ಈ ಬಾರಿ ವೀಕ್ಷಕರ ಟಾರ್ಗೇಟ್ ಸೈಕೋ ಜಯಂತ್ ಅಲ್ವೇ ಅಲ್ಲ ರೀ, ಮತ್ಯಾರೂ?
Psycho Jayanth not target: ಮೊದ ಮೊದಲು ಜಯಂತ್‌ನನ್ನ ದೊಡ್ಡ ಸೈಕೊ ಎಂದು ಕರೆದವರೇ ಜಯಂತ್ ಓಕೆ ಎನ್ನುತ್ತಿದ್ದಾರೆ. ಮೊದಲನೆಯದು ಜಯಂತ್ ಏನೇ ಮಾಡಿದ್ರೂ ಕೊನೆಗೆ ಜಾನು ಮೇಲೆ ಪ್ರೀತಿ ತೋರಿಸುತ್ತಲೇ ಬಂದಿದ್ದಾನೆ. ಎರಡನೇಯದು…

ಜಯಂತ್ ಪಾತ್ರ ಈ ಪಾಟಿ ಹಿಟ್ ಆಗ್ತಿರೋದೇಕೆ?
'ಲಕ್ಷ್ಮೀನಿವಾಸ' ಧಾರಾವಾಹಿಯಲ್ಲಿ ಜಯಂತ್ ಪಾತ್ರವನ್ನ ಅದೆಷ್ಟೇ ಕೆಟ್ಟದಾಗಿ ತೋರಿಸಿದರೂ ವೀಕ್ಷಕರಿಗೆ ಮಾತ್ರ ಆ ಪಾತ್ರದ ಮೇಲೆ ತುಸು ಒಲವು ಜಾಸ್ತಿಯೇ. ಅದಕ್ಕೆ ಕಾರಣವೂ ಇದೆ. ಆ ಕಾರಣವೇನು?, ಜಯಂತ್ ಪಾತ್ರ ಈ ಪಾಟಿ ಹಿಟ್ ಆಗ್ತಿರೋದೇಕೆ?, ಜಾನು ಮೇಲೆ ವೀಕ್ಷಕರ ಮುನಿಸೇಕೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಮುನಿಸಿಕೊಳ್ಳಲು ಕಾರಣವೇನು?.
ಮೊದ ಮೊದಲು ಜಯಂತ್‌ನನ್ನ ದೊಡ್ಡ ಸೈಕೊ ಎಂದು ಕರೆದವರೇ ಜಯಂತ್ ಓಕೆ ಎನ್ನುತ್ತಿದ್ದಾರೆ. ಮೊದಲನೆಯದು ಜಯಂತ್ ಏನೇ ಮಾಡಿದ್ರೂ ಕೊನೆಗೆ ಜಾನು ಮೇಲೆ ಪ್ರೀತಿ ತೋರಿಸುತ್ತಲೇ ಬಂದಿದ್ದಾನೆ. ಎರಡನೇಯದು ಜಯಂತ್ ಪಾತ್ರಧಾರಿ ದೀಪಕ್ ಸುಬ್ರಮಣ್ಯ ಅಭಿನಯ. ಅದೆಲ್ಲಾ ಸರಿ, ಈಗ ವೀಕ್ಷಕರು ಜಾನು ಮೇಲೆ ಮುನಿಸಿಕೊಳ್ಳಲು ಕಾರಣವೇನು?.
ವೀಕ್ಷಕರ ಮನಗೆಲ್ಲಲು ಕಾರಣ
ಧಾರಾವಾಹಿಯಲ್ಲಿ ಎಲ್ಲರೂ ಜಾಹ್ನವಿ ಸತ್ತು ಹೋಗಿದ್ದಾಳೆ ಎಂದು ನಂಬಿದರೂ ಜಯಂತ್ ಮಾತ್ರ ತನ್ನ ಜಾನು ಸತ್ತುಹೋಗಿಲ್ಲ ಎಂಬ ಬಲವಾದ ದೃಢ ನಂಬಿಕೆಯಿಂದಲೇ ಜೀವನ ನಡೆಸುತ್ತಿದ್ದಾನೆ. ಅದೆಷ್ಟೋ ಬಾರಿ ಇಬ್ಬರೂ ಎದುರು ಬದುರಾಗುವ ಸನ್ನಿವೇಶ ನಡೆದಾಗಲೆಲ್ಲಾ ಜಯಂತ್‌ಗೆ ತನ್ನ ಜಾನು ಇಲ್ಲೇ ಎಲ್ಲೋ ಇದ್ದಾಳೆ ಅನಿಸುತ್ತಿದೆ. ಆಗೆಲ್ಲಾ ಜಯಂತ್ ನಿಷ್ಮಕಲ್ಮಶ ಪ್ರೀತಿಯನ್ನೇ ವ್ಯಕ್ತಪಡಿಸುತ್ತಾ ಬಂದಿದ್ದಾನೆ. ಇದು ವೀಕ್ಷಕರ ಮನಗೆಲ್ಲಲು ಕಾರಣವಾಗಿದೆ.
ತಪ್ಪು ಮೇಲೆ ತಪ್ಪು
ಇನ್ನು ಜಯಂತ್ ಬಿಟ್ಟು ಜಾನು ಪಾತ್ರದ ಮೇಲೆ ವೀಕ್ಷಕರು ಮುನಿಸಿಕೊಳ್ಳಲು ಕಾರಣವೇನು ಎಂದು ನೋಡುವುದಾದ್ರೆ ಜಾನು ವಿಶ್ವನ ಮನೆ ಸೇರಿದ ಮೇಲೆ, ವಿಶ್ವನಿಗೆ ಜಾನು ತಮ್ಮ ಮನೆಯಲ್ಲೇ ಇದ್ದಾಳೆ ಎಂದು ಗೊತ್ತಾದ ಮೇಲೆ ಅವನ ಗಮನ ತಾನು ಮದುವೆಯಾಗುತ್ತಿರುವ ಹುಡುಗಿಯ ಮೇಲಿಲ್ಲ. ಬದಲಿಗೆ ಜಾನುವನ್ನ ಕಾಪಾಡುವುದೇ ಆಗಿದೆ. ಹಾಗಾಗಿ ವಿಶ್ವನ ಲೈಫ್‌ಗೆ ಜಾನು ಯಾಕೆ ಎಂಟ್ರಿ ಆಗ್ಬೇಕು ಎನ್ನಲಾಗುತ್ತಿದೆ. "ತನ್ನ ಲೈಫ್ ನೋಡಿಕೊಳ್ಳುವಷ್ಟು ಸಾಮರ್ಥ್ಯ ಜಾಹ್ನವಿಗೆ ಇಲ್ವಾ?. ಜಯಂತ್ ತಪ್ಪು ಮಾಡಿದ್ದಾನೆ ಸರಿ, ಇವಳು ತಪ್ಪು ಮೇಲೆ ತಪ್ಪು ಮಾಡುತ್ತಿದ್ದಾಳೆ" ಎನ್ನಲಾಗುತ್ತಿದೆ.
ಜಾಹ್ನವಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಇತ್ತೀಚೆಗಂತೂ ಜಯಂತ್‌ಗೆ ಜಾಹ್ನವಿ ಸಿಕ್ಕೇಬಿಟ್ಟಳು ಎನ್ನುವ ರೀತಿ ತೋರಿಸಲಾಗುತ್ತಿದೆ. ಮುಂದಿನ ಸಂಚಿಕೆಯಲ್ಲಿ ಅರಿವಿಲ್ಲದೆ ಜಾಹ್ನವಿ ಜಯಂತ್ ಮನೆ ತಲುಪಾಗಿದೆ. ಸಾಲದೆಂಬಂತೆ ಆಕೆಯ ಮೊಬೈಲ್ ರಿಂಗಾಗಿದ್ದು, ಜಯಂತ್ ಅದನ್ನು ಕಂಡುಹಿಡಿದಿದ್ದಾನೆ. ಅದಕ್ಕೆ ವೀಕ್ಷಕರು ಪಕ್ಕಾ ಈ ಬಾರಿ ಜಾಹ್ನವಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಜಯಂತ್ ಮನೇಲಿ ಸಿಸಿ ಕ್ಯಾಮೆರಾ ಇಟ್ಟಿದ್ದಾನೆ. ಇದರಿಂದಾಗಿ ಜಾಹ್ನವಿ ಇರುವಿಕೆ ಗೊತ್ತಾಗುತ್ತದೆ ಎನ್ನುತ್ತಿದ್ದಾರೆ.
ಜಯಂತ್-ಜಾಹ್ನವಿ ಒಂದಾಗ್ತಾರಾ?
ಇಷ್ಟು ದಿನಗಳ ಕಾಲ ಧಾರಾವಾಹಿ ನೋಡುತ್ತಾ ಬಂದಿರುವ ವೀಕ್ಷಕರು ಅವರಿಬ್ಬರನ್ನೂ ಒಂದು ಮಾಡಿ, ಈ ರೀತಿ ಡ್ರ್ಯಾಗ್ ಮಾಡಬೇಡಿ ಎಂದು ನಿರ್ದೇಶಕರಿಗೆ ಮನವಿ ಮಾಡುತ್ತಲೇ ಬಂದಿದ್ದು, ಈ ಬಾರಿಯಾದ್ರೂ ಜಯಂತ್-ಜಾಹ್ನವಿ ಒಂದಾಗ್ತಾರಾ?, ನಿಜಕ್ಕೂ ಜಯಂತ್ ಎಷ್ಟು ಕೆಟ್ಟವನು? ಎಂಬುದನ್ನ ಮುಂದಿನ ಎಪಿಸೋಡ್‌ಗಳಲ್ಲಿ ತೋರಿಸಬೇಕಾಗಿದೆ.