಂಡ್‌ಅನ್ನು ಮರೆಯಲು ಸವಾಯಿ ಸಿಂಗ್‌ ತುಂಬಾ ಕಷ್ಟಪಡುತ್ತಿದ್ದ. ಆರ್ಥಿಕವಾಗಿಯೂ ಬಹಳಷ್ಟು ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದ ಎಂದು ಸೋಹಾನಿ ಕುಮಾರಿ ಹೇಳಿದ್ದಾರೆ. ಪೊಲೀಸರು ವೀಡಿಯೊ ಸಂದೇಶವನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.